Latest Updates
-
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ? -
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್ -
ಮಾರ್ಚ್ ಅಂತ್ಯದಲ್ಲಿ ಗಜಕೇಸರಿ ಯೋಗ: ಈ ಮೂರು ರಾಶಿಯ ಜನರಿಗೆ ಒಲಿಯಲಿದೆ ಅದೃಷ್ಟ! -
ನಾಟಿ ಸ್ಟೈಲ್ನಲ್ಲಿ ಸೋಯಾ ಚಾಪ್ಸ್ ಮಾಡಿ: ಚಪಾತಿ, ಅನ್ನ, ಮುದ್ದೆ ಎಲ್ಲದ್ದಕ್ಕೂ ಬೆಸ್ಟ್! -
ತಣ್ಣೀರು ಬೇಕಾ? ಮಡಕೆ ಕೊಳ್ಳುವಾಗ ಈ ತಪ್ಪು ಮಾಡಬೇಡಿ.. ಸಮಸ್ಯೆ ಗ್ಯಾರಂಟಿ!! ಹೇಗೆ ಆಯ್ಕೆ ಮಾಡಬೇಕು? -
ನಿಮ್ಮ ಮನೆಯ ಗಡಿಯಾರ ತಪ್ಪಾದ ದಿಕ್ಕಿನಲ್ಲಿ ಇಡಲಾಗಿದ್ಯಾ? ಈ ಸಣ್ಣ ತಪ್ಪು ದೊಡ್ಡ ಸಮಸ್ಯೆ ತರಬಹುದು! -
ಶುಗರ್ ಇದ್ದರೂ ಯುಗಾದಿಗೆ ಗುಜಿಯಾ ತಿನ್ನಬಹುದು! ಸಕ್ಕರೆ ಬೇಡ.. ರುಚಿ ಅದ್ಭುತ.. ಹೆಲ್ತ್ 100ಕ್ಕೆ 100 ಸೇಫ್! -
ದೇಹ ತಂಪಾಗಿಸಲು, ತೂಕ ಇಳಿಸಲು ಈ ಬಾರ್ಲಿ ಜ್ಯೂಸ್ ಮಾಡಿ! 5 ನಿಮಿಷದೊಳಗೆ ಸಿದ್ದ! -
ರಾಹು-ಕೇತು ಸಂಯೋಗದಿಂದ ಕಾಳಸರ್ಪ ಯೋಗ: ಈ ಎಲ್ಲಾ ರಾಶಿಯವರಿಗೆ ಅದೃಷ್ಟದ ಸಮಯ! -
ಸಂಕಷ್ಟಗಳು ದೂರ, ಐಶ್ವರ್ಯ ಹತ್ತಿರ! ಕೇತು ಸಂಚಾರದಿಂದ ಇವರ ಜೀವನವೇ ಬಂಗಾರ.. ಯಾರಿಗೆ ರಾಜಯೋಗ?
Women’s Day 2023 :30, 40, 50 ವರ್ಷ ದಾಟಿದ ನಂತರ ಮಹಿಳೆಯರಿಗೆ ಈ ಮೆಡಿಕಲ್ ಟೆಸ್ಟ್ ಕಡ್ಡಾಯ..!
ಮಾರ್ಚ್ 8 ರಂದು ವಿಶ್ವಾದಾದ್ಯಂತ ಅಂತರಾಷ್ಟೀಯ ಮಹಿಳಾ ದಿನವನ್ನು ಆಚರಣೆ ಮಾಡಲಾಗುತ್ತಿದೆ. ಈ ದಿನವು ಮಹಿಳೆಯರ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಸಾಧನೆಗಳನ್ನು ಆಚರಿಸುವ ಜಾಗತಿಕ ದಿನವಾಗಿದೆ.

