ಲೆಫ್ಟ್ ಹ್ಯಾಂಡರ್ಸ್ ಡೇ: ಎಡಗೈ ಬಳಸುವವರ ಆಸಕ್ತಿದಾಯಕ ವಿಷಯಗಳಿವು

ಇಂದು ಅಂತಾರಾಷ್ಟ್ರೀಯ ಎಡಗೈ ಬಳಕೆದಾರರ ದಿನ ಅಂದರೆ ಲೆಫ್ಟ್ ಹ್ಯಾಂಡರ್ಸ್ ಡೇ. ನನ್ನನ್ನು ಸೇರಿಸಿ ಈ ಜಗತ್ತಲ್ಲಿ ಎಡಗೈ ಬಳಕೆದಾರರು ಬಹಳಷ್ಟು ಮಂದಿ ಇದ್ದಾರೆ. ಕೆಲವರು ಎಡಗೈ ಬಳಕೆದಾರರನ್ನು ಅದೃಷ್ಟವಂತರೆಂದು ಭಾವಿಸಿದರೆ ಇನ್ನು ಅಪಶಕುನ ಅನ್ನುವವರೂ ಕೆಲವರಿದ್ದಾರೆ. ಏಕೆಂದರೆ ಒಳ್ಳೆ ಕೆಲಸಗಳನ್ನು ಎಡಗೈಯಿಂದ ಮಾಡುವುದು ತರವಲ್ಲ ಎಂಬುದು ಅವರ ನಂಬಿಕೆ. ಇದೇ ಮನೋಭಾವ ದೂರಮಾಡಲು ಜೊತೆಗೆ ಎಡಗೈ ವ್ಯಕ್ತಿಗಳ ಅನನ್ಯತೆ ಮತ್ತು ವ್ಯತ್ಯಾಸಗಳನ್ನು ಅರಿಯಲು ಆಗಸ್ಟ್ 13 ಅನ್ನು ವಾರ್ಷಿಕವಾಗಿ ಅಂತರರಾಷ್ಟ್ರೀಯ ಎಡಗೈ ಬಳಕೆದಾರರ ದಿನವನ್ನು ಆಚರಿಸಲಾಗುತ್ತದೆ.

ಲೆಫ್ಟ್ ಹ್ಯಾಂಡರ್ಸ್ ಡೇ ಅಥವಾ ಎಡಗೈ ಬಳಕೆದಾರರ ದಿನವಾದ ಇಂದು ಅವರ ಬಗ್ಗೆ ಇನ್ನಷ್ಟು ಆಶ್ಚರ್ಯದಾಯಕ ವಿಚಾರಗಳನ್ನು ಈ ಕೆಳಗೆ ಹಂಚಿಕೊಂಡಿದ್ದೇವೆ.

ಎಡಗೈಯಲ್ಲಿ ಬರೆಯುವವರ ಬಗ್ಗೆಗಿನ ಆಶ್ಚರ್ಯದಾಯಕ ಸಂಗತಿಗಳನ್ನು ಈ ಕೆಳಗೆ ನೀಡಲಾಗಿದೆ:

ಲೆಫ್ಟ್ ಹ್ಯಾಂಡರ್ಸ್ ಡೇಯ ಇತಿಹಾಸ:
ಈ ದಿನವನ್ನು ಮೊದಲು 1976 ರಲ್ಲಿ ಲೆಫ್ ತಾಂಡರ್ಸ್ ಇಂಟರ್ನ್ಯಾಷನಲ್ ಇಂಕ್‌ನ ಸಂಸ್ಥಾಪಕ ಡೀನ್ ಆರ್ ಕ್ಯಾಂಪ್‌ಬೆಲ್ ಜಾರಿಗೆ ತಂದರು. 1990 ರಲ್ಲಿ, ಎಡಗೈಯನ್ನು ಉತ್ತೇಜಿಸುವ ಉದ್ದೇಶದಿಂದ ಲೆಫ್‌ಥ್ಯಾಂಡರ್ಸ್ ಇಂಟರ್‌ನ್ಯಾಷನಲ್ ಕ್ಲಬ್ ಅನ್ನು ಸ್ಥಾಪಿಸಲಾಯಿತು. 1992 ರಲ್ಲಿ, "ಎಡಗೈಯವರ ಅನುಕೂಲಗಳು ಮತ್ತು ಅನಾನುಕೂಲಗಳು" ಕುರಿತು ಜಾಗೃತಿ ಮೂಡಿಸಲು ಇದೇ ಕ್ಲಬ್ ಇಂಟರ್ ನ್ಯಾಷನಲ್ ಲೆಫ್ಟ್ ಹ್ಯಾಂಡರ್ಸ್ ಡೇಯನ್ನು ಆರಂಭಿಸಿತು.

ಎಡಗೈಯಲ್ಲಿ ಬರೆಯುವವರ ಬಗ್ಗೆಗಿನ ಆಶ್ಚರ್ಯದಾಯಕ ಸಂಗತಿಗಳು:

ಎಡಗೈ ಬಳಕೆದಾರರು ನೀರಿನಲ್ಲಿ ಮುಳುಗುವ ಸಾಧ್ಯತೆ ಕಡಿಮೆ:

ಎಡಗೈ ಬಳಕೆದಾರರು ನೀರಿನಲ್ಲಿ ಮುಳುಗುವ ಸಾಧ್ಯತೆ ಕಡಿಮೆ:

ಹೌದು, ಎಡಗೈಯಲ್ಲಿ ಬರೆಯುವವರು ನೀರಿನಲ್ಲಿ ಮುಳುಗುವ ಸಾಧ್ಯತೆ ಕಡಿಮೆ ಅಂತೆ. ಏಕೆಂದರೆ ಬಲಗೈಗಿಂತ ಎಡಗೈಯಲ್ಲಿ ವೇಗವಾಗಿ ಈಜಬಹುದು. ಹಾಗಂತ ಈಜು ಬರದೇ ಇರುವವರು ನೀರಿಗೆ ಹಾರಬೇಡಿ. ಅದು ಹುಚ್ಚುತನ.

