Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಜಾಗತಿಕವಾಗಿ ಕಳಪೆ ಪಾಸ್‌ಪೋರ್ಟ್ ಹೊಂದಿರುವ ರಾಷ್ಟ್ರಗಳಿವು! ಭಾರತಕ್ಕೆ ಎಷ್ಟನೇ ಸ್ಥಾನ ಗೊತ್ತಾ?
ವಿಶ್ವದ ಎಲ್ಲಾ ದೇಶಗಳು ತಮ್ಮ ಪ್ರಜೆಗಳಿಗೆ ಪಾಸ್‌ಪೋರ್ಟ್ ನೀಡುತ್ತವೆ. ಈ ಪಾಸ್‌ಪೋರ್ಟ್ ಬಳಸಿ ವ್ಯಕ್ತಿಯೊಬ್ಬ ವಿದೇಶ ಪ್ರವೇಶ ಮಾಡಬಹುದು. ಹಾಗೆ ನೀವು ಪ್ರವೇಶಿಸುವ ದೇಶಗಳ ಮುದ್ರೆಯನ್ನು ಪಾಸ್‌ಪೋರ್ಟ್‌ನಲ್ಲಿ ಹಾಕಲಾಗುತ್ತದೆ. ಕೆಲವು ದೇಶಗಳ ಪಾಸ್‌ಪೋರ್ಟ್ ಬಹಳ ಶಕ್ತಿಶಾಲಿ ಎನಿಸುತ್ತವೆ. ಏಕೆಂದರೆ ಸುಲಭವಾಗಿ ನಿಮಗೆ ಮತ್ತೊಂದು ದೇಶ ಸುತ್ತಾಡುವ ಅವಕಾಶ ಸಿಗುತ್ತದೆ. ಆದ್ರೆ ಮತ್ತೆ ಕೆಲವು ದೇಶಗಳ ಪಾಸ್‌ಪೋರ್ಟ್ ಸುಲಭ ಪ್ರಯಾಣಕ್ಕೆ ಅಡ್ಡಿ ತರುತ್ತವೆ.
ನಿಮ್ಮ ದೇಶದ ಪಾಸ್‌ಪೋರ್ಟ್ ರ‍್ಯಾಕಿಂಗ್ ಆದಾರದ ಮೇಲೆ ವೀಸಾ ಸಿಗುತ್ತದೆ. ಹಾಗೆ ಹಲವು ರೀತಿಯ ನಿಯಮಗಳು, ಕಠಿಣ ಪ್ರಶ್ನೆಗಳನ್ನು ಎದುರಿಸಬೇಕಾಗುತ್ತದೆ. ಹಾಗೆ ನಿಮ್ಮ ದೇಶದ ಪಾಸ್‌ಪೋರ್ಟ್ ರ‍್ಯಾಕಿಂಗ್ ಉತ್ತಮವಾಗಿದ್ದರೆ ಸರಾಗವಾಗಿ ಯಾವ ದೇಶಕ್ಕಾದರು ಪ್ರಯಾಣಿಸುವ ಅವಕಾಶಗಳ ಪಡೆಯಬಹುದು.

ಆದ್ರೆ ವಿಶ್ವದ ಈ 10 ದೇಶಗಳ ಪಾಸ್‌ಪೋರ್ಟ್ ಅತ್ಯಂತ ಕೆಳಮಟ್ಟದ ಶ್ರೇಯಾಂಕಗಳ ಹೊಂದಿವೆ. ಈ ದೇಶದ ಪಾಸ್‌ಪೋರ್ಟ್ ಹೊಂದಿರುವ ಮಂದಿ ಮತ್ತೊಂದು ದೇಶಕ್ಕೆ ಪ್ರಯಾಣಿಸುವುದು ಬಹಳ ಕಷ್ಟವಾಗುತ್ತದೆ. ಹಾಗಾದ್ರೆ ಕಳಪೆ ರ‍್ಯಾಕಿಂಗ್ ಹೊಂದಿರುವ 10 ದೇಶಗಳು ಯಾವುದು ಅನ್ನೋದನ್ನು ನಾವಿಲ್ಲಿ ತಿಳಿದುಕೊಳ್ಳೋಣ.
