ಕೊರೊನಾ ಟೈಮಲ್ಲಿ ಹೊಸ ವರ್ಷಾಚರಣೆಗೆ ಕಡ್ಡಾಯವಾಗಿ ನೀವು ಇದನ್ನ ಪಾಲಿಸಲೇಬೇಕು..

ಕೊನೆಗೂ 2020 ಮುಗಿಯುವ ವೇಳೆ ಬಂದೇ ಬಿಡ್ತು. ಕೋವಿಡ್ -19 ರ ಕಾರಣದಿಂದಾಗಿ ಈ ವರ್ಷದ ಬಹುಪಾಲು ಕ್ಯಾರೆಂಟೈನ್‌ನಲ್ಲಿ ಕಳೆದಿದ್ದರೂ ಸಹ, ಈ ಹಠಾತ್ ಜೀವನಶೈಲಿಯ ಬದಲಾವಣೆಗೆ ನಾವು ಹೊಂದಿಕೊಳ್ಳುತ್ತಿದ್ದೇವೆ. ಕಣ್ಣುಚ್ಚಿ ಬಿಡುವುದರೊಳಗೆ ಈ ವರ್ಷ ಕಳೆದು ಹೋದಂತೆ ಅನಿಸಿದರೂ, ಈ ವರ್ಷ ನಡೆದ ವಿದ್ಯಮಾನಗಳು ಊಹೆಗೆ ನಿಲುಕದಷ್ಟಿವೆ. ಊಹಿಸಲಾರದಂತ ಘಟನೆಗಳು ನಡೆದು ಹೋಗಿವೆ.

new year celebration

ಇಂತಹ ಸಂದರ್ಭದಲ್ಲಿ ಪ್ರತಿಯೊಬ್ಬರೂ ಆದಷ್ಟು ಬೇಗ ಈ ವರ್ಷ ಮುಗಿದುಹೋಗಲಿ ಎಂಬ ಆಶಯ ಹೊಂದಿದ್ದರು. ಎಲ್ಲರ ನಿರೀಕ್ಷೆಯಂತೆ ಇದೀಗ ಕೊನೆಯ ಹಂತಕ್ಕೆ ಬಂದದ್ದೇವೆ. ಈ ಹಿಂದಿನ ವರ್ಷಗಳಿಗಿಂತ ಮುಂಬರುವ ಹೊಸ ವರ್ಷದ ಪ್ರಾರಂಭಕ್ಕಾಗಿ ಎಲ್ಲರೂ ಎಲ್ಲಕ್ಕಿಂತ ಹೆಚ್ಚಿನ ನೆಮ್ಮದಿಯ ನಿಟ್ಟುಸಿರು ಬಿಡಲು ಕಾತುರಾಗಿದ್ದಾರೆ.

ಆದರೆ ಹೊಸ ವರ್ಷದ ಸಂಭ್ರಮಾಚರಣೆಯು ಹಿಂದಿನ ವರ್ಷಗಳಂತೆ ಜನಸಂದಣಿಯನ್ನು ಹೊಂದಲು ಸಾಧ್ಯವಿಲ್ಲವಾದರೂ, ಜನರು ಈಗಾಗಲೇ ಹೊಸ ವರ್ಷವನ್ನು ಅದ್ದೂರಿಯಾಗಿ ಸ್ವಾಗತಿಸುವ ಮಾರ್ಗಗಳನ್ನು ಹುಡುಕುತ್ತಿದ್ದಾರೆ. ಆದರೆ ಪ್ರಸ್ತುತ ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ಹೊಸ ವರ್ಷವನ್ನು ಆಚರಿಸುವಾಗ ನೀವು ನೆನಪಿನಲ್ಲಿಡಬೇಕಾದ ಕೆಲವು ಪ್ರಮುಖ ಸಲಹೆಗಳು ಇಲ್ಲಿವೆ.

