Latest Updates
-
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ! -
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು -
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಡೇಟಿಂಗ್: ಬಜೆಟ್ ಸ್ನೇಹಿ ಐಡಿಯಾಗಳು ಮತ್ತು ಸುರಕ್ಷಿತವಾಗಿರಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಕೋಲ್ಕತ್ತಾದಲ್ಲಿ ಭಾರಿ ಮಳೆ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಮಿಸ್ ಮಾಡಬೇಡಿ! -
ಮಳೆಗಾಲದಲ್ಲಿ ಹೊಟ್ಟೆಯ ಸಮಸ್ಯೆ ಕಾಡ್ತಿದೆಯಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ -
ಧಮಾಲ್ 4 ರಿಲೀಸ್: ಅಜಯ್ ದೇವಗನ್ ಕಾಮಿಡಿ ಹಬ್ಬಕ್ಕೆ ಫ್ಯಾಮಿಲಿ ಜೊತೆ ರೆಡಿಯಾಗಿ! -
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ! -
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್!
ಡಾ. ಬಿ. ಆರ್. ಅಂಬೇಡ್ಕರ್ 132ನೇ ಜನ್ಮದಿನ 2023: ಅಂಬೇಡ್ಕರ್‌ರ ಪ್ರಸಿದ್ಧ ಉಲ್ಲೇಖಗಳು
ಭಾರತಕ್ಕೊಂದು ಸುಭದ್ರ ಸಂವಿಧಾನವನ್ನು ನೀಡಿದ್ದು, ಇಂದಿಗೂ ನಾವದನ್ನು ಪಾಲಿಸುತ್ತಿರುವುದು ಅಂಬೇಡ್ಕರ್ ಅವರನ್ನ ಮತ್ತೆ ಮತ್ತೆ ನೆನಪಿಸುತ್ತದೆ.
ಬಾಬಾಸಾಹೇಬ್ ಅಂಬೇಡ್ಕರ್ ಎಂದೇ ಜನಪ್ರಿಯರಾಗಿರುವ ಡಾ. ಭೀಮ್ ರಾವ್ ಅಂಬೇಡ್ಕರ್ ಅವರು 'ಭಾರತದ ಸಂವಿಧಾನ'ವನ್ನು ರಚಿಸಿ, ಭಾರತಕ್ಕೆ ಒಂದು ದೊಡ್ಡ ಕೊಡುಗೆಯನ್ನೇ ನೀಡಿದ ಪ್ರಸಿದ್ಧ ನಾಯಕರು.

ಅವರು ದಲಿತರ ಮತ್ತು ಇತರ ಸಾಮಾಜಿಕವಾಗಿ ಹಿಂದುಳಿದ ವರ್ಗಗಳ ಹಕ್ಕುಗಳಿಗಾಗಿ ಹೋರಾಡಿದ ಪ್ರಸಿದ್ಧ ಮುತ್ಸದ್ಧಿ. 1891 ರ ಏಪ್ರಿಲ್ 14 ರಂದು ಡಾ. ಬಿ. ಆರ್ ಅಂಬೇಡ್ಕರ್ ಅವರು ಜನಿಸಿದರು. ಅಂಬೇಡ್ಕರ್ ಅವರ ಸುಧಾರಣೆಗಳು ಹಾಗೂ ಸಮಾಜ ಸೇವೆಗಳು ದೇಶಾದ್ಯಂತ ಪ್ರತಿಧ್ವನಿಸುತ್ತಿವೆ. ಅಂಬೇಡ್ಕರರ 132ನೇ ಜನ್ಮ ದಿನವನ್ನು ಅವರ ಹೇಳಿಕೆಗಳನ್ನು ನೆನಪಿಸಿಕೊಳ್ಳುತ್ತಾ ಅವರನ್ನು ಸ್ಮರಿಸೋಣ.
ಬಾಬಾಸಾಹೇಬ್ ಅಂಬೇಡ್ಕರ್ ರ 16 ಸ್ಪೂರ್ತಿದಾಯಕ ಉಲ್ಲೇಖಗಳು

1. ಇತಿಹಾಸ
"ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಟಿಸಲಾರರು".

2. ಸಂಘಟಿತ
"ವಿದ್ಯಾವಂತರಾಗಿರಿ, ಸಂಘಟಿತರಾಗಿರಿ ಮತ್ತು ಉತ್ತೇಜಿತರಾಗಿರಿ".

3. ಧರ್ಮ
"ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವವನ್ನು ಕಲಿಸುವ ಧರ್ಮವನ್ನು ನಾನು ಇಷ್ಟಪಡುತ್ತೇನೆ".

4. ಉತ್ತಮ
"ಜೀವನವು ದೀರ್ಘವಾಗಿರುವುದಕ್ಕಿಂತ ಉತ್ತಮವಾಗಿರಬೇಕು".

5. ಸಂವಿಧಾನ
"ಸಂವಿಧಾನವನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ನನ್ನ ಅರಿವಿಗೆ ಬಂದರೆ, ಅದನ್ನು ಸುಡುವ ಮೊದಲ ವ್ಯಕ್ತಿ ನಾನಾಗಿರುತ್ತೇನೆ".

6. ಗುರಿ
"ಮನಸ್ಸಿನ ಅಭಿವೃದ್ಧಿ, ಮಾನವ ಜನಾಂಗದ ಅಂತಿಮ ಗುರಿಯಾಗಿರಬೇಕು".

7. ಜೀವನಶೈಲಿ
"ನೀವು ಗೌರವಾನ್ವಿತ ಬದುಕನ್ನು ಬದುಕಬೇಕಾದರೆ ಸ್ವ ಸಹಾಯ ಜೀವನಶೈಲಿಯನ್ನು ಪಾಲಿಸಲೇಬೇಕು. ಇದೇ ಸರಿಯಾದ ಜೀವನಶೈಲಿ".

