Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಶ್ರಾವಣ ಮಾಸ 2023 : ಬುಧವಾರ ಗಣೇಶನನ್ನು ಈ ರೀತಿ ಪೂಜಿಸಿದ್ರೆ ಸಂಪತ್ತು ಸಿದ್ಧಿಸುತ್ತೆ!
ಹಿಂದೂ ಧರ್ಮದಲ್ಲಿ ಬುಧವಾರವನ್ನು ಗಣೇಶನಿಗೆ ಸಮರ್ಪಣೆ ಮಾಡಲಾಗುತ್ತದೆ. ಈ ದಿನ ವಿನಾಯಕನಿಗೆ ಪೂಜೆ ಮಾಡಿದ್ರೆ ನಮ್ಮೆಲ್ಲಾ ಇಷ್ಟಾರ್ಥಗಳು ಸಿದ್ಧಿಯಾಗುತ್ತದೆ ಎನ್ನುವ ನಂಬಿಕೆಯಿದೆ. ಗಣೇಶನನ್ನು ವಿಘ್ನ ನಿವಾರಕ ಎಂದು ಕರೆಯಲಾಗುತ್ತದೆ. ಹೀಗಾಗಿ ಯಾವುದೇ ಶುಭ ಕೆಲಸ ಆಗಬೇಕಾದ್ರು ಮೊದಲ ಪೂಜೆಯನ್ನು ಗಣೇಶನಿಗೆ ಸಮರ್ಪಣೆ ಮಾಡಲಾಗುತ್ತದೆ. ನಂಬಿಕೆಗಳ ಪ್ರಕಾರ ಶ್ರಾವಣ ತಿಂಗಳಿನಲ್ಲಿ ಗಣೇಶನನ್ನು ಭಕ್ತಿಯಿಂದ ಪೂಜೆ ಮಾಡಿದ್ರೆ ಗಣೇಶ ನಮಗೆ ಎರಡರಷ್ಟು ಸಂತೋಷ, ಸಮೃದ್ಧಿ ಹಾಗೂ ಸಂಪತ್ತನ್ನು ಕರುಣಿಸುತ್ತಾನಂತೆ.
ಇನ್ನೂ ಶ್ರಾವಣ ತಿಂಗಳಿನಲ್ಲಿ ಗಣೇಶನು ಮಹಾದೇವನಿಗೆ ತುಂಬಾನೇ ಹತ್ತುರವಾಗಿರ್ತಾನಂತೆ. ಗಣೇಶನು ಬುಧ ಗ್ರಹವನ್ನು ಆಳುತ್ತಿದ್ದು, ಶ್ರಾವಣ ಬುಧವಾರದಲ್ಲಿ ಗಣೇಶನನ್ನು ಪೂಜಿಸೋದ್ರಿಂದ ನಮೆಲ್ಲಾ ಬಯಕೆ ಈಡೇರುತ್ತಂತೆ. ಅಷ್ಟಕ್ಕು ಶ್ರಾವಣ ಬುಧವಾರದ ದಿನ ಗಣೇಶನನ್ನು ಯಾವ ರೀತಿ ಪೂಜಿಸಿದ್ರೆ ಆರ್ಥಿಕ ಅಭಿವೃದ್ಧಿಯಾಗುತ್ತೆ ಅನ್ನೋದನ್ನು ತಿಳಿಯೋಣ.

1. ಕೆಂಪು ತಿಲಕ ಹಚ್ಚಿ
ವಿನಾಯಕನಿಗೆ ಕೆಂಪು ಬಣ್ಣ ಅಂದ್ರೆ ತುಂಬಾನೇ ಇಷ್ಟ. ಹೀಗಾಗಿ ಶ್ರಾವಣ ಬುಧವಾರದಂದು ಕೆಂಪು ತಿಲಕವನ್ನು ಗಣೇಶನಿಗೆ ಹಚ್ಚಬೇಕು. ಪೂಜೆಯ ಬಳಿಕ ನೀವು ಕೂಡ ಕೆಂಪು ತಿಲಕವನ್ನು ಹಚ್ಚಿಕೊಳ್ಳಿ. ಈ ರೀತಿ ಮಾಡುವುದರಿಂದ ಭಕ್ತರ ಆಶೀರ್ವಾದ ಭಕ್ತರ ಮೇಲೆ ಇದ್ದೇ ಇರುತ್ತದೆ.
2. ಗಣೇಶನಿಗೆ ಗರಿಕೆ ಅರ್ಪಿಸಿ
ಗಣೇಶನಿಗೆ ಗರಿಕೆ ಎಂದರೆ ತುಂಬಾನೇ ಇಷ್ಟ. ಹೀಗಾಗಿ ಶ್ರಾವಣ ಬುಧವಾರದಂದು ವಿನಾಯಕನನ್ನು ಪೂಜಿಸೋವಾಗ ತಪ್ಪದೇ ಗರಿಕೆಯನ್ನು ಗಣೇಶನಿಗೆ ಅರ್ಪಿಸಿ. ಇದರಿಂದ ಗಣೇಶನು ತುಂಬಾನೇ ಖುಷಿಯಾಗಿ ಇರುತ್ತಾನಂತೆ. ಭಕ್ತರು ಒಂದು ವಿಚಾರವನ್ನು ಗಮನವಿಟ್ಟು ಗಮನಿಸಬೇಕು ಅದೇನೆಂದರೆ ಗಣೇಶನಿಗೆ ಗರಿಕೆ ಅರ್ಪಿಸುವಾಗ ಅದನ್ನು ಗಣೇಶನ ತಲೆಯ ಮೇಲೆ ಇಡಬೇಕು.
