Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
ಕೈಗಳಿಲ್ಲದ ವಿಶ್ವದ ಮೊದಲ ಪೈಲೆಟ್ ಜೆಸ್ಸಿಕಾ ಕಾಕ್ಸ್
ಸಾಧನೆ ಮಾಡುವ ಮನಸ್ಸು ಒಂದಿದ್ದರೆ ಸಾಕು ನಮಗೆ ಯಾವುದೇ ಅಡೆತಡೆಗಳಿರಲಿ, ಎಷ್ಟೇ ಕಷ್ಟವಿರಲಿ, ನಮ್ಮ ದೇಹದಲ್ಲಿ ಯಾವುದೇ ನ್ಯೂನತೆ ಇರಲಿ ಅದು ಯಾವುದೂ ನಮಗೊಂದು ಸವಾಲು ಅನಿಸುವುದೇ ಇಲ್ಲ. ನಮ್ಮ ದೃಢ ಇಚ್ಛಾ ಶಕ್ತಿಯ ಮುಂದೆ ಅವೆಲ್ಲಾ ಮಂಡಿಯೂರಿ ಕೂತು ಬಿಡುತ್ತವೆ.

ನಮಗೆ ಎಲ್ಲಾ ಇದ್ದರೂ ಇಲ್ಲದಿರುವುದರ ಬಗ್ಗೆ ಕುರಿತು ಚಿಂತಿಸಿ ಮನಸ್ಸು ಹಾಳು ಮಾಡಿಕೊಳ್ಳುವವರೇ ಹೆಚ್ಚು. ಇನ್ನು ಚಿಕ್ಕ ಕಷ್ಟಕ್ಕೆ ಹೆದರಿಕೊಳ್ಳುವವರೂ ಇದ್ದಾರೆ, ಅಂಥವಾರು ಜೆಸ್ಸಿಕಾ ಕಾಕ್ಸ್ ನೋಡಿ ಕಲಿಯುವಂಥದ್ದು ತುಂಬಾ ಇದೆ. ಹೌದು ಜೆಸ್ಸಿಕಾ ಕಾಕ್ಸ್ ಬಗ್ಗೆ ತಿಳಿಯುತ್ತಾ ಹೋದರೆ ನಿಮಗೆ ಬದುಕಿನಲ್ಲಿ ಸ್ಪೂರ್ತಿ ಸಿಗುವುದು ಹಾಗೂ ಆಕೆಯ ದೃಢ ಸಂಕಲ್ಪ ನೋಡಿ ಆಕೆಗೊಂದು ಸಲ್ಯೂಟ್ ಹೇಳುವಿರಿ.
ಜೆಸ್ಸಿಕಾ ಕಾಕ್ಸ್‌ಗೆ ಎರಡು ಕೈಗಳಿಲ್ಲ, ಆದರೇನಂತೆ ಆಕಾಶದಲ್ಲಿ ಹಾರಾಡುತ್ತಾರೆ, ಸಮುದ್ರದಲ್ಲಿ ಸರ್ಫಿಂಗ್ ಮಾಡುತ್ತಾರೆ, ಪಿಯಾನೋ ನುಡಿಸುತ್ತಾರೆ, ಅಷ್ಟೇ ಏಕೆ ಯಾರಾದರೂ ತಂಟೆಗೆ ಬಂದರೆ ಕರಾಟೆ ಸೈಲಿಯಲ್ಲಿ ಸದೆ ಬಡೆಯುವ ತಾಕತ್ತು ಅವರಿಗಿದೆ.
'ಕೈಗಳಿಲ್ಲದ ಕಾರಣ ನನಗೆ ಏನೂ ಮಾಡಲು ಸಾಧ್ಯವಿಲ್ಲ ಎಂದು ಜನರು ಭಾವಿಸಿದ್ದರು, ಆದರೆ ಅವರು ಅಂದುಕೊಂಡಿದ್ದು ತಪ್ಪು' ಎಂದು ಸಾಬೀತು ಮಾಡಿದ್ದೇನೆ' ಎನ್ನುತ್ತಾರೆ ಜೆಸ್ಸಿಕಾ. ಇವರು ಜನರಿಗೆ ಸ್ಪೂರ್ತಿ ತುಂಬಲು ಜಗತ್ತಿನ ಎಲ್ಲಾ ಕಡೆ ಹೀಗಿ ಮೋಟಿವೇಷನಲ್ ಸ್ಪೀಚ್ ಕೊಡುತ್ತಾರೆ. ಹುಟ್ಟುವಾಗಲೇ ಜೆಸ್ಸಿಕಾ ಅವರಿಗೆ ಕೈಗಳಿರಲಿಲ್ಲ, ಆದರೂ ಅವರಮ್ಮ ಮಗಳಿಗೆ ಧೈರ್ಯ ತುಂಬಿ ಬೆಳೆಸಿದರು. ಎಂಟನೇ ತರಗತಿಯಲ್ಲಿ ಇರುವಾಗ ಜೆಸ್ಸಿಕಾ ಅವರನ್ನು ಡ್ಯಾನ್ಸ್ ಕ್ಲಾಸ್‌ಗೆ ಸೇರಿಸಿದರು. 5 ವರ್ಷ ಇರುವಾಗಲೇ ಈಜು ಕಲಿತರು. ಕೈಗಳಿಲ್ಲದೆ ಮಾಡಲು ಸಾಧ್ಯವಿಲ್ಲ ಎಂದು ನಾವು ಯೋಚಿಸುವ ಪ್ರತಿಯೊಂದು ಚಟುವಟಿಕೆಯನ್ನು ಇವರು ಮಾಡಿದರು. ಇವರು ತಮ್ಮ ಕಾಲುಗಳನ್ನೇ ಕೈಗಳಾಗಿ ಬಳಸಿದರು.
ಏನಾದರೂ ಸಾಧಿಸಲು ಮನಸ್ಸಿನಲ್ಲಿ ಛಲವಿದ್ದರೆ ನಮ್ಮ ಮುಂದೆ ದಾರಿಗಳು ತೆರೆದುಕೊಳ್ಳುತ್ತವೆ ಎನ್ನುವುದಕ್ಕೆ ಇವರೇ ಉದಾಹರಣೆ ಅಲ್ಲವೇ?



Click it and Unblock the Notifications