ಮಹಿಳೆಯರು ಪ್ರಬಲವಾಗಿ ಬೆಳೆಯುತ್ತಿರುವುದು ಹೆಮ್ಮೆಯ ವಿಚಾರವೇ ಸರಿ ಅದರ ಜೊತೆಗೆ ಕೆಲವೊಂದು ಆರೋಗ್ಯ ಸಮಸ್ಯೆಗಳಿಗೆ ಮಹಿಳೆಯರು ತುತ್ತಾಗುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ಮುಖ್ಯವಾಗಿ 30, 40 ಮತ್ತು 50 ದಾಟಿದ ನಂತರ ಮಹಿಳೆಯರು ಕೆಲವೊಂದು ಆರೋಗ್ಯ ತಪಾಸನೆಗಳನ್ನು ಮಾಡಲೇಬೇಕಾಗುತ್ತದೆ. ಇಲ್ಲವಾದಲ್ಲಿ ಭವಿಷ್ಯದಲ್ಲಿ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗಬೇಕಾಗುತ್ತದೆ. ಅಷ್ಟಕ್ಕು 30, 40 ಮತ್ತು 50 ದಾಟಿದ ನಂತರ ಮಹಿಳೆಯರು ಮಾಡಲೇಬೇಕಾದ ತಪಾಸನೆಗಳ ಬಗ್ಗೆ ಇವತ್ತು ತಿಳಿದುಕೊಳ್ಳೋಣ.
30ರ ನಂತರ ಮಹಿಳೆಯರು ಮಾಡಬೇಕಾದ ಆರೋಗ್ಯ ತಪಾಸನೆಗಳು
ಅತ್ಯುತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಮೂವತ್ತರ ನಂತರ ಈ ಐದು ಪರೀಕ್ಷೆಗಳನ್ನು ನಿಯಮಿತವಾಗಿ ಮಾಡಿಸಬೇಕಾಗುತ್ತದೆ. ನಿಮ್ಮಲ್ಲಿ ರೋಗ ಲಕ್ಷಣಗಳು ಕಾಣಿಸಿದರೆ ಅಥವಾ ನಿಮ್ಮ ಕುಟುಂಬದಲ್ಲಿ ಯಾರಿಗಾದರೂ ಅಂತಹ ರೋಗಗಳಿದ್ದರೆ ಅದು ಒಂದು ವೇಳೆ ಅನುವಂಶೀಯವಾಗಿದ್ದರೆ ನೀವು ತುರ್ತಾಗಿ ಪರೀಕ್ಷೆಗಳನ್ನು ಆರಂಭಿಸಬೇಕಾಗುತ್ತದೆ. ಅವುಗಳೆಂದರೆ:
1. ಗರ್ಭಕೋಶ ಸೇರಿದಂತೆ ಗುಪ್ತ ಅಂಗಾಂಗಗಳ ಪರೀಕ್ಷೆ (Pap smear test)
ಈ ಪರೀಕ್ಷೆಯು ಗರ್ಭಕೋಶದ ಕ್ಯಾನ್ಸರ್ ಅಪಾಯವಿದೆಯಾ ಎಂಬುದನ್ನು ತಿಳಿದುಕೊಳ್ಳಲು ಪಾಪ್ ಸ್ಮೀರ್ ಟೆಸ್ಟ್ ಮಾಡಲಾಗುತ್ತದೆ. ಆರಂಭಿಕವಾಗಿ ನಿಮಗೆ ಗರ್ಭಕೋಶದ ಕ್ಯಾನ್ಸರ್ ಇರುವುದು ಪತ್ತೆಯಾದರೆ ಯಾವುದೇ ಸಮಸ್ಯೆಯಿಲ್ಲ ಅದನ್ನು ಚಿಕಿತ್ಸೆಯಿಂದ ಗುಣಪಡಿಸಲು ಸಾಧ್ಯತೆ ಇದೆ. ಪಾಪ್ ಸ್ಮೀರ್ ಟೆಸ್ಟ್‌ನಲ್ಲಿ ಯೋನಿ, ಅಂಡಾಶಯಗಳು, ಫಾಲೋಪಿಯನ್ ಟ್ಯೂಬ್‌ಗಳು, ಗರ್ಭಾಶಯ, ಯೋನಿಯ ಮತ್ತು ಗರ್ಭಕಂಠ ಸೇರಿದಂತೆ ನಿಮ್ಮ ಸಂತಾನೋತ್ಪತ್ತಿ ಅಂಗಗಳ ದೈಹಿಕ ಪರೀಕ್ಷೆಯನ್ನು ಮಾಡಲಾಗುತ್ತದೆ.
