Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಯಶಸ್ವಿ ಉದ್ಯಮಿ ರತನ್ ಟಾಟಾ ಅವರ ಯಶಸ್ಸಿನ ಸೂತ್ರ ಇದೇ ನೋಡಿ...!
ಒಬ್ಬ ವ್ಯಕ್ತಿಯಾಗಿ ಹಾಗೂ ಯಶಸ್ವಿ ಉದ್ಯಮಿಯಾಗಿ ಭಾರತಕ್ಕೆ ಪ್ರಖ್ಯಾತಿ ತಂದುಕೊಟ್ಟವರು ಟಾಟಾ ಕಂಪನಿಯ ಒಡೆಯ ರತನ್ ಟಾಟಾ. ಇವರು ಲೆಕ್ಕ ಹಾಕುವ ಶಕ್ತಿಯೇ ಲಕ್ಷಾಂತರ ಜನರಿಗೆ ಸ್ಫೂರ್ತಿ. ಇವರ ವಿಶೇಷತೆ ಎಂದರೆ ಇವರು ಎಷ್ಟೇ ಎತ್ತರದಲ್ಲಿದ್ದರೂ ತಮಗಾಗಿಕೆಲಸ ಮಾಡುವ ಪ್ರತಿಯೊಂದ ಉದ್ಯೋಗಿಯ ಪರವಾಗಿ ಸದಾ ತುಡಿಯುತ್ತಿರುತ್ತರೆ. ಇವರು ದೊಡ್ಡ ಹೃದಯದ ವ್ಯಕ್ತಿ, ಉದ್ಯೋಗಿಗಳ ಬಗ್ಗೆ ಕಾಳಜಿ ವಹಿಸುವ ಕರುಣಿ ಎಂದೇ ಪ್ರಸಿದ್ಧರಾಗಿದ್ದಾರೆ ಮತ್ತು ಸಾಮಾಜಿಕ ಮಾಧ್ಯಮಗಳು ಅದಕ್ಕೆ ಸಾಕ್ಷಿಯಾಗಿದೆ.

ಖ್ಯಾತ ಉದ್ಯಮಿ ರತನ್ ಟಾಟಾ ಅವರು ತಮ್ಮ ಉದ್ಯದ ಬದುಕಿನಲ್ಲಿ ಯಶಸ್ವಿಯಾಗಲು ಕೆಲವು ಸುವರ್ಣ ನಿಯಮಗಳನ್ನು ಪಾಲಿಸಿದ್ದಾರೆ, ಈ ನಿಮಯಗಳೇ ಇವರಿಗೆ ಬದುಕಿನಲ್ಲಿ ಯಶಸ್ಸನ್ನು ತಂದುಕೊಟ್ಟಿದೆ. ಯಾವುದು ಈ ನಿಯಮಗಳು ಮುಂದೆ ನೋಡೊಣ:

ನಿಮ್ಮ ಉದ್ಯೋಗಿಗಳ ಪರವಾಗಿ ಸದಾ ಇರಿ
ಕಂಪನಿಯಲ್ಲಿ ನಿಮ್ಮ ಶ್ರೇಣಿ ಯಾವುದೇ ಇರಲಿ, ರತನ್ ಟಾಟಾ ಅವರು ತಮ್ಮ ಉದ್ಯೋಗಿಗಳಿಗೆ ಸದಾ ಲಭ್ಯರಿರುತ್ತಾರೆ. ಟಾಟಾ ಕಂಪನಿ ಭಾರತದಲ್ಲಿ ಅತ್ಯಂತ ಉದ್ಯೋಗಿ-ಸ್ನೇಹಿ ಕಂಪನಿಗಳಲ್ಲಿ ಒಂದಾಗಿದೆ. ರತನ್ ಟಾಟಾ ಅವರು ನಿಮಗಾಗಿ ಕಷ್ಟಪಟ್ಟು ಕೆಲಸ ಮಾಡುವ ಉದ್ಯೋಗಿಗೆ ನೀವು ಉತ್ತರದಾರರಾಗಿರಬೇಕು ಎಂಬ ನಂಬಿಕೆಯ ಬಲವಾದ ಬೆಂಬಲಿಗರಾಗಿದ್ದಾರೆ. ಉದ್ಯಮಿಯಾಗಿ ನಿಮ್ಮ ಷೇರುದಾರರನ್ನು ನೀವು ಎದುರಿಸಬೇಕಾಗುತ್ತದೆ, ಕೇವಲ ಲಾಭದ ಬಗ್ಗೆ ಯೋಚಿಸದೇ ನಿಮಗಾಗಿ ಕೆಲಸ ಮಾಡುವವರ ಬಗ್ಗೆಯೂ ಕಾಳಜಿವಹಿಸಬೇಕು.

