Latest Updates
-
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ -
ದೇಹಕ್ಕೆ ಬಲ ನೀಡುವ ಹುರಿದಕ್ಕಿ ಉಂಡೆ ಸಲೀಸಾಗಿ ಮಾಡಿ! ಇಲ್ಲಿದೆ ಸುಲಭದ ಮನೆಮದ್ದು! -
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ
ಈ ರಾಶಿಯವರಲ್ಲಿ ಬೆಸ್ಟ್ ಟೀಚರ್ಸ್ ಆಗೋ ಎಲ್ಲಾ ಲಕ್ಷಣಗಳಿವೆಯಂತೆ
ಇದೇ ಬರುವ ಸೆಪ್ಟೆಂಬರ್ 5ರಂದು ಶಿಕ್ಷಕರ ದಿನಾಚರಣೆ. ವಿದ್ಯಾರ್ಥಿಗಳ ಜೀವನ ಬೆಳಗಿಸುವ ಶಿಕ್ಷಕರಿಗೆ ಗೌರವ ಸಲ್ಲಿಸುವ ದಿನ. ದೇಶಕಂಡ ಮಹಾನ್ ಶಿಕ್ಷಕ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನವಾಗಿದೆ.
ಒಬ್ಬ ಉತ್ತಮ ಶಿಕ್ಷಕ ವಿದ್ಯಾರ್ಥಿಯ ಜೀವನವನ್ನು ಬದಲಾಯಿಸುತ್ತಾನೆ. ಆತನನ್ನು ಸರಿಯಾದ ಮಾರ್ಗದಲ್ಲಿ ಕರೆದೊಯ್ದು ದಡಸೇರಿಸುತ್ತಾನೆ, ಸದಾ ನಿಮ್ಮ ಪ್ರೇರಣೆಯಾಗಿ ನಿಲ್ಲುತ್ತಾನೆ. ಹಾಗಂತ ಪ್ರತಿಯೊಬ್ಬರೂ ಉತ್ತಮ ಶಿಕ್ಷಕನಾಗಲು ಸಾಧ್ಯವಿಲ್ಲ. ಮಕ್ಕಳ ಮನಸ್ಸು ಅರ್ಥಮಾಡಿಕೊಂಡು, ಅವರಿಗೆ ಅಗತ್ಯವಾದ ಬೊಧನೆ, ಮಾರ್ಗದರ್ಶನ ನೀಡುವ ಶಕ್ತಿ ಅವರಲ್ಲಿರಬೇಕು. ಇಂತಹ ಶಕ್ತಿ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಯಾವ ರಾಶಿಯವರಿಗೆ ಇದೆ ಎಂಬುದನ್ನು ಇಲ್ಲಿ ವಿವರಿಸಲಾಗಿದೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಯಾವ ರಾಶಿಯವರು ಉತ್ತಮ ಶಿಕ್ಷಕನಾಗಬಹುದು ಎಂಬುದನ್ನು ಈ ಕೆಳಗೆ ನೀಡಲಾಗಿದೆ:

ಮೇಷ:
ಮೇಷ ರಾಶಿಯವರು ಬೋಧನೆಯನ್ನು ಇಷ್ಟಪಡುತ್ತಾರೆ ಏಕೆಂದರೆ ಅವರು ಮಕ್ಕಳ ಸುತ್ತ ಇರುವ ಶಕ್ತಿ ಮತ್ತು ಉತ್ಸಾಹವನ್ನು ಪ್ರೀತಿಸುತ್ತಾರೆ. ಅವರು ಕಲಿಸುವ ವಿಷಯಗಳ ಬಗ್ಗೆ ಅತ್ಯಂತ ಭಾವೋದ್ರಿಕ್ತರಾಗಿರುತ್ತಾರೆ ಜೊತೆಗೆ ಪ್ರತಿ ವಿದ್ಯಾರ್ಥಿಯು ಉತ್ತಮನಾಗಬೇಕೆಂದು ಬಯಸುತ್ತಾರೆ. ತಮ್ಮ ಮಕ್ಕಳಿಗೆ ಪ್ರಾಯೋಗಿಕ ಅನುಭವಗಳ ಮೂಲಕ ಕಲಿಯಲು ಅವಕಾಶ ಮಾಡಿಕೊಟ್ಟು, ತಮಾಷೆಯ ಮೂಲಕ ಮಾಹಿತಿಯನ್ನ ಮಕ್ಕಳ ಮನಸ್ಸಿಗೆ ತುಂಬುವಂಹವರು. ವಿದ್ಯಾರ್ಥಿಗಳು ಈ ರಾಶಿಯ ಶಿಕ್ಷಕರೊಂದಿಗೆ ಉತ್ತಮ ಭಾಂದವ್ಯ ಹೊಂದಿರುವುದುರಿಂದ ಹೆಚ್ಚಿನ ಮಕ್ಕಳು ಇವರನ್ನು ಇಷ್ಟಪಡುತ್ತಾರೆ.

