Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ವಿಶ್ವದ ದುಬಾರಿ ಹಣ್ಣುಗಳಿವು..! ನೀವು ಊಹಿಸದ ಬೆಲೆ ಈ ಹಣ್ಣುಗಳಿಗಿದೆ..!
ನಿತ್ಯ ನಾವು ಮಾರುಕಟ್ಟೆಯಲ್ಲಿ ಹಣ್ಣುಗಳ ನೋಡುತ್ತೇವೆ, ಖರೀದಿಸುತ್ತೇವೆ. ಬೇಸಿಗೆಯಲ್ಲಿ ಹಣ್ಣುಗಳಿಗೆ ಸಿಕ್ಕಾಪಟ್ಟೆ ಬೇಡಿಕೆಯೂ ಇರುತ್ತೆ. ಹೀಗಾಗಿ ಹಣ್ಣಿನ ಮಾರುಕಟ್ಟೆಯಲ್ಲಿ ಜನಜಂಗುಳಿ ಕಾಣಬಹುದು. ಇದೆಲ್ಲದರ ನಡುವೆ ನಾವು ಯಾವ ಹಣ್ಣಿನ ಅಂಗಡಿಯಲ್ಲಿ ಯಾರು ಕಡಿಮೆ ಬೆಲೆಗೆ ಹಣ್ಣು ನೀಡುತ್ತಾರೆ ಎಂದು ಹುಡುಕುತ್ತೇವೆ. ಯಾಕಂದ್ರೆ ನಾವುಗಳು ಮಾರುಕಟ್ಟೆಯಲ್ಲಿ ಚೌಕಾಸಿ ಮಾಡದೆ ಏನನ್ನೂ ಖರೀದಿಸಲ್ಲ.
ಇನ್ನೊಂದೆಡೆ ವಿಶ್ವದಲ್ಲಿಯೇ ಅತ್ಯಂತ ದುಬಾರಿ ಹಣ್ಣುಗಳನ್ನು ಸಹ ನಾವು ನೋಡಬಹುದು. ಈ ಪಟ್ಟಿಯೂ ಸಹ ದೊಡ್ಡದಾಗಿದ್ದು, ಈ ಹಣ್ಣುಗಳ ಬೆಲೆ ಕೇಳಿದ್ರೆ ನೀವು ಶಾಕ್ ಆಗ್ತಿರ. ಸಾಮಾನ್ಯರು ಈ ಹಣ್ಣುಗಳ ಖರೀದಿಸಲು ಸಾಧ್ಯವೇ ಇಲ್ಲ ಅಷ್ಟು ದುಬಾರಿ ಬೆಲೆ ಇವುಗಳಿಗಿದೆ. ಹಾಗಾದ್ರೆ ಯಾವ ಹಣ್ಣಿಗೆ ಎಷ್ಟು ದರವಿದೆ. ವಿಶ್ವದ ದುಬಾರಿ ಹಣ್ಣುಗಳು ಯಾವುದು ಎಂಬುದನ್ನು ನಾವಿಂದು ನೋಡೋಣ.

ಯುಬಾರಿ ಕಿಂಗ್ ಕಲ್ಲಂಗಡಿ
ಈ ದುಬಾರು ಹಣ್ಣುಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಜಪಾನ್‌ನಲ್ಲಿ ಬೆಳೆಯುವ ಈ ಯುಬಾರಿ ಕಿಂಗ್ ಹಣ್ಣು ಸ್ಥಾನಪಡೆದಿದೆ. ಇದರ ರುಚಿ ಮೀರಿಸುವ ಹಣ್ಣು ಮತ್ತೊಂದಿಲ್ಲ ಎನ್ನಲಾಗಿದೆ. ಜಪಾನ್‌ನ ಹಕ್ಕೈಡೋ ದ್ವೀಪದಲ್ಲಿ ಈ ಹಣ್ಣನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ. ಈ ಜಾತಿಯ 2 ಎರಡು ಹಣ್ಣಿಗೆ ಮಾರುಕಟ್ಟೆಯಲ್ಲಿ 24 ಲಕ್ಷ ರೂಪಾಯಿಯಾಗುತ್ತದೆ. ಜಪಾನ್‌ನಲ್ಲಿ ಪ್ರತಿ ಜೋಡಿಗೆ $30,000ಗೆ ಮಾರಾಟವಾಗಿ ದಾಖಲೆ ಬರೆದಿದೆ.
