Latest Updates
-
ವಿಶ್ವ ಕಾರ್-ಫ್ರೀ ಡೇ: ಟ್ರಾಫಿಕ್ ಬಿಟ್ಟು 20 ನಿಮಿಷದ ಈ ಸಿಂಪಲ್ ರೂಟೀನ್ ಫಾಲೋ ಮಾಡಿ! -
ಸೈಫ್-ಕರೀನಾ ಪ್ರೇಮಪತ್ರದ ರಹಸ್ಯ: ನಿಮ್ಮ ಸಂಬಂಧವನ್ನೂ ಗಟ್ಟಿಗೊಳಿಸಲು ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ! -
ಈರುಳ್ಳಿ ಬೆಲೆ ಏರಿಕೆ: ಬಜೆಟ್ ಉಳಿಸಲು ಮತ್ತು ಈರುಳ್ಳಿ ದೀರ್ಘಕಾಲ ಸಂಗ್ರಹಿಸಲು ಸರಳ ಟಿಪ್ಸ್ -
ಏಕಾದಶಿ ಉಪವಾಸ: ಆರೋಗ್ಯಕರವಾಗಿರಲು ₹300ರಲ್ಲಿ ಪೌಷ್ಟಿಕ ಆಹಾರದ ಪ್ಲಾನ್ ಇಲ್ಲಿದೆ! -
ಸ್ಯಾಮ್ಸಂಗ್ One UI 9 ಅಪ್ಡೇಟ್: ನಿಮ್ಮ ಫೋನ್ಗೆ ಬಂದಿದೆಯೇ? ಸುರಕ್ಷಿತವಾಗಿ ಇನ್ಸ್ಟಾಲ್ ಮಾಡುವುದು ಹೇಗೆ? -
ಮಳೆಗಾಲದಲ್ಲಿ ಫಿಟ್ ಆಗಿರಲು 12 ನಿಮಿಷಗಳ ಇಂಡೋರ್ ವರ್ಕೌಟ್: ಜಿಮ್ ಇಲ್ಲದೆ ಮನೆಯಲ್ಲೇ ಮಾಡಿ! -
ವೈಫ್ ಅಪ್ರಿಶಿಯೇಷನ್ ಡೇ: ನಿಮ್ಮ ಮಡದಿಗೆ ಈ ವಿಶೇಷ ದಿನದಂದು ನೀಡಬಹುದಾದ ಸರಳ ಮತ್ತು ಸುಂದರ ಸರ್ಪ್ರೈಸ್ಗಳು ಇಲ್ಲಿವೆ! -
ಮಳೆಗಾಲದ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸೋರಿಕೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮರೆವಿನ ಕಾಯಿಲೆಗೆ ವಿದಾಯ: ಮೆದುಳಿನ ಆರೋಗ್ಯಕ್ಕೆ ಭಾರತೀಯ ಶೈಲಿಯ 'ಮೈಂಡ್ ಡಯಟ್' ಹೀಗಿರಲಿ! -
2026ರ ಏಷ್ಯನ್ ಗೇಮ್ಸ್: ಮೊದಲ ದಿನವೇ ಭಾರತಕ್ಕೆ ಪದಕದ ಬೇಟೆ! ಪಂದ್ಯಗಳ ಸಂಪೂರ್ಣ ವೇಳಾಪಟ್ಟಿ ಮತ್ತು ಲೈವ್ ಅಪ್ಡೇಟ್ಸ್ ಇಲ್ಲಿದೆ
ಈಶ್ವರ್‌ಮಲ್ಪೆ, ಮನಾಫ್ ವಿರುದ್ಧವೇ ಮಾತನಾಡಿದ ಅರ್ಜುನ್ ಮನೆಯವರ ವರ್ತನೆಗೆ ತೀವ್ರ ಟೀಕೆ
ಕೇರಳದ ಮಾಧ್ಯಮಗಳಲ್ಲಿ, ಸೋಷಿಯಲ್ ಮೀಡಿಯಾಗಳಲ್ಲಿ ಮನಾಫ್ ಹಾಗೂ ಶಿರೂರು ದುರಂತದಲ್ಲಿ ಸಾವನ್ನಪ್ಪಿದ ಅರ್ಜುನ್ ಮನೆಯವರದ್ದೇ ಸುದ್ದಿ, ಅಲ್ಲದೆ ತಮ್ಮ ಭಿನ್ನಾಭಿಪ್ರಾಯದ ನಡುವೆ ಕರ್ನಾಟಕದಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಈಶ್ವರ್ ಮಲ್ಪೆ ಹೆಸರೂ ಕೂಡ ಎಳೆದು ತಂದಿದ್ದಾರೆ ಅರ್ಜುನ್ ಮನೆಯವರು.