2. ಸ್ತನ ಕ್ಯಾನ್ಸರ್‌ಗೆ ಸಂಬಂಧಿಸಿದ ಪರೀಕ್ಷೇ (Mammogram test)
ಮ್ಯಾಮೊಗ್ರಾಮ್ ಪರೀಕ್ಷೆಯಲ್ಲಿ ರೋಗಿಯ ಸ್ತನಗಳನ್ನು ಎಕ್ಸ್-ರೇ ಇಮೇಜಿಂಗ್‌ಗಾಗಿ ಎರಡು ಪ್ಲೇಟ್‌ಗಳ ನಡುವೆ ಸಂಕುಚಿತಗೊಳಿಸಲಾಗುತ್ತದೆ. ಇದು ಸ್ತನ ಕ್ಯಾನ್ಸರ್ ಅನ್ನು ಪರೀಕ್ಷಿಸಲು ವೈದ್ಯರಿಗೆ ಸಹಾಯಮಾಡುತ್ತದೆ. ಭಾರತದಲ್ಲಿ ಇತ್ತೀಚಿನ ದಿನಗಳಲ್ಲಿ ಸ್ತನ ಕ್ಯಾನ್ಸರ್ ಮಹಿಳೆಯರಲ್ಲಿ ಅತೀ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. 30 ವರ್ಷ ಹಾಗೂ ಅದರ ನಂತರ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಹೆಚ್ಚಾಗಿ ಕಾಣಿಸಿಕೊಳ್ತಿದೆ.
3. ಥೈರಾಯ್ಡ್ ಪರೀಕ್ಷೆ
ಮಹಿಳೆಯರಲ್ಲಿ ಥೈರಾಯ್ಡ್ ಗ್ರಂಥಿಯು ಹೆಚ್ಚು ಹಾಗೂ ಕಡಿಮೆ ಸಕ್ರಿಯವಾಗಿರುವ ಸಾಧ್ಯತೆಯಿದೆ. ನಿಮ್ಮ ವೈದ್ಯರ ಜೊತೆಗೆ ಈ ಪರೀಕ್ಷೆಯ ಅಗತ್ಯವಿದೆಯೇ ಎಂದು ನೀವು ಚರ್ಚಿಸಿ ನಂತರ ಥೈರಾಯ್ಡ್ ಪರೀಕ್ಷೆ ಮಾಡಿಸಿಕೊಳ್ಳಿ.
4. ಲಿಪಿಡ್ ಪ್ಯಾನಲ್ ಪರೀಕ್ಷೆ (Lipid panel test)
ನೀವು ಮಹಿಳೆಯಾಗಿರಲಿ ಅಥವಾ ಅಲ್ಲದಿರಲಿ ಲಿಪಿಡ್ ಪ್ಯಾನಲ್ ಪರೀಕ್ಷೆಯನ್ನು ಮಾಡಿಸಿಕೊಳ್ಳುವುದು ಮುಖ್ಯವಾಗಿದೆ. ಅಧಿಕ ಕೊಲೆಸ್ಟ್ರಾಲ್ ಮಟ್ಟ ನಿಮ್ಮ ಅಪಧಮನಿಗಳನ್ನು ಮುಚ್ಚಿ ಹೃದಯದ ಕಾಯಿಲೆಗೆ ಕಾರಣವಾಗಬಹುದು. ಇದಲ್ಲದೇ ನಿಮ್ಮ ದೇಹದಲ್ಲಿ ಹೆಚ್ಚಿನ ಕೊಲೆಸ್ಟರಾಲ್ ಇದ್ದರೂ ಕೂಡ ಯಾವುದೇ ಗಮನಾರ್ಹ ಲಕ್ಷಣಗಳನ್ನು ತೋರಿಸುವುದಿಲ್ಲ ಮತ್ತು ರಕ್ತ ಪರೀಕ್ಷೆಯಿಂದ ಮಾತ್ರ ಇದನ್ನು ಕಂಡುಹಿಡಿಯಬಹುದು.
