Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಶಿವನ ಹೆಬ್ಬೆರಳಿಗೆ ಪೂಜೆ ನೆರವೇರುವ ಏಕೈಕ ದೇವಾಲಯವಿದು..!
ದೇಶದ ಬಹುತೇಕ ಭಾಗದಲ್ಲಿ ಕಂಡುರುವ ಶಿವನ ದೇವಾಲಯಗಳು ಒಂದಲ್ಲಾ ಒಂದು ವಿಶೇಷ ಹೊಂದಿರುತ್ತೆ. ಸೋಮನಾಥದಿಂದ ಹಿಡಿದು ಮುರುಡೇಶ್ವರನ ವರೆಗೆ ವಿಶೇಷಗಳ ಹೊಂತುಕೊಂಡಿವೆ. ಅದರಲ್ಲೂ ಭಾರತದಲ್ಲಿ ಶಿವನ 12 ಜ್ಯೋತಿರ್ಲಿಂಗಗಳಿವೆ. ಶಿವನಿಗೆ ಅರ್ಪಿತವಾದ ಪವಿತ್ರಾ ಯಾತ್ರಾ ಸ್ಥಳಗಳಿವೆ.
ಈ ದೇವಾಲಯಗಳು ಪೌರಾಣಿಕ ಕಥೆಗಳ ಹೊಂದಿವೆ. ಆದರೆ ಇಲ್ಲೊಂದು ಶಿವನ ದೇವಾಲಯದಲ್ಲಿ ಶಿವನ ಹೆಬ್ಬರಳಿಗೆ ಪೂಜೆ ಸಲ್ಲಿಸಲಾಗುತ್ತದೆ. ಹೌದು ನಿಮಗಿದು ಅಚ್ಚರಿ ಎನಿಸಬಹುದು. ಶಿವನ ದೇವಾಲಯ ಅಂದರೆ ಅಲ್ಲಿ ಲಿಂಗಗಳು ಸರ್ವೇ ಸಾಮಾನ್ಯ ಆದರೆ ಈ ದೇವಾಲಯದಲ್ಲಿ ಲಿಂಗವಿಲ್ಲ, ಬದಲಿಗೆ ಶಿವನ ಕಾಲಿನ ಹೆಬ್ಬೆರಳಿಗೆ ಪೂಜೆ ಸಲ್ಲಿಸಲಾಗುತ್ತದೆ.

ರಾಜಸ್ಥಾನದ ಸಿರೋಹಿ ಜಿಲ್ಲೆಯಲ್ಲಿರುವ ಈ ದೇವಾಲಯದಲ್ಲಿ ಭೋಲೆನಾಥನ ಹೆಬ್ಬೆರಳನ್ನು ಪೂಜಿಸಲಾಗುತ್ತದೆ. ಈ ದೇವಾಲಯವು ಅಚಲೇಶ್ವರ ಮಹಾದೇವ್ ದೇವಾಲಯವಾಗಿದೆ. ಅಚಲೇಶ್ವರ ಮಹಾದೇವ ದೇವಾಲಯವು 5,000 ವರ್ಷಗಳಷ್ಟು ಹಳೆಯದು ಎನ್ನಲಾಗಿದೆ.
ದೇವಾಲಯದ ಪ್ರವೇಶ ದ್ವಾರದಲ್ಲಿ ಎರಡು ಆನೆಯ ಪ್ರತಿಮೆಗಳಿವೆ. ಮುಖ್ಯ ದೇವಾಲಯದ ಹೊರತಾಗಿ, ಒಳಗೆ ಅನೇಕ ಸಣ್ಣ ದೇವಾಲಯಗಳಿವೆ. ಮುಖ್ಯ ದೇವಾಲಯದ ಮುಂಭಾಗದ ಪ್ರವೇಶ ದ್ವಾರದಲ್ಲಿ ಪಂಚಧಾತುವಿನಿಂದ ನಿರ್ಮಿತವಾದ ನಂದಿಯ ವಿಗ್ರಹವಿದ್ದು, ಸುಮಾರು 4 ಟನ್ ತೂಕವಿದೆ. ಮುಖ್ಯ ದೇವಾಲಯದಲ್ಲಿ ಒಂದು ಶಾಸನವೂ ಇದೆ. ಇದೇ ದೇವಾಲಯದಲ್ಲಿ ಲಿಂಗದ ಬದಲಾಗಿ ಅಲ್ಲಿ ಶಿವನ ಹೆಬ್ಬೆರಳಿಗೆ ಪೂಜೆ ಮಾಡಲಾಗುತ್ತದೆ.