1. ಜನಸಂದಣಿಯನ್ನು ತಪ್ಪಿಸಿ:

1. ಜನಸಂದಣಿಯನ್ನು ತಪ್ಪಿಸಿ:

ಹೊಸ ವರ್ಷದ ಖುಷಿ, ಸಂತೋಷ ಎಲ್ಲರಲ್ಲೂ ಉತ್ಸಾಹ ಮೂಡಿಸಿರುತ್ತದೆ. ಆದರೆ ನಾವಿರುವ ಕೊರೊನಾ ಸನ್ನಿವೇಶವನ್ನು ಎಂದಿಗೂ ಮರೆಯಬಾರದು. ಆದಷ್ಟು ಜನಸೇರುವುದನ್ನು ಅದರಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿ ಪಾರ್ಟಿ ಮಾಡುವುದನ್ನು ತಪ್ಪಿಸಿ. ಕೊರೋನಾ ಹಾವಳಿ ಕಡಿಮೆಯಾಗುತ್ತಿದೆ ಎಂಬ ನಂಬಿಕೆಯಲ್ಲಿ ಅನೇಕ ಜನರು ಕೋವಿಡ್ ಮಾರ್ಗಸೂಚಿಗಳನ್ನು ನಿರ್ಲಕ್ಷಿಸುತ್ತಿದ್ದಾರೆ. ಇದರಿಂದ ಮುಂಬರುವ ದಿನಗಳಲ್ಲಿ ಬೆಲೆ ತೆರಬೇಕಾಗಬಹುದು. ಹೊಸ ವರ್ಷದ ಆಚರಣೆಯ ಒಂದು ದಿನದ ಸಂಭ್ರಮಕ್ಕಾಗಿ ವರ್ಷವಿಡೀ ತೊಂದರೆ ಅನುಭವಿಸುವಂತೆ ಮಾಡಿಕೊಳ್ಳಬೇಡಿ. ಅದಕ್ಕಾಗಿಯೇ ಸಮಿತ ಜನರೊಂದಿಗೆ ನಿಮ್ಮ ಹೊಸ ವರ್ಷಾಚರಣೆಯನ್ನು ಆಚರಿಸಿ. ಇದರಿಂದ ಎಲ್ಲರಿಗೂ ಒಳೀತಾಗುತ್ತದೆ.

2. ಮಾಸ್ಕ್, ಸ್ಯಾನಿಟೈಜರ್‌ಗಳು ಮತ್ತು ಸಾಮಾಜಿಕ ಅಂತರ ಅತ್ಯಗತ್ಯ:

2. ಮಾಸ್ಕ್, ಸ್ಯಾನಿಟೈಜರ್‌ಗಳು ಮತ್ತು ಸಾಮಾಜಿಕ ಅಂತರ ಅತ್ಯಗತ್ಯ:

2020 ರ ಮೂರು ಪ್ರಮುಖ ಪದಗಳು. ಅಲ್ಲದೆ, ಹೊಸ ವರ್ಷದ ಸಂಭ್ರಮಾಚರಣೆಯ ಸಂದರ್ಭದಲ್ಲಿ ಅನುಸರಿಸಬೇಕಾದ ಕೆಲವು ಮೂಲಭೂತ ಸಲಹೆಗಳು ಇವುಗಳಾಗಿವೆ. ಕೇವಲ ಮಾಸ್ಕ್ ಧರಿಸಿ ಅಂತರವಿಲ್ಲದೇ ಇದ್ದರೆ ಏನೂ ಪ್ರಯೋಜನವಿಲ್ಲ. ನಿಮ್ಮ ಹೊಸ ವರ್ಷಾಚರಣೆ ಆದರ್ಶವಾಗಿರಬೇಕಾದರೆ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಅತೀ ಅಗತ್ಯ. ಅಷ್ಟೇ ಅಲ್ಲ ಪಾರ್ಟಿಗೆ ಹೋದಲ್ಲಿ ಕೈಕುಲುಕುವುದು, ಗುಂಪು ಸೇರಿಕೊಂಡು ಮಾತನಾಡುವುದು ಆದಷ್ಟು ಕಡೆಗಣಿಸಿ. ಅನಿವಾರ್ಯ ಕ್ಷಣಗಳಲ್ಲಿ ಈ ರೀತಿ ಮಾಡಬೇಕಾಗಿ ಬಂದರೆ ಅಂತಹ ಸಮಯಗಳಲ್ಲಿ ಪದೇ ಪದೇ ಸ್ಯಾನಿಟೈಜರ್‌ಗಳನ್ನು ಬಳಸುತ್ತಿರಿ. ಇದರಿಂದ ಸೋಂಕು ಹರಡುವ ಸಾಧ್ಯತೆಯನ್ನು ಸ್ವಲ್ಪ ಮಟ್ಟಿಗಾದರೂ ತಡೆಗಟ್ಟಬಹುದು.

