Latest Updates
-
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ? -
ಬೇಸಿಗೆ ಬಿಸಿಲಿಗೆ ಮನೆ ತಂಪಾಗಿಡಲು ಈ ಟಿಪ್ಸ್ ಫಾಲೋ ಮಾಡಿ -
ಹೀಟ್ವೇವ್ ಎಚ್ಚರಿಕೆ: ಸುಡುವ ಬಿಸಿಲಿಗೆ ನಿಮ್ಮ ದೇಹ ತಂಪಾಗಿಸುವುದು ಹೇಗೆ? -
ಬಿಸಿಲ ಬೇಗೆಯಿಂದ ಪಾರಾಗಲು ಈ ಸ್ಮಾರ್ಟ್ ಟಿಪ್ಸ್ ಮಿಸ್ ಮಾಡ್ಬೇಡಿ -
ತೀವ್ರ ಶಾಖದ ಅಲೆ: ಬಿಸಿಲಿನಲ್ಲಿ ವ್ಯಾಯಾಮ ಮಾಡುವ ಮುನ್ನ ಎಚ್ಚರ! -
ಅಕ್ಷಯ ತೃತೀಯ ಮದುವೆ: ಬಾಲ್ಯ ವಿವಾಹ ತಡೆಯಲು ನೀವೇನು ಮಾಡಬೇಕು?
Brother's Day 2021: ಸಹೋದರ ದಿನದ ಇತಿಹಾಸ, ಮಹತ್ವದ ಕುರಿತ ಸಂಪೂರ್ಣ ಮಾಹಿತಿ
ಇಂದು ಬ್ರದರ್ಸ್ ಡೇ ಅಂದರೆ ಸಹೋದರರ ದಿನ. ಸಹೋದರನ ಪ್ರೀತಿ, ತ್ಯಾಗ,ಪರಿಶ್ರಮವನ್ನು ಗೌರವಿಸುವುದೇ ಈ ಬ್ರದರ್ಸ್ ಡೇ. ತನ್ನ ಕುಟುಂಬದ ಮೇಲಿರುವ ಪ್ರೀತಿಯನ್ನು ಸದ್ದಿಲ್ಲದೇ ತೋರುವ, ತಂಗಿಗೆ, ಕಾವಲಾಗಿ, ಅಕ್ಕನಿಗೆ ಹೆಗಲಾಗಿ ಇರುವವನೇ ಈ ಸಹೋದರ. ಇಂತಹ ಸಹೋದರನಿಗೂ ಒಂದು ದಿನವಿದೆ. ಹಾಗಾದರೆ ಬನ್ನಿ ಇದರ ಹಿನ್ನಲೆಯೇನು ? ಈ ಆಚರಣೆಯ ಮಹತ್ವವೇನು ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ನ್ಯಾಷನಲ್ ಬ್ರದರ್ಸ್ ಡೇ 2021;
ಅಮೆರಿಕಾ ಸೇರಿದಂತೆ ಜಗತ್ತಿನ ನಾನಾ ಬಾಗಗಳಲ್ಲಿ ಇದನ್ನು ಆಚರಣೆ ಮಾಡಲಾಗುತ್ತದೆ. ತಂದೆ-ತಾಯಿಗೆ ಗೌರವ ಸಲ್ಲಿಸಲು ಫಾದರ್ಸ್ ಡೇ, ಮದರ್ಸ್ ಡೇ ಇರುವಂತೆ, ಇದು ಸಹೋದರರಿಗೆ ಗೌರವ ಸಲ್ಲಿಸಲು ಮೀಸಲಿರುವ ದಿನವಾಗಿದೆ. ಪ್ರತಿವರ್ಷ ಮೇ 24 ರಂದು ಆಚರಣೆ ಮಾಡುವ ಈ ದಿನದಂದು ಸಹೋದರಿಗೆ ವಿಶೇಷ ಸ್ಥಾನಮಾನ.

