Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಲೋಕಸಭೆ ಕಣದಲ್ಲಿ ಅತ್ಯಂತ ಬಡ ಅಭ್ಯರ್ಥಿ ಈತ..! ಇವನ ಆಸ್ತಿ ₹320 ರೂಪಾಯಿ!
ದೇಶದಲ್ಲೀಗ ಲೋಕಸಭೆ ಚುನಾವಣೆಯದ್ದೇ ಸದ್ದು, ಈ ಬಾರಿ ಯಾವ ಪಕ್ಷ ಹೆಚ್ಚು ಸ್ಥಾನ ಗೆಲ್ಲಲ್ಲಿದೆ ಯಾರು ಅಧಿಕಾರ ಹಿಡಿಯಲಿದ್ದಾರೆ ಎಂಬುದೇ ಕುತೂಹಲ ಮೂಡಿಸಿದೆ. ಹೀಗಾಗಿ ಬೀದಿ ಬೀದಿಯಲ್ಲಿಗ ಅಭ್ಯರ್ಥಿಗಳ ಭಾವಚಿತ್ರ ಅವರ ಪಕ್ಷದ ಗುರುತು ಹೀಗೆ ಎಲ್ಲಿ ನೋಡಿದರು ಬ್ಯಾನರ್ ಬಂಟಿಂಗ್ಸ್ ಕಾಣುತ್ತವೆ. ಅದರಲ್ಲೂ ಈ ಬಾರಿಯ ಚುನಾವಣೆ ಹತ್ತು ಹಲವು ಕಾರಣದಿಂದಾಗಿ ವಿಶೇಷ ಎನಿಸುತ್ತಿದೆ.
ಇನ್ನು ಚುನಾವಣೆ ಎಂದ ತಕ್ಷಣ ಅಲ್ಲಿ ಹಣದ ಹೊಳೆ ಹರಿಯುತ್ತದೆ. ರಾಜಕೀಯ ಎಂಬುದೇ ಹಣವಂತರಿಗೆ ಮಾತ್ರ ಎನ್ನುವಂತಾಗಿದೆ. ಅದರಲ್ಲೂ ಶಾಸಕರು, ಸಂಸದರು ಚುನಾವಣೆ ಹತ್ತಿರ ಬಂದಾಗ ತಾವು ಘೋಷಿಸಿಕೊಳ್ಳುವ ಆಸ್ತಿ ಮೌಲ್ಯ ನೋಡಿ ಮತದಾರರು ಆಘಾತಕ್ಕೊಳಗಾಗುವುದು ಇದೆ. ಏಕೆಂದರೆ ಅವರ ಆಸ್ತಿ ಕೋಟಿ ಕೋಟಿ ರೂಪಾಯಿಯದ್ದಾಗಿರುತ್ತೆ.

ಇನ್ನು ದೇಶದಲ್ಲೇ ಅತ್ಯಂತ ಶ್ರೀಮಂತ ಅಭ್ಯರ್ಥಿಗಳ ಪಟ್ಟಿಯಲ್ಲಿ ಮೊದಲಾಗಿ ಅಭ್ಯರ್ಥಿಗಳ ಪೈಕಿ ಮಾಜಿ ಮುಖ್ಯಮಂತ್ರಿ ಕಮಲನಾಥ್ ಪುತ್ರ ನಕುಲ್ ನಾಥ್ ಮೊದಲ ಸ್ಥಾನದಲ್ಲಿದ್ದಾರೆ. ಆತನ ಆಸ್ತಿ 717 ಕೋಟಿ ರೂಪಾಯಿಯಾಗಿದೆ. ಇನ್ನು ನಿಮಗೆ ಅಚ್ಚರಿಯಾಗಬಹುದು, ಈ ಚುನಾವಣೆಯಲ್ಲಿ ಅತ್ಯಂತ ಕಡು ಬಡವನೊಬ್ಬ ಸ್ಪರ್ಧೆಗಿಳಿದಿದ್ದಾನೆ. ಆತನ ಆಸ್ತಿ ಕೇವಲ 1000 ರೂಪಾಯಿಗೂ ಕಡಿಮೆಯಂತೆ.
ಮಾರ್ಚ್‌ನಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಲೋಕಸಭೆ ಚುನಾವಣೆಗೆ ಸ್ಪರ್ಧಿಸದಿರಲು ಕಾರಣ ಹೇಳುತ್ತಾ 'ಸ್ಪರ್ಧಿಸಲು ಅಂತಹ ಹಣವಿಲ್ಲ' ಎಂದಿದ್ದರು. ಆದರೆ ಇಲ್ಲೊಬ್ಬನ ಬಳಿ ಒಟ್ಟು ಆಸ್ತಿ ಎಂದರೆ ಕೇವಲ 320 ರೂಪಾಯಿಯಂತೆ. ಹೌದು ತಮಿಳುನಾಡಿನ ತೂತುಕುಡಿಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಪೊನ್ರಾಜ್ ಕೆ ಅವರ ಅವರ ಒಟ್ಟು ಆಸ್ತಿ 320 ರೂಪಾಯಿ.
