Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ತಾನು ಪ್ರೀತಿಸಿದ ವ್ಯಕ್ತಿಗಾಗಿ ಅವಾಹಿತರಾಗಿಯೇ ಉಳಿದರು ಲತಾ ಮಂಗೇಶ್ಕರ್!
ಲತಾ ಮಂಗೇಶ್ಕರ್ ಇವರ ಮಧುರ ಧ್ವನಿಯನ್ನು ಕೇಳಿರದ ಭಾರತೀಯನೇ ಇರಲ್ಲ. ಭಾರತೀಯ ಚಿತ್ರರಂಗದ ಶ್ರೇಷ್ಠ ಗಾಯಕರು. ಇವರು 36 ಭಾಷೆಗಳಲ್ಲಿ 30 ಸಾವಿರಕ್ಕೂ ಅಧಿಕ ಹಾಡುಗಳಲ್ಲಿ ಹಾಡಿದ್ದಾರೆ. ಇವರ ಮಧುರ ಕಂಠಕ್ಕೆ ಇವರನ್ನು ಕ್ವೀನ್ ಆಫ್ ಮೆಲೋಡಿ ಎಂದು ಕರೆಯಲಾಗುವುದು. 'ನಾನು ಎಂದಿಗೂ ಹಾಡುವುದನ್ನು ನಿಲ್ಲಿಸುವುದಿಲ್ಲ, ನಾನು ಸತ್ತಾಗ ನನ್ನ ಮ್ಯೂಸಿಕ್ ನನ್ನೊಂದಿಗೆ ಹೋಗುತ್ತದೆ' ಎಂಬ ಮಾತನ್ನು ಹೇಳಿದ್ದರು.

ತನ್ನ ಸುಮಧುರವಾದ ಕಂಠದಿಂದ ಎಲ್ಲರನ್ನೂ ಮೋಡಿ ಮಾಡುತ್ತಿದ್ದ ಈ ಗಾಯಕಿ 92ನೇ ವಯಸ್ಸಿನಲ್ಲಿ ತಾವು ಹಾಡುವುದನ್ನು ನಿಲ್ಲಿಸಿದ್ದಾರೆ, ಅವರು ಇಲ್ಲದಿದ್ದರೂ ಅವರು ಹಾಡಿರುವ ಹಾಡುಗಳು ಎಂದೆಂದಿಗೂ ಅವರ ನೆನಪನ್ನು ನಮ್ಮೊಂದಿಗೆ ಹಸಿರಾಗಿಡುತ್ತದೆ.
ಲತಾ ಮಂಗೇಶ್ಕರ್ ಅವಾಹಿತರಾಗಿದ್ದರು, ಅವರು ಅವಾಹಿತರಾಗಿ ಉಳಿಯಲು ಕಾರಣ ಭಗ್ನ ಪ್ರೇಮ. ಹೌದು ಅವರ ಪ್ರೇಮ ಭಗ್ನವಾಗಿದ್ದರೂ ಅವರು ಹಾಗೂ ಅವರ ಪ್ರೇಮಿ ಮಾತ್ರ ಅಮರ ಪ್ರೇಮಿಗಳಾಗಿ ಉಳಿದರು.

ಲತಾ ಮಂಗೇಶ್ಕರ್ ಪ್ರೇಮ ಕತೆ
ಹೌದು ಹದಿಹರೆಯದ ವಯಸ್ಸಿನಲ್ಲಿ ಲತಾ ಮಂಗೇಶ್ಕರ್‌ಗೂ ಒಬ್ಬ ಹುಡುಗನ ಮೇಲೆ ಪ್ರೀತಿ ಅಂಕುರವಾಗಿತ್ತು. ಅವರಿಬ್ಬರು ತಮ್ಮ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದರು. ಅವರೊಂದಿಗೆ ಒಂದು ಸುಂದರ ವೈವಾಹಿಕ ಬದುಕಿನ ಕನಸ್ಸು ಕಂಡಿದ್ದ ಲತಾಮಂಗೇಶ್ಕರ್‌ಗೆ ಆ ಕನಸ್ಸು ಕನಸ್ಸಾಗಿಯೇ ಉಳಿಯಿತು.