3. ಸುರಕ್ಷತಾ ಕ್ರಮಗಳನ್ನು ಪರಿಶೀಲಿಸಿ:

3. ಸುರಕ್ಷತಾ ಕ್ರಮಗಳನ್ನು ಪರಿಶೀಲಿಸಿ:

ನೀವು ಹೊಸ ವರ್ಷದ ಸಂಭ್ರಮಾಚರಣೆಯ ಯೋಜನೆಗಳನ್ನು ಅಂತಿಮಗೊಳಿಸುವ ಮೊದಲು, ನೀವು ಭಾಗವಹಿಸುತ್ತಿರುವ ಪಾರ್ಟಿ ಅಥವಾ ಆಯೋಜಿಸುತ್ತಿರುವ ಕಾರ್ಯಕ್ರಮವು ಕೋವಿಡ್ -19 ಸುರಕ್ಷತಾ ಮಾರ್ಗಸೂಚಿಗಳನ್ನು ಅನುಸರಿಸಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಿ. ಸ್ಥಳದಲ್ಲಿ ಹ್ಯಾಂಡ್ ಸ್ಯಾನಿಟೈಜ್ ಮಾಡುವ ಕೇಂದ್ರಗಳ ಲಭ್ಯತೆಯಿಂದ ಹಿಡಿದು ಸರಿಯಾದ ದೇಹದ ಉಷ್ಣಾಂಶ ತಪಾಸಣೆಗಳವರೆಗೆ ಎಲ್ಲವೂ ಸರಿಯಾಗಿ ಆಯೋಜನೆಯಾಗಿವೆಯೇ ಎಂದು ಖಚಿತ ಪಡಿಸಿಕೊಳ್ಳಿ. ಪಾರ್ಟಿಗೆ ಆಗಮಿಸುವ ಪ್ರತಯೊಬ್ಬರನ್ನು ತಪಾಸಣೆಗೆ ಒಳಪಡಿಸಿ. ವಾಶ್‌ರೂಮ್‌ಗಳ ನೈರ್ಮಲ್ಯೀಕರಣವು ನಿರ್ವಹಣೆಯಿಂದ ಮಾಡಬೇಕಾದ ಮತ್ತೊಂದು ಪ್ರಮುಖ ಅಂಶವಾಗಿದೆ.

4. ಆಚರಣೆಯನ್ನು ಹೊರಾಂಗಣಕ್ಕೆ ಮೀಸಲಿಡಿ:

4. ಆಚರಣೆಯನ್ನು ಹೊರಾಂಗಣಕ್ಕೆ ಮೀಸಲಿಡಿ:

ಈ ಕೋವಿಡ್ ಸಮಯದಲ್ಲಿ ಕಾರ್ಯಕ್ರಮಗಳನ್ನು ಒಳಾಂಗಣಗಳಿಗಿಂತ ಹೊರಾಂಗಣದಲ್ಲಿ ಮಾಡುವುದು ಉತ್ತಮ. ಹೊರಾಂಗಣ ಕಾರ್ಯಕ್ರಮಗಳು ಸುರಕ್ಷಿತವೆಂದು ಅಧ್ಯಯನಗಳು ಸೂಚಿಸುತ್ತವೆ. ಒಳಾಂಗಣದಲ್ಲಿ ಸಾಮಾಜಿಕ ಅಂತರ ಕಾಪಾಡಲು ಕಡಿಮೆ ಅವಕಾಶವನ್ನು ಹೊಂದಿರುವುದೇ ಇದಕ್ಕೆ ಮುಖ್ಯ ಕಾರಣ. ಕೋವಿಡ್ -19 ಸಮಯದಲ್ಲಿ ಹೊರಾಂಗಣವು ತನ್ನದೇ ಆದ ಅಪಾಯಗಳನ್ನು ಹೊಂದಿದ್ದರೂ, ಸರಿಯಾದ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡರೆ ಅದು ಸುರಕ್ಷಿತವೆಂದು ಹೇಳಲಾಗುತ್ತದೆ. ಕೇವಲ ಮುಚ್ಚಿದ ಕೊಠಡಿಯಲ್ಲಿ ಆಚರಿಸುವುದಕ್ಕಿಂತ ಹೊರಗೆ ವಿಶಾಲ ಪ್ರದೇಶದಲ್ಲಿ ಪಾರ್ಟಿ ಮಾಡಬಹುದು. ಆದರೆ ಎಲ್ಲಾ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳುವುದು ಅತ್ಯಗತ್ಯ. ಇದು ಜನರಿಗೆ ಆನಂದವನ್ನು ನೀಡುವುದರ ಜೊತೆಗೆ ಉಲ್ಲಾಸವನ್ನು ನೀಡುತ್ತದೆ.

