ವಾಸ್ತು ಪ್ರಕಾರ, ಮನೆಯೊಳಗೆ ಪೀಠೋಪಕರಣಗಳನ್ನು ಹೇಗೆ ಇಟ್ಟರೆ ಉತ್ತಮ?

ಮನೆಯನ್ನು ವಾಸ್ತು ಪ್ರಕಾರ ಕಟ್ಟುವುದು ಎಷ್ಟು ಮುಖ್ಯವೋ, ಮನೆಯೊಳಗೆ ಪೀಟೋಪಕರಣಗಳನ್ನು ವಾಸ್ತು ಪ್ರಕಾರವಾಗಿ ಇಡುವುದು ಅಷ್ಟೇ ಮುಖ್ಯ. ಹೆಚ್ಚಿನವರು ಇದಕ್ಕೆ ಗಮನ ಕೊಡುವುದೇ ಇಲ್ಲ. ಇದರಿಂದ ಮುಂದೆ ಅವರಿಗೆ ತಿಳಿಯದೇ ಅನೇಕ ಸಮಸ್ಯೆಗೆ ನಾಂದಿಯಾಗುತ್ತದೆ. ಸರಿಯಾದ ಜಾಗದಲ್ಲಿ ಕುರ್ಚಿ-ಮೇಜು ಅಥವಾ ಇನ್ನಾವುದೇ ಪೀಠೋಪಕರಣಗಳನ್ನು ಇಡುವುದು ಕುಟುಂಬದಲ್ಲಿ ಸಾಮರಸ್ಯವನ್ನು ಮಾತ್ರವಲ್ಲದೆ ಸಂಪತ್ತು ಮತ್ತು ಅದೃಷ್ಟವನ್ನೂ ತರುತ್ತದೆ. ಆದ್ದರಿಂದ, ನಿಮ್ಮ ಪೀಠೋಪಕರಣಗಳನ್ನು ನಿಮ್ಮ ಮನೆಯಲ್ಲಿ ಹೇಗೆ ಇಡಬೇಕು ಎಂಬುದರ ಕುರಿತು ಕೆಲವು ವಾಸ್ತು ಸಲಹೆಗಳು ಇಲ್ಲಿವೆ.

ನಿಮ್ಮ ಮನೆಯಲ್ಲಿ ಪೀಠೋಪಕರಣಗಳನ್ನು ಹೇಗೆ ಇಡಬೇಕು ಎಂಬುದನ್ನು ಈ ಕೆಳಗೆ ನೀಡಲಾಗಿದೆ:

ಪ್ರವೇಶ ಮತ್ತು ಲಿವಿಂಗ್ ರೂಮ್:

ಪ್ರವೇಶ ಮತ್ತು ಲಿವಿಂಗ್ ರೂಮ್:

ಮನೆ ಪ್ರವೇಶಿಸುವಾಗ ನಾವು ನೋಡುವ ಮೊದಲ ಸ್ಥಳವೆಂದರೆ ಲಿವಿಂಗ್ ರೂಮ್. ಎಲ್ಲಾ ಶಕ್ತಿಗಳು ಈ ಕೋಣೆಯ ಮೂಲಕ ಒಳ ಪ್ರವೇಶಿಸುತ್ತವೆ. ಆದ್ದರಿಂದ ಈ ಕೋಣೆಗೆ ಸ್ವಾಗತಾರ್ಹ ನೋಟ ಮತ್ತು ಆರಾಮದಾಯಕ ಫೀಲ್ ಇರಬೇಕು. ಸಕಾರಾತ್ಮಕ ಶಕ್ತಿಯನ್ನು ಆಕರ್ಷಿಸಲು ಸೋಫಾ ಮತ್ತು ಟೇಬಲ್ ಗಳನ್ನು ಪಶ್ಚಿಮ ಅಥವಾ ದಕ್ಷಿಣ ದಿಕ್ಕಿನಲ್ಲಿ ಇರಿಸಿ. ವೃತ್ತಾಕಾರದ ಪೀಠೋಪಕರಣಗಳನ್ನು ಆರಿಸಬೇಡಿ. ನೀವು ಟಿವಿ ಹೊಂದಿದ್ದರೆ, ಅದನ್ನು ನಿಮ್ಮ ಮನೆಗೆ ಪ್ರವೇಶಿಸುವ ಶಕ್ತಿಯನ್ನು ಪ್ರತಿಬಿಂಬಿಸುವ ಕಾರಣ ಅದನ್ನು ದಕ್ಷಿಣ ಅಥವಾ ಪೂರ್ವ ದಿಕ್ಕಿನಲ್ಲಿ ಎದುರಿಸಿ. ಎಲ್ಲಾ ಕಲಾಕೃತಿಗಳನ್ನು ಒಂದೇ ಸ್ಥಳದಲ್ಲಿ ಇಡಬೇಡಿ; ಅದನ್ನು ಚೆನ್ನಾಗಿ ಜೋಡಿಸಿ, ಬೇರೆಬೇರೆ ಕಡೆ ಇಡಿ.

ಊಟದ ಸ್ಥಳ:

ಊಟದ ಸ್ಥಳ:

ನೀವು ಪ್ರತ್ಯೇಕ ಊಟದ ಕೋಣೆಯನ್ನು ಹೊಂದಿದ್ದರೆ, ಆ ಟೇಬಲ್ ಅನ್ನು ವಾಯುವ್ಯ ದಿಕ್ಕಿನಲ್ಲಿ ಇರಿಸಿ. ನಾವು ತಿನ್ನುವ ಆಹಾರ ಮತ್ತು ತಿನ್ನುವ ವಿಧಾನ ನಮ್ಮ ಜೀರ್ಣಕ್ರಿಯೆಯ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ. ಗಾಜಿನೊಂದಿಗೆ ಮರದ ಟೇಬಲ್ ಆಯ್ಕೆಮಾಡಿ. ದಯವಿಟ್ಟು ಊಟದ ಜಾಗದ ಗೋಡೆಗಳಿಗೆ ಡಾರ್ಕ್ ಬಣ್ಣ ನೀಡಬೇಡಿ. ಊಟ ಮಾಡುವಾಗ ಅದು ಘರ್ಷಣೆಗೆ ಕಾರಣವಾಗಬಹುದು.

