Latest Updates
-
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ?
Guru Purnima 2025 Wishes : ಗುರುಪೂರ್ಣಿಮಾ : ನೆಚ್ಚಿನ ಗುರುವಿಗೆ ಶುಭಾಶಯ ಕೋರಲು ಇಲ್ಲಿವೆ ಸಂದೇಶಗಳು
'ಗುರುವಿನ ಗುಲಾಮನಾಗುವ ತನಕ ದೊರೆಯದ್ದಣ್ಣ ಮುಕುತಿ' ಎಂಬ ನಾಣ್ಣುಡಿಯನ್ನು ಕೇಳಿರ್ತಿರಾ. ಜೀವನದಲ್ಲಿ ಪೋಷಕರ ಪಾತ್ರ ಎಷ್ಟಿದೆಯೋ, ಅಷ್ಟೇ ಗುರುಗಳ ಪಾತ್ರವೂ ಇದೆ. ನಮ್ಮಲ್ಲಿರುವ ಅಂಧಕಾರವನ್ನು ದೂರಮಾಡಿ, ಜ್ಞಾನವೆಂಬ ಬೆಳಕನ್ನು ನೀಡುವ ಮಹಾನ್ ಶಕ್ತಿಯೇ ಗುರು.
ಬದುಕಲ್ಲಿ ಏನಾದರೂ ಸಾಧಿಸಬೇಕೆಂದರೆ ಗುರುವಿನ ಮಾರ್ಗದರ್ಶನ ಬೇಕೇ ಬೇಕು. ಇಂತಹ ಗುರುವಿಗೆ ನಮನ ಸಲ್ಲಿಸುವ ದಿನವೇ ಗುರುಪೂರ್ಣಿಮ. ಇದೇ ಬರುವ ಜುಲೈ 10ರಂದು ಆಚರಣೆ ಮಾಡುವ ಈ ದಿನದಂದು ನಿಮ್ಮ ನೆಚ್ಚಿನ ಗುರುವಿಗೆ ಶುಭಾಶಯಗಳನ್ನು ಕೋರಲು ಇಲ್ಲಿವೆ ಸಂದೇಶಗಳು.

ಗುರುಪೂರ್ಣಿಮದಂದು ನಿಮ್ಮ ನೆಚ್ಚಿನ ಗುರುವಿಗೆ ಗುರುವಂದನೆ ತಿಳಿಸಲು ಇಲ್ಲಿವೆ ಕೋಟ್ಸ್ ಹಾಗೂ ಸಂದೇಶಗಳು:

ಗುರುಪೂರ್ಣಿಮ ಶುಭಾಶಯಗಳು:
ಗುರುಬ್ರಹ್ಮ ಗುರುರ್ವಿಷ್ಣುಃ
ಗುರುದೇವೋ ಮಹೇಶ್ವರಃ
ಗುರುಸಾಕ್ಷಾತ್ ಪರಬ್ರಹ್ಮ
ತಸ್ಮೈ ಶ್ರೀ ಗುರುವೇ ನಮಃ
ಸರ್ವರಿಗೂ ಗುರುಪೂರ್ಣಿಮ ದಿನದ ಶುಭಾಶಯಗಳು

ಗುರುಪೂರ್ಣಿಮಾ ಶುಭಾಶಯಗಳು
ಗುರುವೆಂದರೆ ಕೇವಲ ಶಿಕ್ಷಕರಷ್ಟೇ ಅಲ್ಲ,
ಜೀವನದಲ್ಲಿ ಸರಿಯಾದ ದಾರಿ ತೋರುವ ಪ್ರತಿಯೊಬ್ಬರೂ ಗುರುಗಳೇ,
ಇಂತಹ ಎಲ್ಲಾ ಗುರುವೃಂದಕ್ಕೂ ಗುರುಪೂರ್ಣಿಮದ ಶುಭಾಶಯಗಳು

ಗುರುಪೂರ್ಣಿಮಾ ಶುಭಾಶಯಗಳು
ನನ್ನ ಜೀವನದ ಪ್ರತಿಯೊಂದು ಹಂತದಲ್ಲಿಯೂ,
ನನ್ನನ್ನು ತಿದ್ದಿ ತೀಡಿದ ಪ್ರೀತಿಯ ಗುರುವಿಗೆ
ಗುರುಪೂರ್ಣಿಮ ದಿನದ ಶುಭಾಶಯಗಳು

