Latest Updates
-
ಆರ್ಥಿಕ ದೃಷ್ಟಿಯಿಂದ ಈ ದಿನ ಅನುಕೂಲಕರ! ಪ್ರಣಯ ಜೀವನವು ಸುಖಮಯ -
March 11 Horoscope: ಪ್ರಯಾಣಗಳಲ್ಲಿ ನಿಮಗೆ ಶುಭವಿಲ್ಲ! ಅಪಾಯದ ಮುನ್ಸೂಚನೆ! -
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್ -
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ?
ರಾಶಿಚಕ್ರದ ಪ್ರಕಾರ ಪ್ರತಿಯೊಬ್ಬರು ಮರೆಮಾಚುವ ಡಾರ್ಕ್ ಸೈಡ್ ಸಂಗತಿಗಳು ಇಲ್ಲಿವೆ
ನೀವು ಯಾವುದೇ ವ್ಯಕ್ತಿಯ ಬಗ್ಗೆ ನನಗೆಲ್ಲವೂ ತಿಳಿದಿದೆ ಎಂದು ಹೇಳಿಕೊಳ್ಳುವಾಗ, ನಿಮಗೆ ಅರ್ಥವಾಗದೇ ಇರುವ ಅಥವಾ ನಿಮಗೆ ತಿಳಿಯದೇ ಇರುವ ಬಹಳಷ್ಟು ಸಂಗತಿ ಆತನಲ್ಲಿ ಇರುತ್ತದೆ ಎಂಬುದನ್ನು ಸದಾ ನೆನಪಿನಲ್ಲಿಡಬೇಕು. ತೆರೆದ ಪುಸ್ತಕದಂತೆ ತೋರುವ ಜನರು ಸಹ ನಿಮಗೆ ಏನೂ ತಿಳಿದಿಲ್ಲದ ಕರಾಳ ಭಾಗವನ್ನು ಹೊಂದಿರಬಹುದು. ತಮ್ಮ ಜೀವನದ ಬಗ್ಗೆ ವಿಷಯಗಳನ್ನು ಎಷ್ಟೇ ಹಂಚಿಕೊಂಡರೂ, ಕೆಲವು ವಿಷಯಗಳನ್ನಾದರೂ ಮರೆಮಾಚುತ್ತಾರೆ. ಹೀಗೆ ಪ್ರತಿಯೊಬ್ಬರೂ ಯಾರಿಗೂ ತಿಳಿಯದಂತಹ ಡಾರ್ಕ್ ಸೈಡ್ ನ್ನು ಹೊದಿರುತ್ತಾರೆ. ಪ್ರತಿ ರಾಶಿಚಕ್ರ ಚಿಹ್ನೆಯು ಮರೆಮಾಚುವ ಡಾರ್ಕ್ ಸೈಡ್ ಬಗ್ಗೆ ತಿಳಿಯಲು ನಿಮಗೆ ಕುತೂಹಲವಿದ್ದರೆ, ಈ ಕೆಳಗೆ ತಿಳಿಸಲಾದ ಪಟ್ಟಿ ಸಹಾಯ ಮಾಡುತ್ತದೆ.

ಪ್ರತಿ ರಾಶಿಚಕ್ರ ಚಿಹ್ನೆಯು ಮರೆಮಾಚುವ ಡಾರ್ಕ್ ಸೈಡ್ ಬಗ್ಗೆ ಈ ಕೆಳಗೆ ನೀಡಲಾಗಿದೆ:

ಮೇಷ:
ನೀವು ನಿಜವಾಗಿಯೂ ಶ್ರೇಷ್ಠ ವ್ಯಕ್ತಿಯಾಗಬಹುದು. ಆದರೆ ನಿಮ್ಮ ಬಗ್ಗೆ ಡಾರ್ಕ್ ಸಂಗತಿಯೆಂದರೆ, ನೀವು ಕೆಲವೊಮ್ಮೆ ಕೊಲೆಯ ಬಗ್ಗೆ ಅತಿರೇಕವಾಗಿ ವರ್ತಿಸುತ್ತೀರಿ. ನೀವು ಅದನ್ನು ಎಂದಿಗೂ ಮಾಡುವುದಿಲ್ಲ, ಆದರೆ ನೀವು ಅದರ ಬಗ್ಗೆ ಯೋಚಿಸುತ್ತೀರಿ. ನಿಮಗಿಂತ ಉತ್ತಮ ಕೆಲಸ ಮಾಡುವವರು ನಿಮ್ಮ ನಿದ್ದೆ ಕೆಡಿಸಬಹುದು ಇದರಿಂದ ನೀವು ಕೊಲೆಯ ಯೋಚನೆ ಮಾಡಬಹುದು.

