Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಸ್ಪೆಷಲ್ ಡಯೆಟ್ ಮಾಡದೆಯೇ ತಿನ್ನುತ್ತಲೇ ತೂಕ ಇಳಿಸಿಕೊಳ್ಳಿ..! ಏನೆಲ್ಲಾ ತಿನ್ನಬೇಕು?
ಇತ್ತೀಚಿಗೆ ಬಹುತೇಕ ಮಂದಿ ಅಧಿಕ ತೂಕದಂತಹ ಸಮಸ್ಯೆಯಿಂದ ಬಳಲುತ್ತಿರುವುದು ನೋಡಬಹುದು. ನಗರ ಪ್ರದೇಶದಲ್ಲಿ ಈ ಪ್ರಮಾಣ ಹೆಚ್ಚಾಗಿದ್ದು, ಚಿಕ್ಕ ವಯಸ್ಸಿನಲ್ಲೇ ನಿಗದಿಗಿಂತ ಹೆಚ್ಚು ತೂಕಕ್ಕೆ ಒಳಗಾಗುವುದು ಸಾಮಾನ್ಯ ಎನ್ನುವಂತಾಗಿದೆ. ತೂಕ ಹೆಚ್ಚಾಗಲು ಹತ್ತಾರು ಕಾರಣಗಳಿದ್ದರು, ನಮ್ಮ ಜೀವನ ಶೈಲಿ ಅದಕ್ಕೆ ಪ್ರಮುಖ ಕಾರಣ ಎಂದು ಪಟ್ಟಿ ಮಾಡಬಹುದು.
ಇನ್ನು ತೂಕ ಇಳಿಸಲು ನಿತ್ಯವು ಪರದಾಡುವವರನ್ನು ಕೂಡ ನಾವು ನೋಡಿದ್ದೇವೆ. ಹೆಚ್ಚಾಗಿ ಜಿಮ್ ಮಾಡುವುದು ಆಹಾರ, ಊಟ ಬಿಡುವುದು, ಓಡುವುದು, ಗಂಟೆಗಳ ಕಾಲ ಕಸರತ್ತು ಹೀಗೆ ಹತ್ತಾರು ರೀತಿಯ ವಿಧಾನಗಳ ಮೊರೆ ಹೋಗುತ್ತಾರೆ. ಇಷ್ಟಾದರೂ ಕೂಡ ಕೆಲವರು ಅಂದುಕೊಂಡ ಸಮಯಕ್ಕೆ ಅಥವಾ ಹೆಚ್ಚು ತೂಕ ಕಳೆದುಕೊಳ್ಳಲು ಸೋಲುತ್ತಾರೆ.

ಇನ್ನು ತೂಕ ಇಳಿಸಿಕೊಳ್ಳಲು ಹಲವು ದಾರಿಗಳಿದ್ದರೂ ಅದನ್ನು ಪಾಲಿಸುವುದು ಬಹಳ ಕಷ್ಟದ ಕೆಲಸವಾಗಿರಲಿದೆ. ಕೆಲಸದ ಗಡಿಬಿಡಿಯಲ್ಲಿ ಹಾಗೆ ತೂಕ ಇಳಿಸಲು ಸಮಯ ಇಡುವುದು ಕಷ್ವಾಗುತ್ತದೆ. ಆದ್ರೆ ನಾವಿಂದು ಸುಲಭವಾಗಿ ಅದ್ರಲ್ಲೂ ನಿಮ್ಮಿಷ್ಟದ ಖಾದ್ಯ ಸವಿಯುತ್ತಲೇ ತೂಕ ಇಳಿಸುವ ಖಾದ್ಯಗಳ ಕುರಿತಾಗಿ ನಾವಿಂದು ತಿಳಿದುಕೊಳ್ಳೋಣ.
ರಾಂಗಿ ಅಂಬಲಿ
ರಾಗಿಯಿಂದ ಹಲವು ರೀತಿ ಖಾದ್ಯಗಳ ಮಾಡಿ ಸವಿಯಬಹುದು. ಹಾಗೆ ರಾಗಿಯಲ್ಲಿನ ಫೈಬರ್ ಹಾಗೂ ಕ್ಯಾಲ್ಸಿಯಂ ಅಂಶವು ತೂಕ ಇಳಿಸಲು ಬಹಳ ಸಹಕಾರಿಯಾಗುವ ಅಂಶವಾಗಿದೆ. ಹೀಗಾಗಿ ರಾಗಿಯಿಂದ ಮಾಡುವ ಅಂಬಲಿ ಬಹಳ ಉಪಯೋಗಕಾರಿ. ಅಮೈನೋ ಆಮ್ಲಗಳಿಂದ ಸಮೃದ್ಧವಾಗಿರುವ ರಾಗಿಯು ನಿಮ್ಮ ಮೂಳೆಯ ಆರೋಗ್ಯಕ್ಕೂ ಬಹಳ ಉತ್ತಮ. ಹಾಗೆ ರಾಗಿ ನಿಮಗೆ ಹೊಟ್ಟೆ ತುಂಬಿರುವ ಅನುಭವಕ್ಕೆ ಕಾರಣವಾಗುತ್ತದೆ. ಇದರಿಂದ ನೀವು ಆಗಾಗ ಏನಾದರು ಸವಿಯಬೇಕು ಎಂಬ ಬಯಕೆಯನ್ನೇ ಮರೆಯುವಂತೆ ಮಾಡಲಿದೆ. ಹೀಗಾಗಿ ರಾಗಿಯಿಂದ ನೀವು ರೊಟ್ಟಿ, ಮುದ್ದೆ, ದೋಸೆ ಈ ರೀತಿಯ ಖಾದ್ಯಗಳ ಮಾಡಿ ಸವಿಯಬಹುದು.