ರೂಬಿ ರೋಮನ್ ದ್ರಾಕ್ಷಿಗಳು
ವಿಶ್ವದ ಎರಡನೇ ಅತ್ಯಂತ ದುಬಾರಿ ಹಣ್ಣು ರೂಬಿ ರೋಮನ್ ದ್ರಾಕ್ಷಿಗಳು. ಈ ಸುಂದರ ದ್ರಾಕ್ಷಿಗಳನ್ನು ಸಹ ಜಪಾನ್‌ನಲ್ಲಿ ಬೆಳೆಯಲಾಗುತ್ತದೆ. ಇಲ್ಲಿನ ಇಶಿಕಾವಾ ಪ್ರಾಂತ್ಯದಲ್ಲಿ ದೊಡ್ಡ ದೊಡ್ಡ ಫಾರ್ಮ್‌ಗಳಲ್ಲಿ ಈ ದ್ರಾಕ್ಷಿಗಳ ಬೆಳೆಯಲಾಗುತ್ತದೆ. ಈ ದ್ರಾಕ್ಷಿಯನ್ನು 2015ರಲ್ಲಿ $8,400 ಅಂದರೆ 6 ಲಕ್ಷ ರೂಪಾಯಿಗೆ ಮಾರಾಟ ಮಾಡಲಾಗಿತ್ತು.
ಡೆನ್ಸೂಕ್ ಕಲ್ಲಂಗಡಿ
ಈ ಹಣ್ಣು ಸಹ ಜಪಾನ್‌ನಲ್ಲಿಯೇ ಬೆಳೆಯಲಾಗುತ್ತದೆ. ಒಟ್ಟಿನಲ್ಲಿ ಜಪಾನ್ ದುಬಾರಿ ಹಣ್ಣುಗಳ ರಾಜಧಾನಿ ಎಂದು ಕರೆದರು ತಪ್ಪಾಗಲಾರದು. ಈ ಡೆನ್ಸೂಕ್ ಕಲ್ಲಂಗಡಿ ಸಹ ಭರ್ಜರಿ ಬೆಲೆಗೆ ಮಾರಾಟವಾದ ಇತಿಹಾಸವಿದೆ. 11 ಕೆ.ಜಿ ತೂಕದ ಈ ಹಣ್ಣನ್ನು 2008ರಲ್ಲಿ 5 ಲಕ್ಷ ರೂಪಾಯಿಗೆ ಮಾರಾಟ ಮಾಡಲಾಗಿತ್ತು. ಈ ಹಣ್ಣು ವಿಶ್ವದ ದುಬಾರಿ ಬೆಲೆಯ ಹಣ್ಣುಗಳ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ.
ತಮಾಗೊ ಮಾವಿನಹಣ್ಣು
ಈ ಪಟ್ಟಿಯಲ್ಲಿರುವ ಮುಂದಿನ ಹಣ್ಣು ಎಂದರೆ ಅದು ತಮಾಗೊ ಮಾವಿನ ಹಣ್ಣು, ಇದೂ ಸಹ ಜಪಾನ್ ದೇಶದ ಬೆಳೆಯಾಗಿದೆ. ಇದನ್ನು ಮಿಯಾಜಾಕಿ ಪ್ರದೇಶದಲ್ಲಿ ಬೆಳೆಯಲಾಗುತ್ತದೆ. ಈ ದುಬಾರಿ ಹಣ್ಣು 2017ರಲ್ಲಿ ಕೆ.ಜಿಗೆ 3 ಲಕ್ಷದಂತೆ ಮಾರಾಟವಾಗಿತ್ತು.