5. ನಿಮ್ಮ ಸ್ವಂತ ಆರೋಗ್ಯವನ್ನು ನೋಡಿಕೊಳ್ಳಿ

5. ನಿಮ್ಮ ಸ್ವಂತ ಆರೋಗ್ಯವನ್ನು ನೋಡಿಕೊಳ್ಳಿ

ಯಾವುದೇ ಪಾರ್ಟಿಗೆ ಹಾಜರಾಗುವ ಮೊದಲು ನೀವು ಸುರಕ್ಷತಾ ಪ್ರೋಟೋಕಾಲ್‌ಗಳನ್ನು ಖಚಿತಪಡಿಸಿಕೊಳ್ಳಬೇಕಾದರೆ, ನಿಮ್ಮ ಆರೋಗ್ಯದ ಬಗ್ಗೆಯೂ ನೀವು ಮೊದಲೇ ಕಾಳಜಿ ವಹಿಸಬೇಕು. ನಿಮ್ಮ ಆಚರಣೆಗಳನ್ನು ಯೋಜಿಸುವ ಮೊದಲು ಅನಾರೋಗ್ಯದ ಚಿಹ್ನೆಗಳು ಅಥವಾ ಇತರ ಯಾವುದೇ ಕೋವಿಡ್ -19 ಸಂಬಂಧಿತ ರೋಗಲಕ್ಷಣಗಳನ್ನು ಪರಿಶೀಲಿಸಿ. ಇಂತಹ ಸವಾಲಿನ ಸಂದರ್ಭಗಳಲ್ಲಿ ಇತರರನ್ನು ಅಪಾಯಕ್ಕೆ ಸಿಲುಕಿಸುವುದನ್ನು ತಪ್ಪಿಸುವುದು ನಮ್ಮ ಸ್ವಂತ ಜವಾಬ್ದಾರಿ. ಏಕೆಂದರೆ, ಕೋವಿಡ್ -19 ವೈರಸ್ ಸಾಂಕ್ರಾಮಿಕವಾಗಿದ್ದು, ನಮ್ಮ ದೈಹಿಕ ಆರೋಗ್ಯದ ಬಗ್ಗೆ ಸರಿಯಾದ ಕಾಳಜಿ ವಹಿಸುವುದು ಈ ವರ್ಷದ ಪ್ರಮುಖ ಸುರಕ್ಷತಾ ಸಲಹೆಗಳಲ್ಲಿ ಒಂದಾಗಿದೆ.

6. ನಿಮ್ಮ ಪ್ರೀತಿಪಾತ್ರರನ್ನು ಸೇರಿಸಿಕೊಳ್ಳಿ:

6. ನಿಮ್ಮ ಪ್ರೀತಿಪಾತ್ರರನ್ನು ಸೇರಿಸಿಕೊಳ್ಳಿ:

ನಿಮ್ಮ ಹತ್ತಿರದ ಮತ್ತು ಆತ್ಮೀಯರೊಂದಿಗೆ ಉತ್ತಮ ಸಮಯ ಕಳೆಯುವುದಕ್ಕಿಂತ ಹೊಸ ವರ್ಷದ ಸಂಭ್ರಮಾಚರಣೆಯನ್ನು ಆಚರಿಸಲು ಉತ್ತಮವಾದ ಮಾರ್ಗ ಬೇರಾವುದಿದೆ ಹೇಳಿ? ಇದು ಸಾಕಷ್ಟು ಸವಾಲಿನ ವರ್ಷವಾಗಿದೆ, ನಿಮ್ಮ ಪ್ರೀತಿಪಾತ್ರರೊಡನೆ ಗುಣಮಟ್ಟದ ಸಮಯವನ್ನು ಕಳೆಯುವುದು ನಿಮಗೆ ಸಂತೋಷ ಮತ್ತು ಶಾಂತತೆಯ ಭಾವವನ್ನು ನೀಡುತ್ತದೆ. ಆಟಗಳು, ರಸಪ್ರಶ್ನೆಗಳು ಮತ್ತು ಇತರ ಚಟುವಟಿಕೆಗಳನ್ನು ಯೋಜಿಸುವುದು ಪ್ರತಿಯೊಬ್ಬರಿಗೂ ಭಾಗಿಯಾಗಲು ಅನುವು ಮಾಡಿಕೊಡುತ್ತದೆ.

English summary

Tips for Celebrating New Year Safely during COVID-19

Tips for Who want celebrate new year safely during COVID-19, have a look
Story first published: Wednesday, December 23, 2020, 9:30 [IST]
X
Desktop Bottom Promotion