Latest Updates
-
ನೀಟ್ ಮರುಪರೀಕ್ಷೆ: ಅಡ್ಮಿಟ್ ಕಾರ್ಡ್ ಬಿಡುಗಡೆ, ಪರೀಕ್ಷೆಗೆ ಹೋಗುವ ಮುನ್ನ ವಿದ್ಯಾರ್ಥಿಗಳು ಮತ್ತು ಪೋಷಕರು ತಪ್ಪದೇ ಮಾಡಬೇಕಾದ ಕೆಲಸಗಳಿವು! -
ಮಳೆಗಾಲದ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವೇ? ಸೋರಿಕೆ ಮತ್ತು ಹಾನಿ ತಪ್ಪಿಸಲು ಈ ಸರಳ ಟಿಪ್ಸ್ ಪಾಲಿಸಿ -
ಸುಡುವ ಬಿಸಿಲಿಗೆ ಹವಾಮಾನ ಇಲಾಖೆ ಎಚ್ಚರಿಕೆ: ದೇಹ ತಂಪಾಗಿಡಲು ಈ ಪಾನೀಯಗಳೇ ರಾಮಬಾಣ! -
ಲಕ್ನೋದಲ್ಲಿ ಭಾರತ-ಅಫ್ಘಾನಿಸ್ತಾನ ಹೈ-ವೋಲ್ಟೇಜ್ ಕದನ: ಪಂದ್ಯದ ಮಜಾ ಸವಿಯಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಯೋಗ ದಿನಾಚರಣೆ: ಮೈದಾನದಲ್ಲಿ ಯೋಗ ಮಾಡಲು ಸಿದ್ಧರಿದ್ದೀರಾ? ಇಲ್ಲಿದೆ ಅಗತ್ಯ ಮುನ್ನೆಚ್ಚರಿಕೆಗಳು! -
ಟೆಲಿಗ್ರಾಮ್ ಬಳಕೆದಾರರೇ ಎಚ್ಚರ: ಜೂನ್ 16 ರಿಂದ 22 ರವರೆಗೆ ಸೇವೆ ಸ್ಥಗಿತ, ಪರ್ಯಾಯ ಮಾರ್ಗಗಳೇನು? -
ಪಂಜಾಬ್-ಹರಿಯಾಣದಲ್ಲಿ ಭಾರಿ ಬಿರುಗಾಳಿ ಎಚ್ಚರಿಕೆ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಈ 20 ನಿಮಿಷಗಳ ಟಿಪ್ಸ್ ಪಾಲಿಸಿ! -
ಸೋಯಾಬೀನ್ ಎಣ್ಣೆ ಬೆಲೆ ಏರಿಕೆ: ಅಡುಗೆ ಮನೆ ಬಜೆಟ್ ಮೇಲೆ ಹೊರೆ, ಕಲಬೆರಕೆ ಪತ್ತೆ ಹಚ್ಚುವುದು ಹೇಗೆ? -
ದೆಹಲಿ-ಎನ್ಸಿಆರ್ನಲ್ಲಿ ಮಳೆ ಅಬ್ಬರ: ಟ್ರಾಫಿಕ್ ಕಿರಿಕಿರಿ ತಪ್ಪಿಸಲು ನೀವು ಮಾಡಬೇಕಾದ್ದೇನು? -
ಮುಂಬೈ ಸೆಕೆ ಮತ್ತು ಆರ್ದ್ರತೆ: ಹೊರಗೆ ಹೋಗಿ ಸುಸ್ತಾಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ!
30 ದೇಶಗಳ ಮತದಾನಕ್ಕೆ ರಾಜ್ಯದ ಶಾಯಿ..! ಮೈಸೂರಿಗೆ 'ಮೈಲ್ಯಾಕ್' ಹಿರಿಮೆ
ಪ್ರಜಾಪ್ರಭುತ್ವದ ಹಬ್ಬ ಎಂದು ಪರಿಗಣಿಸಲಾಗುವ ಚುನಾವಣೆ ಇನ್ನೇನು ಸಮೀಪಿಸುತ್ತಿದೆ. ದೇಶದಲ್ಲಿ ಲೋಕಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗಬೇಕಿದೆ. ನಾವು ಪ್ರತಿ ವರ್ಷ ಚುನಾವಣೆ ಬಂದಾಗಲು ಒಬ್ಬ ನಾಯಕನನ್ನು ನಮ್ಮ ಕ್ಷೇತ್ರದಿಂದ ಆರಿಸುತ್ತೇವೆ. ನೀವು ಮತದಾನದ ದಿನ ನಿಮ್ಮ ಕೈ ಬೆರಳ ಮೇಲೆ ಅಚ್ಚಾಗುವ ಶಾಯಿ ಬಗ್ಗೆ ಎಂದಾದರು ಯೋಚಿಸಿದ್ದೀರಾ?
