Latest Updates
-
ಬಿಸಿಲ ಧಗೆಯಿಂದ ಪಾರಾಗಲು ನಿಮ್ಮ ವರ್ಕೌಟ್ ರೂಟೀನ್ ಬದಲಾಯಿಸಿ -
ಬಿಸಿಗಾಳಿ ಕಾಟ: ಮದುವೆ ಡೇಟಿಂಗ್ ಪ್ಲಾನ್ ಹಾಳಾಗದಂತೆ ತಡೆಯುವುದು ಹೇಗೆ? -
ಬಾಲ್ಕನಿ ಅಲಂಕಾರ: ಹಬ್ಬದ ಸಂಭ್ರಮಕ್ಕೆ 10 ನಿಮಿಷದ ಮ್ಯಾಜಿಕ್ -
ಬಿಸಿಲಿನ ಬೇಗೆಗೆ ಈ ಪಾನೀಯಗಳೇ ಮದ್ದು, ತಂಪಾಗಿರಿ ಹೀಗೆ! -
ಬೈಸಾಕಿ ಮತ್ತು ವಿಷು ಹಬ್ಬದ ಲುಕ್: ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ -
ತೆಲಂಗಾಣ ಬಿಸಿಲ ಬೇಗೆ: ಫಿಟ್ ಆಗಿರಲು ಈ ತಪ್ಪುಗಳನ್ನು ಮಾಡಬೇಡಿ -
MI vs RCB ಮ್ಯಾಚ್ ನೋಡುವಾಗ ದಂಪತಿಗಳ ಜಗಳ ತಪ್ಪಿಸುವುದು ಹೇಗೆ? -
ವಿಷು, ಬೈಸಾಖಿ ಹಬ್ಬಕ್ಕೆ ನಿಮ್ಮ ಮನೆ ಮಿಂಚಬೇಕೆ? ಈ ಟಿಪ್ಸ್ ಫಾಲೋ ಮಾಡಿ -
ಗರ್ಭಿಣಿಯರ ಆಹಾರ ಕ್ರಮ: ಮಗುವಿನ ಆರೋಗ್ಯಕ್ಕೆ ಈ ಬದಲಾವಣೆ ಕಡ್ಡಾಯ! -
ಬೇಸಿಗೆ ಬಿಸಿಲಿಗೆ ತಂಪಾಗಲು ವೈರಲ್ ಆಗುತ್ತಿರುವ ಫ್ಯಾಷನ್ ಟಿಪ್ಸ್
ಕನಸಿನಲ್ಲಿ ಈ ಪ್ರಾಣಿಗಳು ಬಂದರೆ, ನಿಮ್ಮ ಜೀವನದಲ್ಲಿ ಮಹತ್ತರ ಬದಲಾವಣೆಯಾಗುವುದು ಖಚಿತವಂತೆ!
ನಮ್ಮಲ್ಲಿ ಹೆಚ್ಚಿನವರಿಗೆ ರಾತ್ರಿ ಮಲಗುವಾಗ ಕನಸು ಬೀಳುವುದುಂಟು. ಈ ಕನಸುಗಳು ನಮ್ಮ ಅಂತಃಪ್ರಜ್ಞೆ ಹಾಗೂ ದಿನದ ಘಟನೆಗಳಿಗೆ ಸಂಬಂಧಿಸಿವೆ. ಇದರೊಂದಿಗೆ ಭವಿಷ್ಯದಲ್ಲಿ ನಮಗೆ ಸಂಭವಿಸುವ ಘಟನೆಗಳ ಬಗ್ಗೆಯೂ ಹೇಳುತ್ತದೆ. ಕನಸಿನಲ್ಲಿ ಕಾಣುವ ಪ್ರತಿಯೊಂದು ವಿಚಾರಗಳಿಗೂ ಸಪ್ನ ಶಾಸ್ತ್ರದಲ್ಲಿ ಅರ್ಥವಿದೆ. ಜೊತೆಗೆ ಕನಸಿನಲ್ಲಿ ಕಾಣಿಸಿಕೊಳ್ಳುವ ಕೆಲವು ವಿಷಯಗಳು ಶುಭ ಹಾಗೂ ಅಶುಭವನ್ನು ಸೂಚಿಸುತ್ತವೆ.
ಸಪ್ನ ಶಾಸ್ತ್ರದ ಪ್ರಕಾರ, ಕನಸಿನಲ್ಲಿ ಕೆಲವು ವಿಶೇಷ ಪ್ರಾಣಿಗಳನ್ನು ಕಂಡರೆ, ಅವರ ಜೀವನದಲ್ಲಿ ದೊಡ್ಡ ಬದಲಾವಣೆಯಾಗುವುದಂತೆ. ಅದು ಧನಾತ್ಮಕವೂ ಆಗಿರಬಹುದು ಅಥವಾ ಕೆಟ್ಟದ್ದೂ ಆಗಿರಬಹುದು. ಹಾಗಾದರೆ, ಕನಸಿನಲ್ಲಿ ಯಾವ ಪ್ರಾಣಿ ಬಂದರೆ ಶುಭ? ಯಾವುದು ಶುಭಕರವಲ್ಲ ಎಂಬುದನ್ನು ಇಲ್ಲಿ ನೋಡೋಣ.
ಕನಸಿನಲ್ಲಿ ಪ್ರಾಣಿಗಳು ಕಾಣಿಸಿಕೊಳ್ಳುವುದರ ಸೂಚನೆಯೇನು ಎಂಬುದನ್ನು ಈ ಕೆಳಗೆ ನೀಡಲಾಗಿದೆ:

ಕನಸಿನಲ್ಲಿ ನಾಯಿ ಬರುವುದು:
ಕನಸಿನಲ್ಲಿ ನಾಯಿಯನ್ನು ನೋಡುವುದು ಮತ್ತು ಅದು ಬೊಗಳುವ ಶಬ್ದವನ್ನು ಕೇಳುವುದು ಬಹಳ ಮಂಗಳಕರವೆಂದು ಪರಿಗಣಿಸಲಾಗಿದೆ. ಜೊತೆಗೆ ಕನಸಿನಲ್ಲಿ ನಾಯಿಯು ನಿಮ್ಮನ್ನು ಕಚ್ಚಿದರೆ, ನೀವು ದೊಡ್ಡ ತೊಂದರೆಯಿಂದ ಹೊರಬರುತ್ತೀರಿ ಎಂದರ್ಥ. ಮತ್ತೊಂದೆಡೆ, ನಾಯಿಯು ನಿಮ್ಮ ಹಿಂದೆ ಓಡಿ ಬರುತ್ತಿರುವುದನ್ನು ಕಂಡರೆ, ಅದು ಜೀವನದಲ್ಲಿ ಏನಾದರೂ ಉತ್ತಮವಾಗಿರುವುದು ನಡೆಯುವ ಸಂಕೇತವಾಗಿದೆ.

ಕನಸಿನಲ್ಲಿ ಕಪ್ಪು ಬೆಕ್ಕನ್ನು ಬರುವುದು:
ಸಾಮಾನ್ಯವಾಗಿ ಶುಭಕಾರ್ಯಕ್ಕೆ ತೆರಳುವಾಗ ಬೆಕ್ಕು ಅಡ್ಡ ಬಂದರೆ, ಅಪಶಕುನ ಎಂಬ ಮಾತಿದೆ. ಅದೇ ರೀತಿ, ಕನಸಿನಲ್ಲಿ ಕಪ್ಪು ಬೆಕ್ಕನ್ನು ನೋಡುವುದು ಸಹ ಒಳ್ಳೆಯದಲ್ಲ. ಅಂತಹ ಕನಸು ಬಂದರೆ ಎಚ್ಚರದಿಂದಿರಿ. ಇದು ಅಶುಭದ ಸಂಕೇತ.

ಆನೆಯನ್ನು ಕಾಣುವುದು:
ಕನಸಿನಲ್ಲಿ ಆನೆಯನ್ನು ನೋಡುವುದು ಒಳ್ಳೆಯದು ಎಂದು ಪರಿಗಣಿಸಲಾಗುತ್ತದೆ. ಇದು ಹಣದ ಲಾಭದ ಸಂಕೇತವಾಗಿದೆ. ಬಿಳಿ ಆನೆ ಕಂಡರೆ ಮತ್ತಷ್ಟು ಅದೃಷ್ಟ. ಮತ್ತೊಂದೆಡೆ, ಆನೆಯ ಮೇಲೆ ಸವಾರಿ ಮಾಡುವಂತೆ ಕನಸು ಬಿದ್ದರೆ, ನೀವು ಭವಿಷ್ಯದಲ್ಲಿ ಭವ್ಯವಾದ ವೈಭವವನ್ನು ಪಡೆಯುವುದರ ಸಂಕೇತವಾಗಿದೆ.

ಕನಸಿನಲ್ಲಿ ಕಾಣಿಸಿಕೊಂಡ ಕಪ್ಪೆ:
ಕನಸಿನಲ್ಲಿ, ನಿಮ್ಮ ಕೈಯಲ್ಲಿ ಕಪ್ಪೆಯನ್ನು ಹಿಡಿದಿರುವುದನ್ನು ನೀವು ನೋಡಿದರೆ, ಅದು ತುಂಬಾ ಮಂಗಳಕರವಾಗಿರುತ್ತದೆ. ಮತ್ತೊಂದೆಡೆ, ಕಪ್ಪೆಯ ಶಬ್ದವನ್ನು ಕೇಳುವುದು ಸಹ ಜೀವನದಲ್ಲಿ ಉತ್ತಮವಾದ ಸಂಕೇತವಾಗಿದೆ.

ಕರಡಿ ಕಾಣಿಸಿಕೊಳ್ಳುವುದು:
ನಿಮ್ಮ ಕನಸಿನಲ್ಲಿ ಮಲಗಿರುವ ಕರಡಿ ಕಾಣಿಸಿಕೊಂಡರೆ, ಅದು ನಿಮ್ಮ ಜೀವನದಲ್ಲಿ ಸಂಘರ್ಷ ಹೆಚ್ಚಾಗುವ ಸಂಕೇತವಾಗಿದೆ. ಜಗಳುಗಳು-ಮನಸ್ತಾಪಗಳು ಕುಟುಂಬದಲ್ಲಿ ಹೆಚ್ಚಾಗುವ ಸಾಧ್ಯತೆಯಿದೆ. ಆದ್ದರಿಂದ ಕನಸಿನಲ್ಲಿ ಕರಡಿ ಬಂದರೆ ಎಚ್ಚರವಾಗಿರಿ.



Click it and Unblock the Notifications











