Latest Updates
-
ಮದುವೆ ಅವಧಿ ಕಡಿಮೆಯಿದ್ದರೂ ₹50 ಲಕ್ಷ ಜೀವನಾಂಶ: ಹೈಕೋರ್ಟ್ ತೀರ್ಪಿನಿಂದ ಪತಿಗಳಿಗೆ ಎಚ್ಚರಿಕೆ! -
ಗಣೇಶ ವಿಸರ್ಜನೆಗೆ ರೆಡಿಯಾಗಿದ್ದೀರಾ? ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪಾಲಿಕೆ ಸಹಾಯವಾಣಿ! -
ಹಬ್ಬದ ಸೀಸನ್ನಲ್ಲಿ ಎಚ್ಚರ! ದೆಹಲಿಯಲ್ಲಿ ಕಲಬೆರಕೆ ಸ್ವೀಟ್ಸ್ ದಾಳಿ: 30 ಸೆಕೆಂಡ್ಗಳಲ್ಲಿ ಪರೀಕ್ಷಿಸುವುದು ಹೇಗೆ? -
ಸೆಪ್ಟೆಂಬರ್ 25 ಗಣೇಶ ವಿಸರ್ಜನೆ: ಮುಂಬೈ, ಪುಣೆ, ಹೈದರಾಬಾದ್ನಲ್ಲಿ ಟ್ರಾಫಿಕ್ ರೂಟ್ ಬದಲಾವಣೆ, ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ! -
ಗಣೇಶ ವಿಸರ್ಜನೆ ಮೆರವಣಿಗೆ: ಬೆನ್ನು, ಮೊಣಕಾಲು ನೋವು ತಡೆಯಲು 12 ನಿಮಿಷದ ಸ್ಮಾರ್ಟ್ ರೊಟೀನ್ ಇಲ್ಲಿದೆ! -
ಯುಸಿಸಿ ಸಮಿತಿಯಲ್ಲಿ ಭಿನ್ನಮತ: ನಿಮ್ಮ ಮದುವೆ, ಆಸ್ತಿ ಹಕ್ಕಿನ ಮೇಲೆ ಪರಿಣಾಮವೇನು? -
15 ನಿಮಿಷದ ಡೆಂಗ್ಯೂ ಹೋಮ್ ಆಡಿಟ್: ನಿಮ್ಮ ಮನೆಯೇ ಸೊಳ್ಳೆಗಳ ತಾಣವಾಗದಿರಲಿ, ಈ ಸರಳ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ನಕಲಿ ಪ್ರೋಟೀನ್ ಸಪ್ಲಿಮೆಂಟ್ಸ್ ಎಚ್ಚರಿಕೆ: ನಿಮ್ಮ ಆರೋಗ್ಯಕ್ಕೆ ಕಂಟಕವಾಗುವ ಮುನ್ನ ಈ ಲೇಬಲ್ ಚೆಕ್ ಮಾಡಿ! -
ಒಡಿಶಾ-ಆಂಧ್ರ ಕರಾವಳಿಗೆ ಅಪ್ಪಳಿಸಲಿದೆ 'ಡೀಪ್ ಡಿಪ್ರೆಷನ್': ನಿಮ್ಮ ಸುರಕ್ಷತೆಗಾಗಿ ಈ 15 ನಿಮಿಷಗಳ ಮುನ್ನೆಚ್ಚರಿಕೆ ಮರೆಯದಿರಿ! -
ದೆಹಲಿ-ಎನ್ಸಿಆರ್ನಲ್ಲಿ ಕಳಪೆ AQI: ಶ್ವಾಸಕೋಶದ ಆರೋಗ್ಯಕ್ಕಾಗಿ ಮನೆಯಲ್ಲೇ ಮಾಡಿ ಈ 10 ನಿಮಿಷದ ಸರಳ ವ್ಯಾಯಾಮ
ಅಪ್ಪಿತಪ್ಪಿಯೂ ಈ ರತ್ನಗಳನ್ನು ಒಟ್ಟಿಗೆ ಧರಿಸಬೇಡಿ
ಜ್ಯೋತಿಷ್ಯದಲ್ಲಿ ರತ್ನಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಜಾತಕದಲ್ಲಿ ಗ್ರಹಗಳ ಸ್ಥಾನವನ್ನು ಸರಿಪಡಿಸಲು ರತ್ನದ ಕಲ್ಲುಗಳನ್ನು ಧರಿಸುತ್ತಾರೆ. ವಜ್ರ, ಪಚ್ಚೆ, ಮಾಣಿಕ್ಯ, ಗೋಮೇಧಿಕ, ಮುತ್ತು, ಹವಳ, ನೀಲಮಣಿ ಮುಂತಾದ ರತ್ನಗಳು ಕೆಲವು ಗ್ರಹಗಳಿಗೆ ಸಂಬಂಧಿಸಿವೆ. ಜ್ಯೋತಿಷ್ಯರಯ ಸಲಹೆಯೊಂದಿಗೆ ಈ ರತ್ನಗಳನ್ನು ಧರಿಸುವುದರಿಂದ ಎಲ್ಲಾ ತೊಂದರೆಗಳು ದೂರವಾಗಿ, ಅದೃಷ್ಟ ಬರುವುದು. ಆದರೆ ಅನೇಕ ಬಾರಿ ಜನರು ತಿಳಿದೋ, ತಿಳಯದೆಯೋ, ಒಟ್ಟಿಗೆ ಅನೇಕ ರತ್ನಗಳನ್ನು ಧರಿಸುತ್ತಾರೆ. ಇದರಿಂದ ಒಳ್ಳೆಯದಕ್ಕಿಂತ ಕೆಟ್ಟ ಪರಿಣಾಮವೇ ಹೆಚ್ಚು. ಆದ್ದರಿಂದ ಯಾವ ರತ್ನವನ್ನು ಒಟ್ಟಿಗೆ ಧರಿಸಬಾರದು ಎಂಬುದನ್ನು ಇಲ್ಲಿ ನೋಡೋಣ.
ದೈಹಿಕ, ಮಾನಸಿಕ ಹಾಗೂ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುವ ರತ್ನಗಳ ಜೋಡಿಗಳು ಯಾವುವು ಎಂಬದನ್ನು ಈ ಕೆಳಗೆ ನೀಡಲಾಗಿದೆ:

ಈ ರತ್ನಗಳನ್ನು ಮುತ್ತುಗಳೊಂದಿಗೆ ಧರಿಸಬೇಡಿ:
ಅನೇಕ ಜನರು ಮುತ್ತುಗಳ ಜೊತೆಗೆ ಅನೇಕ ರತ್ನಗಳನ್ನು ಧರಿಸುತ್ತಾರೆ. ಆದರೆ ಇದನ್ನು ಮಾಡುವ ಮೊದಲು, ಜ್ಯೋತಿಷ್ಯದ ಸಲಹೆಯನ್ನು ತೆಗೆದುಕೊಳ್ಳಬೇಕು. ಏಕೆಂದರೆ ಮುತ್ತು ಚಂದ್ರನ ಸೂಚಕವಾಗಿದೆ. ಆದ್ದರಿಂದ ಈ ರತ್ನವನ್ನು ವಜ್ರ, ನೀಲಮಣಿ, ಪಚ್ಚೆ, ಗೋಮಧಿಕದೊಂದಿಗೆ ಧರಿಸಬಾರದು. ಇದರಿಂದ, ಚಂದ್ರನು ಜಾತಕದಲ್ಲಿ ಕೆಟ್ಟ ಪರಿಣಾಮವನ್ನು ನೀಡಲು ಪ್ರಾರಂಭಿಸುತ್ತಾನೆ. ಇದರಿಂದ ಮಾನಸಿಕ ಒತ್ತಡವನ್ನು ಎದುರಿಸಬೇಕಾಗಬಹುದು.

