Latest Updates
-
ಬೇಸಿಗೆಯಲ್ಲಿ ಈ ಗಂಜಿ ಕುಡಿಯಿರಿ.. ಕೊಬ್ಬು ಕಡಿಮೆ, ದೇಹಕ್ಕೂ ತಂಪು! ಈ ಗಂಜಿಯ ಆರೋಗ್ಯ ರಹಸ್ಯ ಇಲ್ಲಿದೆ -
30 ವರ್ಷಗಳ ಬಳಿಕ ಸೂರ್ಯ-ಶನಿ ಸಂಯೋಗ! ಯಾರಿಗೆ ಶುಭ? ಯಾರಿಗೆ ಸಮಸ್ಯೆ? 12 ರಾಶಿಗಳ ಜಾತಕ ತಿಳಿಯಿರಿ -
ಈ 5 ವಿಷಯಗಳಲ್ಲಿ ಮಿತಿ ಮೀರಿದ್ರೆ ಜೀವನ ಸರ್ವನಾಶ! ಅಹಂಕಾರ ಬಿಡಿ.. ಇಂದೇ ಇವುಗಳಿಂದ ದೂರವಿರಿ -
ಪಕ್ಕಾ ಹೈದರಾಬಾದಿ ರುಚಿ.. ಅತಿಥಿಗಳು ಬಂದ್ರೆ ಈ ಚಿಕನ್ ಯಖನಿ ಪುಲಾವ್ ಮಾಡಿ! ಸಿಂಪಲ್ & ಸೂಪರ್ ರುಚಿ -
2026ರ ಸೂರ್ಯ ಗೋಚಾರ: ಇವರಿಗೆ ಸಿಗಲಿದೆ ಸರ್ಕಾರಿ ಉದ್ಯೋಗ! ಯಾರಿಗೆ ಮಾನಸಿಕ ಒತ್ತಡ? 12 ರಾಶಿಯವರಿಗೆ ರಾಶಿಫಲ ಇಲ್ಲಿದೆ -
ಹೋಟೆಲ್ ಶೈಲಿಯ ಆಲೂ ಮಸಾಲಾ ಪೂರಿ! ಈ ರೀತಿ ಮನೆಯಲ್ಲೇ ಮಾಡಿ, ಪರ್ಫೆಕ್ಟ್ ಆಗಿ ಉಬ್ಬಿ ಬರುತ್ತೆ -
ಇವರ ಜೀವನದಲ್ಲಿ ಹೊಸ ಕಿಡಿ ಹೊತ್ತಿಕೊಳ್ಳಲಿದೆ! ಹಠಮಾರಿ ಸ್ವಭಾವವನ್ನು ಬಿಡಿ -
March 12 Horoscope: ಹಣಕಾಸಿನ ಸವಾಲುಗಳು ದೊಡ್ಡದಾಗುವ ಸಂಭವ -
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ? -
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್
ಜನ್ಮದಿನಾಂಕದ ಪ್ರಕಾರ, ನಿಮಗೆ ಅದೃಷ್ಟ ಹಾಗೂ ದುರಾದೃಷ್ಟ ತರುವ ಬಣ್ಣಗಳಾವುವು ಗೊತ್ತಾ? ಇಲ್ಲಿದೆ ನೋಡಿ
ನಮ್ಮ ಜೀವನದ ಅತ್ಯಂತ ಪರಿಣಾಮಕಾರಿ ಅಂಶಗಳಲ್ಲಿ ಬಣ್ಣಗಳೂ ಒಂದು. ಇದನ್ನು ಮೂಡ್ ಸ್ವಿಂಗ್‌ಗಳಿಗೆ ಮಾತ್ರವಲ್ಲ ಚಿಕಿತ್ಸಾ ವಿಧಾನವಾಗಿಯೂ ಬಳಸಲಾಗುತ್ತದೆ. ಯಾವ ಬಣ್ಣವು ತಮಗೆ ಸರಿಹೊಂದುತ್ತದೆ, ಯಾವ ಬಣ್ಣ ನಮಗೆ ಅದೃಷ್ಟ ತರಲಿದೆ, ಯಾವುದು ಸರಿಹೊಂದುವುದಿಲ್ಲ ಎಂಬುದನ್ನು ತಿಳಿದುಕೊಳ್ಳಲು ಅನೇಕರು ಉತ್ಸುಕರಾಗಿದ್ದಾರೆ. ಇದನ್ನು ತಿಳಿಯಲು ಸಂಖ್ಯಾಶಾಸ್ತ್ರವು ಸಹಾಯ ಮಾಡಲಿದೆ.
ಹೌದು, ವಿವಿಧ ದಿನಾಂಕಗಳಲ್ಲಿ ಜನಿಸಿದ ಜನರು ತಮ್ಮ ಮೂಲ ಸಂಖ್ಯೆಯನ್ನು ಹೊಂದಿದ್ದಾರೆ. ಆ ಮೂಲ ಸಂಖ್ಯೆಯು ತನ್ನದೇ ಆದ ಅದೃಷ್ಟ ಮತ್ತು ದುರದೃಷ್ಟಕರ ಬಣ್ಣಗಳನ್ನು ಹೊಂದಿರುತ್ತದೆ. ಅವುಗಳಾವುವು ಎಂಬುದನ್ನು ಈ ಕೆಳಗೆ ನೀಡಲಾಗಿದೆ:
ಜನ್ಮದಿನಾಂಕದ ಪ್ರಕಾರ, ನಿಮ್ಮ ಅದೃಷ್ಟ ಹಾಗೂ ದುರಾದೃಷ್ಟಕರ ಬಣ್ಣಗಳನ್ನು ಈ ಕೆಳಗೆ ನೀಡಲಾಗಿದೆ:

ಸಂಖ್ಯೆ 1:
ಯಾವುದೇ ತಿಂಗಳ 1, 10, 19 ಮತ್ತು 28 ರಂದು ಜನಿಸಿದವರ ಮೂಲ ಸಂಖ್ಯೆ 1. ಕಿತ್ತಳೆ, ಹಳದಿ ಮತ್ತು ಚಿನ್ನದ ಬಣ್ಣವು ಈ ಜನರಿಗೆ ಸೂಕ್ತವಾದ ಬಣ್ಣಗಳಾಗಿವೆ. ಇದು ಸೂರ್ಯನಿಂದ ಆಳಲ್ಪಡುವುದರಿಂದ, ಕಿತ್ತಳೆ ಮತ್ತು ಹಳದಿ ಬಣ್ಣಗಳು ಅದೃಷ್ಟದ ಬಣ್ಣಗಳಾಗಿವೆ. ಈ ದಿನಾಂಕಗಳಲ್ಲಿ ಜನಿಸಿದವರಿಗೆ ಈ ಬಣ್ಣಗಳು ಯಶಸ್ಸು ಮತ್ತು ಶಕ್ತಿಯನ್ನು ನೀಡುತ್ತವೆ. ಆದರೆ ಇವರು ಕಪ್ಪು ಮತ್ತು ಮರೂನ್ ನಂತಹ ಬಣ್ಣಗಳನ್ನು ತಪ್ಪಿಸಬೇಕು ಏಕೆಂದರೆ ಈ ಬಣ್ಣಗಳು ಅವರಿಗೆ ಫಲಪ್ರದವಾಗುವುದಿಲ್ಲ.

ಸಂಖ್ಯೆ 2 :
ಯಾವುದೇ ತಿಂಗಳ 2, 11, 20 ಮತ್ತು 29 ರಂದು ಜನಿಸಿದ ಜನರ ಮೂಲ ಸಂಖ್ಯೆ 2. ಇವರು ಚಂದ್ರನಿಂದ ಆಳಲ್ಪಡುತ್ತಾರೆ.ಇವರಿಗೆ ಹಸಿರು ಬಣ್ಣವು ಅತ್ಯಂತ ಸೂಕ್ತವಾದ ಬಣ್ಣವಾಗಿದ್ದು, ಇದರ ವಿವಿಧ ಶೇಡ್‌ಗಳನ್ನು ಪ್ರಯತ್ನಿಸಬಹುದು. ಇದರ ಹಳದಿ ಮತ್ತು ಬೆಳ್ಳಿ ಬಣ್ಣವು ಇವರಿಎ ಅದೃಷ್ಟಕರ. ಕೆಂಪು ಮತ್ತು ಕಪ್ಪು ಇವರಿಗೆ ದುರಾದೃಷ್ಟಕರವಾಗಿರುವುದರಿಂದ ಅವರು ಈ ಬಣ್ಣಗಳನ್ನು ತಪ್ಪಿಸಬೇಕು.

