Latest Updates
-
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ!
ಮಹಾನವಮಿ 2021: ದಿನಾಂಕ, ಪೂಜಾವಿಧಿ ಹಾಗೂ ಮಹತ್ವ
ಮಹಾ ನವಮಿ, ನವರಾತ್ರಿಯ ಸಂದರ್ಭದಲ್ಲಿ ವಿಜಯ ದಶಮಿಯ ಹಿಂದಿನ ದಿನ ಅತ್ಯಂತ ಸಂಭ್ರಮದಿಂದ ಆಚರಿಸುವ ಆಚರಣೆಗಳಲ್ಲಿ ಒಂದಾಗಿದೆ. ಈ ವರ್ಷ ಮಂಗಳಕರ ದಿನವು ಅಕ್ಟೋಬರ್ 14, ಗುರುವಾರದಂದು ಬರುತ್ತಿದೆ ಈ ದಿನವನ್ನು ದೇಶದಾದ್ಯಂತ ಬಹಳ ಉತ್ಸಾಹ ಮತ್ತು ಸಂತೋಷದಿಂದ ಆಚರಿಸಲಾಗುತ್ತದೆ.

ಮಹಾನವಮಿಯ ಶುಭ ಮುಹೂರ್ತ:
ನವಮಿಯ ತಿಥಿ ಆರಂಭ: ಅಕ್ಟೋಬರ್ 13, 2021 ರಂದು ರಾತ್ರಿ 8.07 ಕ್ಕೆ
ನವಮಿಯ ತಿಥಿ ಅಂತ್ಯ: 2021 ರ ಅಕ್ಟೋಬರ್ 14 ರಂದು ಸಂಜೆ 6.52 ಕ್ಕೆ

ಮಹಾನವಮಿಯ ಪೂಜಾ ವಿಧಿ:
- ಮಹಾ ನವಮಿ ಪೂಜೆಯು ಇತರ ದಿನಗಳಂತೆ ಪವಿತ್ರ ವಿಧಿವಿಧಾನಗಳನ್ನು ಹೊಂದಿದೆ. ಇದು ಸ್ನಾನ ಮತ್ತು ಷೋಡಶೋಪಚಾರ ಪೂಜೆಯಿಂದ ಆರಂಭವಾಗುತ್ತದೆ.
- ಈ ದಿನ ದೇವಿಗೆ ಗುಲಾಬಿ ಹೂವುಗಳನ್ನು ಅರ್ಪಿಸುತ್ತಾರೆ ಜೊತೆಗೆ ಭಕ್ತರು ಗುಲಾಬಿ ಬಣ್ಣದ ಬಟ್ಟೆಗಳನ್ನು ಧರಿಸುತ್ತಾರೆ ಏಕೆಂದರೆ ಗುಲಾಬಿ ಬಣ್ಣವು ಮಹಾನವಮಿ ದಿನದ ಸಂಕೇತವಾಗಿದೆ.
- ಕನ್ಯಾ ಪೂಜೆ ಅಥವಾ ಕುಮಾರಿ ಪೂಜೆಯು ಮಹತ್ತರವಾದ ಪ್ರಾಮುಖ್ಯತೆಯನ್ನು ಹೊಂದಿದೆ. 8-9 ವರ್ಷ ವಯಸ್ಸಿನ ಒಂಬತ್ತು ಯುವತಿಯರನ್ನು ಮನೆಗೆ ಆಹ್ವಾನಿಸಿ, ಅವರ ಪಾದಗಳನ್ನು ತೊಳೆದು, ಅವರಿಗೆ ಪೂಜೆ ಮಾಡಿ ಉಡುಗೊರೆ ನೀಡುತ್ತಾರೆ. ಈ ಒಂಬತ್ತು ಹುಡುಗಿಯರು ದುರ್ಗೆಯ 9 ರೂಪಗಳನ್ನು ಸಂಕೇತಿಸುತ್ತಾರೆ.
- ನವಮಿ ಪೂಜೆಯ ಕೊನೆಯಲ್ಲಿ ನವಮಿ ಹೋಮವನ್ನು ಬಹಳ ಭಕ್ತಿಯಿಂದ ನಡೆಸಲಾಗುತ್ತದೆ.

ಮಹಾ ನವಮಿಯ ಮಹತ್ವ:
ಈ ಅಶ್ವಿನಿ ನವರಾತ್ರಿಯ ಸಮಯದಲ್ಲಿ ಶಾರದಿಯಾ ನವರಾತ್ರಿಯಂದು ದುರ್ಗೆಯ ಒಂಬತ್ತು ಅವತಾರಗಳನ್ನು ಧಾರ್ಮಿಕ ಶ್ರದ್ಧೆಯಿಂದ ಪೂಜಿಸಲಾಗುತ್ತದೆ. ಅದರಲ್ಲಿ ಒಂದು ರೂಪವಾದ ದೇವಿ ಸಿದ್ದಿಧಾತ್ರಿಯ ಪೂಜೆಗೆ ಮಹಾ ನವಮಿ ದಿನವನ್ನು ಮೀಸಲಿಡಲಾಗಿದೆ. ಆಕೆಯನ್ನು ಮಹಿಷಾಸುರಮರ್ದಿನಿ ಎಂದು ಪೂಜಿಸಲಾಗುತ್ತದೆ.
ದೇವಿಯ ಈ ಅವತಾರವು ವಿಪರೀತ ಶಕ್ತಿಯನ್ನು ಹೊಂದಿದ್ದು, ಜೀವನದ ಮೂಲವನ್ನು ಪ್ರತಿನಿಧಿಸುತ್ತದೆ. ಜೊತೆಗೆ ಇದು ಅತ್ಯಂತ ಶಕ್ತಿಶಾಲಿ ರೂಪವೆಂದು ಹೇಳಲಾಗುತ್ತದೆ. ಮಹಾ ನವಮಿಯ ಪೂಜೆಯು ಹೆಚ್ಚಿನ ಮಹತ್ವವನ್ನು ಹೊಂದಿದೆ ಏಕೆಂದರೆ ಈ ದಿನದಂದು ಮಾಡುವ ಪೂಜೆಯು ಹಬ್ಬದ ಇತರ 8 ದಿನಗಳಲ್ಲಿ ಮಾಡುವ ಪೂಜೆಗೆ ಸಮನಾಗಿದೆ ಎಂದು ನಂಬಲಾಗಿದೆ.



Click it and Unblock the Notifications