ವೃಷಭ:
ವೃಷಭ ರಾಶಿಯ ಶಿಕ್ಷಕರು ಅಸಾಧಾರಣವಾಗಿದ್ದು, ತಮ್ಮ ಬೋಧನಾ ವಿಧಾನಗಳ ಮೇಲೆ ವಿಭಿನ್ನ ಪ್ರಯತ್ನ ಮಾಡುತ್ತಾರೆ. ಮಕ್ಕಳಿಗೆ ಹೆಚ್ಚಿನ ವಿಷಯಗಳನ್ನು ಕಲಿಸಲು ವಿವಿಧ ದಾರಿಗಳನ್ನು ಪ್ರಯತ್ನಿಸುತ್ತಿರುತ್ತಾರೆ. ಅವರು ಕಲಿಸುವ ವಿಷಯಕ್ಕೆ ಸಂಪೂರ್ಣ ಪರಿಶ್ರಮ ಹಾಕಿ, ಮಕ್ಕಳಿಗೆ ಅರ್ಥವಾಗುವಂತೆ ಮಾಡುತ್ತಾರೆ. ಇವರು ಅತ್ಯಂತ ತಾಳ್ಮೆಯ ಶಿಕ್ಷಕರಾಗಿದ್ದು, ತಮ್ಮ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಗಮನವನ್ನು ನೀಡುತ್ತಾರೆ.

ಕರ್ಕ:
ಈ ರಾಶಿಯ ಶಿಕ್ಷಕರು ಒಂದು ರೀತಿ ಪೋಷಕರಂತೆ. ಏಕೆಂದರೆ ಇವರು ತಮ್ಮ ವಿದ್ಯಾರ್ಥಿಗಳ ಬಗ್ಗೆ ಆಳವಾಗಿ ಕಾಳಜಿ ವಹಿಸುತ್ತಾರೆ ಜೊತೆಗೆ ಸದಾ ನಿಮ್ಮ ಬೆನ್ನುಲುಬಾಗಿ ನಿಲ್ಲುವತವರು. ಇದು ಕೇವಲ ಶಿಕ್ಷಣದ ವಿಷಯದಲ್ಲಿ ಮಾತ್ರವಲ್ಲ, ಪಠ್ಯೇತರ ಚಟುವಟಿಕೆಗಳಲ್ಲೂ ಒಂದು ರೀತಿ ಬೆಂಬಲಗಾರರಾಗಿರುತ್ತಾರೆ. ತಮ್ಮ ಮಕ್ಕಳಿಗೆ ಬೋಧಿಸಲು ಹೊಸ ಮಾರ್ಗಗಳನ್ನು ಕಂಡುಕೊಳ್ಳುತ್ತಾರೆ. ಅಲ್ಲದೆ, ತಮ್ಮ ತರಗತಿಗಳನ್ನು ಉತ್ಸಾಹಭರಿತವಾಗಿ ನಡೆಸಲು ಇಷ್ಟಪಡುತ್ತಾರೆ ಇದೇ ಕಾರಣದಿಂದ ಇವರ ಕ್ಲಾಸ್ ಎಂದಿಗೂ ಬೋರ್ ಅನಿಸುವುದಿಲ್ಲ.