ವೃಷಭ:
ನೀವು ದೊಡ್ಡ ವಿನ್ನರ್ ಆಗಿರುತ್ತೀರಿ. ನಿಮ್ಮ ಹಿಂದೆ ಗುಸುಗುಸು ಮಾತನಾಡುವುದನ್ನು ಕೇಳಿ ನೀವು ಎಂದಿಗೂ ಕುಗ್ಗುವುದಿಲ್ಲ. ಆದರೆ ನಿಮಗೆ ಬೇಡವಾದ ಅಥವಾ ಇಷ್ಟವಿರದ ಕೆಲಸವನ್ನು ಮಾಡಲು ನೀವು ಯಾವ ವಿಧದ ಸುಳ್ಳನ್ನು ಬೇಕಾದರೂ ಹೇಳಬಹುದು ಮುಖ್ಯವಾಗಿ ಅನಾರೋಗ್ಯದಿಂದ ಬಳಲುತ್ತಿದ್ದೇನೆಂದು ಹೇಳಿ ಕೆಲಸದಿಂದ ತಪ್ಪಿಸಿಕೊಳ್ಳುತ್ತಿರಿ.

ಮಿಥುನ:
ಪದೇ ಪದೇ ಮನಸ್ಥಿತಿ ಬದಲಾವಣೆಯಾಗುವಂತಹವರು. ನೀವು ರಹಸ್ಯವಾಗಿ ಅಪ್ರಾಮಾಣಿಕರು. ಆದರೆ ಎಲ್ಲರೆದುರು ಪ್ರಾಮಾಣಿಕರಂತೆ ನಟನೆ ಮಾಡುತ್ತೀರಿ. ಜೊತೆಗೆ ಸಾರ್ವಕಾಲಿಕ ಸುಳ್ಳುಹೇಳುವವರು ಮಿಥುನ ರಾಶಿಯವರು.

ಕರ್ಕಾಟಕ:
ಈ ರಾಶಿಯವರು ಕರಾಳ ಭಾಗವೆಂದರೆ ತುಂಬಾ ಅಸೂಯೆ ಹೊಂದಿದ್ದೀರಿ, ಆದರೆ ನೀವು ಅದನ್ನು ಒಪ್ಪಿಕೊಳ್ಳುವುದಿಲ್ಲ. ನಿಮಗೆ ಹತ್ತಿರ್ರವಿರುವವರು ಬೇರೊಬ್ಬರ ಜೊತೆ ಹತ್ತಿರವಾದಾಗ ನಿಮಗೆ ಅಸೂಯೆ ಅನಿಸುತ್ತದೆ. ನೀವು ಅವರು ಮಾತನಾಡುವಾಗ ಅಸೂಯೆ ಪಡುತ್ತೀರಿ. ಆದರೆ ಸುಮ್ಮನಿದ್ದು ಎಲ್ಲವೂ ಸರಿಯಾಗಿದೆ ಎಂದು ನಟಿಸುತ್ತೀರಿ.

ಸಿಂಹ:
ನೀವು ನಿಮ್ಮ ಬಗ್ಗೆ ತೃಪ್ತರಾಗಿರುವುದಿಲ್ಲ. ಆದ್ದರಿಂದ ನೀವು ಆ ಹತಾಶೆಗಳನ್ನು ಇತರರ ಮೇಲೆ ಹೊರಿಸುತ್ತೀರಿ. ಆದರೆ ನಿಮ್ಮ ಅಹಂಕಾರ ನೀವು ಅತೃಪ್ತರು ಎಂಬ ಭಾವವನ್ನು ಮರೆಮಾಡುವಂತೆ ಮಾಡುತ್ತದೆ.