ಸಂಖ್ಯೆ 3:
ಯಾವುದೇ ತಿಂಗಳ 3, 12, 21 ಮತ್ತು 30 ರಂದು ಜನಿಸಿದ ಜನರ ಮೂಲ ಸಂಖ್ಯೆ 3 ಆಗಿದ್ದು, ಗುರು ಗ್ರಹದಿಂದ ಆಳಲ್ಪಡುತ್ತಾರೆ. ಇವರಿಗೆ ಹಳದಿ, ಕಿತ್ತಳೆ ಅಥವಾ ಗುಲಾಬಿ ಬಣ್ಣಗಳು ಅದೃಷ್ಟಕರ. ಕೆಂಪು ಬಣ್ಣದ ಶೇಡ್‌ಗಳು ಸಹ ಒಳ್ಳೆಯದು. ಇವರು ಕಪ್ಪು, ಡಾರ್ಕ್ ನೀಲಿ ಅಥವಾ ಕಡು ಹಸಿರು ಬಣ್ಣಗಳನ್ನು ತಪ್ಪಿಸಬೇಕು ಏಕೆಂದರೆ ಅದು ಅವರ ಮೇಲೆ ಧನಾತ್ಮಕ ಪರಿಣಾಮ ಬೀರುವುದಿಲ್ಲ.

ಸಂಖ್ಯೆ 4 :
ಯಾವುದೇ ತಿಂಗಳ 4, 13, 22 ಮತ್ತು 31 ರಂದು ಜನಿಸಿದ ಜನರ ಮೂಲ ಸಂಖ್ಯೆ 4. ಇವರು ರಾಹು ಗ್ರಹದ ಅಡಿಯಲ್ಲಿ ಬರುತ್ತಾರೆ. ಇವರ ಅದೃಷ್ಟದ ಬಣ್ಣ ನೀಲಿ. ನೀಲಿ ಬಣ್ಣವನ್ನು ಹೊರತುಪಡಿಸಿ, ಎಲ್ಲಾ ಇತರ ಬಣ್ಣಗಳು ಅವರಿಗೆ ತಟಸ್ಥವಾಗಿವೆ ಆದರೆ ಅವರು ಕಪ್ಪು ಬಣ್ಣವನ್ನು ತಪ್ಪಿಸಬೇಕು.

ಸಂಖ್ಯೆ 5 :
ಯಾವುದೇ ತಿಂಗಳ 5, 14, ಮತ್ತು 23 ರಂದು ಜನಿಸಿದ ಜನರ ಮೂಲ ಸಂಖ್ಯೆ 5. ಇವರನ್ನು ಬುಧ ಗ್ರಹ ಆಳುತ್ತದೆ. ಬೂದು ಬಣ್ಣವು ಅವರಿಗೆ ಅದೃಷ್ಟವಾಗಿದ್ದು, ಯಶಸ್ಸನ್ನು ತರುತ್ತದೆ. ಆದರೆ ಇವರು ಕಪ್ಪು ಅಥವಾ ಕಡು ಹಸಿರು ಬಣ್ಣದಿಂದ ದೂರವಿರಬೇಕು.