ಅರ್ಜುನ್‌ಗೆ ಏನಾಯ್ತು ಎಂದು ಯಾರಿಗೂ ತಿಳಿಯದೆ ಹೋದಾಗ ಅರ್ಜುನ್ ಇಲ್ಲೇ ಇದ್ದಾನೆ, ಅವನು ಸಿಗುವವರೆಗೆ ಹೋಗಲ್ಲ ಎಂದು ನಿಂತ ವ್ಯಕ್ತಿ ಮನಾಫ್, ಅರ್ಜುನ್ ನೀರಿನಲ್ಲಿ ಕೊಚ್ಚಿ ಹೋಗಿದ್ದರೆ ಹುಡುಕಿ ಕೊಡುವೆ ಎಂದು ತನ್ನ ಪ್ರಾಣ ಲೆಕ್ಕಿಸದೆ ಡೈವ್ ಮಾಡಿ ಅರ್ಜುನ್‌ಗಾಗಿ ಹುಡುಕಾಡಿದ ವ್ಯಕ್ತಿ ಈಶ್ವರ್ ಮಲ್ಪೆ. ಕೊನೆಗೆ ಅರ್ಜುನ್ ಲಾರಿ ಇದೆ ಎಂದು ಹೇಳಿ ಪಾಯಿಂಟ್ ಹಾಕಿದ್ದು ಕೂಡ ಈಶ್ವರ್ ಮಲ್ಪೆ, ನಂತರ ನಡೆದಿದ್ದು ಮಾತ್ರ ವಿಚಿತ್ರ.

ಈಶ್ವರ್‌ಮಲ್ಪೆಯನ್ನು ನೀರಿಗೆ ಇಳಿಯಬೇಡ ಎಂದು ಅಧಿಕಾರಿಗಳು ಹೇಳಿದರು, 72 ದಿನಗಳ ಬಲಿಕ ಅರ್ಜುನ್ ಬಾಡಿ ಸಿಕ್ತು, ಅಷ್ಟರಲ್ಲಿ ಏನೆಲ್ಲಾ ಒಂದಿಷ್ಟು ಘಟನೆ ನಡೆಯಿತು, ಎಷ್ಟಾದರೂ ಮನುಷ್ಯರ ಅಹಂಗೆ ಮದ್ದುಂಟೇ... ಕೊನೆಗೂ ಅರ್ಜುನ್ ದೇಹ ಸಿಕ್ತಲ್ಲ, ಆತನ ಮನೆಯವರು ಆ ದೇಹಕ್ಕೆ ವಿಧಿ ಪ್ರಕಾರ ಮುಕ್ತಿ ನೀಡುವಂತಾಯ್ತಲ್ಲ ಎಂದು ಅಂದುಕೊಂಡರು. ಆತನ ಆತ್ಮಕ್ಕೆ ಶಾಂತಿ ಸಿಗಲಿ, ಕುಟುಂಬದವರಿಗೆ ದೇವರು ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸಿದರು.
ಲಾರಿಯ ಮಾಲೀಕ ಕುಟುಂಬದ ಜೊತೆಗೆ ಎಂದೆಂದಿಗೂ ನಾನಿರುತ್ತೇನೆ ಎಂದರು, ಆದರೆ ಅರ್ಜುನ್ ಮನೆಯವರಿಗೆ ಏನಾಯ್ತೋ ಗೊತ್ತಿಲ್ಲ ಸೀದಾ ಮನಾಫ್ ಮೇಲೆ ಆರೋಪ ಮಾಡಿದರು, ಅದೂ ಪ್ರೆಸ್‌ಮೀಟ್ ಕರೆದು ಸಾಲು-ಸಾಲು ಆರೋಪ ಮಾಡಿದರು, ಅವರು ಮಾಡಿದ ಆರೋಪಗಳಿಂದಲೇ ಜನರು ಮನುಷ್ಯತ್ವಕ್ಕೆ ಬೆಲೆ ಇಲ್ಲದಾಯ್ತೇ? ಎಂದು ಕೇಳುತ್ತಿದ್ದಾರೆ.
