Latest Updates
-
ಬೆಳಗಿನ ವ್ಯಾಯಾಮ: ಬಿಸಿಲ ಧಗೆಯಿಂದ ಪಾರಾಗಲು ಹೀಗೆ ಮಾಡಿ -
ಬಿಸಿಲಿನ ತಾಪಕ್ಕೆ ದಾಂಪತ್ಯದಲ್ಲಿ ಜಗಳವೇ? ಈ ಟಿಪ್ಸ್ ಪಾಲಿಸಿ -
ದೆಹಲಿ ಬಿಸಿಲು: ಮನೆಯನ್ನು ತಂಪಾಗಿಡಲು ಈ ಟಿಪ್ಸ್ ಫಾಲೋ ಮಾಡಿ -
ತೂಕ ಇಳಿಸುವ ಔಷಧಿಗಳ ಬೆಲೆ ಇಳಿಕೆ: ಬೊಜ್ಜು ನಿವಾರಣೆಗೆ ಹೊಸ ಭರವಸೆ -
ಎಸ್ಪಿಎಫ್ ಸ್ಟಿಕ್: ಬಿಸಿಲ ಬೇಗೆಯಿಂದ ಪಾರಾಗಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಯೋಗಾಸನ ಚಾಂಪಿಯನ್ಶಿಪ್: ಅಯೋಧ್ಯೆಯಲ್ಲಿ ಯೋಗದ ಅದ್ಭುತ ಕೌಶಲ ಪ್ರದರ್ಶನ -
ಗುಜರಾತ್ ಲಿವ್-ಇನ್ ಜೋಡಿಗಳೇ, ಈ ಹೊಸ ನಿಯಮ ಮಿಸ್ ಮಾಡ್ಬೇಡಿ! -
ಹಬ್ಬದ ಅಲಂಕಾರ: ಕಡಿಮೆ ಖರ್ಚಿನಲ್ಲಿ ನಿಮ್ಮ ಮನೆ ಕಂಗೊಳಿಸಲಿ ಹೀಗೆ! -
ಬಿಸಿಲಿನ ತಾಪಕ್ಕೆ ಸುಸ್ತಾದ್ರಾ? ಈ ಪಾನೀಯಗಳು ನಿಮ್ಮನ್ನು ಕಾಪಾಡುತ್ತವೆ -
ಬಿಸಿಗಾಳಿ ಕಾಟ: ಈ ತಪ್ಪುಗಳನ್ನು ಮಾಡಿದರೆ ಆರೋಗ್ಯಕ್ಕೆ ಕುತ್ತು!
ಇಂಗ್ಲೆಂಡ್‌ನ ರಾಣಿ 2ನೇ ಎಲಿಜಬತ್ ಬಗ್ಗೆ ಹೆಚ್ಚಿನವರಿಗೆ ಗೊತ್ತಿಲ್ಲದ ಸಂಗತಿಗಳಿವು
2ನೇ ರಾಣಿ ಎಲಿಜಬತ್ ತಮ್ಮ 96 ವಯಸ್ಸಿನಲ್ಲಿ ವಿಧಿವಶರಾಗಿದ್ದಾರೆ. 70 ವರ್ಷ ಬ್ರಿಟನ್‌ನ ರಾಜಮನೆತನದ ಸಂಪೂರ್ಣ ಜವಾಬ್ದಾರಿ ಹೊತ್ತು ನಡೆಸಿಕೊಂಡು ಹೋಗಿದ್ದ ರಾಣಿ ಎಲಿಜಬತ್ ಇಹಲೋಕಕ್ಕೆ ಗುಡ್‌ಬೈ ಹೇಳಿದ್ದಾರೆ.

ವಿಶ್ವದ ಅತ್ಯಂತ ಜನಪ್ರಿಯ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದ 2ನೇ ರಾಣಿ ಎಲಿಜಬತ್ ತಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿಕೊಂಡು ಹೋಗುವ ಮೂಲಕ ಗಮನ ಸೆಳೆಯುತ್ತಿದ್ದರು. ರಾಜಮನೆತನದಲ್ಲಿ ಅನೇಕ ಸಮಸ್ಯೆಗಳು ಎದುರಾದಾಗ ಅವೆಲ್ಲವನ್ನು ಅವರು ನಿಭಾಯಸಿದ ರೀತಿ ಈಗ ಇತಿಹಾಸ. ಇಂಗ್ಲೆಂಡ್‌ನ ರಾಣಿ ಕುರಿತು ಹಲವಾರು ಸುದ್ದಿಗಳನ್ನು ನೀವು ಓದಿರುತ್ತೀರಿ, ಕೇಳಿರುತ್ತೀರಿ, ನಾವಿಲ್ಲಿ ಇಂಗ್ಲೆಂಡ್ ರಾಣಿ ಬಗ್ಗೆ ಬಹುತೇಕ ಜನರಿಗೆ ತಿಳಿದಿರದ ಕೆಲವೊಂದು ವಿಷಯಗಳ ಬಗ್ಗೆ ಮಾಹಿತಿ ನೀಡಿದ್ದೇವೆ ನೋಡಿ:

