Latest Updates
-
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ! -
ಡೆಂಗ್ಯೂ ಭೀತಿ: ಕೇವಲ 10 ನಿಮಿಷದಲ್ಲಿ ನಿಮ್ಮ ಮನೆಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಿರಿ -
ಹಬ್ಬದ ಸೀಸನ್: ಕಲಬೆರಕೆ ಆಹಾರದಿಂದ ಎಚ್ಚರ! ಮಹಾರಾಷ್ಟ್ರ FDA ಕಠಿಣ ತಪಾಸಣೆ ಆರಂಭ -
ಶಿಕ್ಷಕರ ದಿನಾಚರಣೆ 2026: ನಿಮ್ಮ ಪೋಸ್ಟ್ ಟ್ರೆಂಡ್ ಆಗಲು ಬೆಸ್ಟ್ ಕ್ಯಾಪ್ಷನ್ಸ್ ಮತ್ತು ಗಿಫ್ಟ್ ಐಡಿಯಾಗಳು! -
ಮಳೆಗಾಲದ ಎಚ್ಚರಿಕೆ: ಹೊರಗೆ ವಾಕಿಂಗ್ ಹೋಗುವ ಮುನ್ನ ಈ ವಿಷಯ ಗಮನಿಸಿ, ಮನೆಯಲ್ಲೇ ಫಿಟ್ ಆಗಿರಿ -
ಗೃಹಹಿಂಸೆಯ ಸುಳಿಯಲ್ಲಿ ಸಿಲುಕಿದ್ದೀರಾ? ಸುರಕ್ಷಿತವಾಗಿ ಪಾರಾಗಲು ಈ ಮಾರ್ಗದರ್ಶಿ ಮತ್ತು ತುರ್ತು ಸಹಾಯವಾಣಿಗಳು ನಿಮಗೆ ನೆರವಾಗಲಿವೆ -
ಗಣೇಶ ಹಬ್ಬ 2026: ಬೆಂಗಳೂರಿನಲ್ಲಿ PoP ಮೂರ್ತಿಗಳ ಮೇಲೆ ಕಠಿಣ ನಿಷೇಧ, ಪರಿಸರ ಸ್ನೇಹಿ ಗಣಪತಿಯನ್ನು ಪತ್ತೆ ಹಚ್ಚುವುದು ಹೇಗೆ? -
ವೈ-ವೈ ನೂಡಲ್ಸ್ ಕಂಪನಿಗೆ FSSAI ಬಿಗ್ ಶಾಕ್: ಉತ್ಪಾದನೆ ಸ್ಥಗಿತ, ಅಸಲಿ ಕಾರಣವೇನು? -
ಭಾರತ-ಪಾಕಿಸ್ತಾನ ಹೈ-ವೋಲ್ಟೇಜ್ ಕದನ: ನಾಳೆ ದುಬೈನಲ್ಲಿ ಗೆಲ್ಲೋರು ಯಾರು?
ವಾಸ್ತು ಟಿಪ್ಸ್: ಈ 4 ವಸ್ತುಗಳನ್ನು ಪರ್ಸ್‌ನಲ್ಲಿ ಇಟ್ಟುಕೊಳ್ಳಬೇಡಿ, ಹಣದ ಕೊರತೆಯಾಗುವುದು!
ನಮ್ಮ ಸುತ್ತಲಿನ ವಿಷಯಗಳು ನಮ್ಮ ಜೀವನದ ಮೇಲೆ ಧನಾತ್ಮಕವಾಗಿ ಮತ್ತು ಋಣಾತ್ಮಕವಾಗಿ ಪರಿಣಾಮ ಬೀರುತ್ತವೆ. ಅವುಗಳಲ್ಲಿ ದಿನನಿತ್ಯ ಬಳಸುವ ಪರ್ಸ್ ಕೂಡ ಒಂದು. ಹಣದಿಂದ ಹಳೆಯ ಬಿಲ್‌ಗಳವರೆಗೆ, ಸ್ಟೇಷನರಿಗಳಿಂದ ಫ್ಯಾಮಿಲಿ ಫೋಟೋಗಳವರೆಗೆ ಜನರು ಸಾಮಾನ್ಯವಾಗಿ ತಮ್ಮ ಪರ್ಸ್‌ನಲ್ಲಿ ವಿವಿಧ ವಸ್ತುಗಳನ್ನು ಇಟ್ಟುಕೊಂಡಿರುತ್ತಾರೆ. ಆದರೆ, ವಾಸ್ತುಶಾಸ್ತ್ರದಲ್ಲಿ ಇದಕ್ಕೂ ನಿಯಮಿವಿದೆ.
ವಾಸ್ತು ಶಾಸ್ತ್ರದ ನಂಬಿಕೆಗಳ ಪ್ರಕಾರ, ಪರ್ಸ್‌ನಲ್ಲಿ ಹಣವನ್ನು ಹೊರತುಪಡಿಸಿ ಕೆಲವೊಂದು ವಸ್ತುಗಳನ್ನು ಇಟ್ಟುಕೊಂಡರೆ ಆರ್ಥಿಕ ತೊಂದರೆ ಉಂಟಾಗುತ್ತದೆ. ಅಷ್ಟೇ ಅಲ್ಲ, ಜೀವನದಲ್ಲಿ ಕಷ್ಟಗಳೂ ಬರುತ್ತದೆ. ಹಾಗಾದರೆ, ಪರ್ಸ್‌ನಲ್ಲಿ ಇಡಲು ಅಶುಭಕರವಾದ ವಸ್ತುಗಳ ಬಗ್ಗೆ ಇಲ್ಲಿ ತಿಳಿದುಕೊಳ್ಳೋಣ.
ಪರ್ಸ್‌ನಲ್ಲಿ ಇಡಬಾರದ ವಸ್ತುಗಳ ಬಗ್ಗೆ ಈ ಕೆಳಗೆ ನೀಡಲಾಗಿದೆ:

ದೇವರ ಚಿತ್ರ:
ಇದು ಹೆಚ್ಚಿನವರು ಬೆಳೆಸಿಕೊಂಡಿರುವ ಒಂದು ಅಭ್ಯಾಸ ಎಂದರೆ ತಪ್ಪಾಗಲ್ಲ. ಯಾವಾಗಲೂ ಪರ್ಸ್‌ನಲ್ಲಿ ದೇವರ ಫೋಟೋ ಇದ್ದೇ ಇರುತ್ತದೆ. ಆದರೆ, ವಾಸ್ತು ಶಾಸ್ತ್ರದ ಪ್ರಕಾರ, ನಿಮ್ಮ ಪರ್ಸ್‌ನಲ್ಲಿ ಯಾವುದೇ ದೇವರ ಚಿತ್ರವನ್ನು ಇಡಬಾರದು. ಪರ್ಸ್‌ನಲ್ಲಿ ದೇವರ ಚಿತ್ರವನ್ನು ಇಟ್ಟುಕೊಂಡರೆ ಸಾಲ ಆಗುವುದು ಜೊತೆಗೆ ಜೀವನದಲ್ಲಿ ಕಷ್ಟಗಳು ಎದುರಾಗಬಹುದು ಎನ್ನಲಾಗುತ್ತದೆ. ಎದುರಿಸಬಹುದು ಎಂದು ನಂಬಲಾಗಿದೆ.