ಕನ್ಯಾ:
ನೀವು ಸಂತೋಷವಾಗಿರದಿದ್ದಾಗ, ನಿಮ್ಮ ಸುತ್ತಲಿರುವ ಪ್ರತಿಯೊಬ್ಬರೂ ಸಹ ಸಂತೋಷವಾಗಿರಬಾರದು ಎಂಬ ಭಾವನೆ ಹೊಂದಿರುವವರು. ನೀವು ಇರುವ ಕೋಣೆಯ ಸುತ್ತಲೂ ನೀವು ಅನುಭವಿಸುತ್ತಿರುವ ನಕಾರಾತ್ಮಕತೆಯನ್ನು ಹರಡುವವರೆಗೂ ನಿಮಗೆ ಸಮಾಧಾನವಾಗುವುದಿಲ್ಲ. ನೀವು ಯಾರೊಂದಿಗಾದರೂ ವಾದವನ್ನು ಹೊಂದಿದ್ದರೆ, ಅವರನ್ನು ಅವಮಾನಿಸುವ ಮೂಲಕ ಅಥವಾ ಕೆಟ್ಟ ವಿಷಯಗಳನ್ನು ಹೇಳುವ ಮೂಲಕ ಅವರನ್ನು ನಿಮ್ಮಿಂದ ಬಹಳ ದೂರ ತಳ್ಳುತ್ತೀರಿ. ತದನಂತರ ಅವರು ನಿಮ್ಮೊಂದಿಗೆ ಎಲ್ಲ ಸಂಪರ್ಕವನ್ನು ಏಕೆ ಕಡಿತಗೊಳಿಸುತ್ತಾರೆ ಎಂದು ನೀವೇ ಆಶ್ಚರ್ಯ ಪಡುತ್ತೀರಿ.

ತುಲಾ:
ಭಾವನೆಗಳಿಗೆ ಬಂದಾಗ ನೀವು ತುಂಬಾ ಸ್ವಾರ್ಥಿ. ನಿಮಗೆ ಏನು ಅನಿಸುತ್ತದೆ, ಏನು ಮಾಡುತ್ತಿದ್ದೀರಿ ಎಂಬುದರ ಕುರಿತು ಮಾತ್ರ ಯೋಚಿಸುತ್ತೀರಿ. ಜನರ ಭಾವನೆಗಳ ಬಗ್ಗೆ ನೀವು ಹೆದರುವುದಿಲ್ಲ. ಯಾವುದೇ ವಿಚಾರವಾದರೂ ನಿಮ್ಮ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದರ ಬಗ್ಗೆ ಮಾತ್ರ ನೀವು ಕಾಳಜಿ ವಹಿಸುತ್ತೀರಿ.

ವೃಶ್ಚಿಕ:
ಈ ರಾಶಿಯವರು ತುಂಬಾ ಮೋಸಗಾರರಾಗಿರುತ್ತಾರೆ. ತಮ್ಮ ಮೋಜಿಗಾಗಿ ಇತರರೊಂದಿಗೆ ಆಟವಾಡುತ್ತೀರಿ. ನೀವು ಏನು ಮಾಡುತ್ತಿದ್ದೀರಿ ಎಂಬುದರ ಕುರಿತು ನೀವು ಎರಡು ಬಾರಿ ಯೋಚಿಸುವುದಿಲ್ಲ. ನಿಮ್ಮ ಅಗತ್ಯಗಳನ್ನು ಪೂರೈಸಲು ತಕ್ಷಣ ಹೊಸ ವ್ಯಕ್ತಿಯನ್ನು ಹುಡುಕಲು ಪ್ರಾರಂಭಿಸುತ್ತೀರಿ.

