ಈ ರತ್ನ ಧರಿಸುವುದರಿಂದ ಅದೃಷ್ಟ ಒಲಿಯುವುದು ಗ್ಯಾರಂಟಿ! ಯಾವ ರಾಶಿಯವರಿಗೆ ಗೊತ್ತಾ?

ಪ್ರತಿಯೊಬ್ಬರ ಜಾತಕಕ್ಕೆ ಹೋಲುವಂತೆ ಅದೃಷ್ಟದ ಹರಳುಗಳು ಎಂಬುದಿವೆ. ಇವುಗಳು ನಮ್ಮ ಜಾತಕದಲ್ಲಿನ ದೋಷಗಳನ್ನು ನಿವಾರಿಸಿ, ನಮಗೆ ಅದೃಷ್ಟವನ್ನು ತಂದುಕೊಡುತ್ತವೆ ಎಂಬ ನಂಬಿಕೆ ಜ್ಯೋತಿಷ್ಯ ವರ್ಗದ್ದು. ಅಂತಹ ಹರಳುಗಳಲ್ಲಿ ಒಂದು ನೀಲಂ ಅಥವಾ ನೀಲಮಣಿ. ಈ ರತ್ನವನ್ನು ಅತ್ಯಂತ ಪರಿಣಾಮಕಾರಿ ಮತ್ತು ಶಕ್ತಿಯುತವೆಂದು ಪರಿಗಣಿಸಲಾಗಿದ್ದು, ಇದನ್ನು ಶನಿ ದೇವನ ರತ್ನ ಎಂದೂ ಕರೆಯುತ್ತಾರೆ.

ರತ್ನಶಾಸ್ತ್ರದ ಪ್ರಕಾರ, ನೀಲಮಣಿಯ ಪರಿಣಾಮಕಾರಿತ್ವ ಎಷ್ಟಿದೆಯೆಂದರೆ, ಅದು ಕೇವಲ ಒಂದು ದಿನದಲ್ಲಿ ತನ್ನ ಪರಿಣಾಮವನ್ನು ತೋರಿಸಲು ಪ್ರಾರಂಭಿಸುತ್ತದೆ ಎಂದು ಉಲ್ಲೇಖಿಸಲಾಗಿದೆ. ಆದರೆ, ಈ ನೀಲಮಣಿ ರತ್ನದ ವಿಶೇಷವೆಂದರೆ ಅದು ಎಲ್ಲರಿಗೂ ಹೊಂದಾಣಿಕೆಯಾಗುವುದಿಲ್ಲ, ಸರಿಹೊಂದಿದ ವ್ಯಕ್ತಿಗೆ ಮಾತ್ರ ಅದ್ಭುತವನ್ನು ಮಾಡುವಂತಹ ಅದ್ಭುತ ರತ್ನ. ಆದ್ದರಿಂದ, ಅದನ್ನು ಧರಿಸುವ ಮೊದಲು, ಅದು ಯಾರಿಗೆ ಸರಿಹೊಂದುತ್ತದೆ ಮತ್ತು ಯಾವ ರಾಶಿಚಕ್ರ ಚಿಹ್ನೆಗಳು ಅದನ್ನು ಧರಿಸಬೇಕು ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ.

ನೀಲಮಣಿ ರತ್ನದ ಪ್ರಯೋಜನ ಹಾಗೂ ಅದನ್ನು ಯಾವ ರಾಶಿಯವರು ಧರಿಸಬೇಕು ಎಂಬುದನ್ನು ಈ ಕೆಳಗೆ ನೋಡೋಣ.

ನೀಲಮಣಿ ರತ್ನದ ಪ್ರಯೋಜನಗಳು:

ನೀಲಮಣಿ ರತ್ನದ ಪ್ರಯೋಜನಗಳು:

ರತ್ನಶಾಸ್ತ್ರದ ಪ್ರಕಾರ, ನೀಲಂ ಅಥವಾ ನೀಲಮಣಿ ಎಂದು ಕರೆಯಲಾಗುವ, ಇದನ್ನು ಭಾರತೀಯ ಜ್ಯೋತಿಷ್ಯಶಾಸ್ತ್ರದ ಅತ್ಯಂತ ಪ್ರಭಾವಶಾಲಿ ರತ್ನದ ಕಲ್ಲುಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಶನಿ ಗ್ರಹವು ನೀಲಮಣಿ ರತ್ನದ ಮೇಲೆ ಅಧಿಧೇವತೆ ಎಂದು ಹೇಳಲಾಗುತ್ತದೆ. ನೀಲಮಣಿ ರತ್ನವು ಯಾರಿಗೆ ಸರಿಹೊಂದುತ್ತದೆಯೋ ಅವರ ಜೀವನದಲ್ಲಿ ಇದು ಅನೇಕ ಬದಲಾವಣೆಗಳನ್ನು ತರುತ್ತದೆ. ಇದನ್ನು ಧರಿಸುವುದರಿಂದ ಅನೇಕ ಆರೋಗ್ಯ ಸಂಬಂಧಿತ ಸಮಸ್ಯೆಗಳನ್ನು ದೂರವಾಗುತ್ತದೆ, ಜೊತೆಗೆ ಉದ್ಯೋಗದಲ್ಲಿ, ವ್ಯಾಪಾರದಲ್ಲಿ ಲಾಭವನ್ನು ಪಡೆಯುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ.