ನಮ್ಮನ್ನಗಲಿದವರ ಫೋಟೋ:
ತಮ್ಮ ಹತ್ತಿರವಿರುವವರನ್ನು ಕಳೆದುಕೊಂಡವರು ಅವರ ಫೋಟೋವನ್ನು ತಮ್ಮ ಪರ್ಸ್‌ನಲ್ಲಿ ಇಟ್ಟುಕೊಳ್ಳುತ್ತಾರೆ. ವಾಸ್ತು ಶಾಸ್ತ್ರದ ಪ್ರಕಾರ, ತೀರಿಹೋದ ಸಂಬಂಧಿಕರ ಅಥವಾ ವ್ಯಕ್ತಿಗಳ ಭಾವಚಿತ್ರಗಳನ್ನು ಪರ್ಸ್‌ನಲ್ಲಿ ಇಡುವುದನ್ನು ನಿಲ್ಲಿಸಬೇಕು. ವಾಸ್ತು ಶಾಸ್ತ್ರದಲ್ಲಿ ಇದನ್ನು ಅಶುಭವೆಂದು ಪರಿಗಣಿಸಲಾಗಿದೆ. ಯಾರಾದರೂ ಮೃತ ವ್ಯಕ್ತಿಯ ಚಿತ್ರವನ್ನು ಇಟ್ಟುಕೊಂಡರೆ ಅವರು ಆರ್ಥಿಕ ಮುಗ್ಗಟ್ಟು ಎದುರಿಸಬೇಕಾಗುತ್ತದೆ ಎಂದು ಹೇಳಲಾಗುತ್ತದೆ.

ಕೀಲಿ ಕೈಗಳು:
ಜನರು ತಮ್ಮ ಪರ್ಸ್‌ನಲ್ಲಿ ಕೀಗಳನ್ನು ಇಟ್ಟುಕೊಳ್ಳುವುದು ಸಾಮಾನ್ಯವಾಗಿದೆ. ವಾಸ್ತು ಶಾಸ್ತ್ರದ ಪ್ರಕಾರ, ಒಬ್ಬನು ತನ್ನ ಪರ್ಸ್‌ನಲ್ಲಿ ಕೀಲಿಯನ್ನು ಇಟ್ಟುಕೊಳ್ಳಬಾರದು. ಪರ್ಸ್‌ನಲ್ಲಿ ಕೀಲಿಯನ್ನು ಇಟ್ಟುಕೊಳ್ಳುವುದು ಜೀವನದಲ್ಲಿ ನಕಾರಾತ್ಮಕತೆಯನ್ನು ತರುತ್ತದೆ ಎಂದು ಹೇಳಲಾಗುತ್ತದೆ. ಇದನ್ನು ಮಾಡುವುದರಿಂದ, ಆ ವ್ಯಕ್ತಿಯು ಆರ್ಥಿಕ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.

ಹಳೆಯ ಬಿಲ್:
ಯಾವುದಾದರೂ ವಸ್ತು ಅಥವಾ ಏನನ್ನಾದರೂ ಖರೀದಿ ಮಾಡಿದ ನಂತರ ಬಿಲ್ ಅನ್ನು ಪರ್ಸ್‌ನಲ್ಲಿ ಇಟ್ಟುಕೊಳ್ಳುವುದು ಹೆಚ್ಚಿನವರಿಗೆ ಅಭ್ಯಾಸವಾಗಿದೆ. ಹಳೆಯ ಬಿಲ್ಲುಗಳನ್ನು ಪರ್ಸ್‌ನಲ್ಲಿ ಇಡುವುದು ವಾಸ್ತು ಶಾಸ್ತ್ರದ ಪ್ರಕಾರ ಅಶುಭವೆಂದು ಪರಿಗಣಿಸಲಾಗಿದೆ. ಹಳೆ ಬಿಲ್ಲುಗಳನ್ನು ಪರ್ಸ್‌ನಲ್ಲಿ ಇಟ್ಟುಕೊಳ್ಳುವವರಿಗೆ ಲಕ್ಷ್ಮಿ ದೇವಿಯ ಆಶೀರ್ವಾದ ಸಿಗುವುದಿಲ್ಲ ಎಂದು ಹೇಳಲಾಗುತ್ತದೆ.



Click it and Unblock the Notifications