Latest Updates
-
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ -
ದೇಹಕ್ಕೆ ಬಲ ನೀಡುವ ಹುರಿದಕ್ಕಿ ಉಂಡೆ ಸಲೀಸಾಗಿ ಮಾಡಿ! ಇಲ್ಲಿದೆ ಸುಲಭದ ಮನೆಮದ್ದು! -
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ -
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು!
ಈ ಐದು ರಾಶಿಯವರು ಜೀವನದಲ್ಲಿ ಏನೇ ಕಷ್ಟ ಬಂದರೂ ಕುಗ್ಗದವರಂತೆ
ಪ್ರತಿಯೊಬ್ಬರೂ ದೈಹಿಕ ಹಾಗೂ ಭಾವನಾತ್ಮಕವಾಗಿ ಬಲಶಾಲಿಗಳಾಗಿರಬೇಕು ಎಂಬ ಆಸೆಯಿರುತ್ತದೆ. ತಮ್ಮ ಸ್ಟ್ರಾಂಗ್ ವ್ಯಕ್ತಿತ್ವದ ಮೂಲಕ, ಎಲ್ಲರ ಗಮನ ಸೆಳೆದು, ಕೇಂದ್ರಬಿಂದುವಾಗಿ ನಿಲ್ಲಬೇಕೆಂಬ ಬಯಕೆ ಇದ್ದೇ ಇರುತ್ತದೆ. ಆದರೆ ಎಲ್ಲರಿಗೂ ಈ ಅವಕಾಶ ಅಥವಾ ಸಾಮರ್ಥ್ಯ ಇರುವುದಿಲ್ಲ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕೆಲವು ರಾಶಿಗಳು ದೈಹಿಕ ಹಾಗೂ ಮಾನಸಿಕವಾಗಿ ಬಹಳ ಸದೃಡರಂತೆ. ಈ ರಾಶಿಯವರು ಯಾವುದೇ ವಿಚಾರಕ್ಕೂ ಅಷ್ಟು ಬೇಗೆ ಬಗ್ಗುವುದಿಲ್ಲ. ಎಲ್ಲವನ್ನು ಬಹಳ ಧೈರ್ಯದಿಂದಲೇ ಎದುರಿಸಿ, ವಿಜಯಶಾಲಿಗಳಾಗುತ್ತಾರಂತೆ. ಹಾಗಾದರೆ ದೈಹಿಕ ಮತ್ತು ಮಾನಸಿಕವಾಗಿ ಶಕ್ತಿಯುತವಾದ 5 ರಾಶಿಚಕ್ರಗಳು ಯಾವುವು ಎಂಬುದನ್ನು ಇಲ್ಲಿ ನೋಡೋಣ.
ದೈಹಿಕ ಮತ್ತು ಮಾನಸಿಕವಾಗಿ ಶಕ್ತಿಯುತವಾದ 5 ರಾಶಿಗಳಾವುವು ಎಂಬುದನ್ನು ಈ ಕೆಳಗೆ ನೀಡಲಾಗಿದೆ:

ಸಿಂಹ:
ಸಿಂಹ ರಾಶಿಯವರು ಹುಟ್ಟು ನಾಯಕರು. ಈ ರಾಶಿಯ ಜನರನ್ನು ಪಳಗಿಸಲು ಸಾಧ್ಯವಿಲ್ಲ. ಅವರ ತಾಳಕ್ಕೆ ತಕ್ಕಂತೆ ಜಗತ್ತನ್ನು ಹೇಗೆ ಕುಣಿಸಬೇಕು ಎಂಬುದನ್ನು ಚೆನ್ನಾಗಿಯೇ ಅರಿತಿದ್ದಾರೆ. ಅವರ ತ್ವರಿತ ಚಿಂತನೆಯ ಕೌಶಲ್ಯದಿಂದಾಗಿ ಬಹಳ ಜನಪ್ರಿಯರಾಗಿದ್ದು, ತಮ್ಮ ಉದಾರ ಮನೋಭಾವದಿಂದ ಎಲ್ಲರಿಗೂ ಪ್ರಿಯವಾಗಿರುತ್ತಾರೆ. ಈ ರಾಶಿಯವರಿಗೆ ಎಂತಹ ಕೆಲಸವನ್ನು ಕೊಟ್ಟರೂ ನಿಭಾಯಿಸುವ ಶಕ್ತಿ ಹೊಂದಿರುತ್ತಾರೆ.