ಮಲ್ಟಿ ಟಾಸ್ಕಿಂಗ್ ಮಾಡುವವರು:

ಮಲ್ಟಿ ಟಾಸ್ಕಿಂಗ್ ಮಾಡುವವರು:

ಎಡಗೈ ಯಲ್ಲಿ ಬರೆಯುವವರು ಏಕಕಾಲದಲ್ಲಿ ಹಲವಾರು ಕಾರ್ಯಗಳನ್ನು ನಿರ್ವಹಿಸಬಲ್ಲರು. ಆ ಶಕ್ತಿ ಅವರಿಗಿದೆ. ಜೊತೆಗೆ ಕೆಲಸಗಳಿಗೆ ಹೆಚ್ಚು ಶ್ರದ್ಧೆ, ಬದ್ಧತೆಯನ್ನು ಹೊಂದಿರುತ್ತಾರೆ. ಇದರೊಂದಿಗೆ ಅತ್ಯಂತ ಮುಖ್ಯವಾದ ವಿಷಯವೆಂದರೆ ಅವರ ಎರಡೂ ಕೈಗಳ ವೇಗವೂ ಒಂದೇ ಆಗಿರುತ್ತದೆ. ಅದೇ ವೇಗದಲ್ಲೇ ಕೆಲಸಮಾಡುತ್ತಾರೆ.

ಕ್ರೀಡೆಯಲ್ಲಿ ಮುಂದೆ:

ಕ್ರೀಡೆಯಲ್ಲಿ ಮುಂದೆ:

ಎಡಗೈ ಆಟಗಾರರನ್ನು ಕ್ರೀಡೆಯ ವಿಷಯದಲ್ಲಿ ಉತ್ತಮವೆಂದು ಪರಿಗಣಿಸಲಾಗುತ್ತದೆ. ಅವರಿಗೆ ಕ್ರೀಡೆ ಅಂದರೆ ಅಚ್ಚುಮೆಚ್ಚು. ಎಡಗಯ ಬಳಸಿಕೊಂಡೇ ಕ್ರೀಡೆಯಲ್ಲಿ ತಮ್ಮ ಛಾಪನ್ನು ಮೂಡಿಸಿರುತ್ತಾರೆ. ಎಡಗೈ ಬಳಸುವ ಜನರು ಬಾಕ್ಸಿಂಗ್, ಟೆನಿಸ್ ನಂತಹ ಕ್ರೀಡೆಗಳಲ್ಲಿ ಉತ್ತಮರಾಗಿರುತ್ತಾರೆ.

ಹೆಚ್ಚು ಬುದ್ಧಿವಂತರು:

ಹೆಚ್ಚು ಬುದ್ಧಿವಂತರು:

ಇದನ್ನು ಸಾಮಾನ್ಯವಾಗಿ ನಾವೆಲ್ಲಾ ಕೇಳಿರುತ್ತೇವೆ. ಸಂಶೋಧನೆಯ ಪ್ರಕಾರ, ಎಡಗೈಯಲ್ಲಿ ಬರೆಯವವರನ್ನು ಹೆಚ್ಚು ಬುದ್ಧಿವಂತರೆಂಬುದು ಸಾಬೀತಾಗಿದೆ. ಎಡಗೈಯ ಜನರು ಮೆದುಳಿನ ಎರಡೂ ಭಾಗಗಳನ್ನು ಬಳಸಲು ಸಮರ್ಥರಾಗಿರುವುದರಿಂದ ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ವೇಗವಾಗಿ ಗುಣಪಡಿಸಲು ಸಹಾಯವಾಗುತ್ತದೆ.

ಸಾಧಕರು:

ಸಾಧಕರು:

ಹೌದು, ಎಡಗೈಯಲ್ಲಿ ಬರೆಯುವವರು ಸಾಧಕರಾಗುತ್ತಾರೆ ಎಂಬ ಮಾತಿದೆ. ಯುಎಸ್ ಅಧ್ಯಕ್ಷರಲ್ಲಿ ಹೆಚ್ಚಿನವರು ಎಡಗೈಯಲ್ಲಿ ಬರೆಯುವವರು ಎಂದು ಹೇಳಿದರೆ ನಿಮಗೆ ಆಶ್ಚರ್ಯವಾಗುತ್ತದೆ. ಇವುಗಳಲ್ಲಿ ಜೇಮ್ಸ್ ಎ. ಗಾರ್ಫೀಲ್ಡ್, ರೊನಾಲ್ಡ್ ರೇಗನ್, ಜಾರ್ಜ್ ಎಚ್‌ಡಬ್ಲ್ಯೂ ಬುಷ್, ಬಿಲ್ ಕ್ಲಿಂಟನ್ ಮತ್ತು ಬರಾಕ್ ಒಬಾಮ ಕೂಡ ಸೇರಿದ್ದಾರೆ.

English summary

Interesting Facts About Left Handers in Kannada

Here we talking about Interesting facts about left handers in kannada, read on
X
Desktop Bottom Promotion