ಅಫ್ಘಾನಿಸ್ತಾನ
ಅಫ್ಘಾನಿಸ್ತಾನವು ವರ್ಷದಿಂದ ಯುದ್ಧಗಳ ನೋಡುತ್ತಿದ್ದ ಅಂತರ್ಯುದ್ಧದ ಪರಿಣಾಮವಾಗಿ ತಾಲಿಬಾನ್ ಸರ್ಕಾರ ಅಲ್ಲಿ ಆಳ್ವಿಕೆಗೆ ಬಂದಿದೆ. ಹಾಗೆ ಈಗ ನೆರೆಯ ಪಾಕಿಸ್ತಾನದ ಜೊತೆಗೆ ಯುದ್ಧ ಆರಂಭಿಸಿದೆ. ಈ ಎಲ್ಲಾ ಪರಿಣಾಮಗಳಿಂದಾಗಿ ದೇಶದ ನಾಗರಿಕರು ಬಹುತೇಕ ಪ್ರಯಾಣ ನಿರ್ಬಂಧ ಎದುರಿಸುತ್ತಿದ್ದಾರೆ. ಜಾಗತಿಕ ಪಾಸ್‌ಪೋರ್ಟ್ ಶ್ರೇಯಾಂಕದಲ್ಲಿ 104ನೇ ಸ್ಥಾನದಲ್ಲಿ ಅಫ್ಗನ್ ಇದೆ.
ಸಿರಿಯಾ
ದೀರ್ಘಕಾಲದ ಅಂತರ್ಯುದ್ಧ, ಬೃಹತ್ ಆಂತರಿಕ ಕಲಹಗಳು, ಬಿಕ್ಕಟ್ಟು ಎದುರಿಸುತ್ತಿರುವ ದೇಶ ಸಿರಿಯಾ. ಭದ್ರತೆ ಮತ್ತು ನಿರಾಶ್ರಿತರ ಕಾಳಜಿಗಳನ್ನು ಉಲ್ಲೇಖಿಸಿ ಅನೇಕ ರಾಷ್ಟ್ರಗಳು ಅತ್ಯಂತ ಕಟ್ಟುನಿಟ್ಟಾದ ಪ್ರವೇಶ ನಿಯಂತ್ರಣಗಳನ್ನು ವಿಧಿಸಿವೆ ಅಥವಾ ಸಿರಿಯನ್ನರಿಗೆ ವೀಸಾ ನೀಡುವ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ನಿಲ್ಲಿಸಿವೆ. ಜಾಗತಿಕ ಪಾಸ್‌ಪೋರ್ಟ್ ಶ್ರೇಯಾಂಕದಲ್ಲಿ 103ನೇ ಸ್ಥಾನದಲ್ಲಿದೆ.
ಇರಾಕ್
ಅಂತರರಾಷ್ಟ್ರೀಯ ಅಪರಾಧ ಮತ್ತು ಮಿಲಿಟರಿ ಸಂಘರ್ಷಗಳ ದೀರ್ಘಕಾಲೀನ ಪರಿಣಾಮಗಳು ಸೇರಿದಂತೆ ನಿರಂತರ ಭದ್ರತಾ ಕಳವಳಗಳು ಇರಾಕ್‌ಗೆ ನಿರಂತರವಾಗಿ ಕಾಡಿರುವ ಪರಿಣಾಮ, ಹಾಗೆ ನೆರೆ ರಾಷ್ಟ್ರದೊಂದಿಗಿನ ಯುದ್ಧದ ಪರಿಣಾಮ ಜಾಗತಿಕ ಪಾಸ್‌ಪೋರ್ಟ್ ಶ್ರೇಯಾಂಕದಲ್ಲಿ 102ನೇ ಸ್ಥಾನದಲ್ಲಿದೆ.
ಪಾಕಿಸ್ತಾನ
ಹೆಚ್ಚಿದ ರಾಜಕೀಯ ಉದ್ವಿಗ್ನತೆಗಳು, ಗಡಿ ವಿವಾದಗಳು ಮತ್ತು ದೇಶೀಯ ಭದ್ರತಾ ಸವಾಲುಗಳಿಂದಾಗಿ ಪಾಕಿಸ್ತಾನ ಅಂತಾರಾಷ್ಟ್ರೀಯ ಮಟ್ಟದಲ್ಲಿ ತೆಗಳಿಕೆ ಪಡೆಯುತ್ತಿದೆ. ಪಾಕ್ ಪ್ರಜೆಗಳು ಅಂತಾರಾಷ್ಟ್ರೀಯ ಪ್ರಯಾಣದಲ್ಲಿ ಹಲವು ತೊಡಕುಗಳ ಎದುರಿಸುತ್ತಾರೆ. ಮುಖ್ಯವಾಗಿ ಅವರ ಪಾಸ್‌ಪೋರ್ಟ್ 101 ಶ್ರೇಯಾಂಕ ಪಡೆದಿದೆ.