ವಜಾಗೊಳಿಸುವುದು ಎಂದಿಗೂ ಪರಿಹಾರವಲ್ಲ
ಕೊರೊನಾದಿಂದಾಗಿ ಲಾಕ್‌ಡೌನ್ ಘೋಷಣೆಯಾಗಿ ಈ ಸಾಂಕ್ರಾಮಿಕವು ಪ್ರತಿಯೊಬ್ಬರ ವೃತ್ತಿಜೀವನವನ್ನು ಬುಡಮೇಲು ಮಾಡಿತು ಮತ್ತು ಲಕ್ಷಾಂತರ ಜನರು ನಿರುದ್ಯೋಗಿಗಳಾದರು. ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸದಂತೆ ಪ್ರಧಾನಿಗಳು ಸಹ ವಿನಂತಿಸಿದರು ಆದರೆ, ಆದರೆ ಹೆಚ್ಚಿನ ಕಂಪನಿಗಳು ನಷ್ಟದಲ್ಲಿದ್ದ ಕಾರಣ ಅದನ್ನು ಮಾಡಬೇಕಾಯಿತು. ಆದಾಗ್ಯೂ, ನಿಮ್ಮ ಪರವಾಗಿ ಕೆಲಸ ಮಾಡುವವರಿಗೆ ನಿಷ್ಠೆಯನ್ನು ತೋರಿಸುವುದು ಬಹಳ ಮುಖ್ಯ ಎಂಬುದು ರತನ್ ಟಾಟಾ ನಂಬಿಕೆ.

ನಂಬಿಕೆ ಗಳಿಸಿ
ಜನರು ನಿಮ್ಮನ್ನು ಹೇಗೆ ನೋಡುತ್ತಾರೆ, ನಿಮ್ಮ ವ್ಯಾಪಾರವನ್ನು ನೀವು ಹೇಗೆ ನಿರ್ವಹಿಸುತ್ತೀರಿ ಎಂಬುದಕ್ಕೆ ನಂಬಿಕೆಯು ಆಧಾರವಾಗಿದೆ ಎಂದು ಟಾಟಾ ನಂಬುತ್ತಾರೆ. ನಂಬಿಕೆಯು ನಿಮ್ಮ ಒಪ್ಪಂದದ ಕಟ್ಟುಪಾಡುಗಳಿಂದ ನೀವು ಬದುಕುವ ಆಧಾರವಾಗಿದೆ ಮತ್ತು ನಂಬಿಕೆಯೇ ಹೆಚ್ಚು ಮುಖ್ಯವಾದುದು ಎಂದು ಇವರು ಭಾವಿಸುತ್ತಾರೆ.

ಏಕತೆ ಹಾಗೂ ಒಗ್ಗಟ್ಟು
ಈ ಕಷ್ಟದ ಸಮಯದಲ್ಲಿ ನಿಮ್ಮ ಉದ್ಯೋಗಿಗಳು ಹೆಚ್ಚುವರಿಯಾಗಿ ಕೆಲಸ ಮಾಡಬೇಕು ಎಂದು ನೀವು ನಂಬಿದರೆ ನಿಮ್ಮ ಅಪೇಕ್ಷೆ ಮತ್ತು ಬೆಂಬಲವು ಸ್ವಾಭಾವಿಕವಾಗಿ ಬರಬೇಕು. ಕಷ್ಟದ ಸಮಯದಲ್ಲಿ ಹೋರಾಡಲು ಸಂಸ್ಥೆಗಳು ತಮ್ಮ ಉದ್ಯೋಗಿಗಳೊಂದಿಗೆ ಒಟ್ಟಾಗಿ ನಿಲ್ಲಬೇಕು. ಕೆಲಸದ ಒತ್ತಡವನ್ನು ಹಂಚಿಕೊಳ್ಳಿ, ಸಮಸ್ಯೆಗಳನ್ನು ಒಟ್ಟಾಗಿ ಪರಿಹರಿಸಿ, ಅವರಿಗೆ ವಿರಾಮಗಳನ್ನು ನೀಡಿ, ಸಾಧ್ಯವಿರುವ ರೀತಿಯಲ್ಲಿ ಬೆಂಬಲಿಸುವುದು ಬಹಳ ಮುಖ್ಯ. ಕಂಪನಿಯಲ್ಲಿ ಉದ್ಯೋಗಿಗಳು ಮುಖ್ಯವೆಂದು ನೀವು ಪರಿಗಣಿಸಿದರೆ ಕಂಪನಿಗೆ ಖಂಡಿತ ಯಶಸ್ಸು ಸಿಗುತ್ತದೆ.

