Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಹೆಣ್ಣಿನಲ್ಲಿರುವ ಈ ಗುಣಗಳೇ ಪ್ರತಿಯೊಬ್ಬರನ್ನೂ ತಕ್ಷಣವೇ ಸೆಳೆಯುವುದು
ಕೆಲವು ಮಹಿಳೆಯರನ್ನ ನೋಡಿದಾಗ ವಾಹ್, ನಾವು ಅವ್ರ ಥರ ಇರ್ಬೇಕು ಅನ್ನೋ ಭಾವನೆ ಬರುವುದುಂಟು. ಅದಕ್ಕೆ ಕಾರಣ ಅವರ ನಡವಳಿಕೆ, ಹಾವ -ಭಾವ, ಮಾತನಾಡುವ ಶೈಲಿ ಇತ್ಯಾದಿಗಳು. ಜೊತೆಗೆ ಅವರ ಪಾಸಿಟಿವ್ ಆಲೋಚನೆಗಳು ಸಹ ಎಲ್ಲರ ಗಮನವನ್ನ ಕ್ಷಣ ಮಾತ್ರದಲ್ಲಿ ಸೆಳೆದು ಬಿಡುತ್ತದೆ. ಹಾಗಾದ್ರೆ ಮಹಿಳೆಯರ ಇಂತಹ ಯಾವ ಅಭ್ಯಾಸಗಳು ಆಕೆಯನ್ನು ಇನ್ನಷ್ಟು ಆಕರ್ಷಕಗೊಳಿಸುತ್ತವೆ ಎಂಬುದನ್ನು ಇಲ್ಲಿ ನೋಡೋಣ. ಈ ಕೌಶಲ್ಯಗಳನ್ನು ನೀವೂ ಅಳವಡಿಸಿಕೊಂಡು, ಎಲ್ಲರ ನಡುವೆ ಆಕರ್ಷಕ ವ್ಯಕ್ತಿತ್ವದವರಾಗಿ ಇರಿ.

ಮಹಿಳೆಯರನ್ನು ಆಕರ್ಷಕಗೊಳಿಸುವ ಗುಣಗಳು ಯಾವುದು ಎಂಬುದನ್ನು ಈ ಕೆಳಗೆ ನೀಡಲಾಗಿದೆ :

ಆತ್ಮವಿಶ್ವಾಸ:
ತಮ್ಮ ಬಗ್ಗೆ, ತಮ್ಮ ಸಾಮರ್ಥ್ಯಗಳ ಬಗ್ಗೆ ವಿಶ್ವಾಸ ಹೊಂದಿರುವ ಮಹಿಳೆಯರು ತುಂಬಾ ಆಕರ್ಷಕವಾಗಿರುತ್ತಾರೆ. ಏಕೆಂದರೆ ಇವರು ತಮ್ಮನ್ನು, ತಮ್ಮ ಸೌಂದರ್ಯವನ್ನು ಇತರರೊಂದಿಗೆ ಹೋಲಿಕೆ ಮಾಡಿಕೊಳ್ಳುವುದಿಲ್ಲ. ತಮ್ಮ ಬಗ್ಗೆ ಸಾಕಷ್ಟು ಆತ್ಮವಿಶ್ವಾಸ ಹೊಂದಿರುತ್ತಾರೆ, ಅದೇ ಹುರುಪಿನಿಂದ ಪ್ರತಿಯೊಂದು ಕೆಲಸವನ್ನು ಮಾಡುತ್ತಾರೆ. ನಿಜವಾದ ಸೌಂದರ್ಯ ಎಂದರೆ ಆಂತರಿಕ ಒಳ್ಳೆಯತನ ಎಂಬುದು ಇವರ ಧ್ಯೇಯವಾಗಿದ್ದು, ಅದನ್ನೇ ನಂಬಿಕೊಂಡು ಇರುವವರು ತುಂಬಾ ಆಕರ್ಷಕ.

ವಿನಯತೆ :
ವಿನಯ ಎಂಬುದು ಪ್ರತಿಯೊಬ್ಬರಿಗೂ ತುಂಬಾ ಮುಖ್ಯ. ಅಹಂಕಾರದ ಮಾತುಗಳು ಒಳ್ಳೆಯದಲ್ಲ. ಆಕರ್ಷಕ ವ್ಯಕ್ತಿತ್ವ ಉಳ್ಳ ಮಹಿಳೆಯರು ಹಣ ಮತ್ತು ಅಧಿಕಾರದ ಬಗ್ಗೆ ಅಹಂಕಾರದಿಂದ ಎಲ್ಲಿಯೂ ಯಾರ ಬಳಿಯೂ ಮಾತನಾಡುವುದಿಲ್ಲ. ಯಾವುದೇ ವಿಚಾರಕ್ಕೆ ಕ್ಷುಲ್ಲಕವಾಗಿ ಧ್ವನಿ ಏರಿಸುವುದಿಲ್ಲ. ತನ್ನ ಜೀವನವನ್ನು ಇರುವ ಹಾಗೇ ಒಪ್ಪಿಕೊಂಡು ಬದುಕುತ್ತಾರೆ. ಅಸಹಾಯಕ ಜನರು ಸೇರಿದಂತೆ, ಎಲ್ಲ ವಿಷಯಗಳ ಬಗ್ಗೆ ಸಹಾನುಭೂತಿಯನ್ನು ಹೊಂದಿರುವ ವ್ಯಕ್ತಿ ತುಂಬಾ ಆಕರ್ಷಕ. ಸರಿಯಾದ ಪ್ರಮಾಣದ ಆತ್ಮವಿಶ್ವಾಸ ಮತ್ತು ವಿನಯತೆಯಿಂದ ನಿಮ್ಮನ್ನು ಅತ್ಯಂತ ಆಕರ್ಷಕ ಮಹಿಳೆ ಎಂದು ಕರೆಯಬಹುದು.