5. ರಕ್ತದೊತ್ತಡ ಪರೀಕ್ಷೆ
ಋತುಚಕ್ರ ಸಮಸ್ಯೆ, ಗರ್ಭಾವಸ್ಥೆಯ ತೊಂದರೆಗಳು ಮತ್ತು ಒತ್ತಡದಂತಹ ಸಮಸ್ಯೆಗಳು ಹಾರ್ಮೋನು ವ್ಯತ್ಯಾಸದಿಂದಲೂ ಉಂಟಾಗುತ್ತದೆ ಇಂತಹ ಸಮಸ್ಯೆಗಳು ಇದ್ದರೆ ಮಹಿಳೆಯರಲ್ಲಿ ಹೃದ್ರೋಗದ ಅಪಾಯ ಹೆಚ್ಚು. ರಕ್ತದೊತ್ತಡ ಪರೀಕ್ಷೆಯನ್ನು ಮಾಡುವುದರಿಂದ ಹೃದಯ ಸಂಬಂಧಿ ಕಾಯಿಲೆಯನ್ನು ಆರಂಭಿಕ ಹಂತದಲ್ಲಿ ಪತ್ತೆ ಹಚ್ಚಬಹುದು. ನಿಮ್ಮ ರಕ್ತದೊತ್ತಡ ಸಾಮಾನ್ಯವಾಗಿದ್ದರೆ ನೀವು ವಾರ್ಷಿಕ ಪರೀಕ್ಷೆಯನ್ನು ಮಾಡಿಸಿದರೆ ಸಾಕು. ಆದರೆ ನಿಮ್ಮ ರಕ್ತದೊತ್ತಡ ತುಂಬಾ ಹೆಚ್ಚಿದ್ದರೆ ಅಥವಾ ತುಂಬಾ ಕಡಿಮೆಯಿದ್ದರೆ ಆಗಾಗ್ಗೆ ಪರೀಕ್ಷೆಗಳನ್ನು ಮಾಡಿಸುತ್ತಿರಬೇಕು.
40ರ ನಂತರ ಮಹಿಳೆಯರು ಮಾಡಬೇಕಾದ ಆರೋಗ್ಯ ತಪಾಸನೆಗಳು
1. ಕೊಲೆಸ್ಟ್ರಾಲ್ ಪರೀಕ್ಷೆ(Cholesterol screening)
ಕೊಲೆಸ್ಟರಾಲ್ ಪರೀಕ್ಷೆಯು ರಕ್ತದಲ್ಲಿನ ಕೊಲೆಸ್ಟ್ರಾಲ್ ಮತ್ತು ಟ್ರೈಗ್ಲಿಸರೈಡ್ಗಳನ್ನು ಅಳೆಯಲಾಗುತ್ತದೆ. ನೀವು ಒಂದು ವೇಳೆ ಹೃದಯ ರಕ್ತನಾಳದ ಕಾಯಿಲೆಯ ಅಪಾಯದಲ್ಲಿದ್ದರೆ ಈ ಪರೀಕ್ಷೆಯಿಂದ ನಿಮಗೆ ಗೊತ್ತಾಗುತ್ತದೆ. ನಿಮ್ಮ ದೇಹದಲ್ಲಿ ಇಂತಿಷ್ಟು ಪ್ರಮಾಣದ ಕೊಲೆಸ್ಟ್ರಾಲ್ ಅಗತ್ಯವಿರುತ್ತದೆ. ಆದರೆ ನಿಮ್ಮಲ್ಲಿ ಕೊಲೆಸ್ಟ್ರಾಲ್ ಅಧಿಕವಾಗಿದ್ದರೆ ಅದು ನಿಮ್ಮ ಅಪಧಮನಿಗಳಲ್ಲಿ ಸಂಗ್ರಹಗೊಳ್ಳುತ್ತದೆ. ಇದು ಪಾರ್ಶ್ವವಾಯು ಮತ್ತು ಹೃದಯಾಘಾತಕ್ಕೆ ಕಾರಣವಾಗಬಹುದು. ಒಂದು ವೇಳೆ ನಿಮಗೆ ಅಂತಹ ಕಾಯಿಲೆಗಳ ಅಪಾಯವಿದ್ದರೆ ಈ ಪರೀಕ್ಷೆಯಿಂದ ತಿಳಿಯುತ್ತದೆ.