ಈ ರತ್ನವನ್ನು ಪಚ್ಚೆಯೊಂದಿಗೆ ಧರಿಸಬೇಡಿ:
ಬುಧ ಗ್ರಹದ ಹರಳಾದ ಪಚ್ಚೆಯನ್ನು ಕೆಲವು ರತ್ನಗಳೊಂದಿಗೆ ಧರಿಸಬಾರದು. ಇವುಗಳಲ್ಲಿ ನೀಲಮಣಿ, ಹವಳ ಮತ್ತು ಮುತ್ತುಗಳು ಸೇರಿಕೊಂಡಿವೆ. ಪಚ್ಚೆಯೊಂದಿಗೆ ಈ ರತ್ನಗಳನ್ನು ಧರಿಸುವುದರಿಂದ ಜಾತಕದಲ್ಲಿ ಕೆಟ್ಟ ಪರಿಣಾಮ ಬೀರುತ್ತದೆ. ಇದರಿಂದ ಆರ್ಥಿಕ ಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದೆ.

ಲಹ್ಸುನಿಯಾ/ಕ್ಯಾಟ್ ಐ ರತ್ನ:
ಕೇತು ಲಹ್ಸುನಿಯಾ ರತ್ನದ ಅಧಿಪತಿ. ಕೇತುವು ಎಲ್ಲಾ ಗ್ರಹಗಳೊಂದಿಗೆ ಉತ್ತಮ ಸಂಬಂಧವನ್ನು ಹೊಂದಿರುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ನೀವು ಕ್ಯಾಟ್ ಐನೊಂದಿಎ ಮಾಣಿಕ್ಯ, ಹವಳ, ನೀಲಮಣಿ ಅಥವಾ ಮುತ್ತುಗಳನ್ನು ಧರಿಸಿದರೆ, ಭಾರೀ ನಷ್ಟವನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ, ಈ ರತ್ನಗಳನ್ನು ಒಟ್ಟಿಗೆ ಧರಿಸುವ ಮೊದಲು, ಜ್ಯೋತಿಷ್ಯರನ್ನು ಸಂಪರ್ಕಿಸಿ.

ಈ ರತ್ನವನ್ನು ನೀಲಮಣಿಯೊಂದಿಗೆ ಧರಿಸಬೇಡಿ:
ನೀಲಮಣಿ ರತ್ನವು ಶನಿ ಗ್ರಹವನ್ನು ಶಾಂತಗೊಳಿಸಲು ಸಹಾಯ ಮಾಡುತ್ತದೆ. ಈ ರತ್ನದ ಅಧಿಪತಿ ಶನಿ. ಆದ್ದರಿಂದ, ಎಲ್ಲಾ ವಿಧದ ರತ್ನಗಳನ್ನು ನೀಲಮಣಿಯೊಂದಿಗೆ ಧರಿಸಲಾಗುವುದಿಲ್ಲ. ರತ್ನಶಾಸ್ತ್ರದ ಪ್ರಕಾರ, ಮಾಣಿಕ್ಯ, ಹವಳ, ಮುತ್ತು ಮತ್ತು ನೀಲಮಣಿಯನ್ನು ನೀಲಮಣಿಯೊಂದಿಗೆ ಧರಿಸಲಾಗುವುದಿಲ್ಲ. ಏಕೆಂದರೆ ಇದು ಜಾತಕದಲ್ಲಿ ಶನಿ ದೋಷದ ಸ್ಥಿತಿಯನ್ನು ಇನ್ನಷ್ಟು ಹದಗೆಡಿಸಬಹುದು. ಇದರಿಂದಾಗಿ ಸ್ಥಳೀಯರು ದೈಹಿಕ ಮತ್ತು ಆರ್ಥಿಕ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.



Click it and Unblock the Notifications