ಗುರುಪೂರ್ಣಿಮಾ ಶುಭಾಶಯಗಳು
ಮುಂದೆ ಗುರಿ, ಹಿಂದೆ ಗುರುವಿದ್ದರೆ ಜಯ ನಮ್ಮದೇ..
ಈ ವಿಜಯಕ್ಕೆ ಕಾರಣೀಭೂತರಾದ ನನ್ನೆಲ್ಲಾ ಗುರುಗಳಿಗೂ
ಗುರುಪೂರ್ಣಿಮ ದಿನದ ಶುಭಾಶಯಗಳು

ಗುರುಪೂರ್ಣಿಮಾ ಶುಭಾಶಯಗಳು
ನಮ್ಮ ಅಂಧಕಾರವನ್ನು ತೊಲಗಿಸಿ,
ಜ್ಞಾನದ ಬೆಳಕನ್ನು ನಮ್ಮಲ್ಲಿ ಮೂಡಿಸಿ,
ಹೆಜ್ಜೆ ಹೆಜ್ಜೆಯಲ್ಲೂ ನಮ್ಮನ್ನು ತಿದ್ದುವ ಗುರುಗಳೆಲ್ಲರಿಗೂ
ಗುರುಪೂರ್ಣಿಮ ದಿನದ ಹಾರ್ದಿಕ ಶುಭಾಶಯಗಳು

ಗುರುಪೂರ್ಣಿಮಾ ಶುಭಾಶಯಗಳು
ಗುರು ಎಂದರೆ ವ್ಯಕ್ತಿಯಲ್ಲ,
ಅಜ್ಞಾನದಿಂದ ಜ್ಞಾನದ ಕಡೆಗೆ ಕರೆದೊಯ್ಯುವ ಶಕ್ತಿ..
ನನ್ನೆಲ್ಲಾ ಪ್ರೀತಿಯ ಗುರುಗಳಿಗೆ ಗುರುಪೂರ್ಣಿಮ ದಿನದ ಶುಭಾಶಯಗಳು

ಗುರುಪೂರ್ಣಿಮಾ ಶುಭಾಶಯಗಳು
ಮಾನವನನ್ನು ಸೃಷ್ಟಿಸುವುದು ದೇವರ ಧರ್ಮ,
ಆ ಮಾನವನನ್ನು ಉತ್ತಮನಾಗಿ ಪರಿವರ್ತಿಸುವುದು ಗುರುವಿನ ಧರ್ಮ
ಈ ಪರಿವರ್ತನೆ ಹಾದಿ ತೋರುವ ಗುರುಗಳಿಗೆ
ಗುರುಪೂರ್ಣಿಮ ದಿನದ ಶುಭಾಶಯಗಳು

ಗುರುಪೂರ್ಣಿಮಾ ಶುಭಾಶಯಗಳು
ವಿದ್ಯಾರ್ಥಿ ಕಷ್ಟದಲ್ಲಿದ್ದಾಗ,
ಆತನಿಗೆ ಹೆಗಲಾಗಿ ನಿಲ್ಲುವವನೇ ನಿಜವಾದ ಗುರು,
ನನ್ನ ಕಷ್ಟಕ್ಕೆ ಹೆಗಲಾದ ನನ್ನ ಗುರುವಿಗೆ
ಗುರುಪೂರ್ಣಿಮ ದಿನದ ಶುಭಾಶಯಗಳು

ಗುರುಪೂರ್ಣಿಮಾ ಶುಭಾಶಯಗಳು
ಅಜ್ಞಾನದಿಂದ ಜ್ಞಾನದೆಡೆಗೆ,
ಕತ್ತಲೆಯಿಂದ ಬೆಳಕಿನೆಡೆಗೆ
ಭಯದಿಂದ ನಿರ್ಭಯದೆಡೆಗೆ
ಕರೆದುಕೊಂಡು ಹೋಗುವ ಅದ್ಭುತ ಶಕ್ತಿಯೇ ಗುರು
ಇಂತಹ ಮಹಾನ್ ಶಕ್ತಿಗೆ ಗುರುಪೂರ್ಣಿಮ ದಿನದ ಶುಭಾಶಯಗಳು



Click it and Unblock the Notifications