ಮಕರ:
ಈ ರಾಶಿಯವರು ಎಲ್ಲದಕ್ಕೂ ಸಿದ್ಧರಾಗಿರುತ್ತಾರೆ. ಅತ್ಯಂತ ಕಷ್ಟಪಟ್ಟು ಕೆಲಸ ಮಾಡುವವರಲ್ಲಿ ಮಕರ ರಾಶಿಯವರು ಒಬ್ಬರು , ಜೊತೆಗೆ ಉತ್ತಮ ಪ್ರೇರಕರು ಕೂಡ. ಇವರು ಯಾವುದೇ ವಿಚಾರಕ್ಕೇ ಆದರೂ ಅಷ್ಟು ಸುಲಭವಾಗಿ ದೈಹಿಕವಾಗಿ ಅಥವಾ ಭಾವನಾತ್ಮಕವಾಗಿ ಕುಗ್ಗುವುದಿಲ್ಲ. ತಮ್ಮ ಗುರಿ ಮತ್ತು ಮಹತ್ವಾಕಾಂಕ್ಷೆಗಳನ್ನು ತಲುಪಲು ಸರ್ವಸ್ವವನ್ನು ನೀಡಲು ಸಿದ್ಧರಾಗಿರುತ್ತಾರೆ.

ವೃಶ್ಚಿಕ:
ಇವರು ಯಶಸ್ವಿ ವ್ಯಕ್ತಿ, ಶಕ್ತಿಯುತ ಮತ್ತು ಧೈರ್ಯಶಾಲಿಗಳು. ಇವರ ಅತ್ಯಂತ ವಿಶಿಷ್ಟ ಲಕ್ಷಣವೆಂದರೆ ಅವರು ದುರುದ್ದೇಶಪೂರಿತರಾಗಿದ್ದು, ತಮಗೆ ಬೇಕಾದುದನ್ನು ಪಡೆಯಲು ಜನರನ್ನು ಹೇಗೆ ನಿಯಂತ್ರಿಸಬೇಕೆಂದು ಚೆನ್ನಾಗಿ ತಿಳಿದಿದ್ದಾರೆ. ಇದು ಅವರನ್ನು ಅತ್ಯಂತ ಶಕ್ತಿಯುತವಾಗಿಸುತ್ತದೆ. ಇವರ ಮನಸ್ಸಿಗೆ ಯಾವುದಾದರೂ ಬೇಕೆನ್ನಿಸಿದಾಗ ಅದನ್ನು ಪಡೆದೇ ತೀರುವಂತಹವರು, ಅಲ್ಲಿಯವರಗೂ ಸಮಾಧಾನ ಪಡಲಾರರು.

ವೃಷಭ:
ವೃಷಭ ರಾಶಿಯವರು ಭಾವನಾತ್ಮಕವಾಗಿ ತುಂಬಾ ಶಕ್ತಿಶಾಲಿಗಳು. ಅವರು ಪ್ರೀತಿ, ಕರುಣೆಯ ಬೆಲೆಯನ್ನು ತಿಳಿದಿದ್ದಾರೆ. ಜೊತೆಗೆ ಅದನ್ನು ಪಡೆಯಲು ಎಂತಹ ಹೋರಾಟಕ್ಕೂ ಸಿದ್ಧರಾಗಿದ್ದಾರೆ. ಸಂಕಷ್ಟ ಮತ್ತು ಅಗತ್ಯದ ಸಮಯದಲ್ಲಿ ಸಹಾಯ ಮಾಡಲು ಈ ರಾಶಿಯವರು ಯಾವಾಗಲೂ ತಮ್ಮ ಆಪ್ತರೊಂದಿಗೆ ಇರುತ್ತಾರೆ. ಅವರಿಗೆ ಬೆಂಬಲವಾಗಿ, ಹೆಗಲಾಗಿ ನಿಲ್ಲುತ್ತಾರೆ. ಯಾವುದೇ ವಿಷಯಕ್ಕೂ ಧೈರ್ಯಕೆಡದೇ ಎಲ್ಲವನ್ನೂ ಎದುರಿಸುತ್ತಾರೆ.

ಮೇಷ:
ಈ ರಾಶಿಯವರು ಸೃಜನಶೀಲ, ಕ್ರಿಯಾತ್ಮಕತೆಯ ಕಣಜವಾಗಿರುತ್ತಾರೆ. ತಮಗಿರುವ ಆಸಕ್ತಿಯ ಬಗ್ಗೆ ಚೆನ್ನಾಗಿ ತಿಳಿದು, ಅದನ್ನು ಬೆಳೆಸು ಪ್ರಯತ್ನ ಮಾಡುತ್ತಿರುತ್ತಾರೆ. ಇವರು ತಮ್ಮದೇ ರೀತಿಯಲ್ಲಿ ಪ್ರಬಲರು. ಪ್ರತಿಯೊಬ್ಬರಲ್ಲೂ ಉತ್ತಮ ವಿಷಯವನ್ನು ಹೊರ ತೆಗೆಯುವುದು ಹೇಗೆ ಎಂಬುದನ್ನು ಚೆನ್ನಾಗಿ ತಿಳಿದಿರುತ್ತಾರೆ. ಆದ್ದರಿಂದ, ಅವರು ಬಯಸಿದ್ದನ್ನು ಪಡೆಯುವವರೆಗೂ ಅವರು ಬಿಡುವುದಿಲ್ಲ. ಈ ಮೂಲಕ ಇವರು ನಿಜವಾದ ವಿಜಯಶಾಲಿಗಳಾಗುತ್ತಾರೆ.



Click it and Unblock the Notifications