ಹುರುಳಿಕಾಳು
ಹುರುಳಿ ಕಾಳುಗಳಿಂದ ಮಾಡುವ ಹಲವು ರೀತಿಯ ಖಾದ್ಯಗಳನ್ನು ನೀವು ಸಹ ರುಚಿ ನೋಡಿರುತ್ತೀರಿ. ಅದರ ರುಚಿ ಮತ್ತೊಂದು ಸವಿದಿರದ ಪಲ್ಯ ಮಾಡಿರಬಹುದು, ಇಲ್ಲವೆ ಹುರುಳಿ ಸಾರಿಗೆ ಒಗ್ಗರಣೆ ಹಾಕಿ ಮಾಡುವ ರಸಭರಿತ ಸಾರು ಎಲ್ಲರಿಗೂ ಇಷ್ಟವಾಗುತ್ತೆ. ಇದೇ ಹುರುಳಿಯು ನಿಮ್ಮ ತೂಕ ಇಳಿಕೆಯೂ ಕೂಡ ಸಹಕಾರಿಯಾಗಿದೆ. ಹುರುಳಿಕಾಳು ಪ್ರೋಟೀನ್ ಮತ್ತು ಫೈಬರ್‌ನಲ್ಲಿ ಅಧಿಕವಾಗಿದ್ದು ಕಬ್ಬಿಣ ಮತ್ತು ಪಾಲಿಫಿನಾಲ್‌ಗಳನ್ನು ಹೊಂದಿದೆ. ಇದು ನಿಮ್ಮ ಜೀರ್ಣಕ್ರಿಯೆಗೆ ಬಹಳ ಉತ್ತಮ ಖಾದ್ಯ. ನೀವು ತೂಕ ಇಳಿಸಲು ಮುಂದಾಗುವುದಾದರೆ ನಿಮ್ಮ ಆಹಾರದಲ್ಲಿ ಈ ಹುರುಳಿಕಾಳುಗಳ ಸೇರಿಸುವುದು ಬಹಳ ಉತ್ತಮ.
ಕೋಕಮ್
ನೀವು ಕೋಕಮ್ ಜ್ಯೂಸ್ ಕುಡಿದಿರಬಹುದು. ಕರಾವಳಿ, ಮಲೆನಾಡು ಭಾಗದಲ್ಲಿ ಹೆಚ್ಚಾಗಿ ಕೋಕಮ್ ಬಳಕೆ ಮಾಡುವುದು ನೋಡಿರುತ್ತೀರಿ. ಇದು ಹೆಚ್ಚನ ಹೈಡ್ರಾಕ್ಸಿಸಿಟ್ರಿಕ್ ಅಂಶವನ್ನು ಹೊಂದಿರಲಿದೆ. ಇದು ನೈಸರ್ಗಿಕವಾಗಿ ಹಸಿವು ತಡೆಯುವ ಅಂಶವಾಗಿದೆ. ಹಾಗೆ ಆಮ್ಲೀಯತೆ, ಹೊಟ್ಟೆ ಉಬ್ಬರದಂತಹ ಸಮಸ್ಯೆಗೂ ಪರಿಹಾರ ನೀಡಲಿದೆ. ಇದನ್ನು ಸಾಂಬಾರ್‌ನೋಂದಿಗೆ ಹುಳಿಗಾಗಿಯೂ ಬಳಸುತ್ತಾರೆ. ಹಾಗೆ ಕೋಕಮ್ ಜ್ಯೂಸ್ ಸೇವನೆ ನಿಮಗೆ ಬಹಳ ಉತ್ತಮವಾಗಿದೆ. ಸಕ್ಕರೆ ಬಳಸದೆ ನಿಯಮಿತವಾಗಿ ಕೋಕಮ್ ಜ್ಯೂಸ್ ಸೇವಿಸುವುದು ನಿಮ್ಮ ತೂಕ ಇಳಿಕೆಗೆ ಬಹಳ ಸಹಕಾರಿಯಾಗಲಿದೆ.
ಬಾರ್ಲಿ
ರಾಗಿಯ ಜಾತಿಯ ಈ ಬಾರ್ಲಿ ದೇಹಕ್ಕೆ ಬಹಳ ಉತ್ತಮ. ದೇಹಕ್ಕೆ ತಂಪು ಅಗತ್ಯವಿದ್ದಾಗ ಬಾರ್ಲಿ ಸೇವನೆ ಬಹಳ ಉಪಯೋಗಕಾರಿ. ಇದು ಹೆಚ್ಚಿನ ನಾರು ಹಾಗೂ ಕಾರ್ಬೋಹೈಡ್ರೇಟ್‌ಗಳಿಂದ ಸಮೃದ್ಧವಾಗಿದೆ, ಅಂದರೆ ಇದು ಜೀರ್ಣಿಸಿಕೊಳ್ಳಲು ಹೆಚ್ಚು ಸಮಯ ಹಿಡಿಯಲಿದೆ. ಹಸಿವು ದೂರ ಮಾಡಲು ಇದು ಬಹಳ ಸಹಕಾರಿಯಾಗಿದೆ. ಬಾರ್ಲಿಯಿಂದ ಮಾಡುವ ಹಲವು ಖಾದ್ಯ ಸವಿಯಬಹುದು. ಇದು ನಿಮ್ಮ ತೂಕ ಇಳಿಕೆಗೆ ಸಹಕಾರಿಯಾಗಿದೆ.



Click it and Unblock the Notifications