ರಾಷ್ಟ್ರೀಯ ಸಹೋದರರ ದಿನದ ಇತಿಹಾಸ:
2005 ರಿಂದ, ಪ್ರತಿವರ್ಷ ಮೇ 24 ರಂದು ಸಹೋದರರ ದಿನವನ್ನು ಆಚರಿಸಲಾಗುತ್ತದೆ. ಅಲಬಾಮಾ ಮೂಲದ ಸೆರಾಮಿಕ್ ಕಲಾವಿದ, ಶಿಲ್ಪಿ ಮತ್ತು ಲೇಖಕ ಸಿ. ಡೇನಿಯಲ್ ರೋಡ್ಸ್ ಅವರು ವಿಶೇಷ ಸಂದರ್ಭ ಮತ್ತು ಅದರ ನಡಾವಳಿಗಳನ್ನು ಮೊದಲು ಆಯೋಜಿಸಿದರು. ಪ್ರತಿ ವರ್ಷ ಏಪ್ರಿಲ್ 10 ರಂದು ಆಚರಿಸಲಾಗುವ ನ್ಯಾಷನಲ್ ಸಿಬ್ಲಿಂಗ್ಸ್ ಡೇ ಹಾಗೂ ಬ್ರದರ್ಸ್ ಡೇ ಎರಡೂ ವಿಭಿನ್ನ.
ರಾಷ್ಟ್ರೀಯ ಸಹೋದರರ ದಿನಾಚರಣೆಯನ್ನು ಹೆಚ್ಚಾಗಿ ಅಮೆರಿಕಾದಲ್ಲಿ ಆಚರಿಸಲಾಗುತ್ತದೆ, ಆದರೆ ಇತ್ತೀಚಿನ ದಿನಗಳಲ್ಲಿ ಜಗತ್ತಿನಾದ್ಯಂತದ ಅನೇಕ ದೇಶಗಳು ಈ ದಿನವನ್ನು ಆಚರಿಸುತ್ತಿವೆ. ಭಾರತ, ರಷ್ಯಾ, ಆಸ್ಟ್ರೇಲಿಯಾ, ಫ್ರಾನ್ಸ್ ಮತ್ತು ಜರ್ಮನಿ ಸೇರಿದಂತೆ ಹಲವು ದೇಶಗಳು ಈ ದಿನವನ್ನು ಮೇ 24 ರಂದು ಆಚರಿಸುತ್ತವೆ.

ಈ ದಿನದ ಮಹತ್ವ ಹೀಗಿದೆ:
ಪುರುಷರಲ್ಲಿ ಸಹೋದರತ್ವದ ಪ್ರಜ್ಞೆ ಅತ್ಯಂತ ಪ್ರಬಲವಾಗಿದೆ. ಇದು ರಕ್ತ ಸಂಬಂಧವಾಗಿರಲಿ ಅಥವಾ ಇಲ್ಲದಿರಲಿ, ಹುಡುಗರು ʼಬ್ರದರ್ʼ ಅನ್ನೋ ಪದವನ್ನು ಬಹಳ ಗಂಭೀರವಾಗಿ ಪರಿಗಣಿಸಿ, ಅದಕ್ಕೆ ತಕ್ಕಂತ ವರ್ತಿಸುತ್ತಾರೆ. ಆದ್ದರಿಂದ ಅಂತಹ ಅಣ್ಣ-ತಮ್ಮನ ಕೊಡುಗೆಯನ್ನು ನೆನಸಿಕೊಳ್ಳಲು ಹಾಗೂ ಶ್ಲಾಘಿಸಲು ಈ ದಿನವನ್ನು ಆಚರಣೆ ಮಾಡಲಾಗುತ್ತದೆ.

ಆಚರಣೆ ಹೀಗಿರುತ್ತೆ:
ಸಾಮಾನ್ಯವಾಗಿ, ಈ ದಿನದಂದು ಕುಟುಂಬದ ಸದಸ್ಯರು ಮತ್ತು ಸ್ನೇಹಿತರು ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಸಹೋದರನ ಜೊತೆ ಶುಭಾಶಯ ಹಂಚಿಕೊಳ್ಳುತ್ತಾರೆ. ಜೊತೆಗೆ ತಮ್ಮ ನೆಚ್ಚಿನ ಸಹೋದರನಿಗೆ ಉಡುಗೊರೆ ನೀಡುತ್ತಾರೆ. ಸದ್ಯ ಕೊರೋನಾದಿಂದ ಮನೆಯಲ್ಲಿಯೇ ಇರುವುದರಿಂದ ನಿಮ್ಮ ಬ್ರದರ್ ಗೆ ಇಷ್ಟವಾದ ತಿನಿಸುಗಳನ್ನು ಮಾಡಿ ಕೊಡಬಹುದು. ಇದು ಅವರಿಗೆ ಸಂತೋಶ ನೀಡುವುದಲ್ಲದೇ ಸ್ಪೆಷಲ್ ಭಾವನೆ ಮೂಡುವಂತೆ ಮಾಡುತ್ತದೆ.



Click it and Unblock the Notifications