ಕನ್ಯಾ:
ಕನ್ಯಾ ರಾಶಿಯವರು ಪರಿಪುರ್ಣತೆಯನ್ನು ಹೆಚ್ಚು ಇಷ್ಟಪಡುವವರು. ಜೊತೆಗೆ ತಮ್ಮ ಜ್ಞಾನವನ್ನು ಇತರರಿಗೆ ವರ್ಗಾಯಿಸುವ ಮನಸ್ಸಿರುವವರು. ಇವರ ಬೋಧನಾ ಶೈಲಿಯು ಎಂದಿಗೂ ನೀರಸವವಾಗಿರುವುದಿಲ್ಲ, ಪ್ರತಿಸಲ ಏನನ್ನಾದರೂ ಕಲಿಯಲು ವಿದ್ಯಾರ್ಥಿಗಳನ್ನು ಉತ್ಸುಕರನ್ನಾಗಿಸುತ್ತದೆ. ಕೇವಲ ವಿದ್ಯಾರ್ಥಿಗಳಿಗೆ ಕಲಿಸುವುದನ್ನು ಬಿಟ್ಟು, ತಾವೇ ಹೊಸ ಹೊಸ ವಿಚಾರಗಳನ್ನು ಕಲಿಯುತ್ತಿರುತ್ತಾರೆ. ಹಾಗಾಗಿ ಮಕ್ಕಳಿಗೆ ಸಾಧ್ಯವಾದಷ್ಟು ಉತ್ತಮ ರೀತಿಯ ಶಿಕ್ಷಣ ನೀಡುತ್ತಾರೆ.

ಮಕರ:
ಮಕರ ರಾಶಿಯವರು ಮಕ್ಕಳಿಗೆ ಬೋಧಿಸುವದರಿಂದ ತಾವು ಅಭಿವೃದ್ಧಿ ಹೊಂದುತ್ತೇವೆ ಎಂಬ ಭಾವನೆ ಹೊಂದಿರುವವರು. ಇವರು ತುಂಬಾ ಪ್ರಾಯೋಗಿಕ ವಿಧಾನವನ್ನು ಅನುಸರಿಸುತ್ತಿದ್ದು, ತರಗತಿಯಲ್ಲಿ ಬೋಧನೆಯನ್ನು ಪ್ರಾರಂಭಿಸುವ ಮೊದಲು ಅದಕ್ಕೆ ಸಾಕಷ್ಟು ಪೂರ್ವತಯಾರಿ ನಡೆಸಿರುತ್ತಾರೆ. ಮಕ್ಕಳಲ್ಲಿ ಅಡಗಿರುವ ಕ್ರಿಯೆಟಿವಿಟಿಯನ್ನು ಹೇಗೆ ಹೊರತೆಗೆಯಬೇಕು ಎಂಬುದನ್ನು ಯೋಚಿಸಿ, ಅದಕ್ಕೆ ತಕ್ಕಂತೆ ಕೆಲಸ ನಿರ್ವಹಿಸುತ್ತಾರೆ. ಜೊತೆಗೆ ಇವರು ಶಿಸ್ತನ್ನು ಅನುಸರಿಸುವವರು.

ಮೀನ:
ಮೀನ ರಾಶಿಯ ಶಿಕ್ಷಕರು ಪ್ರತಿಯೊಬ್ಬ ವಿದ್ಯಾರ್ಥಿಗೆ ಏನು ಬೇಕು ಎಂಬುದನ್ನು ಅರ್ಥಮಾಡಿಕೊಳ್ಳುತ್ತಾರೆ. ಎಲ್ಲಾ ವಿದ್ಯಾರ್ಥಿಗಳು ಒಂದೇ ವೇಗದಲ್ಲಿ ಕಲಿಯುತ್ತಿದ್ದಾರೆ ಎಂಬುದನ್ನು ಖಚಿತಪಡಿಸಿಕೊಳ್ಳಲು ವೈಯಕ್ತಿಕ ಗಮನವನ್ನು ನೀಡಲು ಪ್ರಯತ್ನಿಸುತ್ತಾರೆ. ಕಲೆ ಅಥವಾ ನಾಟಕದಂತಹ ವಿಷಯಗಳಲ್ಲಿ ಇವರು ಅತ್ಯುತ್ತಮ ಶಿಕ್ಷಕರು.



Click it and Unblock the Notifications











