Latest Updates
-
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಮದುವೆಗೂ ಮುನ್ನ ಈ 48 ಗಂಟೆಗಳ ಚೆಕ್ಲಿಸ್ಟ್ ಮರೆಯದಿರಿ -
ಬಿಸಿಲ ಬೇಗೆಯಿಂದ ಪಾರಾಗಲು ಮನೆಯನ್ನು ತಂಪಾಗಿರಿಸುವ ಅದ್ಭುತ ಟಿಪ್ಸ್ -
ಬಿಸಿಲ ಬೇಗೆಯಿಂದ ಪಾರಾಗಲು ಈ ಪಾನೀಯಗಳೇ ಮದ್ದು!
ನಿಮ್ಮ ರಾಶಿಚಕ್ರದ ಪ್ರಕಾರ, ನಿಮ್ಮ ಸಂಗಾತಿಯ ರಹಸ್ಯ ಆಸೆಗಳಿವು
ಸಂಬಂಧವನ್ನು ಕಾಪಾಡುವ ಪ್ರಮುಖ ಅಂಶವೆಂದರೆ ಪಾರದರ್ಶಕತೆ. ಪರಸ್ಪರರ ಆಲೋಚನೆಗಳು, ಭಾವನೆಗಳು ಮತ್ತು ಆಸೆಗಳ ಬಗ್ಗೆ ಸ್ಪಷ್ಟವಾಗಿರುವುದು ದೀರ್ಘಕಾಲೀನ ಸಂಬಂಧಕ್ಕೆ ಪ್ರಮುಖವಾಗಿದೆ. ಆದರೆ ದಂಪತಿಗಳ ನಡುವೆ ಸಂಕೋಚ ಮತ್ತು ಹಿಂಜರಿಕೆ ಹೆಚ್ಚಾಗಿ ಬರುತ್ತದೆ. ನೀವು ಅಥವಾ ನಿಮ್ಮ ಸಂಗಾತಿ ನಾಚಿಕೆಪಡುತ್ತಿದ್ದರೆ, ಮುಕ್ತವಾಗಿರದಿದ್ದರೆ ಮತ್ತು ನಿಮ್ಮ ಆಸೆಗಳ ಬಗ್ಗೆ ಖಚಿತವಿಲ್ಲದಿದ್ದರೆ, ಅದರ ಬಗ್ಗೆ ಚಿಂತಿಸಬೇಕಾಗಿಲ್ಲ. ನಿಮ್ಮ ರಾಶಿಚಕ್ರ ಚಿಹ್ನೆಯ ಆಧಾರದ ಮೇಲೆ ಸಂಬಂಧದಲ್ಲಿ ನಿಮ್ಮ ಸಂಗಾತಿಯ ರಹಸ್ಯ ಬಯಕೆಯನ್ನು ಇಲ್ಲಿ ನೋಡೋಣ.

ರಾಶಿಚಕ್ರ ಚಿಹ್ನೆಯ ಪ್ರಕಾರ, ಸಂಬಂಧದಲ್ಲಿ ನಿಮ್ಮ ಸಂಗಾತಿಯ ರಹಸ್ಯ ಆಸೆಗಳೆಂಬುದನ್ನು ಈ ಕೆಳಗೆ ನೀಡಲಾಗಿದೆ:

ಮೇಷ:
ನಿಮ್ಮ ಸಂಗಾತಿ ಸದಾ ನಿಮ್ಮೊಂದಿಗೆ ಯಾರಾದರೂ ಇರಬೇಕೆಂದು ನೀವು ಬಯಸುತ್ತೀರಿ. ನೀವು ಯಾವಾಗಲೂ ವಿಷಯಗಳನ್ನು ನೈಜವಾಗಿಡಲು ಇಷ್ಟಪಡುವ ವ್ಯಕ್ತಿ. ನೀವು ಪ್ರಾಮಾಣಿಕರಾಗಿರುವ ಕಾರಣ ನಿಮ್ಮಂತೆಯೇ ಇರುವ ಸಂಗಾತಿಯನ್ನು ನೀವು ಹುಡುಕುತ್ತಿರಿ. ಅದೇ ತರಹದ ವ್ಯಕ್ತಿ ಸಿಗಬೇಕೆಂದು ಬಯಸುತ್ತೀರಿ.

