Latest Updates
-
ಪುರಿ ರಥಯಾತ್ರೆ 2026: ಭಕ್ತರೇ ಎಚ್ಚರ! ಸುಗಮ ದರ್ಶನಕ್ಕೆ ಇಲ್ಲಿವೆ ಪ್ರಮುಖ ಟಿಪ್ಸ್ -
ಭಾರತ-ಇಂಗ್ಲೆಂಡ್ ಪಂದ್ಯ ವೀಕ್ಷಿಸುವಾಗ ಬೆನ್ನು ನೋವು ಕಾಡುತ್ತಿದೆಯೇ? ಈ 8 ನಿಮಿಷದ ವ್ಯಾಯಾಮ ಟ್ರೈ ಮಾಡಿ! -
ಮದುವೆ ಸಂಭ್ರಮಕ್ಕೆ ಸಿದ್ಧರಾಗಿದ್ದೀರಾ? ಮಳೆಗಾಲದ ಮದುವೆಗೆ ಈ 5 ಟಿಪ್ಸ್ ಮರೆಯದಿರಿ! -
ಬೆಲೆ ಏರಿಕೆಯ ಬಿಸಿ: ಜೂನ್ CPI ವರದಿ ಮತ್ತು ನಿಮ್ಮ ಕಿಚನ್ ಬಜೆಟ್ ಉಳಿಸುವ ಸ್ಮಾರ್ಟ್ ಟಿಪ್ಸ್ -
ಸ್ವಿಗ್ಗಿ ಇನ್ಸ್ಟಾಮಾರ್ಟ್ ಗ್ರಾಹಕರಿಗೆ ಎಚ್ಚರಿಕೆ: ಹಾಲು, ಮೊಟ್ಟೆ ಖರೀದಿಸುವಾಗ ಈ ತಪ್ಪು ಮಾಡಬೇಡಿ! -
4-0 ಸೋಲಿನ ಆಘಾತದಲ್ಲಿ ಭಾರತೀಯ ಫ್ಯಾನ್ಸ್: ಏಕದಿನ ಸರಣಿಗೆ ಕಮ್ಬ್ಯಾಕ್ ಸಾಧ್ಯವೇ? ಇಲ್ಲಿದೆ ಪಂದ್ಯಗಳ ವೇಳಾಪಟ್ಟಿ ಮತ್ತು ಹೆಲ್ತ್ ಟಿಪ್ಸ್! -
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್ -
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ!
ಫೆಬ್ರವರಿ 2021: ಪ್ರೇಮಿಗಳ ತಿಂಗಳಲ್ಲಿ ಶುಭ ವಿವಾಹಕ್ಕಿರುವ ದಿನಾಂಕಗಳು
ಫೆಬ್ರವರಿ ಎಂದಾಕ್ಷಣ ನೆನಪಿಗೆ ಬರೋದು ಪ್ರೀತಿಯ ತಿಂಗಳು ಅಂದ್ರೆ, ಪ್ರೇಮಿಗಳ ದಿನ. ಹವಾಮಾನವಾರು ದೃಷ್ಟಿಯಿಂದ ಹೇಳುವುದಾದರೆ ಫೆಬ್ರವರಿ ಅತ್ಯಂತ ಆಹ್ಲಾದಕರ ತಿಂಗಳಲ್ಲಿ ಒಂದಾಗಿದೆ. ಪ್ರೇಮಿಗಳ ದಿನವು ಇದೇ ತಿಂಗಳಲ್ಲಿ ಬರುವುದರಿಂದ ಬಹಳಷ್ಟು ದಂಪತಿಗಳು ಫೆಬ್ರವರಿಯಲ್ಲಿ ಮದುವೆಯಾಗಲು ಇಚ್ಛೆ ಪಡುತ್ತಾರೆ. ಕೆಲವರು ಫೆಬ್ರವರಿ 14, ಪ್ರೇಮಿಗಳ ದಿನದಂದು ಮದುವೆಯಾಗುವ ಆಸೆ ಸಹ ಹೊಂದಿರುತ್ತಾರೆ. ಇಂತಹ ವ್ಯಕ್ತಿಗಳಲ್ಲಿ ನೀವು ಒಬ್ಬರಾಗಿದ್ದರೆ, ಫೆಬ್ರವರಿ 2021 ರಲ್ಲಿ ಮದುವೆ ದಿನಾಂಕಗಳ ಪಟ್ಟಿ ಇಲ್ಲಿದೆ.

