Latest Updates
-
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು!
ಈ ರಾಶಿಯವರು ಸುಳ್ಳು ಹೇಳಿ ನಂಬಿಸುವುದರಲ್ಲಿ ನಿಸ್ಸೀಮರು!
ಮನುಷ್ಯರೆಂದ ಮೇಲೆ ಸುಳ್ಳು ಹೇಳುವುದು ಸಹಜ. ಪ್ರತಿಯೊಬ್ಬರೂ ಜೀವನದ ವಿವಿಧ ಹಂತಗಳಲ್ಲಿ ಪರಿಸ್ಥಿತಿಗೆ ಕಟ್ಟುಬಿದ್ದೋ ಅಥವಾ ಇನ್ನಾವುದೋ ಕಾರಣದಿಂದಾಗಿ ಸುಳ್ಳು ಹೇಳಿಯೇ ಹೇಳುತ್ತಾರೆ. ಆದರೆ ಕೆಲವರು ಈ ಸುಳ್ಳು ಹೇಳುವುದನ್ನೇ ಜೀವನ ಮಾಡಿಕೊಂಡು, ಆ ಸುಳ್ಳಿನಿಂದಲೇ ಎಲ್ಲರ ನಂಬಿಕೆ ಗಳಿಸಿಕೊಂಡಿರುತ್ತಾರೆ. ಹಾಗಾದರೆ ಬನ್ನಿ ರಾಶಿಕ್ರದ ಪ್ರಕಾರ ಅತೀ ಹೆಚ್ಚು ಸುಳ್ಳು ಹೇಳುವುದು ಯಾವ ರಾಶಿಯವರು ಎಂಬುದನ್ನು ಇಲ್ಲಿ ನೊಡೋಣ.
ಅತೀ ಹೆಚ್ಚು ಸುಳ್ಳು ಹೇಳುವ ರಾಶಿಗಳಾವುವು ಎಂಬುದನ್ನು ಕ್ರಮಪ್ರಕಾರವಾಗಿ ಈ ಕೆಳಗೆ ನೀಡಲಾಗಿದೆ:

ವೃಷಭ :
ಈ ರಾಶಿಗೆ ಸೇರಿದ ಜನರು ಅತೀ ಹೆಚ್ಚು ಸುಳ್ಳು ಹೇಳುವವರು. ತಮ್ಮ ವಂಚನೆ ಹೊರಬರುವುದನ್ನು ತಡೆಯಲು ಎಂತಹ ಕಟ್ಟುಕಥೆಯನ್ನಾದರೂ ರೂಪಿಸುತ್ತಾರೆ, ಮಾತ್ರವಲ್ಲ ಅದನ್ನೇ ಸತ್ಯ ಎಂದು ನಂಬಿಸುತ್ತಾರೆ. ಇವರ ಮಾತುಗಳಿಗೆ ಯಾರು ಯಾವಾಗ ಬಲಿಪಶುಗಳಾಗುತ್ತಾರೆ ಎಂಬುದು ತಿಳಿಯುವುದೇ ಇಲ್ಲ. ತಮ್ಮ ಕೆಲಸಕ್ಕಾಗಿ ಯಾರನ್ನು ಬೇಕಾದರೂ ಬಲಪಶು ಮಾಡಿಕೊಳ್ಳುತ್ತಾರೆ.

ಮಿಥುನ:
ನೀವೆನಾದರೂ ಈ ರಾಶಿಯವರಿಗೆ ಇಷ್ಟವಿಲ್ಲದ ಕೆಲಸಗಳನ್ನು ಮಾಡಿದರೂ ಸಹ ನಿಮ್ಮನ್ನು ಹೊಗಳುತ್ತಾರೆ. ಆ ಮೂಲಕ ನಿಮ್ಮ ನಂಬಿಕೆ ಗಳಿಸಿಕೊಳ್ಳುತ್ತಾರೆ. ಆದರೆ ಆ ಹೊಗಳಿಕೆ ಎಂದಿಗೂ ನಿಜವಾಗಿರುವುದಿಲ್ಲ. ನಿಮ್ಮ ನಂಬಿಕೆ ಗಳಿಸು ಮಾರ್ಗವಾಗಿದೆ ಅಷ್ಟೇ. ಈ ಸುಳ್ಳುಗಳು ಉದ್ದೇಶಪೂರ್ವಕವಾಗಿ ಇರುವುದಿಲ್ಲ, ಅದು ಅವರಿಗೆ ಸ್ವಾಬಾವಿಕವಾಗಿ ಬರುವುದು.