2. ಡಯಾಬಿಟೀಸ್ ಸ್ಕೀನಿಂಗ್ ಪರೀಕ್ಷೆ
ಡಯಾಬಿಟಿಸ್ ಸ್ಕ್ರೀನಿಂಗ್ ಪರೀಕ್ಷೆಯು ಖಾಲಿ ಹೊಟ್ಟೆಯಲ್ಲಿ ನಿಮ್ಮ ಗ್ಲೂಕೋಸ್ ಮಟ್ಟವನ್ನು ಪರಿಶೀಲಿಸಲಾಗುತ್ತದೆ. ನಿಮ್ಮ ರಕ್ತದಲ್ಲಿ ಗ್ಲೂಕೋಸ್ ಮಟ್ಟವು ಅಧಿಕವಾಗಿದ್ದು, ಮಧುಮೇಹವಿದೆ ಎಂದು ಗೊತ್ತಾದರೆ ಮತ್ತೊಮ್ಮೆ ಪರೀಕ್ಷೇ ನಡೆಸಿ ಖಚಿತ ಪಡಿಸಿಕೊಳ್ಳುತ್ತಾರೆ. ಸಮಸ್ಯೆಯಿದ್ದರೆ ವೈದ್ಯರು ಜೀವನಶೈಲಿಯನ್ನು ಬದಲಾಯಿಸುವಂತೆ ಶಿಫಾರಸು ಮಾಡುತ್ತಾರೆ.
3. ಕಣ್ಣು ಮತ್ತು ಹಲ್ಲಿನ ಪರೀಕ್ಷೇ
40 ವರ್ಷ ವಯಸ್ಸಿನ ನಂತರ ನೀವು ಒಂದು ವರ್ಷಗಳಿಗೊಮ್ಮೆ ಕಣ್ಣಿನ ಪರೀಕ್ಷೆಯನ್ನು ಮಾಡಿಸಲೇಬೇಕು. ಯಾಕೆಂದ್ರೆ ಕಣ್ಣಿನಲ್ಲಿ ದೃಷ್ಟಿ ದೋಷದಂತಹ ಸಮಸ್ಯೆಗಳು ನಾಲ್ವತ್ತರ ನಂತರ ಗೊತ್ತಾಗುತ್ತದೆ. ಇದರ ಜೊತೆಗೆ ನೀವು ಪ್ರತಿ ಆರು ತಿಂಗಳಿಗೊಮ್ಮೆ ದಂತ ಪರೀಕ್ಷೆಯನ್ನು ಮಾಡಿಸಿಕೊಳ್ಳಿ ಇದರಿಂದ ಮುಂದಾಗುವ ಗಂಭೀರ ಸಮಸ್ಯೆಯಿಂದ ತಪ್ಪಿಸಿಕೊಳ್ಳಬಹುದು. ನಿತ್ಯ ಎರಡು ಬಾರಿ ಹಲ್ಲುಜ್ಜುವ ಅಭ್ಯಾಸವಿದ್ದರೆ ತುಂಬಾ ಒಳ್ಳೆಯದು.