ಮುಖ್ಯ ದೇವಾಲಯದಲ್ಲಿ 108 ಚಿಕ್ಕ ಶಿವಲಿಂಗಗಳಿವೆ. ಹತ್ತಿರದಲ್ಲಿ ಅನೇಕ ಪುರಾತನ ಪ್ರತಿಮೆಗಳನ್ನು ಸ್ಥಾಪಿಸಲಾಗಿದೆ. ಆದರೆ ಈ ಲಿಂಗಗಳಿಗೆ ವಿಶೇಷ ಪೂಜೆ ನೆರವೇರುವುದಿಲ್ಲ, ಬದಲಿಗೆ ಹೆಬ್ಬೆರಳ ಪೂಜೆಯೇ ಈ ದೇವಾಲಯದ ವಿಶೇಷಾಗಿದೆ. ಗರ್ಭಗುಡಿಯೊಳಗೆ ಸಣ್ಣದಾಗಿ ಹರಿಯುವ ನೀರಿನ ಸೆಲೆ ಇದೆ. ಈ ನೀರು ವರ್ಷ ಪೂರ್ತಿ ಹರಿಯುತ್ತದೆ. ಆದರೆ ಒಮ್ಮೆಯು ಉಕ್ಕಿ ಬಂದಿಲ್ಲ, ಭತ್ತಿ ಹೋಗಿಲ್ಲ. ಇದೇ ದೇವಾಯದಲ್ಲಿ ಕಾಲಭೈರವನಿಗೂ ವಿಶೇಷ ಪೂಜೆ ನೆರವೇರುತ್ತದೆ.
ಈ ದೇವಾಲಯದ ಪೌರಾಣಿಕ ಕಥೆ ಏನು?
ಏಲ್ಲಾ ಶಿವನ ದೇವಾಲಯಕ್ಕೂ ತನ್ನದೇ ಆದ ಪೌರಾಣಿಕ ಕಥೆಗಳಿವೆ, ಈ ದೇವಾಲಯಕ್ಕೂ ಒಂದು ಕಥೆ ಇದೆ. ಹಿಂದೆ ಇಲ್ಲಿ ಬ್ರಹ್ಮ ಕಂದಕವಿತ್ತಂತೆ. ಈ ಕಂದಕದೊಳಗೆ ಆಶ್ರಂದ ಹಸುಗಳು ಬೀಳುತ್ತಿದ್ದವಂತೆ. ಹೀಗಾಗಿ ಅಲ್ಲಿದ್ದ ಋಷಿಗಳು ದೇವರಲ್ಲಿ ಪ್ರಾರ್ಥಿಸಿ ಈ ದೊಡ್ಡ ಕಂದಕ ಮರೆಯಾಗುವಂತೆ ಮಾಡಿ ಎಂದು ಬೇಡಿಕೊಂಡರಂತೆ. ಈ ವೇಳೆ ಅರ್ಬುದ್ ಎಂಬ ಹಾವು ಇಡೀ ಪರ್ವತವನ್ನು ತನ್ನ ಬೆನ್ನ ಮೇಲೆ ಹೊತ್ತು ಭೂಮಿಯ ಆಳಕ್ಕೆ ಹೋಗಲು ಮುಂದಾಗಿತ್ತಂತೆ. ಈ ವೇಳೆ ಮತ್ತಷ್ಟು ಭೂಕಂಪ, ಭೂಮಿ ಬಿರುಕುಬಿಡಲು ಆರಂಭವಾಯಿತಂತೆ.
ಇದರಿಂದ ಋಷಿ ಮುನಿಗಳಿಗೆ ಮತ್ತಷ್ಟು ಸಮಸ್ಯೆಯಾತ್ತಂತೆ. ಹೀಗಾಗಿ ಅವರು ಶಿವನ ಕುರಿತು ಪೂಜೆ ನೆರವೇರಿಸಿ, ಬೇಡಿಕೊಂಡರಂತೆ, ಈ ವೇಳೆ ಶಿವನು ತನ್ನ ಬಲಗಾಲಿನ ಹೆಬ್ಬೆರಳ ಮೂಲಕ ಆ ಹಾವಿನ ಚಲನೆ ನಿಲ್ಲಿಸಿದನಂತೆ, ಅದೇ ಜಾಗ ಈಗ ಅಚಲ್‌ಗಡ್ ಆಗಿ ಬದಲಾಯಿತು ಎಂಬ ಕಥೆ ಇದೆ. ಈ ದೇವಾಲಯದಲ್ಲಿ ಪೂಜಿಸಲ್ಪಡುತ್ತಿರುವುದು ಶಿವನ ಬಲಗಾಲಿನ ಹೆಬ್ಬೆರಳಾಗಿದೆ.
ಈ ದೇವಾಲಯದಲ್ಲಿ ಕಪ್ಪು ಬಣ್ಣದ ಹೆಬ್ಬರಳಿಗೆ ಪೂಜೆ ನೆರವೇರುತ್ತದೆ. ಶಿವನ ಹೆಬ್ಬೆರಳಿಗೆ ಪೂಜೆ ಸಲ್ಲುವ ವಿಶ್ವದ ಏಕೈಕ ದೇವಾಲಯ ಇದಾಗಿದೆ. ಈ ಕಲ್ಲು ಕೊಳದಲ್ಲಿರುತ್ತದೆ. ಈ ಕೊಳದಲ್ಲಿ ನೀರು ಎಲ್ಲಿಗೆ ಹರಿಯುತ್ತಿದೆ ಎಂಬುದು ಮಾತ್ರ ತಿಳಿಯುವುದಿಲ್ಲ. ಗರ್ಭಗುಡಿಯ ಮಧ್ಯದಲ್ಲಿ ಯಾವಾಗಲು ನೀರು ತುಂಬಿರುತ್ತದೆ. ಈ ನೀರು ಯಾವ ದಿಕ್ಕಿಗೆ ಹರಿಯುತ್ತಿದೆ ಎಂದು ತಿಳಿಯುವುದೇ ಇಲ್ಲ.



Click it and Unblock the Notifications