Latest Updates
-
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ!
ರಕ್ಷಾಬಂಧನ 2021: ನಿಮ್ಮ ಸಹೋದರನಿಗೆ ಇಷ್ಟವಾಗುವಂತಹ ರಾಖಿಗಳು ಇಲ್ಲಿವೆ
ನಮ್ಮ ಪ್ರೀತಿಯ ಒಡಹುಟ್ಟಿದವರಿಗಾಗಿ ಪ್ರೀತಿ, ಗೌರವ ಮತ್ತು ಕೃತಜ್ಞತೆಯನ್ನು ವ್ಯಕ್ತಪಡಿಸುವ ದಿನವೇ ರಕ್ಷಾಬಂಧನ. ಈ ವರ್ಷ ಆಗಸ್ಟ್ 22ರಂದು ನಡೆಯಲಿರುವ ಈ ಆಚರಣೆಗಾಗಿ ಸಹೋದರ-ಸಹೋದಿರಯರು ಭರದಿಂದಲೇ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ತನ್ನ ನೆಚ್ಚಿನ ಸಹೋದರನಿಗೆ ಯಾವ ರೀತಿಯ ರಾಖಿ ಕಟ್ಟಬೇಕು ಎಂದು ಯೋಚಿಸುತ್ತಿರುವ ಎಲ್ಲಾ ಸಹೋದರಿಯರಿಗಾಗಿ ಈ ಲೇಖನ. ಇಲ್ಲಿ ನಾವು ನಿಮ್ಮ ಸಹೋದರನಿಗೆ ಇಷ್ಟವಾಗುವ ರಾಖಿಗಳ ಬಗ್ಗೆ ವಿವರಣೆ ನೀಡಿದ್ದೇವೆ.
ನಿಮ್ಮ ಸಹೋದರ ಖಂಡಿತವಾಗಿಯೂ ಇಷ್ಟಪಡುವ ರಾಖಿಗಳು ಇಲ್ಲಿವೆ:

ರುದ್ರಾಕ್ಷಿ ರಾಖಿ:
ರುದ್ರಾಕ್ಷ ರಾಖಿಯು ಅತ್ಯಂತ ಮಂಗಳಕರ ವಿಧವಾಗಿದ್ದು, ಪವಿತ್ರವೂ ಹೌದು. ಇದನ್ನು ಧರಿಸಿದ ವ್ಯಕ್ತಿಗೆ ಸಮೃದ್ಧಿ ಮತ್ತು ಉತ್ತಮ ಆರೋಗ್ಯ ಪ್ರಾಪ್ತವಾಗುವುದು ಎಂದು ಹೇಳಲಾಗುತ್ತದೆ. ಆದ್ದರಿಂದ, ಇದು ನಿಮ್ಮ ಸಹೋದರನಿಗೆ ಪರಿಪೂರ್ಣ ರಾಖಿಯಾಗಬಹುದು.

ಚಿನ್ನದ ರಾಖಿ:
ಹೊಳೆಯುವ ಚಿನ್ನವನ್ನು ಅಲಂಕರಿಸಲು ಇಷ್ಟಪಡುವವರಿಗೆ ಇದು ಹೇಳಿಮಾಡಿಸಿದ್ದು. ಅತ್ಯಂತ ಮನಮೋಹಕ ರಾಖಿಗಳಲ್ಲಿ ಒಂದಾದ ಈ ರಾಖಿ ಅದರ ಸೌಂದರ್ಯ ಮತ್ತು ಆಕರ್ಷಣೆಯಿಂದ ಜನರನ್ನು ಬೆರಗುಗೊಳಿಸುತ್ತದೆ. ನಿಮ್ಮ ಸಹೋದರನಿಗೆ ಹೊಳೆಯುವ ಮತ್ತು ಚಿನ್ನದ ವಸ್ತುಗಳ ಮೇಲೆ ಪ್ರೀತಿ ಇದ್ದರೆ ಇದು ಅವನಿಗೆ ಸೂಕ್ತವಾದ ರಾಖಿ.