ಫೆಬ್ರವರಿಯು ಭಾರತದಲ್ಲಿ ವಸಂತಕಾಲ ಅಧಿಕೃತವಾಗಿ ಪ್ರಾರಂಭವಾಗುವ ತಿಂಗಳು. ಆದ್ದರಿಂದ ಹವಾಮಾನವು ತಂಪಾಗಿರುತ್ತದೆ. ನಿಮಗೆ ಬೇಕಾದ ಎಲ್ಲಾ ಸ್ಟೈಲಿಶ್ ಬ್ಲೌಸ್ ಗಳನ್ನು ನೀವು ಧರಿಸಬಹುದು, ನಿಮ್ಮ ವಿವಾಹದ ಸ್ಥಳವನ್ನು ವಸಂತ ಕಾಲದ ಆಧಾರಿತ ಥೀಮ್ ನಿಂದ ಅಲಂಕರಿಸಬಹುದು. ನೀವು ಪ್ರಶಾಂತ ವಿವಾಹವನ್ನು ಬಯಸಿದರೆ ಮದುವೆಯಾಗಲು ಇದು ಅತ್ಯುತ್ತಮ ತಿಂಗಳುಗಳಲ್ಲಿ ಒಂದಾಗಿದೆ.
ಕೊರೋನಾದಿಂದ 2020 ರಲ್ಲಿ ಮದುವೆಯಾಗುವ ಯೋಜನೆಯನ್ನು ರೂಪಿಸಿದ್ದ ಹೆಚ್ಚಿನ ಜೋಡಿಗಳು ತಮ್ಮ ವಿವಾಹಗಳನ್ನು 2021 ಕ್ಕೆ ತಳ್ಳಿದ್ದರು. ಆದರೆ ಇದೀಗ ಆ ಎಲ್ಲಾ ವಿವಾಹಗಳು ನಡೆಯುವ ಸಂದರ್ಭ ಬಂದೊದಗಿದೆ. 2021 ರ ಫೆಬ್ರವರಿಯಲ್ಲಿ ಇರುವ ಶುಭ ವಿವಾಹ ದಿನಾಂಕ ಪಟ್ಟಿ ಇಲ್ಲಿದೆ.
2021 ರ ಫೆಬ್ರವರಿಯಲ್ಲಿನ ಶುಭ ಹಿಂದೂ ವಿವಾಹ ದಿನಾಂಕಗಳು:
14 ಫೆಬ್ರವರಿ 2021
15 ಫೆಬ್ರವರಿ 2021
16 ಫೆಬ್ರವರಿ 2021
21 ಫೆಬ್ರವರಿ 2021
2021 ರಲ್ಲಿ ಈ ಹಿಂದೂ ವಿವಾಹ ದಿನಾಂಕಗಳು ಹೆಚ್ಚು ಜನಪ್ರಿಯವಾಗಿದ್ದರೂ ಸಹ, ಎಲ್ಲರೂ ಇದೇ ದಿನಾಂಕಗಳಿಗೆ ಹೋಗಲು ಬಯಸುವುದಿಲ್ಲ. ಇದಕ್ಕೆ ಕಾರಣಗಳು ಹಲವು ಆಗಿರಬಹುದು. ಉದಾಹರಣೆಗೆ, ನೀವು ಒಂದು ನಿರ್ದಿಷ್ಟ ಸ್ಥಳದ ಮೇಲೆ ಕಣ್ಣಿಟ್ಟಿರಬಹುದು ಅಥವಾ ನಿರ್ದಿಷ್ಟ ಮೇಕ್ಅಪ್ ಕಲಾವಿದರನ್ನು ಸಾಮಾಜಿಕ ಮಾಧ್ಯಮದಲ್ಲಿ ಸ್ವಲ್ಪ ಸಮಯದವರೆಗೆ ಹಿಂಬಾಲಿಸುತ್ತಿರಬಹುದು. ಅಥವಾ ನೀವು ಸದಾ ನೆನಪಿಡುವ ಈ ದಿನವನ್ನು ವಿಶೇಷ ಸ್ಮರಣೆಯೊಂದಿಗೆ ಹೊಂದಿಸುವುದು. ಇದರ ಜೊತೆಗೆ ನಾವು ಅಂತರ್-ಸಾಂಸ್ಕೃತಿಕ ವಿವಾಹಗಳನ್ನು ಸಹ ಗೌರವಿಸಬೇಕಾಗಿದೆ. ಈ ಸಂದರ್ಭದಲ್ಲಿ 2021 ರಲ್ಲಿ ಹಿಂದೂ ವಿವಾಹ ದಿನಾಂಕಗಳನ್ನು ನೋಡುವುದು ಉತ್ತಮ ಉಪಾಯವಲ್ಲ.



Click it and Unblock the Notifications

