Latest Updates
-
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ?
ಈ 4 ರಾಶಿಯ ಜನರು ತಮ್ಮ ತಪ್ಪನ್ನು ಒಪ್ಪಿಕೊಳ್ಳಲು ಸಿದ್ಧರಿರುವುದಿಲ್ಲ!
ಕೆಲವು ಜನರು ತುಂಬಾ ನೇರ ವ್ಯಕ್ತಿತ್ವ ಹೊದಿರುತ್ತಾರೆ. ಅವರ ಮನಸ್ಸಿನಲ್ಲಿ ಏನೇ ಇರಲಿ, ಅದನ್ನು ನೇರವಾಗಿ ಹೇಳಿಬಿಡುತ್ತಾರೆ. ಅದೇ ರೀತಿ ಅವರ ಕಡೆಯಿಂದ ಏನಾದರೂ ತಪ್ಪಾದರೆ ಅದನ್ನು ಒಪ್ಪಿಕೊಳ್ಳುತ್ತಾರೆ. ಇದಕ್ಕೆ ತದ್ವಿರುದ್ಧವಾಗಿ, ಕೆಲವು ಜನರಿದ್ದಾರೆ ನೋಡಿ, ಅವರು ಮಾಡಿರೋ ಕೆಲಸ, ತಪ್ಪು ಎಂದು ಸಾಬೀತಾದರೂ, ಆ ತಪ್ಪನ್ನು ಸ್ವೀಕರಿಸಲು ಸಿದ್ದರಿರುವುದಿಲ್ಲ, ಸ್ವೀಕರಿಸುವುದೂ ಇಲ್ಲ. ಅದನ್ನು ತಮಗೆ ಬೇಕಾದಂತೆ ಪರಿಸ್ಥಿತಿಯನ್ನು ಬದಲಾಯಿಸುತ್ತಾರೆ. ಹೀಗೆ ತಮ್ಮ ತಪ್ಪನ್ನು ಸಿದ್ಧವಿಲ್ಲದ ನಾಲ್ಕು ರಾಶಿಗಳಾವುವು ಎಂಬುದನ್ನು ನೋಡೋಣ.

ತಪ್ಪನ್ನು ಒಪ್ಪಿಕೊಳ್ಳದಂತಹ ರಾಶಿಚಕ್ರಗಳ ಬಗ್ಗೆ ಈ ಕೆಳಗೆ ನೀಡಲಾಗಿದೆ:

ಕನ್ಯಾ ರಾಶಿ:
ಈ ರಾಶಿಯ ಜನರು ತಮ್ಮ ತಪ್ಪುಗಳನ್ನು ಒಪ್ಪಿಕೊಳ್ಳಲು ಸಿದ್ಧವಿರುವುದಿಲ್ಲ. ತಾವು ಯಾವುದೇ ತಪ್ಪು ಮಾಡಿ, ಅಥವಾ ಮಾಡಬಾರದ ಕೆಲಸ ಮಾಡಿ ಸಿಕ್ಕಿ ಬಿದ್ದಾಗಲೂ ಸಹ ಅದನ್ನು ಒಪ್ಪಿಕೊಳ್ಳಲು ತಯಾರಿರುವುದಿಲ್ಲ. ಬದಲಾಗಿ ಆ ಸಮಯದಲ್ಲಿ ಅವರು ತುಂಬಾ ಕೋಪ ಮಾಡಿಕೊಳ್ಳುತ್ತಾರೆ. ಕೋಪದ ಮೂಲಕ ಅದನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತಾರೆ. ಎಲ್ಲ ಮುಗಿದು ಪರಿಸ್ಥಿತಿ ಸಾಮಾನ್ಯವಾದರೂ ಸಹ ಯಾವುದೇ ಕಾರಣಕ್ಕೂ ತನ್ನ ತಪ್ಪನ್ನು ಒಪ್ಪಿಕೊಳ್ಳುವುದಿಲ್ಲ.