ಸಂಖ್ಯೆ 6 :
ಯಾವುದೇ ತಿಂಗಳ 6, 15 ಮತ್ತು 24 ರಂದು ಜನಿಸಿದವರ ಮೂಲ ಸಂಖ್ಯೆ 6. ಈ ಜನರು ಶುಕ್ರ ಗ್ರಹದ ಅಡಿಯಲ್ಲಿ ಬರುತ್ತಾರೆ. ಇವರಿಗೆ ಕಡು ಹಸಿರು ಮತ್ತು ಕಡು ನೀಲಿ ಬಣ್ಣ ಅದೃಷ್ಟದ ಬಣ್ಣಗಳಾಗಿದ್ದು, ಇವುಗಳ ವಿವಿಧ ಶೇಡ್‌ಗಳು ಸಹ ಅದೃಷ್ಟವೇ. ಇವರು ಬಿಳಿ, ಹಳದಿ ಮತ್ತು ಗುಲಾಬಿ ಬಣ್ಣದಿಂದ ಕಟ್ಟುನಿಟ್ಟಾಗಿ ದೂರವಿರಬೇಕು.

ಸಂಖ್ಯೆ 7 :
ಯಾವುದೇ ತಿಂಗಳ 7, 16 ಮತ್ತು 25 ರಂದು ಜನಿಸಿದ ಜನರ ಮೂಲ ಸಂಖ್ಯೆ 7. ಈ ಜನರು ಕೇತು ಗ್ರಹಕ್ಕೆ ಬರುತ್ತಾರೆ. ಇವರಿಗೆ, ತಿಳಿ ಹಸಿರು, ತಿಳಿ ಹಳದಿ ಮತ್ತು ತಿಳಿ ನೀಲಿ ತುಂಬಾ ಅದೃಷ್ಟಶಾಲಿಯಾಗಿದೆ. ಈ ಬಣ್ಣಗಳು ಅವರಿಗೆ ಯಶಸ್ಸು ಮತ್ತು ಸಮೃದ್ಧಿಯನ್ನು ತರುತ್ತವೆ. ಆದರೆ, ಡಾರ್ಕ್ ಬಣ್ಣಗಳನ್ನು ವಿಶೇಷವಾಗಿ ಕಪ್ಪು ಮತ್ತು ಕೆಂಪು ಬಣ್ಣದಿಂದ ದೂರವಿರಬೇಕು.

ಸಂಖ್ಯೆ 8 :
ಯಾವುದೇ ತಿಂಗಳ 8, 17 ಮತ್ತು 26 ರಂದು ಜನಿಸಿದವರ ಮೂಲ ಸಂಖ್ಯೆ 8 ಆಗಿರುತ್ತದೆ. ಇವರು ಶನಿ ಗ್ರಹದಿಂದ ಆಳಲ್ಪಡುತ್ತಾರೆ. ಕಡು ಹಸಿರು ಮತ್ತು ಕಡು ನೀಲಿ ಬಣ್ಣ ಉತ್ತಮ ಫಲಿತಾಂಶಗಳನ್ನು ನೀಡುತ್ತದೆ. ಈ ಜನರು ಕಪ್ಪು ಬಣ್ಣಕ್ಕೆ ಆಕರ್ಷಿತರಾಗುತ್ತಾರೆ ಆದರೆ ಅವರು ಈ ಬಣ್ಣದ ಜೊತೆಗೆ ಕೆಂಪು ಬಣ್ಣವನ್ನು ಬಳಸುವುದನ್ನು ತಪ್ಪಿಸಬೇಕು. ಏಕೆಂದರೆ, ಇದು ಅವರಿಗೆ ವೈಫಲ್ಯ ಮತ್ತು ಜೀವನದಲ್ಲಿ ಸಮಸ್ಯೆಗಳನ್ನು ತರುತ್ತವೆ.

ಸಂಖ್ಯೆ 9:
ಯಾವುದೇ ತಿಂಗಳ 9, 18 ಮತ್ತು 27 ರಂದು ಜನಿಸಿದ ಜನರ ಮೂಲ ಸಂಖ್ಯೆ 9. ಇವರಿಗೆ ಕೆಂಪು ಬಣ್ಣವು ಅದೃಷ್ಟದ ಬಣ್ಣವಾಗಿದೆ. ಇವರು ತಿಳಿ ಬಣ್ಣಗಳನ್ನು ಮತ್ತು ಬಿಳಿ ಬಣ್ಣವನ್ನು ಬಳಸುವುದನ್ನು ತಪ್ಪಿಸಬೇಕು.



Click it and Unblock the Notifications











