Latest Updates
-
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು
ಬೆಳಗ್ಗೆ ಎದ್ದ ತಕ್ಷಣ ಈ ಕೆಲಸ ಮಾಡಿದರೆ, ದುರಾದೃಷ್ಟ ಎದುರಾಗುವುದು ಎಚ್ಚರ!
ಮುಂಜಾನೆ ಬೇಗ ಏಳುವುದರಿಂದ ಅದೃಷ್ಟ ಒಲಿಯುತ್ತದೆ ಎಂಬ ಮಾತು ಸಾಮಾನ್ಯವಾಗಿ ಕೇಳಿರುತ್ತೇವೆ. ಆದರೆ, ಎಷ್ಟೋ ಬಾರಿ ಬೇಗ ಎದ್ದರೂ ಇಂದು ದಿನ ಚೆನ್ನಾಗಿರಲಿಲ್ಲ ಅಥವಾ ಕಷ್ಟಪಟ್ಟು ಕೆಲಸ ಮಾಡಿದರೂ ಫಲ ಸಿಗಲಿಲ್ಲ ಎಂಬ ಮಾತುಗಳು ಕೇಳಸಿಗುತ್ತವೆ. ವಾಸ್ತು ಶಾಸ್ತ್ರದ ಪ್ರಕಾರ, ಇಂತಹ ಸಂದರ್ಭಗಳು ನಮಗೆ ಸಂಭವಿಸುವುದರ ಹಿಂದೆ ನಮ್ಮ ತಪ್ಪುಗಳೂ ಇವೆ. ಬೆಳಗ್ಗೆ ಎದ್ದ ತಕ್ಷಣ ಮಾಡುವ ಕೆಲ ಕೆಲಸಗಳು ನಮ್ಮನ್ನು ಇಂತಹ ಪರಿಸ್ಥಿತಿಗೆ ದೂಡಿರುತ್ತವೆ. ಈ ಕಾರಣದಿಂದಾಗಿ ನಿಮ್ಮ ಅದೃಷ್ಟವು ದುರದೃಷ್ಟಕರವಾಗಿ ಬದಲಾಗುವುದು. ಹಾಗಾದರೆ, ಬೆಳಗ್ಗೆ ಎದ್ದ ತಕ್ಷಣ ಯಾವ ಕೆಲಸ ಮಾಡಬಾರದು ಎಂಬುದನ್ನು ತಿಳಿಯೋಣ.
ಬೆಳಿಗ್ಗೆ ಎದ್ದ ತಕ್ಷಣ ಮಾಡಬಾರದ ಕೆಲಸಗಳನ್ನು ಈ ಕೆಳಗೆ ನೀಡಲಾಗಿದೆ:

ಕನ್ನಡಿ ನೋಡಬಾರದು:
ಹೆಚ್ಚಿನ ಜನರು ಎದ್ದ ತಕ್ಷಣ ಕನ್ನಡಿಯಲ್ಲಿ ಮುಖ ನೋಡುವ ಅಭ್ಯಾಸವನ್ನು ಹೊಂದಿರುತ್ತಾರೆ, ಆದರೆ ಇದನ್ನು ಮಾಡಬಾರದು. ವಾಸ್ತು ಶಾಸ್ತ್ರದ ಪ್ರಕಾರ, ನಾವು ಬೆಳಿಗ್ಗೆ ಎದ್ದಾಗ, ನಮ್ಮ ದೇಹದಲ್ಲಿ ನಕಾರಾತ್ಮಕ ಶಕ್ತಿಯ ಪ್ರಭಾವ ಇರುತ್ತದೆ. ಇದರ ದೊಡ್ಡ ಪರಿಣಾಮ ನಮ್ಮ ಮುಖದ ಮೇಲಿರುತ್ತದೆ. ಎದ್ದ ತಕ್ಷಣ ಕನ್ನಡಿಯಲ್ಲಿ ಮುಖ ನೋಡಿಕೊಂಡರೆ ಆ ಶಕ್ತಿ ಮತ್ತೆ ನಮ್ಮೊಳಗೆ ಪ್ರವೇಶಿಸುತ್ತದೆ. ಆದ್ದರಿಂದ, ಬೆಳಿಗ್ಗೆ ಎದ್ದ ತಕ್ಷಣ ನಿಮ್ಮ ಮುಖವನ್ನು ಮೊದಲು ತೊಳೆಯಿರಿ ಮತ್ತು ನಂತರ ಕನ್ನಡಿ ನೋಡಿ.

