Latest Updates
-
ಬೇಸಿಗೆಯಲ್ಲಿ ಈ ಗಂಜಿ ಕುಡಿಯಿರಿ.. ಕೊಬ್ಬು ಕಡಿಮೆ, ದೇಹಕ್ಕೂ ತಂಪು! ಈ ಗಂಜಿಯ ಆರೋಗ್ಯ ರಹಸ್ಯ ಇಲ್ಲಿದೆ -
30 ವರ್ಷಗಳ ಬಳಿಕ ಸೂರ್ಯ-ಶನಿ ಸಂಯೋಗ! ಯಾರಿಗೆ ಶುಭ? ಯಾರಿಗೆ ಸಮಸ್ಯೆ? 12 ರಾಶಿಗಳ ಜಾತಕ ತಿಳಿಯಿರಿ -
ಈ 5 ವಿಷಯಗಳಲ್ಲಿ ಮಿತಿ ಮೀರಿದ್ರೆ ಜೀವನ ಸರ್ವನಾಶ! ಅಹಂಕಾರ ಬಿಡಿ.. ಇಂದೇ ಇವುಗಳಿಂದ ದೂರವಿರಿ -
ಪಕ್ಕಾ ಹೈದರಾಬಾದಿ ರುಚಿ.. ಅತಿಥಿಗಳು ಬಂದ್ರೆ ಈ ಚಿಕನ್ ಯಖನಿ ಪುಲಾವ್ ಮಾಡಿ! ಸಿಂಪಲ್ & ಸೂಪರ್ ರುಚಿ -
2026ರ ಸೂರ್ಯ ಗೋಚಾರ: ಇವರಿಗೆ ಸಿಗಲಿದೆ ಸರ್ಕಾರಿ ಉದ್ಯೋಗ! ಯಾರಿಗೆ ಮಾನಸಿಕ ಒತ್ತಡ? 12 ರಾಶಿಯವರಿಗೆ ರಾಶಿಫಲ ಇಲ್ಲಿದೆ -
ಹೋಟೆಲ್ ಶೈಲಿಯ ಆಲೂ ಮಸಾಲಾ ಪೂರಿ! ಈ ರೀತಿ ಮನೆಯಲ್ಲೇ ಮಾಡಿ, ಪರ್ಫೆಕ್ಟ್ ಆಗಿ ಉಬ್ಬಿ ಬರುತ್ತೆ -
ಇವರ ಜೀವನದಲ್ಲಿ ಹೊಸ ಕಿಡಿ ಹೊತ್ತಿಕೊಳ್ಳಲಿದೆ! ಹಠಮಾರಿ ಸ್ವಭಾವವನ್ನು ಬಿಡಿ -
March 12 Horoscope: ಹಣಕಾಸಿನ ಸವಾಲುಗಳು ದೊಡ್ಡದಾಗುವ ಸಂಭವ -
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ? -
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್
Muharram 2021 : ಮೊಹರಂ ತ್ಯಾಗ-ಬಲಿದಾನ ನೆನೆಯುವ ಭಾವೈಕ್ಯತೆಯ ಹಬ್ಬ ಯಾವಾಗ? ಅದರ ಇತಿಹಾಸವೇನು?
ಹಿಂದೂ-ಮುಸ್ಲಿಂರ ಭಾವೈಕ್ಯತೆ ಸಾರುವ ಹಬ್ಬಗಳಲ್ಲಿ ಮೊಹರಂ ಪ್ರಮುಖವಾದುದ್ದು. ಯಾವುದೇ ತಾರತಮ್ಯವಿಲ್ಲದೇ, ಸರ್ವಧರ್ಮೀಯರು ಪಾಲ್ಗೊಳ್ಳುವ ಈ ಹಬ್ಬದ ತಿಂಗಳು ಮುಸ್ಲಿಂ ಭಾಂಧವರಿಗೆ ಹೊಸ ವರ್ಷದ ಆರಂಭದ ಸಂಕೇತ. ರಂಜಾನ್ ನಂತೆ ಈ ತಿಂಗಳು ಕೂಡಾ ಪವಿತ್ರ ತಿಂಗಳಾಗಿದ್ದು, ಹತ್ತು ದಿನಗಳವರೆಗೆ ಮೊಹರಂ ಆಚರಣೆ ನಡೆಯುತ್ತದೆ. ಈ ವರ್ಷ ಮೊಹರಂ ಆಚರಣೆ ಯಾವಾಗ? ಅದರ ಹಿನ್ನಲೆ ಹಾಗೂ ಆಚರಣೆಗಳೇನು ಎಂಬುದನ್ನು ನೋಡಿಕೊಂಡು ಬರೋಣ.