ಅವರು ಹೇಳ್ತಾರೆ ಈಶ್ವರ್ ಮಲ್ಪೆ ಅವರು ಅವರ ಕುಟುಂಬ ವಿಚಾರ ಹೇಳಿ ಯೂಟ್ಯೂಬ್‌ನಲ್ಲಿ ದುಡ್ಡು ಮಾಡಿದರು, ಮನಾಫ್ ಅರ್ಜುನ್ ಹೆಸರು ಹೇಳಿ ದುಡ್ಡು ಸಂಗ್ರಹ ಮಾಡಿದರು, ಯುಟ್ಯೂಬ್ ಪ್ರಾರಂಭಿಸಿ ದುಡ್ಡು ಮಾಡಲು ಯೋಚಿಸುತ್ತಿದ್ದಾರೆ. ಅರ್ಜುನ್ ಈಗ ಇಲ್ಲ ಎನ್ನುವುದು ದುಃಖಕರ, ಆದರೆ ಕುಟುಂಬದವರ ವರ್ತನೆ ಸಹಿಸಲು ವಿವೇಚನೆಯುಳ್ಳವರು ಸಮರ್ಥನೆ ಮಾಡಿಕೊಳ್ಳಲು ಸಾಧ್ಯವಿಲ್ಲ.
ಇಂದು ಅರ್ಜುನ್ ಶರೀರ ಅಂತ್ಯಕ್ರಿಯೆ ಮಾಡಲು 72 ದಿನದ ಬಳಿಕ ಸಾಧ್ಯವಾಯ್ತು ಎಂದರೆ ಮನಾಫ್ ಎಂಬ ವ್ಯಕ್ತಿ ಹಾಗೂ ಈಶ್ವರ್‌ಮಲ್ಪೆ ಕಾರಣ
ಪ್ರಾರಂಭದಲ್ಲಿ ಕೇರಳ ಮಾಧ್ಯಮ ಹಾಗೂ ಸರ್ಕಾರದ ಒತ್ತಡ ತುಂಬಾನೇ ಇತ್ತು, ಹೀಗಾಗಿ ಶಿರೂರ್‌ನಲ್ಲಿ ಹೊಲವರು ಸಾವನ್ನಪ್ಪಿದರು ಅರ್ಜುನ್ ಹೆಸರು ದೊಡ್ಡ ಸುದ್ದಿ ಮಾಡಿತು. ಕೇರಳ ಮಾಧ್ಯಮದವರು ಕರ್ನಾಟಕ ಸರ್ಕಾರವನ್ನು ತಪ್ಪಾಗಿ ಬಿಂಬಿಸುವ ಪ್ರಯತ್ನವನ್ನೂ ಮಾಡಿದರು. ಆದರೆ ಕರ್ನಾಟಕ ಸರ್ಕಾರ ಅವರ ಕರ್ತವ್ಯ ಸರಿಯಾಗಿ ಮಾಡ್ತಾ ಇದ್ದಾರೆ ಎಂದು ನಂತರ ತಿಳಿಯಿತು. ನಾವು ನೀರಿನಲ್ಲಿ ಡೈವ್ ಮಾಡು ಹುಡುಕುತ್ತೀವಿ ಎಂದು ಬಂದವರು ಗಂಗಾವಳಿ ನೀರಿನ ರಭಸಕ್ಕೆ ಏನೂ ಮಾಡದಾದರು, ಆವಾಗ ಬಂದವರೇ ಈಶ್ವರ್ ಮಲ್ಪೆ, ಅವರು ಕೂಡ ಡೈವ್ ಮಾಡಿದರು, ಆದರೆ ಆವಾಗ ಅರ್ಜುನ್ ಆಗಲಿ, ಲಾರಿಯಾಗಲಿ ಕಣ್ಣಿಗೆ ಬೀಳಲಿಲ್ಲ, ನೀರಿನ ರಭಸ ಆ ರೀತಿ ಇತ್ತು, ಅಷ್ಟರಲ್ಲಿಯೇ ನಡೆಯಿತು ವಯನಾಡ್ ದುರಂತ.