50 ರ ನಂತರ ಮಹಿಳೆಯರು ಮಾಡಬೇಕಾದ ಆರೋಗ್ಯ ತಪಾಸನೆಗಳು
1. ಮೂಳೆ ಸಾಂದ್ರತೆ ಪರೀಕ್ಷೇ
ಮೂಳೆ ಸಾಂದ್ರತೆ ಪರೀಕ್ಷೇಯು ಋತುಬಂಧಕ್ಕೊಳಗಾದ ಮಹಿಳೆಯರಲ್ಲಿ ಅರ್ಧದಷ್ಟು ಭಾಗವು ಋತುಬಂಧದ ನಂತರ ಆಸ್ಟಿಯೊಪೊರೋಸಿಸ್ನ ಪರಿಣಾಮವಾಗಿ ಮೂಳೆ ಮುರಿತಕ್ಕೆ ಒಳಗಾಗುತ್ತದೆ ಎಂದು ಅಂದಾಜಿಸಲಾಗಿದೆ. ನಿಮ್ಮ ಮೂಳೆಗಳನ್ನು ರಕ್ಷಿಸಲು ಜೀವನಶೈಲಿ ಬದಲಾವಣೆಗಳು ಅಥವಾ ಆಸ್ಟಿಯೊಪೊರೋಸಿಸ್ ಔಷಧಿಗಳ ಅಗತ್ಯವಿದ್ದರೆ, ಡ್ಯುಯಲ್-ಎನರ್ಜಿ ಎಕ್ಸ್-ರೇ ಅಬ್ಸಾರ್ಪ್ಟಿಯೊಮೆಟ್ರಿ (DXA) ಪರೀಕ್ಷೆಯ ಮೂಲಕ ತಿಳಿಯುತ್ತದೆ.
2. ಕೊಲೊನೋಸ್ಕೋಪಿ ಪರೀಕ್ಷೆ (colonoscopy test)
ಕೊಲೊನೋಸ್ಕೋಪಿ ಎನ್ನುವುದು ತರಬೇತಿ ಪಡೆದ ವೈದ್ಯಕೀಯ ತಜ್ಞರಿಂದ ಮಾಡಲ್ಪಟ್ಟ ವೈದ್ಯಕೀಯ ವಿಧಾನವಾಗಿದ್ದು, ಇದರಲ್ಲಿ ಕರುಳಿನ ಅಥವಾ ದೊಡ್ಡ ಕರುಳಿನ ಒಳಭಾಗವನ್ನು ಪರೀಕ್ಷಿಸಲಾಗುತ್ತದೆ. ಮಹಿಳೆಯರು 50 ನೇ ವಯಸ್ಸಿನಲ್ಲಿ ಕೊಲೊನೋಸ್ಕೋಪಿ ಪರೀಕ್ಷೇಗೆ ಒಳಗಾಗಬೇಕು ಯಾಕಂದರೆ ಈ ವಯಸ್ಸಿನಲ್ಲಿ ಕರುಳಿನ ಕ್ಯಾನ್ಸರ್ ಭಾದಿಸುವ ಅಪಾಯ ಹೆಚ್ಚಾಗಿದೆ.
* ರಕ್ತದಲ್ಲಿನ ಸಕ್ಕರೆಯ ಪರೀಕ್ಷೇ
* ರಕ್ತದೊತ್ತಡ ಪರೀಕ್ಷೇ
* ಕೊಲೆಸ್ಟ್ರಾಲ್ ಪರೀಕ್ಷೇ
* ಗರ್ಭಕೋಶ ಸೇರಿದಂತೆ ಗುಪ್ತ ಅಂಗಾಂಗಗಳ ಪರೀಕ್ಷೆ
* ಸ್ತನ ಕ್ಯಾನ್ಸರ್‌ಗೆ ಸಂಬಂಧಿಸಿದ ಪರೀಕ್ಷೇ
ಇತ್ತೀಚಿಗೆ ಕ್ಯಾನ್ಸರ್ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಆಗಾಗ್ಗೇ ಪರೀಕ್ಷೆಗೆ ಒಳ ಪಡುತ್ತಿರಬೇಕು. ಯಾಕೆಂದರೆ ಮೊದಲ ಹಂತದಲ್ಲೇ ರೋಗ ಲಕ್ಷಣಗಳ ಬಗ್ಗೆ ತಿಳಿದರೆ ಗುಣಪಡಿಸಲು ಸುಲಭ. ಕೇವಲ ಕ್ಯಾನ್ಸರ್ ಮಾತ್ರವಲ್ಲ ಇತರ ರೋಗ ಅಪಾಯಗಳು ಹೆಚ್ಚುತ್ತಿರುವುದರಿಂದ ಮಹಿಳೆಯರು ಈ ಎಲ್ಲಾ ಪರೀಕ್ಷೇಗಳನ್ನು ಮಾಡಿಸಿದರೆ ಉತ್ತಮ.



Click it and Unblock the Notifications














