Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ದೇಹದ ಈ ಭಾಗಗಳಲ್ಲಿ ನಿಮಗೇನಾದರೂ ಮಚ್ಚೆಯಿದ್ದರೆ, ನಿಮಗಿಂತ ಅದೃಷ್ಟವಂತರು ಬೇರೊಬ್ಬರಿಲ್ಲ
ಸಾಮಾನ್ಯವಾಗಿ ನಮ್ಮ ಜನ್ಮಜಾತ ಗುರುತುಗಳಲ್ಲಿ ಮಚ್ಚೆಯೂ ಒಂದು. ಕೆಲವು ನಿರ್ದಿಷ್ಟ ಜಾಗದಲ್ಲಿ ಮಚ್ಚೆ ಇದ್ದರೆ, ಅಂತಹವರನ್ನು ಅದೃಷ್ಟವಂತರೆಂದು ಹೇಳುವುದುಂಟು. ಈ ಮಚ್ಚೆಗಳು ಜನರ ಭವಿಷ್ಯ, ಜೀವನ ಮೊದಲಾದವುಗಳ ಬಗ್ಗೆ ಮಾಹಿತಿ ನೀಡುತ್ತವೆ.
ಕೆಲವು ಹಿಂದೂ ನಂಬಿಕೆಗಳ ಪ್ರಕಾರ, ಆರಂಭಿಕ ಭ್ರೂಣದ ಬೆಳವಣಿಗೆಯ ಸಮಯದಲ್ಲಿ ಗ್ರಹಗಳ ಸ್ಥಾನದಿಂದಾಗಿ ದೇಹದ ಮೇಲೆ ಮಚ್ಚೆ ಬೆಳೆಯುತ್ತವೆ. ಅವುಗಳ ಪ್ರಭಾವ ಮಚ್ಚೆಯ ರಚನೆ, ಬಣ್ಣದಿಂದ ಹಿಡಿದು, ಅವು ಇರುವ ದೇಹದ ಭಾಗವನ್ನು ಆಧರಿಸಿರುತ್ತವೆ. ಆದ್ದರಿಂದ ಇಂದು ನಾವು ನಿಮ್ಮ ದೇಹದ ಮೇಲಿರುವ ಅದೃಷ್ಟದ ಮಚ್ಚೆಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ.
ದೇಹದ ಯಾವ ಭಾಗದಲ್ಲಿ ಮಚ್ಚೆಯಿದ್ದರೆ ನಿಮಗೆ ಅದೃಷ್ಟ ಎಂಬುದನ್ನು ಈ ಕೆಳಗೆ ನೀಡಲಾಗಿದೆ:

ಹಣೆ:
ನಿಮ್ಮ ಹಣೆಯ ಬಲಭಾಗದಲ್ಲಿ ಮಚ್ಚೆ ಹೊಂದಿದ್ದರೆ, ನೀವು ಬೆಳೆದಂತೆ ಸಾಕಷ್ಟು ಹಣವನ್ನು ಗಳಿಸುತ್ತೀರಿ ಎಂದು ಇದು ಸೂಚಿಸುತ್ತದೆ. ಜೊತೆಗೆ ವಿದೇಶ ಪ್ರವಾಸಕ್ಕೆ ಸಾಕಷ್ಟು ಅವಕಾಶಗಳನ್ನು ಪಡೆಯಬಹುದು. ಅದೇ ಸಮಯದಲ್ಲಿ, ನಿಮ್ಮ ಹಣೆಯ ಎಡಭಾಗದಲ್ಲಿ ಮಚ್ಚೆ ಇದ್ದರೆ, ಸಾಕಷ್ಟು ಸಂಪತ್ತನ್ನು ಸಂಗ್ರಹಿಸಿದ್ದರೂ, ಇತರರಿಗೆ ಸಹಾಯ ಮಾಡಲು ಆಸಕ್ತಿ ವಹಿಸಲಾರರು ಎಂಬುದನ್ನು ಸೂಚಿಸುವುದು.

ಹುಬ್ಬು:
ನಿಮ್ಮ ಹುಬ್ಬುಗಳ ನಡುವೆ ಒಂದು ಮಚ್ಚೆ ಇದ್ದರೆ, ಅಪಾರ ಸಂಪತ್ತು ಮತ್ತು ಆರೋಗ್ಯವನ್ನು ಪಡೆಯುವ ಸಾಧ್ಯತೆಯಿದೆ. ಮತ್ತೊಂದೆಡೆ, ನಿಮ್ಮ ಹುಬ್ಬುಗಳ ಮೇಲೆ ಮಚ್ಚೆ ಇದ್ದರೆ, ಮದುವೆಯಾದ ನಂತರ ನೀವು ಸಾಕಷ್ಟು ಅದೃಷ್ಟವನ್ನು ಪಡೆದುಕೊಳ್ಳುತ್ತೀರಿ ಎಂದು ಸೂಚಿಸುತ್ತದೆ.