ವೃಷಭ:
ನಿಮ್ಮ ಅತಿಯಾದ ಉತ್ಸಾಹದಿಂದಾಗಿ ನೀವು ಯಾವಾಗಲೂ ತಪ್ಪಾಗಿಯೇ ಗುರುತಿಸಿಕೊಳ್ಳುತ್ತೀರಿ. ಆದ್ದರಿಂದ ನಿಮ್ಮನ್ನು ನಿಜವಾಗಿಯೂ ಪ್ರಶಂಸಿಸುವ, ನಿಮ್ಮ ಆಸಕ್ತಿಗಳನ್ನ ಪೋಷಿಸುವ ವ್ಯಕ್ತಿಯೊಂದಿಗೆ ನೀವು ಇರಬೇಕೆಂದು ಬಯಸುತ್ತೀರಿ.

ಮಿಥುನ:
ನೀವು ಹಿಂದೆ ಅನೇಕ ತಪ್ಪುಗಳನ್ನು ಮಾಡಿದ ವ್ಯಕ್ತಿಯಾಗಿರುವುದರಿಂದ, ನಿಮ್ಮ ಇತಿಹಾಸದ ಹೊರತಾಗಿಯೂ, ಅಂದರೆ ನಿಮ್ಮ ಇತಿಹಾಸವನ್ನು ಒಪ್ಪಿಕೊಂಡು ಮುನ್ನಡೆಯುವ ಸಂಗಾತಿ ನಿಮಗೆ ಸಿಗಬೇಕೆಂದು ನೀವು ಬಯಸುತ್ತೀರಿ.

ಕರ್ಕ:
ನೀವು ತುಂಬಾ ಕರುಣೆಯುಳ್ಳವರು ಮತ್ತು ಪ್ರೀತಿ ತುಂಬಿದ ಹೃದಯವನ್ನು ಹೊಂದಿದ್ದೀರಿ. ನಿಮ್ಮಂತೆಯೇ ಇರುವವರನ್ನು ನೀವು ನಿರೀಕ್ಷಿಸುತ್ತೀರಿ. ನಿಮ್ಮ ಸಂಗಾತಿ ನಿಮ್ಮನ್ನು ನೋಡಿಕೊಳ್ಳುವ ಪ್ರಯತ್ನವನ್ನು ಮಾಡಬೇಕೆಂದು ನೀವು ಬಯಸುತ್ತೀರಿ.

ಸಿಂಹ:
ನಿಮ್ಮ ಸುತ್ತಮುತ್ತಲಿನ ಜನರಿಂದ ಗಮನ ಸೆಳೆಯುವ ಪ್ರವೃತ್ತಿಯನ್ನು ನೀವು ಹೊಂದಿದ್ದೀರಿ. ಹೀಗಾಗಿ, ನಿಮ್ಮ ಸಂಗಾತಿ ಆಗುವವರು ಸಹ ನಿಮ್ಮಂತೆಯೇ ಗಮನ ಸೆಳೆಯುವ ವ್ಯಕ್ತಿಯಾಗಿರಬೇಕು. ಅದೇ ಗುಣದಿಂದ ನಿಮ್ಮನ್ನು ಸೆಳೆಯಬೇಕು ಎಂದು ನೀವು ನಿರೀಕ್ಷಿಸುತ್ತೀರಿ.

ಕನ್ಯಾ:
ಈ ರಾಶಿಯವರು ಉನ್ನತ ಗುಣಮಟ್ಟವನ್ನು ಹೊಂದಿದ್ದೀರಿ. ಅದು ನಿಮ್ಮ ಸುತ್ತಮುತ್ತಲಿನ ಅನೇಕ ಜನರಿಗೆ ಸಮಸ್ಯೆಯಾಗಬಹುದು. ಹೀಗಾಗಿ, ನೀವು ಏಕೆ ಹೀಗಿದ್ದೀರಿ ಎಂದು ಅರ್ಥಮಾಡಿಕೊಳ್ಳುವ ವ್ಯಕ್ತಿಯನ್ನು ನೀವು ಬಯಸುತ್ತೀರಿ.