ಶಿರೂರ್ ದುರಂತದಲ್ಲಿ ಅರ್ಜುನ್ ಬಗ್ಗೆ ಮಾತ್ರ ಸುದ್ದಿ ಮಾಡುತ್ತಿದ್ದ ಮಲಯಾಳಂ ಮೀಡಿಯಾಗಳ ಗಮನ ವಯನಾಡ್ ಕಡೆ ತಿರುಗಿತು, ಏಕೆಂದರೆ ವಯನಾಡ್ ದುರಂತ ಅಷ್ಟೊಂದು ಘೋರವಾಗಿತ್ತು ಎಲ್ಲರು ಅದರ ಹಿಂದೆ ಹೋದರು, ಆದರೆ ಅರ್ಜುನ್‌ಗಾಗಿ ನಿರಂತರವಾಗಿ ವ್ಯಕ್ತಿಯೆಂದರೆ ಅದು ಮನಾಫ್. ಮನಾಫ್ ಶಿರೂರ್‌ನಲ್ಲಿ ಉಳಿದುಕೊಂಡರು, ಅರ್ಜುನ್ ಹುಡುಕಿಕೊಡಿ ಎಂದು ಎಲ್ಲಾ ಅಧಿಕಾರಿಗಳ ಬಳಿ ಕೇಳಿಕೊಂಡರು, ಈಶ್ವರ್ ಮಲ್ಪೆ ಬಂದು ಮತ್ತೆ ಅರ್ಜುನ್‌ಗಾಗಿ ಹುಡುಕಿದರು, ಆವಾಗ ಅವರಿಗೆ ಅರ್ಜುನ್ ಲಾರಿಯ ವಸ್ತು ಸಿಕ್ತು, ಅವರು ನೀರಿನಡಿಯಲ್ಲಿ ಮರದ ದಿಮ್ಮಿಯಿದೆ ಎಂದೂ ಹೇಳಿದರು. ಈ ಮಾಹಿತಿ ಸಿಗುತ್ತಿದ್ದಂತೆ ಈಶ್ವರ್ ಮಲ್ಪೆಗೆ ಕ್ರೆಡಿಟ್ ಸಿಗುತ್ತೆ ಎಂದು ಅವರನ್ನು ದೂರ ಮಾಡಿದರು ಎಂದು ಹೇಳಲಾಗುತ್ತೆ, ಅದೇನೆ ಇರಲಿ ಕೊನೆಗೂ ಅರ್ಜುನ್ ಬಾಡಿ ಸಿಗುತ್ತೆ, ಡಿಎನ್‌ಎ ಪರೀಕ್ಷೆ ಮೂಲಕ ಅದು ಅರ್ಜುನ್ ದೇಹ ಎಂಬುವುದು ದೃಢವಾಗುತ್ತೆ, ಮನೆಯವರಿಗೆ ದೇಹವನ್ನು ಅಂತ್ಯಕ್ರಿಯೆಗೆ ನೀಡಲಾಗುತ್ತೆ.
ಅಷ್ಟರಲ್ಲಿ ಅರ್ಜುನ್ ಮನೆಯವರು ಇಷ್ಟು ದಿನ ಹಗಲು-ಇರಳು ಎಂದು ನೋಡದೆ ಅರ್ಜುನ್‌ಗಾಗಿ ಹುಡುಕಾಟ ಮಾಡಲು ಒತ್ತಾಯ ಹಾಕಿದ ಮನಾಫ್ ಎಂಬ ವ್ಯಕ್ತಿಯ ವಿರುದ್ಧ ತಿರುಗಿಬಿದ್ದರು, ಬಹುಶಃ ಮನಾಫ್ ಸಿಗುತ್ತಿದ್ದ ಜನಪ್ರಿಯ ಸಹಿಸಲು ಇವರಿಗೆ ಸಾಧ್ಯವಾಗಿಲ್ಲ ಕಾಣುತ್ತೆ, ಏಕೆಂದರೆ ಅರ್ಜುನ್ ಬಾಡಿ ಸಿಕ್ಕಾಗ ಮನೆಯವರಿಗಿಂತ ಹೈಲೈಟ್ ಆಗಿದ್ದು ಮನಾಫ್ ಎಂಬ ವ್ಯಕ್ತಿ. ಅವರು ಅರ್ಜುನ್‌ಗಾಗಿ ಪಟ್ಟ ಕಷ್ಟ ಏನು ಎಂಬುವುದು ಅವರ ಮುಖ ನೋಡಿದಾಗ ತಿಳಿಯುತ್ತಿತ್ತು, ಕಣ್ಣಿನ ಸುತ್ತ ಡಾರ್ಕ್ ಸರ್ಕಲ್, ದಣಿದ ಮುಖ, ಕೊನೆಗೂ ಅರ್ಜುನ್ ಸಿಕ್ಕಾಗ ಅವರ ಕಣ್ಣಿಂದ ಬಂದ ನೀರು ಇದೆಲ್ಲಾ ನೋಡಿದವರು ಮನಾಫ್ ಎಂಬ ವ್ಯಕ್ತಿಯನ್ನು ಗೌರವಿಸಿದರು. ಮನಾಫ್ ಕೂಡ ಅರ್ಜುನ್ ಕುಟುಂಬಕ್ಕೆ ನಾನು ಸಹಾಯ ಮಾಡುತ್ತೇನೆ, ಅವರ ಜೊತೆ ನಾನಿರುತ್ತೇನೆ ಎಂದೆಲ್ಲಾ ಮಾತನಾಡಿದರು, ಇದು ಅರ್ಜುನ್ ಕುಟುಂಬದ ಕೋಪಕ್ಕೆ ಕಾರಣವಾಯ್ತು.