ಕಣ್ಣಿನರೆಪ್ಪೆ:
ನಿಮ್ಮ ಕಣ್ಣುರೆಪ್ಪೆಗಳಲ್ಲಿ ಯಾವುದಾದರೂ ಒಂದು ಮಚ್ಚೆ ಇದ್ದರೆ, ಇದರರ್ಥ ನೀವು ಶ್ರೀಮಂತ ಮತ್ತು ಪ್ರಸಿದ್ಧರಾಗುತ್ತೀರಿ. ಮತ್ತೊಂದೆಡೆ, ನಿಮ್ಮ ಕೆಳಗಿನ ಕಣ್ಣಿನರೆಪ್ಪೆಯಲ್ಲಿ ಮಚ್ಚೆ ಇದ್ದರೆ, ನೀವು ಅತಿಯಾದ ಖರ್ಚು ಮಾಡುವವರು ಎಂದು ಸೂಚಿಸಬಹುದು. ಆದ್ದರಿಂದ, ನೀವು ಸಾಕಷ್ಟು ಸಂಪತ್ತು ಗಳಿಸಿದರೂ, ಅದನ್ನು ಉಳಿಸಲು ನಿಮಗೆ ಕಷ್ಟವಾಗುತ್ತದೆ.

ಎದೆ:
ನಿಮ್ಮ ಎದೆಯ ಮೇಲೆ ಮಚ್ಚೆ ಇದ್ದರೆ, ನಿಮ್ಮನ್ನು ಅದೃಷ್ಟವಂತರೆಂದು ಪರಿಗಣಿಸಿ. ನಿಮ್ಮ ಎದೆಯ ಮೇಲಿನ ಮಚ್ಚೆ ನೀವು ಸಾಕಷ್ಟು ಮಹತ್ವಾಕಾಂಕ್ಷಿ ಮತ್ತು ಜೀವನದಲ್ಲಿ ಹೆಚ್ಚಿನ ವಿಷಯಗಳತ್ತ ಸಾಗುತ್ತಿದ್ದೀರಿ ಎಂದು ಸೂಚಿಸವುದು. ನೀವು ನಿಮ್ಮ ಜೀವನವನ್ನು ಸರಿಯಾಗಿ ಯೋಜಿಸಿದರೆ, ನೀವು ತುಂಬಾ ಯಶಸ್ವಿಯಾಗುತ್ತೀರಿ.

ಕಿವಿ:
ಕಿವಿಗಳ ಒಳ ಅಥವಾ ಹೊರ ಭಾಗದಲ್ಲಿನ ಮಚ್ಚೆ ಐಷಾರಾಮಿ ರುಚಿಯನ್ನು ಸೂಚಿಸುತ್ತದೆ . ಹೆಚ್ಚು ಯೋಚಿಸದೆ ಇತರರಿಗಾಗಿ ಹಣವನ್ನು ಖರ್ಚು ಮಾಡುವವರು. ಆದ್ದರಿಂದ, ಈ ಮಚ್ಚೆ ನಿಜವಾಗಿಯೂ ಮಂಗಳಕರವೆಂದು ಪರಿಗಣಿಸಲಾಗಿದ್ದರೂ, ಹಣಕಾಸನ್ನು ಬುದ್ಧಿವಂತಿಕೆಯಿಂದ ನಿರ್ವಹಿಸುವುದು ಮುಖ್ಯವಾಗಿದೆ.

ತುಟಿ:
ನಿಮ್ಮ ತುಟಿಗಳ ಹೊರ ತುದಿಯಲ್ಲಿರುವ ಮಚ್ಚೆ ಮಂಗಳಕರವೆಂದು ಪರಿಗಣಿಸಲಾದ್ದರೆ, ನಿಮ್ಮ ಕೆಳ ತುಟಿಯಲ್ಲಿನ ಮಚ್ಚೆ, ಜೂಜಾಟದ ಪ್ರವೃತ್ತಿಯನ್ನು ಸೂಚಿಸುತ್ತದೆ.

ಭುಜ:
ಬಲ ಭುಜದ ಮೇಲೆ ಮಚ್ಚೆ ಹೊಂದಿರುವ ಜನರು ತಮ್ಮ ಹಣಕಾಸನ್ನು ಚೆನ್ನಾಗಿ ನಿರ್ವಹಿಸುತ್ತಾರೆ. ಸಂಪನ್ಮೂಲಗಳನ್ನು ಬುದ್ಧಿವಂತಿಕೆಯಿಂದ ಹೇಗೆ ಬಳಸಿಕೊಳ್ಳಬೇಕೆಂಬುದೂ ಅವರಿಗೆ ತಿಳಿದಿದೆ. ಆದ್ದರಿಂದ ನಿಮ್ಮ ಬಲ ಭುಜದ ಮೇಲೆ ಮಚ್ಚೆ ಇದ್ದರೆ, ಯಶಸ್ಸು ಖಚಿತ.

ಬಲ ಅಂಗೈ ಮೇಲೆ:
ನಿಮ್ಮ ಬಲ ಅಂಗೈಯಲ್ಲಿ ಒಂದು ಮಚ್ಚೆ ಇದ್ದರೆ, ಅದು ನಿಜವಾಗಿಯೂ ಶ್ರೀಮಂತ ಮತ್ತು ಯಶಸ್ವಿ ಜೀವನದ ಕಡೆಗೆ ಕೊಂಡೊಯ್ಯುತ್ತದೆ.

ತುಟಿಗಳ ಮೇಲೆ ಅಥವಾ ಹತ್ತಿರದಲ್ಲಿ:
ತಮ್ಮ ತುಟಿಗಳ ಮೇಲಿರುವ ಅಥವಾ ತುಟಿಯ ಹತ್ತಿರ ಮಚ್ಚೆ ಇರುವವರು ಉತ್ತಮ ಬ್ಯಾಂಕ್ ಬ್ಯಾಲೆನ್ಸ್ ಪಡೆಯುತ್ತಾರೆ.



Click it and Unblock the Notifications