ಧನು:
ನಿಮ್ಮ ಕ್ರೌರ್ಯ ಎಲ್ಲ ಮಿತಿಗಳಿಗಿಂತ ಹೆಚ್ಚಾಗಿದೆ. ಯಾರಾದರೂ ನಿಮ್ಮ ಹತ್ತಿರ ಬಂದಾಗ, ನೀವು ಯಾವುದೇ ಕಾರಣವಿಲ್ಲದೆ ಅವರನ್ನು ಕೆಳಗೆ ತಳ್ಳುತ್ತೀರಿ. ಇದೇ ನಿಮ್ಮಿಂದ ಜನರು ದೂರವಿರಲು ಕಾರಣವಾಗಿದೆ. ನಿಮ್ಮ ಈ ಸ್ವಭಾವದಿಂದ ಜನರು ನಿಮ್ಮ ಹತ್ತಿರ ಸುಳಿಯಲು ಹೆದರುತ್ತಾರೆ.

ಮಕರ:
ನಿಮ್ಮನ್ನು ಹೊರತುಪಡಿಸಿ ಯಾರೂ ಅಂತಹ ಅನ್ಯಾಯವನ್ನು ನೋಡಿಲ್ಲ ಅಥವಾ ನೋವು ಅನುಭವಿಸಿಲ್ಲ ಎಂಬ ರೀತಿಯಲ್ಲಿ ನೀವು ವರ್ತಿಸುತ್ತಿರಿ. ಯಾರಾದರೂ ನಿಮ್ಮೊಂದಿಗೆ ಮಾತನಾಡಲು ಪ್ರಯತ್ನಿಸಿದಾಗಲೂ, ನೀವು ಕಥೆಯನ್ನು ತಿರುಗಿಸಿ ಹೇಗಾದರೂ ನಿಮ್ಮ ಬಗ್ಗೆ ಮಾತನಾಡುವುದನನ್ನು ತಪ್ಪಿಸುತ್ತೀರಿ.

ಕುಂಭ:
ನೀವು ನಿಮ್ಮ ಬಗ್ಗೆ ಮಾತ್ರ ಯೋಚಿಸುವ ಪ್ರವೃತ್ತಿ ಹೊಂದಿದ್ದೀರಿ ಮತ್ತು ನಿಮ್ಮ ಜೀವನದಲ್ಲಿ ಇತರರ ಬಗ್ಗೆ ಸಹಾನುಭೂತಿ ಇಲ್ಲ. ನಡೆಯುವ ಪ್ರತಿಯೊಂದರಲ್ಲೂ, ಕೆಲವು ರೀತಿಯ ವೈಯಕ್ತಿಕ ಲಾಭವನ್ನು ಕಾಣುತ್ತೀರಿ. ನಿಮ್ಮ ಸ್ನೇಹಿತ ಸತ್ತರೂ ಸಹ, ನೀವು ಅವರ ವೈಯಕ್ತಿಕ ವಿಷಯಗಳ ಬಗ್ಗೆ ಗಮನಹರಿಸುತ್ತೀರಿ, ಆ ಪರಿಸ್ಥಿತಿಯಿಂದ ನೀವು ಏನನ್ನು ಪಡೆಯಬಹುದು ಎಂಬುದನ್ನು ನೋಡಲು ಪ್ರಯತ್ನಿಸುತ್ತೀರಿ.

ಮೀನ:
ನೀವು ನಾಚಿಕೆ ಮತ್ತು ಮುಗ್ಧ ಎಂದು ನಟಿಸುತ್ತೀರಿ ಆದರೆ ವಾಸ್ತವದಲ್ಲಿ, ನೀವು ಹಾಗಿರುವುದಿಲ್ಲ. ನೀವು ನಿಜಕ್ಕೂ ದುಷ್ಟರು. ನೀವು ಯಾರ ಬಳಿಯಾದರೂ ಸಾಲ ಕೊಂಡಾಗ ಮಾತ್ರ ನೀವು ಅವರಿಗೆ ಸಹಾಯ ಮಾಡುತ್ತೀರಿ. ಅವರಿಂದ ಏನೂ ಪಡೆಯದಾಗ ನೀವು ಏನನ್ನೂ ಸಹಾಯ ಮಾಡುವುದಿಲ್ಲ.



Click it and Unblock the Notifications











