Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ವಾಸ್ತು ಪ್ರಕಾರ, ಈ ದಿಕ್ಕಿಗೆ ಮುಖ ಮಾಡಿ ಊಟ ಮಾಡುವುದು ಸಮಸ್ಯೆಗೆ ಆಹ್ವಾನ ಕೊಟ್ಟಂತೆ!
ನಮ್ಮ ದೇಶದಲ್ಲಿ ಪುರಾತನ ಕಾಲದಲ್ಲಿ, ನೆಲದ ಮೇಲೆ ಕುಳಿತು ಬಾಳೆ ಎಲೆಯಲ್ಲಿ ಊಟ ಮಾಡುವ ಅಭ್ಯಾಸವಿತ್ತು. ಈಗಿನ ಕಾಲದಲ್ಲೂ ಜನರು ಊಟ ಮಾಡುವಾಗ ಈ ನಿಯಮಗಳನ್ನು ಪಾಲಿಸುತ್ತಾರೆ. ಆದಾಗ್ಯೂ, ಪಾಶ್ಚಿಮಾತ್ಯ ಆಚರಣೆಗಳಲ್ಲಿ ಆಹಾರವನ್ನು ಸೇವಿಸುವ ನಿಯಮಗಳು ವಿಭಿನ್ನವಾಗಿವೆ. ಜನರು ಊಟ ಮಾಡಲು ಕುರ್ಚಿ ಟೇಬಲ್‌ಗಳನ್ನು ಬಳಸುತ್ತಾರೆ. ಈ ಸಮಯದಲ್ಲಿ, ದಿಕ್ಕಿನ ಕಡೆಗೆ ಕಾಳಜಿ ವಹಿಸುವುದಿಲ್ಲ. ಎಲ್ಲರೂ ಮುಖಾಮುಖಿಯಾಗಿ ಕುಳಿತಿದ್ದಾರೆ.
ಆದರೆ, ವಾಸ್ತು ತಜ್ಞರ ಪ್ರಕಾರ ಆಹಾರ ತೆಗೆದುಕೊಳ್ಳುವಾಗ ದಿಕ್ಕು ಪಾಲನೆ ಮಾಡಬೇಕು. ಇಲ್ಲವಾದಲ್ಲಿ ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ. ಆದ್ದರಿಂದ ಈ ಲೇಖನದಲ್ಲಿ ಯಾವ ದಿಕ್ಕಿನಲ್ಲಿ ಕುಳಿತು ಊಟ ಮಾಡುವುದು ಉತ್ತಮ? ಯಾವ ದಿಕ್ಕಿನಲ್ಲಿ ಕುಳಿತುಕೊಳ್ಳಬಾರದು ಎಂಬುದನ್ನು ತಿಳಿದುಕೊಳ್ಳೋಣ.

ಆಹಾರ ಸೇವಿಸುವಾಗ ಯಾವ ದಿಕ್ಕಿನಲ್ಲಿ ಕುಳಿತುಕೊಳ್ಳಬೇಕು ಎಂಬುದನ್ನು ಈ ಕೆಳಗೆ ನೀಡಲಾಗಿದೆ:

ಯಾವ ದಿಕ್ಕಿಗೆ ಕುಳಿತುಕೊಳ್ಳಬಾರದು?:
ವಾಸ್ತು ತಜ್ಞರ ಪ್ರಕಾರ, ದಕ್ಷಿಣ ದಿಕ್ಕಿಗೆ ಮುಖ ಮಾಡಿ ಆಹಾರ ಸೇವಿಸಬಾರದು. ಇದು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ವಿಶೇಷವಾಗಿ ಜೀರ್ಣಕಾರಿ ಸಮಸ್ಯೆಗಳಿಗೆ ಕಾರಣವಾಗುವುದು. ಅದೇ ಸಮಯದಲ್ಲಿ, ಆರ್ಥಿಕ ಸಮಸ್ಯೆಗಳು ಹೆಚ್ಚಾಗುತ್ತವೆ. ಅನೇಕ ವಾಸ್ತು ತಜ್ಞರರ ಪ್ರಕಾರ, ದಕ್ಷಿಣ ದಿಕ್ಕಿಗೆ ಕುಳಿತು ಊಟ ಮಾಡುವುದರಿಂದ ದುರಾದೃಷ್ಟ ಹೆಚ್ಚಾಗುತ್ತದೆ. ಇದಕ್ಕಾಗಿ ದಕ್ಷಿಣ ದಿಕ್ಕಿನಲ್ಲಿ ಕುಳಿತು ಆಹಾರ ಸೇವಿಸಬೇಡಿ.

