Latest Updates
-
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ!
ತಾಯಿ ಪ್ರೀತಿಗೆ ಯಮನೇ ಸೋತನು, ಸತ್ತಿದ್ದ ಮಗ ಬದುಕಿ ಬಂದ
ಹಲವಾರು ಪವಾಡ ಕತೆಗಳ ಬಗ್ಗೆ ಕೇಳುತ್ತೇವೆ, ಕೆಲವರು ಆ ಪವಾಡಗಳ ಬಗ್ಗೆ ಹೇಳುವಾಗ ಹೀಗೆಲ್ಲಾ ಕೂಡ ನಡೆಯುವುದೇ ಎಂದು ಆಶ್ಚರ್ಯಚಕಿತರಾಗುತ್ತೇವೆ, ಹರಿಯಾಣದ ಒಂದು ಕುಟುಂಬದಲ್ಲಿ ಅಂಥದ್ದೊಂದು ಪವಾಡ ನಡೆದಿದೆ. ಆ ತಾಯಿಯ ಪ್ರೀತಿಗೆ ಯಮನೇ ಸೋತು ಆಕೆಯ ಮಗನನ್ನು ಹಿಂತಿರುಗಿಸಿದ್ದಾನೆ.

ತನ್ನ ಮಗನ ಪಾರ್ಥಿವ ಶರೀರದ ಮುಂದೆ ಕೂತಿರುವ ತಾಯಿಗೆ ಮಗ ಬದುಕಿ ಬರುತ್ತಾನೆ ಎಂಬ ನಂಬಿಕೆ. ಮಗನ ಮೇಲಿದ್ದ ಬಟ್ಟೆ ಸರಿಸಿ,ಮಗನ ಹಣೆಗೆ ಆಗಾಗ ಮುತ್ತಿಕ್ಕುತ್ತಾ ಮರಳಿ ಬಾ...ಮರಳಿ ಬಾ ಎಂದು ಕರೆಯುತ್ತಿದ್ದಳು. ಆದರೆ ಪವಾಡವೆಂಬಂತೆ ಹುಡುಗನ ಶರೀರದಲ್ಲಿ ಚಲನೆ ಕಂಡು ಬಂದಿದೆ, ಕೂಡಲೇ ಆತನ ಬಾಯಿಗೆ ಬಾಯಿಟ್ಟು ತಂದೆ ಉಸಿರು ನೀಡಿದ್ದಾರೆ, ಮತ್ತೊಬ್ಬರು ಹೃದಯ-ಶ್ವಾಸಕೋಶದ ಚೇತರಿಕೆಗೆ ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ, ನಂತರ ಅವನನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿದಾಗ ವೈದ್ಯರು ಈತ ಬದುಕುವ ಸಾಧ್ಯತೆ ಶೇ. 15ರಷ್ಟಿದೆ ಎಂದಿದ್ದಾರೆ. ಆದರೆ ಆ ತಾಯಿಯ ಮಡಿಲು ಬರಿದಾಗಲಿಲ್ಲ, ಹುಡುಗನಲ್ಲಿ ನಿಧಾನಕ್ಕೆ ಚೇತರಿಕೆ ಕಂಡು ಬಂದು ಸಾವನ್ನು ಗೆದ್ದು ಬಂದಿದ್ದಾನೆ.
ಹರಿಯಾಣದ ಜಜ್ಜರ್ ಜಿಲ್ಲೆಯ ಕ್ವಿಲ್ಲಾ ಪ್ರದೇಶದ ಕುನಲ್ ಶರ್ಮರ ಮೊಮ್ಮಗನಿಗೆ ಟೈಫಾಯ್ಡ್ ಬಂದಿತು. ಆತನನ್ನು ಚಿಕಿತ್ಸೆಗಾಗಿ ದೆಹಲಿಯ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ವೈದ್ಯರು ಆತನ ಸಾವಿನ ಸುದ್ದಿಯನ್ನು ತಿಳಿಸಿದರು. ಮಗನ ಪಾರ್ಥೀವ ಶರೀರ ತಗೊಂಡು ಬಹದ್ದೂರ್‌ಗಢಕ್ಕೆ ಬಂದರು. ಹುಡುಗನ ಅಜ್ಜಿಗೆ ಮೊಮ್ಮಗನ ಕೊನೆಯ ದರ್ಶನ ಮಾಡಿಸಲು ಮಾವನ ಮನೆಯಲ್ಲಿ ಪಾರ್ಥೀವ ಶರೀರ ಇಡಲು ತೀರ್ಮಾನಿಸಿ ತೆಗೆದುಕೊಂಡು ಬಂದಿದ್ದರು.
ದುಃಖದಿಂದ ಆ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು. ಹುಡುಗನ ತಾಯಿ ಮಗನ ಶವ ಶರೀರ ಹಿಡಿದು ಬಾ ಮಗನೇ.. ಬಾ ಎಂದು ಹಿಡಿದು ಅಲುಗಾಡಿಸಿದಾಗ ಆ ಶರೀರದಲ್ಲಿ ಚಲನೆ ಕಂಡು ಬಂದಿದೆ.
ಕೂಡಲೇ ಹುಡುಗನನ್ನು ಅಲ್ಲಿಂದ ಎತ್ತಿದ ಮನೆಯವರು ಆತನಿಗೆ ಪ್ರಾಥಮಿಕ ಚಿಕಿತ್ಸೆ ನೀಡಲಾರಂಭಿಸಿದರು. ಬಾಯಿಗೆ-ಬಾಯಿಟ್ಟು ಊದಿದರು, ಆತನ ಎದೆಗೆ ಮೆಲ್ಲನೆ ಗುದ್ದಿ ಹೃದಯ ಬಡಿಯುವಂತೆ ಮಾಡಿದರು, ನಂತರ ಸಮೀಪದ ಆಸ್ಪತ್ರೆಗೆ ಕೊಂಡೊಯ್ಯದ್ದರು. ಆಗಲೂ ಹುಡುಗ ಬದುಕುವ ಸಾಧ್ಯತೆ ತುಂಬಾನೆ ಕಡಿಮೆ ಇದೆ ಎಂದು ವೈದ್ಯರು ಹೇಳಿದ್ದರು. ತಾಯಿಗೆ ಮಗ ಬಂದೇ ಬರುತ್ತಾನೆ ಎಂಬ ನಂಬಿಕೆ ಇತ್ತು, ಆ ತಾಯಿಯ ನಂಬಿಕೆ ಹುಸಿಯಾಗಲಿಲ್ಲ, ಹುಡುಗ ಚೇತರಿಸಿಕೊಂಡು ಮನೆಗೆ ಹಿಂತಿರುಗಿದ್ದಾನೆ.
ಹೀಗೆ ಹುಡುಗ ಯಮನನ್ನೇ ಗೆದ್ದು ತಾಯಿ ಮಡಿಲು ಸೇರಿ ಪವಾಡಕ್ಕೆ ಕಾರಣನಾಗಿದ್ದಾನೆ.



Click it and Unblock the Notifications