ಮುಸುರೆ ಪಾತ್ರೆಗಳನ್ನು ನೋಡಬೇಡಿ:
ಇದೇ ಕಾರಣಕ್ಕಾಗಿಯೇ ರಾತ್ರಿಯೇ ಅಡುಗೆ ಮನೆಯನ್ನು ಸ್ವಚ್ಛಗೊಳಿಸಿ ಮಲಗಬೇಕು ಎಂದು ಹೇಳಲಾಗುತ್ತದೆ. ಬೆಳಿಗ್ಗೆ ಎದ್ದ ತಕ್ಷಣ ಕೊಳಕು ಪಾತ್ರೆಗಳನ್ನು ನೋಡುವುದರಿಂದ ದೇಹದಲ್ಲಿ ಧನಾತ್ಮಕ ಶಕ್ತಿಯ ಸಂಚಾರ ಕಡಿಮೆಯಾಗುತ್ತದೆ. ಕೊಳಕು ಪಾತ್ರೆಗಳನ್ನು ಬೆಳಿಗ್ಗೆ ತನಕ ಇಡಬೇಡಿ ಮತ್ತು ರಾತ್ರಿಯಲ್ಲಿ ಅವುಗಳನ್ನು ಸ್ವಚ್ಛಗೊಳಿಸಿದ ನಂತರ ಮಲಗಿಕೊಳ್ಳಿ.

ನೆರಳನ್ನು ನೋಡಬೇಡಿ:
ವಾಸ್ತು ಶಾಸ್ತ್ರದ ಪ್ರಕಾರ ಬೆಳಗ್ಗೆ ಎದ್ದ ತಕ್ಷಣ ನಿಮ್ಮ ಅಥವಾ ಬೇರೆಯವರ ನೆರಳನ್ನು ನೋಡಬಾರದು. ಬೆಳಿಗ್ಗೆ ಎದ್ದ ತಕ್ಷಣ ನೀವು ಸೂರ್ಯನನ್ನು ನೋಡಲು ಹೊರಟಿರುವಾಗ ನೆರಳನ್ನ ನೋಡಬೇಡಿ. ಇದನ್ನು ವಾಸ್ತು ಪ್ರಕಾರ ಸರಿ ಎಂದು ಪರಿಗಣಿಸಲಾಗುವುದಿಲ್ಲ. ವಾಸ್ತು ಪ್ರಕಾರ ಇದನ್ನು ರಾಹುವಿನ ಚಿಹ್ನೆ ಎಂದು ಹೇಳಲಾಗುತ್ತದೆ.

ನಿಂತ ಗಡಿಯಾರವನ್ನು ನೋಡಬೇಡಿ:
ವಾಸ್ತು ಶಾಸ್ತ್ರದ ಪ್ರಕಾರ, ನೀವು ಬೆಳಿಗ್ಗೆ ಎದ್ದ ತಕ್ಷಣ ನಿಂತ ಗಡಿಯಾರದತ್ತ ನೋಡಬಾರದು. ವಾಸ್ತವವಾಗಿ, ಗಡಿಯಾರವನ್ನು ಚಾಲನೆಯಲ್ಲಿಡುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ನಿಂತ ಗಡಿಯಾರವು ಕೆಟ್ಟ ಸಮಯವನ್ನು ಸೂಚಿಸುತ್ತದೆ. ಮುಂಜಾನೆ ಎದ್ದ ತಕ್ಷಣ ನಿಂತ ಗಡಿಯಾರವನ್ನು ನೋಡಿದರೆ ಯಾರೊಂದಿಗಾದರೂ ಜಗಳವಾಡಿ ಇಡೀ ದಿನವೇ ಹಾಳಾಗಿ ಹೋಗಬಹುದು.

ಹಿಂಸಾತ್ಮಕ ಪ್ರಾಣಿಗಳ ಚಿತ್ರವನ್ನು ನೋಡಬೇಡಿ:
ಬಹುತೇಕ ಮನೆಗಳಲ್ಲಿ ಪ್ರಾಣಿಗಳ ಚಿತ್ರ ಕಾಣಸಿಗುತ್ತದೆ. ಆದರೆ, ಬೆಳಗ್ಗೆ ಎದ್ದ ತಕ್ಷಣ ಇಂತಹ ಚಿತ್ರಗಳನ್ನು ನೋಡಲೇಬೇಡಿ. ವಾಸ್ತು ಶಾಸ್ತ್ರದ ಪ್ರಕಾರ, ಅಂತಹ ಚಿತ್ರಗಳನ್ನು ನೋಡುವುದು ನಿಮ್ಮ ಇಡೀ ದಿನವನ್ನು ವಿವಾದವನ್ನು ಪರಿಹರಿಸುವಲ್ಲಿ ಕಳೆಯಬಹುದು ಎಂದರ್ಥ.



Click it and Unblock the Notifications