ಇವಿಲ್ ಐ ರಾಖಿ:
ನಿಮ್ಮ ಸಹೋದರನನ್ನು ಯಾವುದೇ ಕೆಟ್ಟ ದೃಷ್ಟಿ ಬೀಳದಂತೆ ರಕ್ಷಿಸಲು ಆತನಿಗೆ ಇವಿಲ್ ಐ ರಾಖಿ ಕಟ್ಟಿ. ಇದು ದುಷ್ಟ ಕಣ್ಣುಗಳಿಂದ ನಿಮ್ಮ ಸಹೋದರನನ್ನು ಕಾಪಾಡಲು ಸಹಾಯ ಮಾಡುತ್ತದೆ.

ಕಾರ್ಟೂನ್ ರಾಖಿ :
ಕಾರ್ಟೂನ್ ರಾಖಿಯನ್ನು ವಿಶೇಷವಾಗಿ ಮಕ್ಕಳಿಗಾಗಿ ವಿನ್ಯಾಸಗೊಳಿಸಲಾಗಿದೆ. ವ್ಯಂಗ್ಯಚಿತ್ರಗಳನ್ನು ಪ್ರೀತಿಸುವ ಸಹೋದರನಿಗೆ ಇದು ಸೂಕ್ತವಾಗಿದೆ. ಇದು ಸಾಮಾನ್ಯವಾಗಿ ಜನಪ್ರಿಯ ಕಾರ್ಟೂನ್ ಪಾತ್ರವನ್ನು ಒಳಗೊಂಡಿದ್ದು, ನಿಮ್ಮ ಕಿರಿಯ ಸಹೋದರನಿಗೆ ಇಷ್ಟವಾಗುತ್ತದೆ.

ಸ್ವಸ್ತಿಕ್ ರಾಖಿ:
ಆಧ್ಯಾತ್ಮಿಕ ಸಂಪರ್ಕ ಹೊಂದಿರುವ ಸಹೋದರನಿಗೆ ಸ್ವಸ್ತಿಕ್ ರಾಖಿ ಉತ್ತಮವಾಗಿರುತ್ತದೆ. ಪುರಾತನ ಧಾರ್ಮಿಕ ಸಂಕೇತವಾದ ಸ್ವಸ್ತಿಕವನ್ನು ಹೊಂದಿರುವ ರಾಖಿಯು ನಿಮ್ಮ ಸಹೋದರನಿಗೆ ಆಶೀರ್ವಾದವನ್ನು ನೀಡುವುದು.

ಕುಂದನ್ ರಾಖಿ :
ಸಾಂಪ್ರದಾಯಿಕ ಆಭರಣ ವಿನ್ಯಾಸದಿಂದ ಸ್ಫೂರ್ತಿ ಪಡೆದ ಕುಂದನ್ ರಾಖಿಯು ಮುತ್ತು, ಹವಳಗಳಿಂದ ತುಂಬಿಕೊಂಡು, ಮನಮೋಹಕವಾಗಿರುತ್ತದೆ. ಇದು ಕೈಗಳಿಗೆ ಶ್ರೀಮಂತ ಲುಕ್ ನೀಡುವುದಲ್ಲದೇ, ಸಾಂಪ್ರದಾಯಿಕ ಕಳೆಯನ್ನೂ ಕೊಡುತ್ತದೆ. ಆದ್ದರಿಂದ ಇದು ನಿಮ್ಮ ಸಹೋದರನಿಗೆ ಪರ್ಫೆಕ್ಟ್ ರಾಖಿ.

ಹವಳಗಳ ರಾಖಿ:
ಕೇವಲ ಬಣ್ಣಬಣ್ಣದ ಹವಳಗಳನ್ನು ಜೋಡಿಸಿ, ತಯಾರಿಸಿದ ರಾಖಿಯು ನಿಮ್ಮ ಸಿಂಪಲ್ ಸಹೋದರನಿಗೆ ಉತ್ತಮವಾಗಿರುತ್ತದೆ. ನಿಮ್ಮ ಸಹೋದರನಿಗೆ ಆಡಂಬರ ಇಷ್ಟವಿಲ್ಲದಿದ್ದರೆ, ಈ ಸರಳ ರಾಖಿ ಒಳ್ಳೆಯ ಆಯ್ಕೆಯಾಗಿರುತ್ತದೆ. ವಿಧವಿಧವಾದ ಹವಳಗಳಿಂದ ತಯಾರಿಸಲಾಗಿದ್ದು, ನಿಮ್ಮ ಸಹೋದರನಿಗೆ ಇಷ್ಟವಾದ ಬಣ್ಣ ಆಯ್ಕೆಮಾಡಿ.



Click it and Unblock the Notifications