ಹೌದು ನಾವು ಪ್ರತಿ ವರ್ಷ ಮತದಾನ ಮಾಡಿದಾಗ ನಮ್ಮ ಕೈ ಬೆರಳ ಮೇಲೆ ಕಪ್ಪು ಶಾಯಿ ಹಾಕಲಾಗುತ್ತದೆ. ಈ ಇಂಕ್ ಎಷ್ಟು ತೊಳೆದರೂ ಹೋಗುವುದಿಲ್ಲ. ಮತದಾನದಲ್ಲಿ ಅಕ್ರಮ ತಡೆಯಲು, ನಕಲಿ ಓಟುಗಳ ತಡೆಯಲು ಈ ರೀತಿ ಶಾಯಿ ಉಪಯೋಗಿಸಲಾಗುತ್ತದೆ. ಆದರೆ ಈ ಶಾಯಿ ತಯಾರಾಗುವುದು ನಮ್ಮ ರಾಜ್ಯದಲ್ಲಿ.

ಮೈಸೂರು ಪೇಂಟ್ಸ್ ಅಂಡ್ ವಾರ್ನಿಷ್ಸ್ 1962ರಿಂದ ಚುನಾವಣೆಗಳಿಗೆ ಈ ಶಾಯಿ ನೀಡುತ್ತಿದೆ. ಹಾಗಾದರೆ ಈ ಶಾಯಿ ಹಿಂದಿರುವ ಇತಿಹಾಸವೇನು?, ಆರಂಭಿಸಿದ್ದು ಯಾರು? ಎಂಬ ಕುರಿತು ಮಾಹಿತಿ ಇಲ್ಲಿದೆ.
ಈ ಕಪ್ಪು ಶಾಯಿಯನ್ನು ಪೂರೈಸುವ ಏಕೈಕ ರಾಷ್ಟ್ರ ಭಾರತವಾಗಿದೆ. ಅದರಲ್ಲೂ ನಮ್ಮ ಮೈಸೂರಿನಲ್ಲಿ ಈ ಶಾಯಿ ಉತ್ಪಾದನೆಯಾಗುತ್ತದೆ. 1937ರಲ್ಲಿ ಅಂದಿನ ಮೈಸೂರು ಪ್ರಾಂತ್ಯದ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮೈಸೂರು ಲ್ಯಾಕ್ & ಪೇಂಟ್ ವರ್ಕ್ಸ್ ಹೆಸರಿನಲ್ಲಿ ಈ ಘಟಕ ಸ್ಥಾಪಿಸಿದರು, ಘಟಕದ ಮೊದಲ ಉತ್ಪನ್ನವು ಲ್ಯಾಕ್ (ಮೇಣ) ಆಗಿತ್ತು, ಇದನ್ನು ಮೈಸೂರು ಮತ್ತು ನಾಗರಹೊಳೆ ಬಳಿಯಿರುವ ಕಾಡುಗಳಿಂದ ಪಡೆಯಲಾಗುತ್ತಿತ್ತು.
ಸ್ಥಳೀಯರಿಗೆ ಉದ್ಯೋಗವನ್ನು ಒದಗಿಸುವ ಆಶಯದೊಂದಿಗೆ, ಕಾರ್ಮಿಕರು ಲ್ಯಾಕ್ ಅನ್ನು ಸಂಗ್ರಹಿಸಲು ತೊಡಗಿದ್ದರು - ಈ ಮೇಣವು ಕೀಟಗಳು, ಮರದ ತೊಗಟೆಗಳಿಂದ ಮಾತ್ರ ಪಡೆಯಲಾಗುತ್ತದೆ. ಕೆಲವು ಜಾತಿಯ ಮರಗಳು ಈ ಮೇಣವನ್ನು ಸ್ರವಿಸುತ್ತಿದ್ದವು, ಇದನ್ನು ಸಂಗ್ರಹಿಸಲು ಸ್ಥಳೀಯರು ಕಾಡುಗಳಲ್ಲಿ ಅಲೆಯುತ್ತಿದ್ದರು. ಇದನ್ನು ಭಾರತೀಯ ರೈಲ್ವೆ, ಭಾರತೀಯ ಅಂಚೆ ಮತ್ತು ಚುನಾವಣಾ ಆಯೋಗವು ಸರ್ಕಾರದ ಪ್ರಮುಖ ರಹಸ್ಯಗಳು ಮತ್ತು ಮತಪೆಟ್ಟಿಗೆಗಳನ್ನು ಕಾಪಾಡಲು ಮೇಣ ಬಳಸುತ್ತದೆ.