ಮೊಹರಂ ಆಚರಣೆ ಯಾವಾಗ? ಅದರ ಹಿನ್ನಲೆ ಹಾಗೂ ಆಚರಣೆಗಳೇನು ಎಂಬುದನ್ನು ಈ ಕೆಳಗೆ ನೀಡಲಾಗಿದೆ:

2021ರ ಮೊಹರಂ ದಿನಾಂಕ:
ಇಸ್ಲಾಮಿಕ್ ನ ಇತರ ಹಬ್ಬಗಳಂತೆ ಮೊಹರಂ ಕೂಡಾ, ಚಂದ್ರನ ನೋಟವನ್ನು ಅವಲಂಬಿಸಿದೆ. ಆ ಪ್ರಕಾರ, ಈ ವರ್ಷ, ಮೊಹರಂ ಆಗಸ್ಟ್ 10 ರಿಂದ ಆರಂಭವಾಗಿದ್ದು, ಆಗಸ್ಟ್ 20ರಂದು ಮುಗಿಯಲಿದೆ. ಇದು ಕೇವಲ ಹಬ್ಬದ ಆಚರಣೆ ಅಥವಾ ಸಂತೋಷಕ್ಕೆ ಸೀಮಿತವಾಗಿಲ್ಲ, ತಮ್ಮ ಹಿರಿಯೆ ಹೋರಾಟ, ತ್ಯಾಗಗಳನ್ನು ನೆನೆಯುವ ಸಂದರ್ಭವಾಗಿದೆ.

ಮೊಹರಂ ನ ಇತಿಹಾಸವೇನು?:
ಇಸ್ಲಾಂನ ಪಂಗಡಗಳಾದ ಶಿಯಾ ಹಾಗೂ ಸುನ್ನಿ ಭಾಂದವರ ಪ್ರಕಾರ, ಮೊಹರಂನ ಇತಿಹಾಸ ಭಿನ್ನವಾಗಿದೆ. ಒಂದು ನಂಬಿಕೆಯ ಪ್ರಕಾರ, ಕ್ರಿಸ್ತ ಶಕ 622 ರಲ್ಲಿ, ಧಾರ್ಮಿಕ ಪ್ರಾಸಿಕ್ಯೂಷನ್ ನಿಂದ ತನ್ನನ್ನು ರಕ್ಷಿಸಿಕೊಳ್ಳಲು ಪ್ರವಾದಿ ಮುಹಮ್ಮದ್ ಮೆಕ್ಕಾದಿಂದ ಮದೀನಾಕ್ಕೆ ಬಲವಂತವಾಗಿ ವಲಸೆಯ ಆರಂಭವನ್ನು ಮೊಹರಂ ಸೂಚಿಸುತ್ತದೆ. ಕ್ರಿ.ಶ 629ರಲ್ಲಿ ಮೆಕ್ಕಾವನ್ನು ವಶಪಡಿಸಿಕೊಂಡ ನಂತರ ಪ್ರವಾದಿ ನಗರಕ್ಕೆ ಮರಳಿದರೆಂದು ನಂಬಲಾಗಿದೆ. ಇಂದಿಗೆ, ಆ ಘಟನೆ ನಡೆದು 1,443 ವರ್ಷಗಳು ತುಂಬಿವೆ.