ಹೆಲಿಗನ್ ಅನಾನಸ್
ಇಂಗ್ಲೆಂಡ್‌ನ ಕಾರ್ನ್‌ವಾಲ್‌ನಲ್ಲಿ ಬೆಳೆಯಲಾಗುವ ಅತ್ಯಂತ ರುಚಿ ಹೊಂದಿರುವ ಹಣ್ಣು ಇದಾಗಿದ್ದು, ಕೆ.ಜಿಗೆ 1 ಲಕ್ಷ ರೂಪಾಯಿಗೂ ಅಧಿಕ ಮೊತ್ತಕ್ಕೆ ಮಾರಾಟವಾಗಿರುವ ದಾಖಲೆ ಹೊಂದಿದೆ. ಈಗಲೂ ಈ ಹಣ್ಣಿಗೆ ಮಾರುಕಟ್ಟೆಯಲ್ಲಿ ಸಿಕ್ಕಾಪಟ್ಟೆ ಬೇಡಿಕೆ ಇದೆ. ಆದರೆ ಇದನ್ನು ಬೆಳೆಯುವುದು ಸುಲಭದ ಮಾತಲ್ಲವಂತೆ. ಹೀಗಾಗಿ ಅಲ್ಪ ಪ್ರಮಾಣದಲ್ಲಿ ಬೆಳೆಯುವ ಈ ಹಣ್ಣಿಗೆ ಇನ್ನಿಲ್ಲದ ಬೇಡಿಕೆ ಎಲ್ಲಿಲ್ಲದ ಬೆಲೆ ಇದೆ.
ಚೌಕಕಾರದ ಕಲ್ಲಂಗಡಿ
ಈ ಪಟ್ಟಿಯ 6ನೇ ದುಬಾರಿ ಹಣ್ಣು ಮತ್ತೆ ಜಪಾನ್‌ನಿಂದಲೇ ಬಂದಿದೆ. ನಾವು ಕಲ್ಲಂಗಡಿಯನ್ನು ವೃತ್ತಾಕಾರದಲ್ಲಿ ಇರುವುದನ್ನು ನೋಡಿದ್ದೇವೆ. ಆದರೆ ಜಪಾನ್‌ನಲ್ಲಿ ಕಲ್ಲಂಗಡಿ ಚೌಕಕಾರದಲ್ಲಿರುತ್ತದೆ. ಈ ಹಣ್ಣುಗಳಿಗೆ 60 ಸಾವಿರಕ್ಕೂ ಅಧಿಕ ದರ ನೀಡಿ ಖರೀದಿಸುತ್ತಾರೆ.
ಸೆಂಬಿಕಿಯಾ ಕ್ವೀನ್ ಸ್ಟ್ರಾಬೆರಿ
ವಿಶ್ವದ ಅತ್ಯಂತ ದುಬಾರಿ ಸ್ಟ್ರಾಬೆರಿ ಜಪಾನ್‌ನಲ್ಲಿ ಬೆಳೆಯಲಾಗುತ್ತದೆ. ಅತ್ಯಂತ ರುಚಿಕರ ಮತ್ತು ಸೌಂದರ್ಯ ವರ್ಧಕವಾಗಿ ಜಪಾನ್‌ನಲ್ಲಿ ಈ ಹಣ್ಣು ಚಾಲ್ತಿಯಲ್ಲಿದೆ. ಇದರ ಒಂದು ಪ್ಯಾಕ್‌ಗೆ ಬರೋಬ್ಬರಿ 7 ಸಾವಿರ ರೂಪಾಯಿಯಾಗಿರುತ್ತದೆ. ಹೆಚ್ಚೆಂದರೆ 5 ರಿಂದ 6 ಹಣ್ಣುಗಳು ಆ ಪ್ಯಾಕ್‌ನಲ್ಲಿರುತ್ತವೆ.
