Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಹೋಳಿ ೨೦೨೧: ನಿಮ್ಮ ಪ್ರೀತಿಪಾತ್ರರಿಗೆ ಗಿಫ್ಟ್ ನೀಡಲು ಇಲ್ಲಿವೆ ಐಡಿಯಾಗಳು
ಕೆಟ್ಟದರ ವಿರುದ್ಧ ಒಳ್ಳೆಯತನ ಗೆದ್ದ ಹಬ್ಬವೇ ಹೋಳಿ ಹಬ್ಬ. ಬಣ್ಣಗಳಿಂದ ತುಂಬಿರುವ ಈ ಹಬ್ಬವನ್ನು ಗಿಫ್ಟ್ ನೀಡಿಯೂ ಸಹ ಆಚರಿಸಬಹುದು. ಉಡುಗೊರೆಗಳು ನಿಮ್ಮ ಪ್ರೀತಿ ಪಾತ್ರರ ಮನಸ್ಸನ್ನು ಸಂತೋಷಗೊಳಿಸುವುದಲ್ಲದೇ, ನಿಮ್ಮ ಬಗ್ಗೆ ಉತ್ತಮ ಭಾವನೆ ಬೆಳೆಯಲು ಸಹಾಯ ಮಾಡುತ್ತದೆ. ಹಾಗಾದರೆ ಈ ಹೋಳಿ ಹಬ್ಬದಂದು ನಿಮ್ಮ ಸಂಗಾತಿಗೆ, ನಿಮ್ಮ ತಮ್ಮ -ತಂಗಿಗೆ ಅಥವಾ ನಿಮ್ಮ ಉದ್ಯೋಗಿಗಳಿಗೆ ಏನೆಲ್ಲಾ ಉಡುಗೊರೆಗಳನ್ನು ನೀಡಬೇಕು ಎಂಬುದನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.


ಗಂಡನಿಗೆ ಹೋಳಿ ಉಡುಗೊರೆ :
1. ಹೋಳಿ ಟಿ-ಶರ್ಟ್:
ಅರ್ಧ ತೋಳು ಹೊಂದಿರುವ ಹೋಳಿ ವರ್ಣರಂಜಿತ ಹಾಗೂ ವಿಶೇಷ ಡಿಜೈನ್ ಇರುವ ಶರ್ಟ್ ನ್ನು ನಿಮ್ಮ ಗಂಡನಿಗೆ ಉಡುಗೊರೆಯಾಗಿ ನೀಡಬಹುದು.
೨. ಬೆನ್ನು ಮತ್ತು ಕುತ್ತಿಗೆ ಮಸಾಜರ್:
ನಿಮ್ಮ ಆದ್ಯತೆಗೆ ಅನುಗುಣವಾಗಿ ಕಡಿಮೆ, ಮಧ್ಯಮ ಮತ್ತು ಹೆಚ್ಚು ಹೀಗೆ 3 ವಿಭಿನ್ನ ವೇಗಗಳನ್ನು ಒದಗಿಸುವ ಮಸಾಜರ್ ನ್ನು ನಿಮ್ಮ ಗಂಡನಿಗೆ ಉಡುಗೊರೆಯಾಗಿ ನೀಡಿ. ಇದು ದಣಿದ, ಸ್ನಾಯುವಿನ ಬಿಗಿತವನ್ನು ನಿವಾರಿಸುತ್ತದೆ.

ಹೆಂಡತಿಗೆ ಹೋಳಿ ಉಡುಗೊರೆ:
1. ಟಿ-ಶರ್ಟ್
ಹೋಳಿ ಹಬ್ಬದಂದು ಬಣ್ಣಗಳಿಗೆ ಸರಿ ಹೊಂದುವ ಟೀ ಶರ್ಟ್ ಗಳನ್ನ್ ತಯಾರಿಸಿ ನಿಮ್ಮ ಹೆಂಡತಿಗೆ ಗಿಫ್ಟ್ ಮಾಡಬಹುದು.
2. ಫೋಟೋ ಫ್ರೇಮ್:
ಈ ಸುಂದರವಾದ ಆಕೃತಿಯಿಂದ ನಿಮ್ಮ ಒಳಾಂಗಣವನ್ನು ಅಲಂಕರಿಸಿ. ಈ ಫೋಟೋ ಫ್ರೇಮ್ ಗಳು ಸರಳವಾದರೂ ವಿನ್ಯಾಸದಲ್ಲಿ ಆಕರ್ಷಕವಾಗಿರುತ್ತವೆ.