ಯೆಮೆನ್
ಯೆಮೆನ್‌ನಲ್ಲಿ ನಡೆಯುತ್ತಿರುವ ನಾಗರಿಕ ಸಂಘರ್ಷವು ವಿಶ್ವದ ಅತ್ಯಂತ ತೀವ್ರವಾದ ಮಾನವೀಯ ಬಿಕ್ಕಟ್ಟಿಗೆ ಕಾರಣವಾಗಿದೆ. ಹಾಗೆ ಅಲ್ಲಿನ ಆಂತರಿಕ ಯುದ್ಧಗಳ ಪರಿಣಾಮದಿಂದಾಗಿ ಪ್ರಯಾಣ ಕಷ್ಟಕರವಾಗಿದೆ. ಅಲ್ಲದೆ ಜಾಗತಿಕ ಪಾಸ್‌ಪೋರ್ಟ್ ಶ್ರೇಯಾಂಕದಲ್ಲಿ 100ನೇ ಸ್ಥಾನದಲ್ಲಿದೆ.
ಸೊಮಾಲಿಯಾ
ಉಗ್ರಗಾಮಿ ಚಟುವಟಿಕೆಗಳು, ಹೆಚ್ಚಿದ ಅಪರಾಧ ಕೃತ್ಯಗಳು, ಅಂತಾರಾಷ್ಟ್ರೀಯ ಅಪರಾಧ ಪ್ರಕರಣಗಳು ಹಾಗೆ ಭದ್ರತಾ ಕಾರಣಗಳಿಂದಾಗಿ ಸೊಮಾಲಿಯಾ ಜಾಗತಿಕವಾಗಿ ಕಳಪೆ ಪಾಸ್‌ಪೋರ್ಟ್ ಹೊಂದಿದೆ. ಜಾಗತಿಕ ಪಾಸ್‌ಪೋರ್ಟ್ ಶ್ರೇಯಾಂಕದಲ್ಲಿ 99ನೇ ಸ್ಥಾನದಲ್ಲಿದೆ.
ನೇಪಾಳ
ನೇಪಾಳದಲ್ಲಿ ಇತ್ತೀಚಿಗೆ ಸಂಭವಿಸಿದ ದೊಡ್ಡ ರಾಜಕೀಯ ಬದಲಾವಣೆಗಳ ನೀವು ನೋಡಿರಬಹುದು. ಪ್ರಮುಖ ರಾಷ್ಟ್ರಗಳಿಗೆ ಸುಲಭವಾಗಿ ಪ್ರವೇಶಿಸಲು ಅನುವು ಮಾಡಿಕೊಡುವ ಬಲವಾದ ಅಂತರರಾಷ್ಟ್ರೀಯ ಒಪ್ಪಂದಗಳು ದೇಶದಲ್ಲಿ ಕಡಿಮೆ ಇವೆ. ಪರಿಣಾಮವಾಗಿ ಜಾಗತಿಕ ಪಾಸ್‌ಪೋರ್ಟ್ ಶ್ರೇಯಾಂಕದಲ್ಲಿ 98ನೇ ಸ್ಥಾನದಲ್ಲಿದೆ.
ನೇಪಾಳದ ನಂತರದ ಸ್ಥಾನದಲ್ಲಿ ಪ್ಯಾಲೆಸ್ಟೀನ್, ಲಿಬಿಯಾ, ಉತ್ತರ ಕೊರಿಯಾ ದೇಶಗಳು ಸ್ಥಾನಪಡೆದಿವೆ. ಹಾಗೆ ಭಾರತ ಈ ಪಟ್ಟಿಯಲ್ಲಿ 85ನೇ ಸ್ಥಾನದಲ್ಲಿದೆ.



Click it and Unblock the Notifications