ಭಾರತೀಯ ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಅಫಿಡವಿಟ್ ಪ್ರಕಾರ ಪೊನ್ರಾಜ್ ಅವರ ಒಟ್ಟು ಆಸ್ತಿ 320 ರೂ. ಇದು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿರುವವ ಪೈಕಿ ಅತ್ಯಂತ ಬಡ ಅಭ್ಯರ್ಥಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಆದ್ರೆ ಇದು ಎಷ್ಟುರ ಮಟ್ಟಿಗೆ ಸತ್ಯ ಎಂಬುದು ಮಾತ್ರ ತಿಳಿದುಬಂದಿಲ್ಲ.
1,000 ರೂ.ಗಿಂತ ಕಡಿಮೆ ಆಸ್ತಿ ಹೊಂದಿರುವ ನಾಲ್ವರು ಅಭ್ಯರ್ಥಿಗಳು
ಮೊದಲ ಹಂತದಲ್ಲಿ ಸಲ್ಲಿಕೆಯಾಗಿರುವ ಅಫಿಡವಿಟ್‌ನಲ್ಲಿ ಒಟ್ಟು 1,000 ಅಥವಾ ಅದಕ್ಕಿಂತ ಕಡಿಮೆ ಮೌಲ್ಯದ ಆಸ್ತಿಯನ್ನು ಘೋಷಿಸಿದ ನಾಲ್ವರು ಅಭ್ಯರ್ಥಿಗಳಲ್ಲಿ ಪೊನ್ರಾಜ್ ಸಹ ಒಬ್ಬರು. ಮಹಾರಾಷ್ಟ್ರದ ರಾಮ್‌ಟೆಕ್ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ಕಾರ್ತಿಕ್ ಗೆಂದ್ಲಾಲ್ಜಿ ದೋಕ್ ಹೊರತುಪಡಿಸಿ 500 ರೂ. ಮೌಲ್ಯದ ಆಸ್ತಿ ಘೋಷಿಸಿದ ನಾಲ್ವರಲ್ಲಿ ತಮಿಳುನಾಡಿನವರು ಎಂದು ತಿಳಿದುಬಂದಿದೆ.
ಚುನಾವಣಾ ಆಯೋಗದ ಅಂಕಿಅಂಶಗಳ ಪ್ರಕಾರ, ಲೋಕಸಭೆ ಚುನಾವಣೆಯ ಮೊದಲ ಹಂತದ ಮೊದಲ ಹತ್ತು ಬಡ ಅಭ್ಯರ್ಥಿಗಳ ಪೈಕಿ ತೂತುಕುಡಿಯ ಮತ್ತೋರ್ವ ಸ್ವತಂತ್ರ ಅಭ್ಯರ್ಥಿ ಕೃಷ್ಣನ್ ಅವರಾಗಿದ್ದಾರೆ ಅವರು 3500 ರೂಪಾಯಿ ಆಸ್ತಿ ಘೋಷಿಸಿಕೊಂಡಿದ್ದಾರೆ. ಇವರು 10ನೇ ಸ್ಥಾನದಲ್ಲಿದ್ದಾರೆ.
ತಮಿಳುನಾಡಿನ ಶ್ರೀಮಂತ ಅಭ್ಯರ್ಥಿ
ತಮಿಳುನಾಡಿನ ಈರೋಡ್ ನಿಂದ ಸ್ಪರ್ಧಿಸಿರುವ ಎಐಎಡಿಎಂಕೆ ನಾಯಕ ಅಶೋಕ್ ಕುಮಾರ್ 662 ಕೋಟಿ ರೂ. ಆಸ್ತಿ ಘೋಷಿಸಿಕೊಂಡಿದ್ದು, ಇವರು ತಮಿಳುನಾಡಿನ ಶ್ರೀಮಂತ ಅಭ್ಯರ್ಥಿ ಹಾಗೂ ದೇಶದ 2ನೇ ಅತ್ಯಂತ ಶ್ರೀಮಂತ ಲೋಕಸಭಾ ಅಭ್ಯರ್ಥಿ ಎಂಬ ಕೀರ್ತಿ ಪಡೆದಿದ್ದಾರೆ.
ದೇಶಾದ್ಯಂತ 7 ಹಂತಗಳಲ್ಲಿ ಮತದಾನ ನಡೆಯಲಿದ್ದು, ಮೊದಲ ಹಂತ ಏಪ್ರಿಲ್ 19 ರಂದು ಪ್ರಾರಂಭವಾಗಲಿದೆ. ಎರಡನೇ ಹಂತದ ಮತದಾನ ಏಪ್ರಿಲ್ 26, ಮೇ 7, 13, 20, 25 ಮತ್ತು ಜೂನ್ 1 ರಂದು ನಡೆಯಲಿದೆ. ಜೂನ್ 4ರಂದು ಚುನಾವಣಾ ಫಲಿತಾಂಶ ಹೊರಬೀಳಲಿದೆ.



Click it and Unblock the Notifications