ಇಂಗ್ಲೆಂಡ್‌ನ ರಾಣಿಗೆ ಗಾಡಿ ಓಡಿಸಲು ಡ್ರೈವಿಂಗ್ ಲೈಸೆನ್ಸ್ ಬೇಕಾಗಿಲ್ಲ
ನಾವು ಗಾಡಿ ತಗೊಂಡು ರಸ್ತೆಗೆ ಇಳಿಯಬೇಕೆಂದರೆ ಡ್ರೈವಿಂಗ್ ಲೈಸೆನ್ಸ್ ಇರಬೇಕು, ಇಲ್ಲದಿದ್ದರೆ ಅದು ಕಾನೂನುಬಾಹಿರ, ಆದರೆ ಇಂಗ್ಲೆಂಡ್‌ನ ರಾಣಿಗೆ ಗಾಡಿ ಓಡಿಸಲು ಡ್ರೈವಿಂಗ್ ಲೈಸೆನ್ಸ್ ಬೇಕಾಗಿಲ್ಲ, ಅಲ್ಲದೆ ರಾಣಿಗೆ ಪಾಸ್‌ಪೋರ್ಟ್ ಕೂಡ ಇರಲ್ಲ.

ಇಂಗ್ಲೆಂಡ್‌ನ ರಾಜ ಮನೆತನದಲ್ಲಿ ಅತೀ ಹೆಚ್ಚು ಪ್ರಯಾಣ ಮಾಡಿದ ವ್ಯಕ್ತಿ
ಇಂಗ್ಲೆಂಡ್ ರಾಣಿ 2ನೇ ಎಲಿಜಬತ್ ಪ್ರಯಾಣ ಮಾಡಿದಷ್ಟು ಆ ರಾಜ ಮನೆತನದಲ್ಲಿ ಯಾರೂ ಮಾಡಿರಲಿಲ್ಲ. ರಾಣಿ ಎಲಿಜಬತ್ 100ಕ್ಕೂ ಅಧಿಕ ರಾಷ್ಟ್ರಗಳಿಗೆ ಭೇಟಿ ಕೊಟ್ಟಿದ್ದರೆ. ಕೆನಡಾಕ್ಕೆ 22 ಬಾರಿ , ಫ್ರಾನ್ಸ್‌ಗೆ 13 ಬಾರಿ ಪ್ರಯಾಣಿಸಿದ್ದಾರೆ.

ರಾಣಿಗೆ ಆದ ಖಾಸಗಿ ATM ಇದೆ
ರಾಣಿಗೆ ಹಣ ಬೇಕಾದರೆ ಬಂಕಿಂಗ್ಹ್ಯಾಮ್ ಅರಮನೆಯಲ್ಲಿಯೇ ATM ಇದೆ. ಅದನ್ನು ರಾಜ ಮನೆತನದವರು ಬಿಟ್ಟು ಮತ್ಯಾರು ಬಳಸುವಂತಿಲ್ಲ, ಅಲ್ಲದೆ ಈ ATM ಬಳಸಲು ಯಾವುದೇ ಚಾರ್ಜ್ ಕೂಡ ಇಲ್ಲ.

ಎರಡನೇ ವಿಶ್ವ ಯುದ್ಧದ ಸಮಯದಲ್ಲಿ ರಾಣಿ ಸ್ವಯಂ ಪ್ರೇರಿತವಾಗಿ ಟ್ರಕ್ ಡ್ರೈವರ್ ಆದರು
ತಂದೆಯಿಂದ ಪಟ್ಟ ಸಿಗುವ ಮುನ್ನ ರಾಜಕುಮಾರಿಯಾಗಿದ್ದಾಗಲೇ ವಿಶ್ವ ಎರಡನೇ ಮಹಾಯುದ್ಧದ ಸಮಯದಲ್ಲಿ ಸ್ವಯಂ ಪ್ರೇರಿತವಾಗಿ ಟ್ರಕ್ ಡ್ರೈವರ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಈ ಮೂಲಕ ಮಿಲಿಟರಿಯಲ್ಲಿ ಸೇವೆ ಸಲ್ಲಿಸಿದ ರಾಜ ಮನೆತನದ ಮೊದಲ ವ್ಯಕ್ತಿ ಇವರಾಗಿದ್ದಾರೆ.

2ನೇ ಎಲಿಜಬತ್ ತನ್ನ ಮದುವೆ ಡ್ರೆಸ್ ಅನ್ನು ರೇಷನ್ ಕೂಪನ್ಸ್‌ನಲ್ಲಿ ಖರೀದಿಸಿದ್ದರು
ಎರಡನೇ ಮಹಾಯುದ್ಧದ ಬಳಿಕ ರಾಣಿ ತನ್ನ ಮದುವೆ ಡ್ರೆಸ್ ಅನ್ನು ರೇಷನ್ ಕೂಪನ್‌ಗಳನ್ನು ಬಳಸಿ ಖರೀದಿಸಿದ್ದರು, ಬ್ರಿಟಿಷ್ ಹೆರಿಟೇಜ್ ಪ್ರಕಾರ ಸರ್ಕಾರ 200 ಎಕ್ಸ್ಟ್ರಾ ರೇಷನ್ ಕೂಪನ್‌ಗಳನ್ನು ಬಟ್ಟೆ ಖರೀದಿಸಲು ನೀಡಲಾಗಿತ್ತು ಎಂದು ಹೇಳಲಾಗಿದೆ.