ತುಲಾ:
ನೀವು ನಿಜವಾದ ಬಂಧ ಮತ್ತು ಸಹಭಾಗಿತ್ವವನ್ನು ಬಯಸುತ್ತೀರಿ. ಯಾವುದೇ ಪ್ರತಿ ಉಪಕಾರವಿಲ್ಲದೇ ನಿಮ್ಮನ್ನು ಇಷ್ಟಪಡುವ ವ್ಯಕ್ತಿಗಳು ನಿಮ್ಮೊಂದಿಗೆ ಇರಬೇಕೆಂದು ನೀವು ಬಯಸುತ್ತೀರಿ.

ವೃಶ್ಚಿಕ:
ನೀವು ಯಾರಿಗೂ ಸುಲಭವಾಗಿ ತೆರೆದುಕೊಳ್ಳುವುದಿಲ್ಲ. ಹೀಗಾಗಿ, ನಿಮ್ಮ ಸಂಗಾತಿ ನಿಮ್ಮನ್ನು ತಿಳಿದುಕೊಳ್ಳಲು ಮತ್ತು ನಂಬಬೇಕೆಂದು ನೀವು ಹಂಬಲಿಸುತ್ತೀರಿ. ನೀವು ಯಾವಾಗಲೂ ಅವಲಂಬಿಸಬಹುದೆಂದು ನಿಮಗೆ ತಿಳಿದಿರುವ ಯಾರೊಂದಿಗಾದರೂ ಇರಲು ನೀವು ಬಯಸುತ್ತೀರಿ.

ಧನು:
ನೀವು ಖಂಡಿತವಾಗಿಯೂ ಸಾಕಷ್ಟು ಸುತ್ತಲು ಮತ್ತು ಪ್ರಯಾಣಿಸಲು ಇಷ್ಟಪಡುವ ವ್ಯಕ್ತಿ. ಅದಕ್ಕಾಗಿಯೇ ನಿಮ್ಮೊಂದಿಗೆ ಸಾಹಸಗಳನ್ನು ಮಾಡಲು ಹೆದರದ ಪಾಲುದಾರನನ್ನು ನೀವು ಬಯಸುತ್ತೀರಿ.

ಮಕರ:
ನಿಮ್ಮ ಸಂಗಾತಿ ನಿಮ್ಮ ಅಪಾರ ಬುದ್ಧಿವಂತಿಕೆ ಮತ್ತು ಜಾಣತನವನ್ನು ಮೆಚ್ಚಬೇಕು ಎಂದು ನೀವು ನಿರೀಕ್ಷಿಸುತ್ತೀರಿ. ಆಕೆ ನಿಮ್ಮ ಜ್ಞಾನವನ್ನು ಮೆಚ್ಚಿ, ನಿಮ್ಮ ಹಿಂದೆ ಬರಬೇಕೆಂದು ಬಯಸುತ್ತೀರಿ. ಅಂತಹ ಸಂಗಾತಿಯನ್ನೇ ನೀವು ಬಯಸುತ್ತೀರಿ.

ಕುಂಭ:
ನೀವು ಬೌದ್ಧಿಕ ಸ್ವಾತಂತ್ರ್ಯವನ್ನು ಹಂಬಲಿಸುತ್ತೀರಿ. ಹೀಗಾಗಿ, ನಿಮ್ಮ ಸಂಗಾತಿ ನಿಮ್ಮನ್ನು ನಂಬಬೇಕೆಂದು ನೀವು ಬಯಸುತ್ತೀರಿ.

ಮೀನ:
ನಿಮ್ಮ ಸಂಬಂಧವು ಚೆನ್ನಾಗಿರಲು ನಿಮ್ಮ ಸಂಗಾತಿ ಶ್ರಮಿಸಬೇಕು ಎಂದು ನೀವು ಬಯಸುತ್ತೀರಿ. ನಿಮ್ಮ ಪ್ರೀತಿಯನ್ನು ಜೀವಂತವಾಗಿಡಲು ಪ್ರಯತ್ನಿಸಲು ಸಿದ್ಧರಿರುವ ವ್ಯಕ್ತಿಯನ್ನು ನೀವು ಬಯಸುತ್ತೀರಿ.



Click it and Unblock the Notifications