ಗೆಳೆಯನಿಗೆ ಹೋಳಿ ಉಡುಗೊರೆಗಳು:
1. ಮಲ್ಟಿ ಕಲರ್ಸ್ ಕುಶನ್ ಕವರ್
ಮಲ್ಟಿ ಕಲರ್ಸ್ ಕುಶನ್ ಕವರ್ ಡಿಸೈನರ್ ಖಂಡಿತವಾಗಿಯೂ ನಿಮ್ಮ ಕೋಣೆಯ ಅಲಂಕಾರವನ್ನು ಹೆಚ್ಚಿಸುತ್ತದೆ. ಜೊತೆಗೆ ವರ್ಣರಂಜಿತ ಮತ್ತು ರೋಮಾಂಚಕ ಹೋಳಿ ಹಬ್ಬದ ಆಚರಣೆಯಲ್ಲಿ ಪರಿಪೂರ್ಣ ಮೋಡಿಯನ್ನು ಮಾಡುತ್ತದೆ.
2. ಸ್ಮಾರ್ಟ್ ಸ್ಪೀಕರ್:
ಎಕೋ ಡಾಟ್ ಸ್ಮಾರ್ಟ್ ಸ್ಪೀಕರ್ ಆಗಿದ್ದು ಅದು ಧ್ವನಿಯಿಂದ ಕಾರ್ಯನಿರ್ವಹಿಸಬಲ್ಲದು. ಮತ್ತು ನಿಮ್ಮ ನೆಚ್ಚಿನ ಸ್ಥಳಗಳಿಗೆ ಕೊಂಡ್ಯೊಯ್ಯ ಬಹುದು. ದೀಪಗಳನ್ನು ನಿಯಂತ್ರಿಸಲು ಧ್ವನಿ ಬಳಸಿ. ಕನ್ನಡ, ಹಿಂದಿ, ಇಂಗ್ಲಿಷ್, ತೆಲುಗು, ತಮಿಳು, ಪಂಜಾಬಿ, ಮರಾಠಿ, ಬಂಗಾಳಿ, ಭೋಜ್ಪುರಿ ಹೆಚ್ಚಿನ ಹಾಡುಗಳನ್ನು ಕೇಳಬಹುದು.

ಗೆಳತಿಗೆ ಹೋಳಿ ಉಡುಗೊರೆಗಳು:
1. ದುಬಾರಿ ಚಾಕೊಲೇಟ್
ಚಾಕೋಲೇಟ್ ಹುಡುಗಿಯರ ಆಲ್ ಟೈಮ್ ಫೇವರೆಟ್. ಹೋಳಿ ಸಂದರ್ಭದಲ್ಲಿ ನಿಮ್ಮ ಹುಡುಗಿಯನ್ನು ಸಂತೋಷಗೊಳಿಸಲು ಸ್ವಲ್ಪ ದುಬಾರಿಯ ಚಾಕೋಲೇಟ್ ಗಳನ್ನು ಉಡುಗೊರೆಯಾಗಿ ನೀಡಿ.
೨.ಪರ್ಫ್ಯೂಮ್:
ನಿಮ್ಮ ಹೆಂಡತಿಗೆ ಇಷ್ಟವಾಗುವಂತಹ, ಸೌಮ್ಯ ಪರಿಮಳದ ಉತ್ತಮ ಬ್ರಾಂಡ ನ ಪರ್ಫ್ಯೂಮ್ ನ್ನು ನುಮ್ಮ ಹೆಂಡತಿಗೆ ಉಡುಗೊರೆಯಾಗಿ ನೀಡಿ. ಇದು ನಿಮ್ಮ ಹೆಂಡತಿಯ ಮನಸ್ಸನ್ನು ನಿಮ್ಮಡೆಗೆ ಎಳೆಯುತ್ತದೆ.

ಸಹೋದರನಿಗೆ ಹೋಳಿ ಉಡುಗೊರೆ:
1. ವೈರ್‌ಲೆಸ್ ಚಾರ್ಜರ್
ವೈರ್ಲೆಸ್ ಚಾರ್ಜರ್ ಇದು ಬೆಂಕಿ ನಿರೋಧಕವಾಗಿದೆ ಮತ್ತು ಎಲ್ಲಾ ಕಿ-ಸರ್ಟಿಫೈಡ್ ಫೋನ್‌ಗಳಿಗೆ ಹೊಂದಿಕೊಳ್ಳುತ್ತದೆ. ಮನೆ ಮತ್ತು ಕಚೇರಿ ಎರಡಕ್ಕೂ ಸೂಕ್ತವಾಗಿದೆ ಮತ್ತು ಹೊರಗೆ ಹೋಗುವಾಗ ಅಥವಾ ಪ್ರಯಾಣಿಸುವಾಗ ಅದನ್ನು ನಿಮ್ಮೊಂದಿಗೆ ತೆಗೆದುಕೊಳ್ಳುವುದು ಸುಲಭ.
2. ಸ್ಮಾರ್ಟ್ ಫೋನ್ ಕ್ಯಾಮೆರಾ ಲೆನ್ಸ್ ಕಿಟ್
ವೈಡ್ ಆಂಗಲ್ ಲೆನ್ಸ್ ನಿಮ್ಮ ಕ್ಯಾಮೆರಾಗೆ ಹೆಚ್ಚಿನ ಪ್ರದೇಶವನ್ನು ಸೆರೆಹಿಡಿಯುವ ಶಕ್ತಿಯನ್ನು ನೀಡುತ್ತದೆ. ಆದ್ದರಿಂದ ನಿಮ್ಮ ಸಹೋದರನಿಗೆ ಈ ಗಿಫ್ಟ್ ನೀಡಿ.



Click it and Unblock the Notifications