8. ಹೋರಾಟ
"ನಮ್ಮ ಹಕ್ಕಿಗಾಗಿ ನಾವೇ ಹೋರಾಡಬೇಕು. ಬೇರೆಯವರ ಸಹಾಯವಿಲ್ಲದೇ ಇರಬೇಕು. ಹೀಗೆ ನಿಮ್ಮನ್ನು ನೀವೇ ಉತ್ತೇಜಿಸಿ ಸಂಘಟಿತರಾಗಿ ಇರಬೇಕು. ಹೋರಾಟವಿಲ್ಲದೇ ಅಧಿಕಾರ ಮತ್ತು ಪ್ರತಿಷ್ಟೆ ನಿಮ್ಮ ಬಳಿ ಬಾರದು".

9. ಸಂಘರ್ಷ
"ಭಾರತದ ಇತಿಹಾಸ ಎಂದರೆ ಬ್ರಾಹ್ಮಣತ್ವ ಮತ್ತು ಬೌದ್ಧ ಮತದ ನಡುವಿನ ಮಾರಣಾಂತಿಕ ಎನ್ನಬಹುದಾದ ಸಂಘರ್ಷವಾಗಿದೆ".

10. ಮಹಿಳೆ
"ನನ್ನ ಪ್ರಕಾರ ಒಂದು ಸಮುದಾಯದ ಅಭಿವೃಧ್ಧಿಯನ್ನು ಅಳೆಯಬೇಕಾದರೆ ಆ ಸಮುದಾಯದ ಮಹಿಳೆಯರ ಅಭಿವೃದ್ಧಿಯೇ ಪ್ರಮುಖ ದಾರಿದೀಪವಾಗಿದೆ".

11. ಯೋಚನೆ
"ಪುರುಷರು ಒಂದು ರೀತಿಯ ವೈರ ಮನೋಭಾವದವರು. ಅವರ ಆಲೋಚನೆಗಳೂ ಇದೇ ರೀತಿಯದ್ದಾಗಿದೆ. ಒಂದು ಕಲ್ಪನೆಗೆ ಅಥವಾ ಯೋಚನೆಗೆ ಅದರ ಹಿಂದಿನ ಯೋಜನೆ ಎಷ್ಟು ಮುಖ್ಯವೋ ಆ ಯೋಚನೆಯ ಪ್ರಸರಣವೂ ಅಷ್ಟೇ ಮುಖ್ಯ. ಇಲ್ಲದಿದ್ದರೆ ಆ ಯೋಚನೆಗೆ ಸಾವು ಖಂಡಿತ".

12. ಸಮರ್ಥ
"ಮಿಲ್ ನ ಸಿದ್ಧಾಂತವಾದ ಒಂದು ರಾಷ್ಟ್ರವು ಇನ್ನೊಂದು ರಾಷ್ಟ್ರವನ್ನು ಆಳಲು ಸಮರ್ಥವಲ್ಲ ಎಂಬ ಮಾತನ್ನು ಯಾರು ನಂಬುತ್ತಾರೋ ಅವರು ಒಂದುವರ್ಗವು ಇನ್ನೊಂದು ವರ್ಗವನ್ನು ಆಳಲು ಸಮರ್ಥವಲ್ಲ ಎಂಬ ಮಾತನ್ನೂ ನಂಬಲೇಬೇಕು".

13. ಸಂಬಂಧ
"ಗಂಡ ಮತ್ತು ಹೆಂಡತಿಯ ನಡುವಿನ ಸಂಬಂಧ, ಆತ್ಮೀಯ ಗೆಳೆಯರ ಸಂಬಂಧದ ರೀತಿಯಲ್ಲಿ ಇರಬೇಕು".

14. ದಬ್ಬಾಳಿಕೆ
"ಸಾಮಾಜಿಕ ದಬ್ಬಾಳಿಕೆ ರಾಜಕೀಯ ದಬ್ಬಾಳಿಕೆಗಿಂತಲೂ ಕೆಟ್ಟದಾಗಿದೆ. ಸಮಾಜ ಸುಧಾರಣೆ ಮಾಡಲು ಹೊರಟ ವ್ಯಕ್ತಿ ರಾಜಕೀಯ ಸುಧಾರಣೆ ಮಾಡಿ ಸರಕಾರ ನಡೆಸುವವನಿಗಿಂತಲೂ ಹೆಚ್ಚಿನ ಧೈರ್ಯಶಾಲಿಯಾಗಿರುತ್ತಾನೆ".

15. ಶ್ರೇಷ್ಠ
"ಒಬ್ಬ ಶ್ರೇಷ್ಠ ವ್ಯಕ್ತಿ ಒಬ್ಬ ಮುತ್ಸದ್ಧಿಗಿಂತಲೂ ದೊಡ್ಡವನು ಯಾಕೆಂದರೆ ಶ್ರೇಷ್ಠ ವ್ಯಕ್ತಿ ಸಮಾಜದ ಸೇವಕನಾಗಿರಲೂ ಸಿದ್ಧನಾಗಿರುತ್ತಾನೆ".

16. ರಾಜಕೀಯ
"ರಾಜಕೀಯ ಎಂಬ ದೇಹಕ್ಕೆ ಕಾನೂನು ಮತ್ತು ಸುವ್ಯವಸ್ಥೆಗಳೇ ಔಷಧಿಗಳಾಗಿವೆ. ರಾಜಕೀಯಕ್ಕೆ ಕಾಯಿಲೆ ಬಂದಾಗ ಈ ಔಷಧಗಳನ್ನು ಕೊಡಲೇ ಬೇಕಾಗುತ್ತದೆ".



Click it and Unblock the Notifications