ಆದರೆ ಇಂದಿರಾ ಗಾಂಧಿಯವರು ಅರಣ್ಯ (ಸಂರಕ್ಷಣೆ) ಕಾಯಿದೆ, 1980ರ ಅಂಗೀಕಾರಗೊಂಡಾಗಿನಿಂದ ಈ ಕಂಪನಿಗೆ ಮೇಣ ಸಂಗ್ರಹಿಸುವ ಪರವಾನಗಿ ರದ್ದಾಯಿತು. ಹೀಗಾಗಿ ಮೈಸೂರು ಲ್ಯಾಕ್ ಮತ್ತು ಪೇಂಟ್ ವರ್ಕ್ಸ್ ಮುಂದೆ ಮೈಸೂರು ಪೇಂಟ್ಸ್ ಮತ್ತು ವಾರ್ನಿಷ್ ಎಂದು ಮರುನಾಮಕರಣಗೊಂಡಿತು.
ಕಂಪನಿಯು ಇಂದು ಭಾರತ, ಥೈಲ್ಯಾಂಡ್, ಸಿಂಗಾಪುರ್, ನೈಜೀರಿಯಾ, ಮಲೇಷ್ಯಾ, ಕಾಂಬೋಡಿಯಾ ಮತ್ತು ದಕ್ಷಿಣ ಆಫ್ರಿಕಾ ಸೇರಿದಂತೆ 30 ದೇಶಗಳಲ್ಲಿ ಚುನಾವಣೆಗಳನ್ನು ಸುಗಮವಾಗಿ ನಡೆಸಲು ಸಹಾಯ ಮಾಡುತ್ತಿದೆ. 1962 ರಿಂದ, ಅದರ ಪೇಟೆಂಟ್ ಪಡೆದ ಅಳಿಸಲಾಗದ ಚುನಾವಣಾ ಶಾಯಿ'ಯ ಸೂತ್ರವು ರಹಸ್ಯವಾಗಿದೆ.
2016-17ನೇ ಸಾಲಿನಲ್ಲಿ ಮೈಸೂರು ಪೇಂಟ್ಸ್ 6.18 ಕೋಟಿ ಲಾಭ ಗಳಿಸಿದೆ. ಚುನಾವಣಾ ವರ್ಷದಲ್ಲಿ ಈ ಸಂಖ್ಯೆ ದ್ವಿಗುಣಗೊಳ್ಳಬಹುದು. ಕಂಪನಿಯ ಆದಾಯದ 40-60%ರ ನಡುವೆ ಅಳಿಸಲಾಗದ ಶಾಯಿ ಮಾರಾಟದಿಂದ ಬರುತ್ತದೆ. 100 ಕಾರ್ಮಿಕರು, ಎಂಜಿನಿಯರ್‌ಗಳು ಮತ್ತು ರಸಾಯನಶಾಸ್ತ್ರಜ್ಞರನ್ನು ನೇಮಿಸಿಕೊಳ್ಳುತ್ತಿರುವ ಸಾರ್ವಜನಿಕ ವಲಯದ ಉದ್ಯಮ (ಪಿಎಸ್‌ಯು) 1991 ರಿಂದ ಲಾಭದಾಯಕವಾಗಿದೆ.
ಐದು ದಶಕಗಳ ಹಿಂದೆಯೇ ಮತದಾನದಲ್ಲಿ ನಡೆಯುವ ಅಕ್ರಮ ತಡೆಯಲು ಚುನಾವಣಾ ಆಯೋಗ ಮತದಾರನ ಬೆರಳಿಗೆ ಕಪ್ಪು ಶಾಯಿ (ಮಸಿ) ಬಳಸುವ ವಿಧಾನವನ್ನು ಜಾರಿಗೆ ತಂದಿತ್ತು. ಅಲ್ಲಿಂದ ಇಲ್ಲಿಯವರೆಗೂ ದೇಶದ ಯಾವುದೇ ರಾಜ್ಯದಲ್ಲಿ ಚುನಾವಣೆ ನಡೆದರೂ ಮೈಸೂರಿನಿಂದಲೇ ಶಾಯಿಯನ್ನು ಸರಬರಾಜು ಮಾಡಲಾಗುತ್ತಿರುವುದು ವಿಶೇಷವಾಗಿದೆ. ಸ್ವಾತಂತ್ರ್ಯಾನಂತರ 1951, 57ರಲ್ಲಿ ಸಾರ್ವತ್ರಿಕ ಚುನಾವಣೆ ನಡೆದಾಗ ಇದರಲ್ಲಿ ಒಬ್ಬರೇ ಹಲವು ಬಾರಿ ಮತ ಚಲಾಯಿಸಿದ ಆರೋಪ ಕೇಳಿ ಬಂದಿತ್ತು. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಕೇಂದ್ರ ಚುನಾವಣಾ ಆಯೋಗ ಮತದಾರರ ಬೆರಳಿಗೆ ಕಪ್ಪು ಮಸಿ ಅಥವಾ ಶಾಯಿ ಹಾಕುವ ನಿರ್ಧಾರ ಕೈಗೊಂಡಿತು.



Click it and Unblock the Notifications