ಇನ್ನೊಂದು ನಂಬಿಕೆ ಪ್ರಕಾರ, ಇಸ್ಲಾಂ ಸಂಸ್ಥಾಪಕರಾದ ಮಹಮ್ಮದ್ ಪೈಗಂಬರ್ ಕೊನೆಯ ಪುತ್ರಿ ಫಾತಿಮಾ ಬೇಬಿ ಪತಿ ಹಜರತ್ ಆಲಿ ನಾಲ್ಕನೇ ಖಲೀಫರಾಗಿದ್ದರು. ಆಗ ದಮಾಸ್ಕಸ್‌ನಲ್ಲಿ ಮುಅವಿಯ ಎಂಬ ಸರ್ದಾರನು ತಾನೇ ಖಲೀಫನೆಂದು ಸಾರಿಕೊಂಡು ಜನರ ಮೇಲೆ ಧರ್ಮ ಪ್ರಭುತ್ವ ಹೇರಿದನು. ಹಜರತ್ ಅಲಿ ಬಳಿಕ ಅವರ ಮಗ ಪೈಗಂಬರರ ಎರಡನೇ ಮೊಮ್ಮಗ ಇಮಾಮ್ ಹುಸೇನ್ ಖಲೀಫ್ ಪಟ್ಟ ಅಲಂಕರಿಸಬೇಕಾಗಿತ್ತು. ಆದರೆ ಮುಅವಿಯಾನ್ ಮಗ ಯಜೀದನು ತಾನೇ ಖಲೀಫನೆಂದು ಘೋಷಿಸಿಕೊಂಡನು. ಈ ಅನ್ಯಾಯವನ್ನು ಇಮಾನ್ ಹುಸೇನರು ಪ್ರತಿಭಟಿಸಿದರು. ಸತ್ಯ ನ್ಯಾಯವನ್ನು ಕಾಪಾಡಲು ಇಮಾಮ್ ಹುಸೇನರು 72 ಅನುಯಾಯಿಗಳೊಡನೆ ಯುದ್ಧ ಸಾರಿದರು. ಮೊಹರಂ ತಿಂಗಳ ಹತ್ತನೇ ದಿನ ಕರುಬಲಾ ಎಂಬ ಮರುಭೂಮಿಯಲ್ಲಿ ನಡೆದ ತುಮುಲ ಯುದ್ಧದಲ್ಲಿ ಇಮಾಮ್ ಹುಸೇನ್ ಹುತಾತ್ಮರಾದರು. ಶಾಂತಿ ಮತ್ತು ಧರ್ಮಕ್ಕಾಗಿ ತಮ್ಮನ್ನೆ ಸಮರ್ಪಿಸಿಕೊಂಡು ಹಜರತ್ ಹಸನ್ ಮತ್ತು ಹುಸೇನರ ಪುಣ್ಯ ಸ್ಮರಣೆಯ ನಿಮಿತ್ತ ಹತ್ತು ದಿನಗಳ ಶೋಕಾಚರಣೆ ಮಾಡುತ್ತಿದ್ದು, 10 ನೇ ದಿನವನ್ನು ಅಶುರಾ(Ashura) ಎಂದು ಕರೆಯಲಾಗುತ್ತದೆ.

ಮೊಹರಂ ಮಹತ್ವ:
ಜನರು ಆನಂದಿಸುವ ಮತ್ತು ಆಚರಿಸುವ ಇತರ ಹಬ್ಬಗಳಿಗಿಂತ ಭಿನ್ನವಾಗಿ, ಈ ಇಸ್ಲಾಮಿಕ್ ಹಬ್ಬವು ಮುಖ್ಯವಾಗಿ ಪ್ರಾರ್ಥನೆ ಮತ್ತು ತ್ಯಾಗಗಳನ್ನು ನೆನಪಿಸಿಕೊಳ್ಳುವುದಕ್ಕಾಗಿ ಆಗಿದೆ. ತಮ್ಮ ಹಿರಿಯರ ತ್ಯಾಗ-ಹೋರಾಟಗಳನ್ನು ನೆನೆಯುವ ಉದ್ದೇಶದಿಂದ ಈ ಹಬ್ಬವನ್ನು ಆಚರಣೆ ಮಾಡಲಾಗುತ್ತದೆ. ಈ ಆಚರಣೆಯಲ್ಲಿ ಹಿಂದೂಗಳು ಭಾಗವಹಿಸುವುದು, ಭಾವೈಕ್ಯತೆಗೆ ಹಿಡಿದ ಕನ್ನಡಿಯಾಗಿದೆ.