ನೀಲಮಣಿ ರತ್ನದ ಅನಾನುಕೂಲಗಳು:

ನೀಲಮಣಿ ರತ್ನದ ಅನಾನುಕೂಲಗಳು:

ನೀಲಮಣಿ ರತ್ನ ಎಲ್ಲರಿಗೂ ಒಳ್ಳೆಯದು ಮತ್ತು ಮಂಗಳಕರವಲ್ಲ. ಈ ರತ್ನವನ್ನು ತಿಳಿಯದೇ ಧರಿಸಿದರೆ, ವ್ಯಕ್ತಿಯು ಅನೇಕ ಆರೋಗ್ಯ ಸಂಬಂಧಿತ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು, ಜೊತೆಗೆ ಹಣದ ನಷ್ಟದ ಸಾಧ್ಯತೆಯೂ ಹೆಚ್ಚಾಗುತ್ತದೆ. ಅಷ್ಟೇ ಅಲ್ಲ, ಈ ನೀಲಮಣಿ ಇತರ ರತ್ನಗಳೊಂದಿಗೆ ಹೊಂದಾಣಿಕೆಯಾಗುವುದಿಲ್ಲ, ಯಾರಿಗೆ ಅವಶ್ಯಕತೆ ಇದೆಯೋ ಅವರು, ಇದನ್ನು ಏಕಾಂಗಿಯಾಗಿ ಧರಿಸಬೇಕು.

ನೀಲಂ ರತ್ನವು ನಿಮಗೆ ಮಂಗಳಕರವೋ ಅಲ್ಲವೋ ಎಂದು ಗುರುತಿಸುವುದು ಹೇಗೆ?:

ನೀಲಂ ರತ್ನವು ನಿಮಗೆ ಮಂಗಳಕರವೋ ಅಲ್ಲವೋ ಎಂದು ಗುರುತಿಸುವುದು ಹೇಗೆ?:

ನೀಲಂ ರತ್ನವು ನಿಮಗೆ ಮಂಗಳಕರವೋ ಅಲ್ಲವೋ ಎಂದು ತಿಳಿಯಲಯ ರತ್ನ ಶಾಸ್ತ್ರದಲ್ಲಿ ಒಂದು ಉಪಾಯವಿದೆ. ಆ ಪ್ರಕಾರ, ನೀವು ದಿಂಬಿನ ಕೆಳಗೆ ನೀಲಂ ಕಲ್ಲನ್ನು ಇಟ್ಟುಕೊಂಡು ಮಲಗಬೇಕು. ಇದರಿಂದ ನೀವೇನಾದರೂ ಕೆಟ್ಟ ಕನಸುಗಳನ್ನು ಕಾಣುತ್ತಿದ್ದರೆ ಅಥವಾ ಕನಸಿನಲ್ಲಿ ನಿಮಗೆ ಏನಾದರೂ ಕೆಟ್ಟದು ಸಂಭವಿಸುತ್ತಿದ್ದರೆ, ಈ ರತ್ನವು ನಿಮಗೆ ಶುಭವಲ್ಲ ಎಂದು ಅರ್ಥಮಾಡಿಕೊಳ್ಳಬೇಕು. ಜೊತೆಗೆ ಅದನ್ನು ಧರಿಸಿದ ನಂತರ ಅಂತಹ ಅಹಿತಕರ ಘಟನೆಗಳನ್ನು ಕಂಡರೂ ಸಹ, ಅದು ನಿಮಗೆ ಸರಿಹೊಂದುವುದಿಲ್ಲ ಎಂಬುದನ್ನು ಅರ್ಥ ಮಾಡಿಕೊಂಡು, ಅದನ್ನು ಧರಿಸುವುದನ್ನು ನಿಲ್ಲಿಸಬೇಕು.

ನೀಲಮಣಿ ರತ್ನ ಯಾವ ರಾಶಿಗೆ ಅತ್ಯಂತ ಪ್ರಯೋಜನಕಾರಿ?:

ನೀಲಮಣಿ ರತ್ನ ಯಾವ ರಾಶಿಗೆ ಅತ್ಯಂತ ಪ್ರಯೋಜನಕಾರಿ?:

ನೀಲಮಣಿ ರತ್ನವನ್ನು ಎಲ್ಲರಿಗೂ ಪ್ರಯೋಜನಕಾರಿಯಲ್ಲ. ಆದರೆ ರತ್ನಶಾಸ್ತ್ರದ ಪ್ರಕಾರ, ಇದು ವೃಷಭ ರಾಶಿಯವರಿಗೆ ಮಂಗಳಕರವೆಂದು ಸಾಬೀತಾಗಿದೆ, ಆದರೆ ಅದನ್ನು ಧರಿಸುವ ಮೊದಲು, ಜ್ಯೋತಿಷ್ಯರನ್ನು ಸಂಪರ್ಕಿಸಬೇಕು. ಅದನ್ನು ಧರಿಸಲು ಸರಿಯಾದ ವಿಧಾನವಿದ್ದು, ಆ ಪ್ರಕಾರವೇ ಧರಿಸುವುದು ಉತ್ತಮ. ಜೊತೆಗೆ ವೃಷಭ ರಾಶಿ, ತುಲಾ ರಾಶಿಯ ಜನರಿಗೆ ಇದು ಮಂಗಳಕರವೆಂದು ಪರಿಗಣಿಸಲಾಗಿದೆ. ಕುಂಭ ರಾಶಿಯವರು ಕೂಡ ಇದನ್ನು ಧರಿಸಬಹುದು.

English summary

Why Do People Wear Blue Sapphire Gemstone: Astrological Benefits of Neelam in Kannada

Here we talking about why do people wear blue sapphire gemstone: astrological benefits of neelam in kannada
Story first published: Sunday, February 27, 2022, 6:00 [IST]
X
Desktop Bottom Promotion