ಕರ್ಕಾಟಕ:
ಕರ್ಕ ರಾಶಿಯವರು ತಮ್ಮ ತಪ್ಪಿನಿಂದ ಬೇಗನೇ ಏಜಾರಾಗುತ್ತಾರೆ. ಆದರೆ ಎಲ್ಲರ ಮುಂದೆ ಅದನ್ನು ಒಪ್ಪಿಕೊಳ್ಳುವುದಿಲ್ಲ. ತಮ್ಮ ತಪ್ಪಿನಿಂದಾಗಿ ಇತರರು ತನ್ನ ಮೇಲೆ ಕೋಪಗೊಂಡಿದ್ದಾರೆ ಎಂದು ಅವರು ಭಾವಿಸುತ್ತಾರೆ. ಈ ಸಮಯದಲ್ಲಿ ಅವರ ಯಾರ ಬಳಿಯೂ ಮಾತನಾಡಲು ಮುಂದಾಗುವುದಿಲ್ಲ ಜೊತೆಗೆ ಯಾರಿಗೂ ಎದುರು ಮಾತನಾಡಲು ಹೋಗುವುದಿಲ್ಲ. ಆದರೆ ತಪ್ಪನ್ನ ಒಪ್ಪಿಕೊಳ್ಳಲೂ ಸಿದ್ಧವಿರುವುದಿಲ್ಲ.

ಮೀನ:
ಈ ರಾಶಿಯವರು ಸ್ವಲ್ಪ ಮುಗ್ಧರನ್ನು ಬೇಗನೇ ನಂಬುವಂತೆ ಮಾಡುವ ಶಕ್ತಿ ಇವರಿಗಿದೆ. ಆ ಜನ ಮಾತ್ರ ಪಾಪ ಇವರನ್ನು ನಂಬಿ ತಪ್ಪು ಮಾಡಿ, ಎಲ್ಲವನ್ನೂ ಕಳೆದುಕೊಳ್ಳುತ್ತಾರೆ. ಆ ಹೊಣೆಯನ್ನು ಇವರ ಮೇಲೆ ಹೊರಿಸಿದರೆ ಅದನ್ನು ಒಪ್ಪಿಕೊಳ್ಳಲು ಈ ರಾಶಿಯವರು ಸಿದ್ಧರಿರುವುದಿಲ್ಲ.ಈ ವಿಚಾರದಿಂದ ಎಲ್ಲರೂ ಇವರಿಂದ ದೂರವಾಗಿ ಒಂಟಿತನ ಅನುಭವಿಸುತ್ತಾರೆ.

ಮಿಥುನ:
ಈ ರಾಶಿಯವರು ಜನರು ತಮ್ಮನ್ನು ತಾವು ಪ್ರಚಾರ ಮಾಡಲು ಏನಾದರೂ ಮಾಡುತ್ತಿರುತ್ತಾರೆ. ಇವರಿಗೆ ತಾವು ಫೇಮಸ್ ಆಗಬೇಕು ಎಂಬ ಆಸೆ ಹೆಚ್ಚೇ ಇರುತ್ತದೆ. ಇದಕ್ಕಾಗಿ ವಿವಿಧ ದಾರಿಗಳನ್ನು ಹಿಡಿದು ಕೊನೆಗೆ ಕೆಲವೊಮ್ಮೆ ತಪ್ಪು ಹಾದಿಯನ್ನು ಹಿಡಿಯುತ್ತಾರೆ. ಆದರೆ ತಾವು ತೆಗೆದುಕೊಂಡಿರುವ ದಾರಿ ಸರಿಯಿಲ್ಲ ಎಂದು ಯಾರಾದರೂ ಹೇಳಿದ್ರೂ ಸಹ ಅದನ್ನು ಒಪ್ಪಿಕೊಳ್ಳಲು ಸಿದ್ಧರಿರುವುದಿಲ್ಲ. ಕೊನೆಗೆ ತಮ್ಮ ತಪ್ಪಿನಿಂದ ತುಂಬಾ ನಿರಾಶೆಗೊಳ್ಳಲು ಪ್ರಾರಂಭಿಸುತ್ತಾರೆ.



Click it and Unblock the Notifications