ಹಣಕಾಸಿನ ಭದ್ರತೆ:
ಒಬ್ಬ ಮಹಿಳೆ ತನ್ನ ಎಲ್ಲ ಹಣಕಾಸನ್ನು ಸಮರ್ಥವಾಗಿ ನಿಭಾಯಿಸುವವಳು ಎಲ್ಲರಿಂದಲೂ ಮೆಚ್ಚುಗೆಗೆ ಒಳಗಾಗುತ್ತಾಳೆ. ತಾನೇ ಸ್ವಂತವಾಗಿ ದುಡಿದ ಹಣದಿಂದ, ಜೀವನ, ಭವಿಷ್ಯ ಕಟ್ಟಿಕೊಳ್ಳುವವಳು ಮಾನಸಿಕವಾಗಿ ತುಂಬಾ ಬಲಶಾಲಿಯಾಗಿರುತ್ತಾಳೆ. ಆಕೆಯ ಉಳಿವಿಗಾಗಿ ಇತರರನ್ನು ಅವಲಂಬಿಸುವ ಅಗತ್ಯವಿಲ್ಲ. ತಾನೇ ದುಡಿದು ತನಗೆ ಬೇಕಾದುದೆಲ್ಲವನ್ನು ಕೊಂಡು, ಭದ್ರತೆಯ ಜೀವನ ಸಾಗಿಸುವ ಹೆಣ್ಣು ಆಕರ್ಷಕವಾಗಿರುತ್ತಾಳೆ.

ಧನಾತ್ಮಕ ಚಿಂತನೆ:
ಸನ್ನಿವೇಶಗಳ ಹೊರತಾಗಿಯೂ ಎಲ್ಲದರ ಬಗ್ಗೆ ಸಕಾರಾತ್ಮಕ ದೃಷ್ಟಿಕೋನವನ್ನು ಹೊಂದಿರುವುದು ನಿಜಕ್ಕೂ ಶ್ಲಾಘಿಸುವ ಗುಣವಾಗಿದೆ. ಕತ್ತಲೆಯಲ್ಲೂ ಬೆಳಕನ್ನು ಹುಡುಕುವ ನಿಜವಾದ ಪ್ರೇರಣೆಯಾಗಿರುತ್ತಾಳೆ. ಏಕೆಂದರೆ ಆಕೆಯ ಧನಾತ್ಮಕ ವ್ಯಕ್ತಿತ್ವವು ಇತರರನ್ನು ಅದೇ ದಾರಿಯಲ್ಲಿ ಯೋಚಿಸುವಂತೆ ಮಾಡುತ್ತದೆ. ನಕಾರಾತ್ಮಕ ಆಲೋಚನೆಗಳಿಂದ ದೂರವಿಡುತ್ತದೆ.

ನಗು:
ನಂಬಿ ಅಥವಾ ನಂಬದಿರಿ, ನಗು ಯಾವಾಗಲೂ ಪ್ರತಿಯೊಬ್ಬರ ಹೃದಯವನ್ನು ಆಕರ್ಷಿಸುತ್ತದೆ. ಸುಂದರ ಮತ್ತು ಆಕರ್ಷಕ ಮಹಿಳೆಯ ಮುತ್ತಿನಂತಹ ನಗು ಯಾರ ಹೃದಯವನ್ನು ಬೇಕಾದರೂ ಕರಗಿಸುತ್ತದೆ. ನಿಜವಾದ, ಪ್ರಾಮಾಣಿಕ ನಗು ಮುಗ್ದ ಮತ್ತು ಧನಾತ್ಮಕ ಮನಸ್ಸಿನ ಮೂರ್ತರೂಪವಾಗಿದೆ. ಇದಲ್ಲದೆ, ಹೆಣ್ಣಿನ ನಗು ತನ್ನ ಸುತ್ತಮುತ್ತಲಿನ ಜಾಗದಲ್ಲಿ ಪಾಸಿಟಿವ್ ವೈಬ್ ಸೃಷ್ಟಿಸುತ್ತದೆ.



Click it and Unblock the Notifications