ಪರಾನುಭೂತಿ ಇರಲಿ
ನಿಮ್ಮ ಉದ್ಯೋಗಿಗಳು ಮತ್ತು ಸಹೋದ್ಯೋಗಿಗಳೊಂದಿಗೆ ಸಹಾನುಭೂತಿಯ ಸಂಬಂಧವನ್ನು ಹೊಂದಿರುವುದು ನಿರ್ಣಾಯಕವಾಗಿದೆ. ಉದ್ಯೋಗಿ ಸಂತೋಷವಾಗಿದ್ದರೆ, ಫಲಿತಾಂಶಗಳು ಉತ್ತಮವಾಗಿರುತ್ತವೆ, ಉತ್ಪಾದಕತೆಯ ಮಟ್ಟವು ಹೆಚ್ಚಾಗುತ್ತದೆ ಮತ್ತು ಲಾಭವೂ ಹೆಚ್ಚಾಗುತ್ತದೆ. ಕಠಿಣ, ಅತಿಯಾದ ಒತ್ತಡ ಹೇರುವ ಮೇಲಧಿಕಾರಿಗಳು ಮತ್ತು ಅನಾರೋಗ್ಯಕರ ಕೆಲಸದ ವಾತಾವರಣದಿಂದ ಜನರು ತಮ್ಮ ಕೆಲಸವನ್ನು ಹೆಚ್ಚಾಗಿ ತ್ಯಜಿಸುತ್ತಾರೆ ನೆನಪಿರಲಿ.

ನಿಮ್ಮನ್ನು ನೀವು ನವೀಕರಿಸಿ ಮತ್ತು ಪ್ರಸ್ತುತವಾಗಿರಿಸಿಕೊಳ್ಳಿ
ಯುವ ಪೀಳಿಗೆಯೊಂದಿಗೆ ಸಿಂಕ್ ಆಗಿರುವುದು ಮತ್ತು ಕಾಲಕ್ಕೆ ಅನುಗುಣವಾಗಿ ಅಪ್‌ಡೇಟ್ ಆಗುವುದು ಬಹಳ ಮುಖ್ಯ. ಅದು ಸಂಸ್ಥೆಯಾಗಲಿ ಅಥವಾ ವ್ಯಕ್ತಿಯಾಗಲಿ ನಿಮ್ಮನ್ನು ಪ್ರಸ್ತುತವಾಗಿರಿಸಿಕೊಳ್ಳಿ. ಯುವಕರು ಹೊರಹಾಕುವ ಶಕ್ತಿಯನ್ನು ಟ್ಯಾಪ್ ಮಾಡುವುದರಿಂದ ನೀವು ಸಹ ಬೆಳೆಯಲು ಸಹಾಯ ಮಾಡುತ್ತದೆ.
"ನಾನು ಯಾವಾಗಲೂ ದೇಶದ ಉತ್ಸಾಹಿ ಯುವಕರ ಸಹವಾಸವನ್ನು ಆನಂದಿಸಿದ್ದೇನೆ. ಅವರ ಶಕ್ತಿಯು ನಿಜವಾಗಿಯೂ ಬಲಿಷ್ಠವಾಗಿದೆ ಆದರೆ ಯುವಕರು ನನಗೆ ವಯಸ್ಸಾಗಿಲ್ಲ ಎಂದು ಭಾವಿಸುತ್ತಾರೆ,"ಎಂದು ಟಾಟಾ ಹಂಚಿಕೊಂಡಿದ್ದರು.



Click it and Unblock the Notifications