ಲತಾ ಮಂಗೇಶ್ಕರ್ ಪ್ರೇಮ ಭಗ್ನವಾಗಿದ್ದೇಕೆ?
ಲತಾ ಮಂಗೇಶ್ಕರ್‌ಗೆ ಅವರ ಅಣ್ಣನ ಸ್ನೇಹಿತನಾಗಿದ್ದ ಮಹಾರಾಜ್ ಸಿಂಗ್ ಅವರೊಂದಿಗೆ ಪ್ರೇಮವಾಯಿತು. ಅವರು ರಾಜಸ್ಥಾನದ ರಜಪೂತ ರಾಜಮನೆತನಕ್ಕೆ ಸೇರಿದ ಹುಡುಗ. ಇದುವೇ ಇವರಿಬ್ಬರ ಪ್ರೀತಿಗೆ ಅಡ್ಡಿಯಾಯಿತು, ಲತಾ ಮಂಗೇಶ್ಕರ್ ಅವರನ್ನು ತನ್ನ ಮಗ ಮದುವೆಯಾಗಲು ಬಿಡಲ್ಲ ಎಂದು ಮಹಾರಾಜ್ ಸಿಂಗ್ ಅವರ ತಂದೆ ಹಠ ಹಿಡಿದರು. ಸಾಮಾನ್ಯ ಮನೆತನದ ಹಡುಗಿಯೊಬ್ಬಳನ್ನು ತಮ್ಮ ಕುಟುಂಬಕ್ಕೆ ತರಲು ಆ ರಾಜ ಮನೆತನದವರು ಸಿದ್ಧರಿರಲಿಲ್ಲ.

ಅಮರ ಪ್ರೇಮಿಯಾದ ಲತಾ ಮಂಗೇಶ್ಕರ್
ಮನೆಯವರನ್ನು ವಿರೋಧಿಸಿ ಮದುವೆಯಾಗಲು ಇಬ್ಬರಿಗೂ ಇಷ್ಟವಿರಲಿಲ್ಲ. ಲತಾ ಅವರನ್ನು ಮದುವೆಯಾಗದಿದ್ದರೆ ಕೊನೆಯವರೆಗೂ ಯಾರನ್ನೂ ಮದುವೆಯಾಗಲ್ಲ ಎಂದು ಮಹಾರಾಜ್ ಸಿಂಗ್ ಹಠ ಹಿಡಿದರು. ಇತ್ತ ಲತಾ ಮಂಗೇಶ್ಕರ್ ಕೂಡ ಅವಹಿತರಾಗಿಯೇ ಉಳಿಯಲು ತೀರ್ಮಾನಿಸಿದರು. ಮಹಾರಾಜ್ ಸಿಂಗ್ ಬಿಸಿಸಿಐನ ಮಾಜಿ ಅಧ್ಯಕ್ಷರಾಗಿದ್ದರು, ಇವರು 2009ರಲ್ಲಿ ಇಹಲೋಕ ತ್ಯಜಿಸಿದ್ದಾರೆ.
ಇವರಿಬ್ಬರದ್ದು ಪವಿತ್ರ ಪ್ರೇಮವಾಗಿತ್ತು, ತಮ್ಮ ಪ್ರೀತಿಗಾಗಿ ಅವಾಹಿತರಾಗಿ ಉಳಿಯುವ ಮೂಲಕ ಇಡೀ ಜೀವನವನ್ನೇ ಒಬ್ಬರಿಗೊಬ್ಬರು ಸಮರ್ಪಿಸಿ ಅಮರ ಪ್ರೇಮಿಗಳಾದರು.



Click it and Unblock the Notifications