ರಾಣಿ ತಾವು ತಿಂದ ಪಾತ್ರೆಯನ್ನು ತಾವೇ ತೊಳೆಯುತ್ತಾರೆ
ಅಚ್ಚರಿಯಾದರೂ ಇದು ಸತ್ಯ, ರಾಣಿ ತಾವು ಆಹಾರ ಸೇವಿಸಿದ ಪಾತ್ರೆಗಳನ್ನು ತಾವೇ ತೊಳೆಯುತ್ತಾರಂತೆ.
ರಾಣಿ ಬಳಿ 30ಕ್ಕೂ ಅಧಿಕ ಕಾರ್ಗಿ ತಳಿಯ ನಾಯಿಗಳಿದ್ದೆವು
ರಾಣಿಗೆ ಕಾರ್ಗಿಸ್ ನಾಯಿಗಳೆಂದರೆ ತುಂಬಾನೇ ಪ್ರೀತಿ. ರಾಣಿ ಬಳಿ 30ಕ್ಕೂ ಅಧಿಕ ನಾಯಿಗಳಿದ್ದೆವು.
200ಕ್ಕೂ ಅಧಿಕ ಚಿತ್ರಗಳನ್ನು ಬಿಡಿಸಲು ಕೂತಿದ್ದಾರೆ
ರಾಣಿಯ ಆಡಳಿತದಲ್ಲಿ ರಾಣಿಯ ಚಿತ್ರಗಳನ್ನು ಬಿಡಿಸಲು 200ಕ್ಕೂ ಅಧಿಕ ಬಾರಿ ಕೂತಿದ್ದಾರೆ. ಅವರಿಗೆ 7 ವರ್ಷಗಳಿರುವಾಗಲೇ ಅವರ ಚಿತ್ರಗಳನ್ನು ಬಿಡಿಸಲಾಗುತ್ತಿತ್ತು.

7 ಅಡಿ ನೀರಿನಲ್ಲಿ ಸ್ನಾನ ಮಾಡುತ್ತಿದ್ದರು
ಬೆಳಗ್ಗೆ ಎದ್ದು ಟೀ ಕುಡಿದ ಬಳಿಕ ರಾಣಿ ಸ್ನಾನಕ್ಕೆ ಹೋಗುತ್ತಿದ್ದರು, ಅವರ ಸ್ನಾನದ ನೀರಿನ ಬಿಸಿ ಹದ ಯಾವತ್ತೂ ಒಂದೇ ರೀತಿ ಇರಬೇಕಾಗಿತ್ತು, ಅವರ ಸ್ನಾನ ನೀರಿನ ಉಷ್ಣಾಂಶವನ್ನು ಥರ್ಮೋಮೀಟರ್‌ನಲ್ಲಿ ನೋಡಲಾಗುತ್ತಿತ್ತು ಅಲ್ಲದೆ 7 ಅಡಿಗಿಂತ ಹೆಚ್ಚಿನ ನೀರು ಇರಬಾರದಿತ್ತು.

ರಾಣಿಗೆ ಫ್ರಾನ್ಸ್ ಭಾಷೆಯೂ ಗೊತ್ತಿತ್ತು
ರಾಣಿ ಫ್ರಾನ್ಸ್ ಭಾಷೆಯನ್ನು ತುಂಬಾ ಸ್ಪಷ್ಟವಾಗಿ ಉಚ್ಛರಿಸುತ್ತಿದ್ದರು, ಫ್ರಾನ್ಸ್‌ಗೆ ಭೇಟಿಕೊಟ್ಟಾಗ ಅದೇ ಭಾಷೆಯಲ್ಲಿ ಮಾತನಾಡುತ್ತಿದ್ದರು.

ಎಲಿಜಬತ್ ರಾಣಿಯ ದಾಖಲೆ
* ಬ್ರಿಟನ್ ರಾಜಮನೆತನವನ್ನು ದೀರ್ಘ ಕಾಲ ಆಳಿದ ವ್ಯಕ್ತಿ
* ಬ್ರಿಟನ್‌ನ ರಾಣಿಯರಲ್ಲಿ ಅತೀ ಹೆಚ್ಚು ಕಾಲ ಬದುಕಿದವರು
* ಇವರ ಭಾವಚಿತ್ರದ ಕರೆನ್ಸಿಗಳೂ ಇವೆ
* ಪ್ರಪಂಚದಲ್ಲಿರುವ ರಾಜಮನೆತನದ ರಾಣಿಯರಲ್ಲಿ ಅತ್ಯಂತ ಶ್ರೀಮಂತೆ ರಾಣಿ ಇವರಾಗಿದ್ದರು.



Click it and Unblock the Notifications