3. ಶಮಿ ಗಿಡವನ್ನು ಗಣೇಶನಿಗೆ ಅರ್ಪಿಸಿ
ಶಮಿ ಗಿಡವೆಂದರೆ ಗಣೇಶನಿಗೆ ತುಂಬಾನೇ ಇಷ್ಟ. ಹೀಗಾಗಿ ಶ್ರಾವಣ ಬುಧವಾರದ ದಿನ ಶಮಿ ಗಿಡಗಳನ್ನು ಗಣೇಶನಿಗೆ ಅರ್ಪಣೆ ಮಾಡಿದ್ರೆ ತುಂಬಾನೇ ಒಳ್ಳೆಯದು. ಇದರಿಂದ ಮನೆಯಲ್ಲಿ ಸಂಪತ್ತು ಹಾಗೂ ಸಮೃದ್ಧಿ ಹೆಚ್ಚಾಗುವುದು ಮಾತ್ರವಲ್ಲದೇ ನಿಮ್ಮೆಲ್ಲಾ ಆರ್ಥಿಕ ಸಮಸ್ಯೆಗಳಿಗೆ ಮುಕ್ತಿ ಸಿಗುತ್ತದೆ.
4. ಅನ್ನವನ್ನು ವಿನಾಯಕನಿಗೆ ಅರ್ಪಿಸಿ
ಹಿಂದೂ ಧರ್ಮದಲ್ಲಿ ಅಕ್ಷತೆಗೆ ತುಂಬಾನೇ ಮಹತ್ವವಿದೆ. ದೇವರ ಪೂಜೆಯನ್ನು ಮಾಡುವ ಸಂದರ್ಭದಲ್ಲಿ ಅಕ್ಷತೆಯನ್ನು ಅರ್ಪಣೆ ಮಾಡಲಾಗುತ್ತದೆ. ಕಾರಣ ಹಿಂದೂ ಧರ್ಮದಲ್ಲಿ ಅಕ್ಕಿಗೆ ಮಹತ್ವದ ಸ್ಥಾನವಿದೆ. ಅನ್ನವೆಂದರೆ ವಿನಾಯಕನಿಗೂ ತುಂಬಾನೇ ಇಷ್ಟವಂತೆ. ಹೀಗಾಗಿ ಗಣೇಶನಿಗೆ ಅಕ್ಕಿಯನ್ನು ಅರ್ಪಿಸುವ ಬದಲು ಅನ್ನವನ್ನು ಅರ್ಪಿಸಿದರೆ ತುಂಬಾನೇ ಒಳ್ಳೆಯದಾಗುತ್ತಂತೆ. ಇದರಿಂದ ನಿಮ್ಮ ಮನಸ್ಸಿನ ಬಯಕೆಗಳೆಲ್ಲಾ ಈಡೇರುತ್ತಂತೆ.
5. ಈ ಆಹಾರಗಳನ್ನು ಅರ್ಪಿಸಿ
ಶ್ರಾವಣ ಬುಧವಾರದ ದಿನ ಗಣೇಶನಿಗೆ ಬೆಲ್ಲ, ತುಪ್ಪವನ್ನು ಅರ್ಪಣೆ ಮಾಡಬೇಕು. ಇದರಿಂದ ವಿನಾಯಕ ಸಂತುಷ್ಠಗೊಳ್ಳುತ್ತಾನಂತೆ. ಹಾಗೂ ಭಕ್ತರ ಮೇಲೆ ಗಣೇಶನ ಆಶೀರ್ವಾದ ಸದಾ ಇರುತ್ತಂತೆ. ಅಷ್ಟೇ ಅಲ್ಲ, ನಿಮ್ಮ ಮನೆಯಲ್ಲಿ ಎದುರಾಗಿರೋ ಆರ್ಥಿಕ ಸಮಸ್ಯೆಗಳೆಲ್ಲಾ ನಿವಾರಣೆಯಾಗುತ್ತಂತೆ. ಮನೆಯಲ್ಲಿ ಸದಾ ಖುಷಿಯೇ ತುಂಬಿರುತ್ತಂತೆ.
ಗಣೇಶನಿಗೆ ಪ್ರಿಯವಾದ ಬುಧವಾರದಂದು ಭಕ್ತಿಯಿಂದ ಕಟ್ಟು ನಿಟ್ಟಾಗಿ ಪೂಜೆಯನ್ನು ಸಲ್ಲಿಸಿದ್ರೆ ನಿಮ್ಮ ಬದುಕಿನಲ್ಲಿ ಎದುರಾದ ಎಲ್ಲಾ ಕಷ್ಟಗಳು ಬಗೆ ಹರಿದು ಸದಾ ಸಂತೋಷ ತುಂಬಿರುತ್ತದೆ.



Click it and Unblock the Notifications