ಮೊಹರಂ ಆಚರಣೆ ಹೇಗೆ?:
ಹತ್ತು ದಿನಗಳವರೆಗೆ ನಡೆಯುವ ಈ ಹಬ್ಬದ ಆಚರಣೆಯು ಹಿಂದೂ ಮುಸ್ಲಿಂ ಬೇಧವಿಲ್ಲದೆ ಎಲ್ಲರೂ ಭಾಗವಹಿಸುತ್ತಾರೆ. ಸುನ್ನಿ ಮತ್ತು ಶಿಯಾ ಮುಸ್ಲಿಮರು ಮೊಹರಂ ಅನ್ನು ವಿಭಿನ್ನವಾಗಿ ಆಚರಿಸುತ್ತಾರೆ. ಅನೇಕ ಸುನ್ನಿ ಮುಸ್ಲಿಮರಿಗೆ, ಈ ತಿಂಗಳು ಇಸ್ಲಾಮಿಕ್ನ ಹೊಸ ವರ್ಷದ ಆರಂಭವಾಗಿವುದರ ಜೊತೆಗೆ ಶಾಂತಿಯ ಪ್ರತಿಬಿಂಬವಾಗಿದೆ. ಆದ್ರೆ ಶಿಯಾ ಮುಸ್ಲಿಮರಿಗೆ, ಈ ತಿಂಗಳು ಇಸ್ಲಾಮಿಕ್ ಇತಿಹಾಸದಲ್ಲಿ ದುಃಖದ, ಪಶ್ಚಾತಾಪದ ದಿನವಾಗಿದೆ. ಈ ಹಬ್ಬದಲ್ಲಿ ಹೆಜ್ಜೆ ಕುಣಿತ, ಮುಳ್ತಾ ಹೆಜ್ಜೆ ಕುಣಿತ, ಮಟಕಿ ಹೆಜ್ಜೆ ಕುಣಿತ, ಮರಗಾಲು ಕುಣಿತ ಮುಂತಾದ ಪ್ರಕಾರದಲ್ಲಿ ಕುಣಿಯುತ್ತಾರೆ. ಹಳ್ಳಿಗಳಲ್ಲಿ ಈ ಕುಣಿತಕ್ಕೆ ಅಲಾಯಿ ಹೆಜ್ಜೆ ಕುಣಿತ ಎಂದು ಕರೆಯಲಾಗುತ್ತದೆ.

ನಿಮಗಿದು ಗೊತ್ತಾ?:
ಇಸ್ಲಾಮಿಕ್ ಅಥವಾ ಹಿಜ್ರಿ ಕ್ಯಾಲೆಂಡರ್ ಪ್ರಕಾರ, ಈ ಕ್ಯಾಲೆಂಡರ್ 12 ತಿಂಗಳುಗಳು ಮತ್ತು 354 - 355 ದಿನಗಳನ್ನು ಒಳಗೊಂಡಿದೆ. ಈ ಕ್ಯಾಲೆಂಡರ್ ಗ್ರೆಗೋರಿಯನ್ ಕ್ಯಾಲೆಂಡರ್‌ಗಿಂತ 11 ದಿನ ಕಡಿಮೆ. ಈ ಕ್ಯಾಲೆಂಡರ್‌ನ ಆರಂಭವನ್ನು ಮೊಹರಂ ಎಂದು, ದುಲ್ ಅಹ್-ಹಿಜ್ಜಾವನ್ನು ವರ್ಷದ ಅಂತ್ಯವೆಂದು ಕರೆಯಲಾಗುತ್ತದೆ.



Click it and Unblock the Notifications