ಮನಾಫ್ ಆ ಲಾರಿಯ ಮಾಲೀಕ ಅಲ್ಲ ಅಂದ್ರು
ಗಾಡಿಯ ಆರ್‌ಸಿ ಮುಬಿನ್ ಎಂಬ ವ್ಯಕ್ತಿಯ ಹೆಸರಿನಲ್ಲಿದೆ, ಅ ವ್ಯಕ್ತಿ ನಮ್ಮ ಸಹಾಯಕ್ಕೆ ನಿಂತಿದ್ದರು, ಮನಾಫ್ ಏನೂ ಅಲ್ಲ ಎಂಬಂತೆ ಮಾತನಾಡಿದರು, ಬಹುಶಃ ಹಾಗೆ ಮಾತನಾಡುವಾಗ ಅರ್ಜುನ್ ಮನೆಯವರಿಗೆ ಮನಾಫ್‌ನ ಕೆಟ್ಟ ವ್ಯಕ್ತಿಯಾಗಿ ತೋರಿಸಬೇಕಿತ್ತೇ ಹೊರತು ಮುಬಿನ್ ಯಾರು ಎಂದು ತಿಳಿಯಲಿಲ್ಲ. ಮುಬಿನ್ ಮನಾಫ್‌ನ ಸ್ವಂತ ತಮ್ಮ, ಒಂದು ಮನೆಯವರು ಆದ ಮೇಲೆ ಕೆಲ ಗಾಡಿ ಅವನ ಹೆಸರಿನಲ್ಲಿತ್ತು, ಅದನ್ನು ತಿಳಿಯದೆ ಮನಾಫ್ ಗಾಡಿಯ ಮಾಲೀಕ ಅಲ್ಲ ಅಂದ್ರು.
ಮನಾಫ್ ಯುಟ್ಯೂಬ್‌ನಿಂದ ಹಣ ಮಾಡಲು ಪ್ರಯತ್ನಿಸುತ್ತಿದ್ದಾನೆ ಎಂದರು
ಮನಾಫ್‌ಗೆ ಯುಟ್ಯೂಬ್ ಇದೆ ಎಂಬುವುದೇ ಹೆಚ್ಚಿನವರಿಗೆ ಗೊತ್ತಿರಲಿಲ್ಲ, ಕೇರಳದ ಮಾಧ್ಯಮದ ಗಮನ ವಯನಾಡ್ ಕಡೆ ಇದ್ದಾಗ ಅರ್ಜುನ್ ವಿಷಯ ಮರೆತು ಹೋಗಬಾರದು, ಅಧಿಕಾರಿಗಳನ್ನು ಎಚ್ಚರಿಸಬೇಕು ಎಂದು ಮನಾಫ್ ಪ್ರಾರಂಭಿಸಿದ ಯುಟ್ಯೂಬ್, ಅದಕ್ಕೆ ಹೆಚ್ಚೇನು ಸಬ್‌ಸ್ಕ್ರೈಬರ್ ಕೂಡ ಇರಲಿಲ್ಲ, ಅದರೆ ಯಾವಾಗ
ಅರ್ಜುನ್ ಮನೆಯವರು ಇದು ಕೂಡ ಒಂದು ತಪ್ಪು ಎಂಬಂತೆ ಹೆಳಿದರೋ ಎರಡೇ ದಿನದಲ್ಲಿ ಎರಡೂವರೆ ಲಕ್ಷಕ್ಕೂ ಅಧಿಕ ಸಬ್‌ಸ್ಕ್ರೈಬರ್ ಆಗಿದ್ದಾರೆ.
ಅರ್ಜುನ್ ಮನೆಯವರಿಗೆ ಕುಟುಂಬ ಸದಸ್ಯ ಇಲ್ಲದ ನೋವಿದೆ ನಿಜ, ಆದರೆ ಅರ್ಜುನ್ ಸಿಗಲು ಕಾರಣವಾದ ಮನಾಫ್ ಹಾಗೂ ಈಶ್ವರ್‌ಮಲ್ಪೆ ವಿರುದ್ಧ ಮಾತನಾಡುವ ತಪ್ಪು ಮಾಡಲೇಬಾರದಿತ್ತು...ಅವರ ವರ್ತನೆ ನೋಡಿ ಅದಕ್ಕೆ ಹೇಳುವುದು ಈ ಕಾಲದಲ್ಲಿ ಯಾರಿಗೂ ಸಹಾಯ ಮಾಡಬಾರದು ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.



Click it and Unblock the Notifications