ಅಡಿಗೆ ಕೋಣೆ:

ಅಡಿಗೆ ಕೋಣೆ:

ಮನೆಯ ಶಾಂತಿ ಅಡುಗೆಮನೆಯ ಮೇಲೆ ಅವಲಂಬಿತವಾಗಿರುತ್ತದೆ. ಪ್ರಕೃತಿಯ ಅಂಶಗಳಾದ ಬೆಂಕಿ, ಗಾಳಿ, ನೀರು ಸಹ ಅಡುಗೆಮನೆಯಲ್ಲಿವೆ. ನಾವು ಸೇವಿಸುವ ಆಹಾರದೊಂದಿಗೆ ಈ ಅಂಶಗಳ ಸಮತೋಲನವನ್ನು ಕಾಪಾಡಿಕೊಳ್ಳುವುದು ಅತ್ಯಗತ್ಯ. ದಯವಿಟ್ಟು ನಿಮ್ಮ ಒಲೆಯನ್ನು ಸಿಂಕ್ ಬಳಿ ಅಥವಾ ಒಲೆಯ ನೇರಕ್ಕೆ ಇಡಬೇಡಿ; ಇದು ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ. ತರಕಾರಿಗಳನ್ನು ಮೂಲೆಯಲ್ಲಿ ಅಥವಾ ಕತ್ತಲೆಯಲ್ಲಿ ಇಡಬೇಡಿ.

ಮಲಗುವ ಕೋಣೆ:

ಮಲಗುವ ಕೋಣೆ:

ನಿಮ್ಮ ಮಲಗುವ ಕೋಣೆ ನಿಮ್ಮನ್ನು ಶಾಂತಗೊಳಿಸುವ ಸ್ಥಳವಾಗಿರಬೇಕು. ಹಾಸಿಗೆಯನ್ನು ನೈಋತ್ಯ ದಿಕ್ಕಿನಲ್ಲಿ ಇರಿಸಿ; ಅದು ಶಾಂತಿಯುತ ವಾತಾವರಣವನ್ನು ಸೃಷ್ಟಿಸುತ್ತದೆ. ನಿಮ್ಮ ಹಾಸಿಗೆಯನ್ನು ಕಿಟಕಿಗಳು ಮತ್ತು ಬಾಗಿಲಿನಿಂದ ದೂರವಿಡಿ. ವಾರ್ಡ್ರೋಬ್ ಇದ್ದರೆ, ಅದನ್ನು ದಕ್ಷಿಣ ಅಥವಾ ಪಶ್ಚಿಮ ದಿಕ್ಕಿನತ್ತ ಮುಖ ಮಾಡಿ ಇಡಿ. ದಯವಿಟ್ಟು ಕನ್ನಡಿಯನ್ನು ಇಡಬೇಡಿ ಇದರಿಂದ ನಿದ್ದೆ ಮಾಡುವಾಗ ಅದು ನಿಮ್ಮ ಚಿತ್ರವನ್ನು ಪ್ರತಿಬಿಂಬಿಸುತ್ತದೆ; ಅನಾರೋಗ್ಯವನ್ನು ಉಂಟುಮಾಡುತ್ತದೆ.

ಬಾತ್ ರೂಮ್:

ಬಾತ್ ರೂಮ್:

ಪ್ರಕೃತಿಯ ಎರಡು ಅಂಶಗಳು ಸಹಬಾಳ್ವೆ ನಡೆಸುವ ಮತ್ತೊಂದು ಸ್ಥಳ ಇದು. ಮನೆಯ ಶಕ್ತಿಯನ್ನು ನಿಯಂತ್ರಿಸುವಲ್ಲಿ ನೀರು ಪ್ರಮುಖ ಪಾತ್ರ ವಹಿಸುತ್ತದೆ. ನಿಮ್ಮ ಸ್ನಾನಗೃಹದಲ್ಲಿ ಮರದ ಅಥವಾ ಕಲ್ಲಿನ ನೆಲಹಾಸನ್ನು ಆರಿಸಿಕೊಳ್ಳಿ. ಸ್ನಾನಗೃಹದಲ್ಲಿ ಬೆಳಕು ಚೆನ್ನಾಗಿರಬೇಕು ಮತ್ತು ಗಾಳಿಯಾಡಬೇಕು. ಗಾಳಿಯನ್ನು ಶುದ್ಧೀಕರಿಸಲು ನಿಮ್ಮ ಬಾತ್ರೂಮ್ನಲ್ಲಿ ಸಣ್ಣ ಸಸ್ಯಗಳನ್ನು ಇರಿಸಿ. ಕಪಾಟುಗಳು ಮತ್ತು ಕನ್ನಡಿ ದಕ್ಷಿಣಕ್ಕೆ ಮುಖ ಮಾಡಿ ಇಡಬಾರದು.

English summary

How to Place Furniture in your Home, as per Vastu in Kannada

Here we talking about How to place furniture in your home, as per Vastu in Kannada, read on
Story first published: Saturday, June 26, 2021, 10:30 [IST]
X
Desktop Bottom Promotion