ಡೆಕೊಪಾನ್ ಸಿಟ್ರಸ್
ಪಟ್ಟಿಯಲ್ಲಿ ಮುಂದಿನದನ್ನು ಈಗ ಇತರ ರಾಷ್ಟ್ರಗಳಲ್ಲಿಯೂ ಕಾಣಬಹುದು, ಆದರೆ ಇದು ಜಪಾನ್‌ನಲ್ಲಿ ಹುಟ್ಟಿಕೊಂಡಿತು- ಇಲ್ಲಿ ಆಶ್ಚರ್ಯವೇನಿಲ್ಲ. ಡೆಕೊಪಾನ್ ಸಿಟ್ರಸ್ ಒಂದು ರೀತಿಯ ಮ್ಯಾಂಡರಿನ್ ಕಿತ್ತಳೆ' ಎಂದು ವರದಿಯಾಗಿದೆ, ಇದು 'ಕ್ರಾಸ್ ಬ್ರೀಡಿಂಗ್' ಫಲಿತಾಂಶವಾಗಿದೆ. ಅವುಗಳ ಗಾತ್ರ ಮತ್ತು ಅಭಿರುಚಿಯು ಕಾಲಾನಂತರದಲ್ಲಿ ಎಷ್ಟು ಅಪರೂಪ ಮತ್ತು ದುಬಾರಿಯಾಗಿದೆ ಎಂಬುದಕ್ಕೆ ಬಹಳಷ್ಟು ಸಂಬಂಧಿಸಿದೆ. ಅವುಗಳ ಬೆಲೆ 6 ರ ಪ್ಯಾಕ್‌ಗೆ $80 (ರೂ. 6,000 ಕ್ಕಿಂತ ಹೆಚ್ಚು) ವರೆಗೆ ತಲುಪಬಹುದು ಎಂದು ವರದಿಯಾಗಿದೆ.
ಬುದ್ಧನ ಮುಖವಿರುವ ಪೀಯರ್ (ಪೇರಳೆ)
ಹೆಸರೇ ಸೂಚಿಸುವಂತೆ ಬುದ್ದನ ಆಕೃತಿಯಂತೆ ಕಾಣುವ ಈ ಹಣ್ಣು ವಿಶ್ವದ ದುಬಾರಿ ಹಣ್ಣುಗಳ ಸಾಲಿನಲ್ಲಿ ಸ್ಥಾನ ಪಡೆದಿದೆ. ಇದನ್ನು ಚೀನಾದಲ್ಲಿ ಹೆಚ್ಚಾಗಿ ಬೆಳೆಯುತ್ತಾರೆ. ಅಚ್ಚರಿ ಎಂದರೆ ಇದು ಬುದ್ದನಂತೆ ಹೋಲುವ ಮುಖಚರ್ಯ ಹೊಂದಿರುತ್ತದೆ. ಇದರ ಒಂದು ಹಣ್ಣಿಗೆ 700 ರೂಪಾಯಿಗೂ ಅಧಿಕ ಬೆಲೆಗೆ ಮಾರಾಟವಾಗುತ್ತದೆ ಎಂದು ವರದಿಯಾಗಿದೆ. ಅಚ್ಚರಿಯ ವಿಚಾರವೆಂದರೆ ಈ ಹಣ್ಣು ಸಿಕ್ಕದಿದ್ದಾಗ ಅದಕ್ಕೆ ಬುದ್ದನ ಮುಖದ ಆಕೃತಿಯ ಅಚ್ಚನ್ನು ಹಾಕಲಾಗುತ್ತದೆ. ಈ ಹಣ್ಣು ದೊಡ್ಡದಾದಾಗ ಅಚ್ಚನ್ನು ತೆಗೆಯಲಾಗುತ್ತದೆ.



Click it and Unblock the Notifications