ಸಿಂಹ:
ಈ ರಾಶಿಯವರು ಬಹಳ ಆತ್ಮವಿಶ್ವಾಸದಿಂದಲೇ ಸುಳ್ಳು ಹೇಳುವವರು. ಸುಳ್ಳು ಹೇಳುವ ಚಾಕಚಕ್ಯತೆ ಅವರಲ್ಲಿದೆ ಎಂಬುದನ್ನು ಯಾರಿಗೂ ಬಿಟ್ಟುಕೊಡದ ರೀತಿಯಲ್ಲಿ ಸುಳ್ಳು ಹೇಳುವವರು. ಜೊತೆಗೆ ತನ್ನ ಕೌಶಲ್ಯಗಳ ಬಗ್ಗೆ ಯಾರಿಗೂ ಸುಳುವು ನೀಡುವುದಿಲ್ಲ, ಅಂದರೆ ಪುಸ್ತಕದ ಮುಂದೆಯೇ ಕುಳಿತು ಓದುತ್ತಿದ್ದರೂ, ಫ್ರೆಂಡ್ ಕಾಲ್ ಮಾಡಿದಾಗ ಓದುತ್ತಿಲ್ಲ ಎಂದು ಹೇಳುವ ಗುಂಪಿಗೆ ಸೇರಿದವರು.

ಕನ್ಯಾ:
ಇವರು ತಮ್ಮ ಇಮೇಜ್ ಅನ್ನು ಎತ್ತಿಹಿಡಿಯಲು ಇಷ್ಟಪಡುವಂತಹವರು. ಜೊತೆಗೆ ಎಲ್ಲರ ದೃಷ್ಟಿಯಲ್ಲೂ ಒಳ್ಳೆಯವರು ಎಂದು ಹೇಳಿಸಿಕೊಳ್ಳಲು ಆಸೆ ಪಡುವವರು. ಸಣ್ಣ ಸಣ್ಣ ವಿಚಾರಗಳಿಗೆ ಸುಳ್ಳು ಹೇಳುವಂತವರು. ಉದಾ, ಗೆ ಅವರಿಗೆ ನಿಮ್ಮ ಜೊತೆ ಮಾತನಾಡಲು ಇಷ್ಟವಿಲ್ಲದಿದ್ದರೆ, ಮೊಬೈಲ್ ನಲ್ಲಿ ಚಾರ್ಜ್ ಇಲ್ಲ ಎಂದು ಹೇಳಿ ಕಾಲ್ ಕಟ್ ಮಾಡುವವರಾಗಿರುತ್ತಾರೆ.

ತುಲಾ:
ಈ ರಾಶಿಯವರು ಹೆಚ್ಚಾಗಿ ಎಲ್ಲರನ್ನು ಅಡ್ಡ ಹೆಸರಿನಿಂದಲೇ ಕರೆಯುತ್ತಾರೆ, ಏಕೆಂದರೆ ಅವರಿಗೆ ನಿಮ್ಮ ನಜವಾದ ಹೆಸರು ಆಗಾಗ ಮರೆತುಹೋಗುವುದು. ನಿಮ್ಮೊಂದಿಗೆ ಜಗಳವಾಡುವುದನ್ನು ತಪ್ಪಿಸಲು ಅಥವಾ ನಿಮಗೆ ನೋವಾಗುವುದನ್ನು ತಡೆಯಲು ಈ ರಾಶಿಯವರು ಸುಳ್ಳು ಹೇಳುತ್ತಾರೆ. ಭವಿಷ್ಯದಲ್ಲಿ ನಿಮ್ಮನ್ನು ಮರೆತಿದ್ದರೂ ಸಹ, ಈ ಹಿಂದೆ ನಿಮ್ಮೊಂದಿಗೆ ಎಷ್ಟು ಉತ್ತಮ ಸಮಯವನ್ನು ಕಳೆದಿದ್ದರ ಕುರಿತು ಸುಳ್ಳು ಹೇಳುತ್ತಾರೆ.

ಮೇಷ:
ಯಾವುದಾದರೂ ವಿಚಾರದ ಬಗ್ಗೆ ಸಂಪೂರ್ಣ ಅಥವಾ ಯಾವುದೇ ಮಾಹಿತಿ ಇಲ್ಲದಿದ್ದರೂ ಸಹ ಆ ವಿಚಾರದ ಕುರಿತು ಏನೇನೋ ಹೇಳಿ ನಿಮ್ಮನ್ನು ನಂಬಿಸುತ್ತಾರೆ. ಅವರಿಗೆ ಏಕಾಂಗಿಯಾಗಿರುವುದು ಇಷ್ಟವಾಗಿದ್ದರೂ ಸಹ, ನೀವು ಮಾತನಾಡುವಾಗ ತುಂಬಾ ಆಸಕ್ತಿಯಿಂದ ಕೇಳುತ್ತಿರುವ ಹಾಗೆ ನಟಿಸುತ್ತಾರೆ.



Click it and Unblock the Notifications