ಆ ದಿಕ್ಕು ಏಕೆ ಒಳಿತಲ್ಲ?:
ದಕ್ಷಿಣ ದಿಕ್ಕಿನಲ್ಲಿ ಯಮ ನೆಲೆಸಿದ್ದಾನೆ ಎಂದು ಹೇಳಲಾಗುತ್ತದೆ. ಇದು ಜೀವಿತಾವಧಿಯನ್ನು ಕಡಿಮೆ ಮಾಡುತ್ತದೆ. ಇದಕ್ಕಾಗಿ ನೀವು ಯಾವಾಗ ಆಹಾರವನ್ನು ತೆಗೆದುಕೊಳ್ಳುತ್ತೀರೋ, ಆಗ ಖಂಡಿತವಾಗಿಯೂ ದಿಕ್ಕನ್ನು ನೋಡಿಕೊಳ್ಳಿ. ದಕ್ಷಿಣ ದಿಕ್ಕಿನಲ್ಲಿ ಎಂದಿಗೂ ಆಹಾರ ಸೇವನೆ ಮಾಡಬೇಡಿ.

ಊಟಕ್ಕೆ ಯಾವ ದಿಕ್ಕು ಉತ್ತಮ?:
ತಜ್ಞರ ಪ್ರಕಾರ, ಉತ್ತರ ದಿಕ್ಕಿನಲ್ಲಿ ಕುಳಿತು ಆಹಾರ ತೆಗೆದುಕೊಳ್ಳುವುದು ಉತ್ತಮ. ಈ ದಿಕ್ಕಿನಲ್ಲಿ ಕುಳಿತು ಆಹಾರ ತೆಗೆದುಕೊಳ್ಳುವುದರಿಂದ ಜ್ಞಾನ ಮತ್ತು ಆಧ್ಯಾತ್ಮಿಕ ಪ್ರಜ್ಞೆ ಹೆಚ್ಚಾಗುತ್ತದೆ. ನೀವು ಹೊಸದನ್ನು ಮಾಡಬೇಕೆಂದು ಯೋಚಿಸುತ್ತಿದ್ದರೆ, ಉತ್ತರ ದಿಕ್ಕಿನಲ್ಲಿ ಕುಳಿತು ಆಹಾರವನ್ನು ತೆಗೆದುಕೊಳ್ಳಿ. ಇದು ಕೆಲಸ ಯಶಸ್ವಿಯಾಗುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ.
ಪಶ್ಚಿಮಾಭಿಮುಖವಾಗಿ ಆಹಾರ ಸೇವಿಸುವುದು ಕೂಡ ಪ್ರಯೋಜನಕಾರಿ. ವಿಶೇಷವಾಗಿ ಉದ್ಯೋಗಸ್ಥರು ಪಶ್ಚಿಮಾಭಿಮುಖವಾಗಿ ಆಹಾರವನ್ನು ಸೇವಿಸಬೇಕು.

ಸೂಕ್ತ ದಿಕ್ಕಿನಲ್ಲಿ ಕುಳಿತರೆ ಏನಾಗುವುದು?:
ನೀವು ಮಾನಸಿಕ ಒತ್ತಡದಿಂದ ತೊಂದರೆಗೀಡಾಗಿದ್ದರೆ ಮತ್ತು ಅದರಿಂದ ಹೊರಬರಲು ಬಯಸಿದರೆ, ಪೂರ್ವಾಭಿಮುಖವಾಗಿ ಆಹಾರವನ್ನು ಸೇವಿಸಿ. ಇದರಿಂದ ಮಾನಸಿಕ ತೊಂದರೆಗಳು ದೂರವಾಗುತ್ತವೆ. ಇದರೊಂದಿಗೆ, ಆಹಾರದ ಮೂಲಕ ದೇಹದಲ್ಲಿ ಶಕ್ತಿಯು ಹರಡುತ್ತದೆ. ಅನಾರೋಗ್ಯದಿಂದ ಬಳಲುತ್ತಿರುವವರು ಮತ್ತು ವೃದ್ಧರು ಪೂರ್ವಾಭಿಮುಖವಾಗಿ ಆಹಾರವನ್ನು ಸೇವಿಸಬೇಕು ಎಂದು ಹೇಳಲಾಗುತ್ತದೆ. ಇದು ಅವರ ಹದಗೆಡುತ್ತಿರುವ ಆರೋಗ್ಯವನ್ನು ಸುಧಾರಿಸುತ್ತದೆ.



Click it and Unblock the Notifications
