Latest Updates
-
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ! -
ಚೆನ್ನೈ ಮಳೆ ಅಲರ್ಟ್: ಹೊರಗೆ ಹೋಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ
ಬ್ಲಡ್ ಮೂನ್ 2021: ಸಂಪೂರ್ಣ ಚಂದ್ರಗ್ರಹಣ ಭಾರತದಲ್ಲಿ ಗೋಚರಿಸುವ ಸಮಯವಿದು
ಇದೇ ಮೇ 26 ರಂದು ಖಗೋಳದಲ್ಲಿ ಕೌತುಕವೊಂದು ಸಂಭವಿಸಲಿದೆ. ಹೌದು, ಅಂದ್ರೆ ಈ ವರ್ಷದ ಮೊದಲ ರಕ್ತಚಂದ್ರಗ್ರಹಣ ನಡೆಯಲಿದೆ. ಇದು ಈ ವರ್ಷದ ಕೊನೆಯ ಸಂಪೂರ್ಣ ಚಂದ್ರಗ್ರಹಣವೂ ಹೌದು. ವಿಶ್ವದ ಅನೇಕ ಭಾಗಗಳಲ್ಲಿ ಗೋಚರಿಸಲಿರುವ ಈ ಚಂದ್ರಗ್ರಹಣ ಭಾರತದಲ್ಲಿ ಯಾವ ಸಮಯಕ್ಕೆ ಹಾಗೂ ಎಷ್ಟು ಸಮಯ ಇರಲಿದೆ ಎಂಬುದನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.

2021ರ ಸಂಪೂರ್ಣ ಚಂದ್ರ ಗ್ರಹಣ ಅಥವಾ ಬ್ಲಡ್ ಮೂನ್ ಸಮಯ:
ಈ ವರ್ಷದ ಸಂಪೂರ್ಣ ಚಂದ್ರ ಗ್ರಹಣ ಮೂರು ಗಂಟೆ, ಏಳು ನಿಮಿಷಗಳ ಕಾಲ ಮುಂದುವರೆಯುವುದಾದರೂ, ಸಂಪೂರ್ಣ ಚಂದ್ರ ಗ್ರಹಣ ಸುಮಾರು 15 ನಿಮಿಷಗಳ ಕಾಲ ಗೋಚರಿಸುತ್ತದೆ. ಮಧ್ಯಾಹ್ನ 2:17 ಕ್ಕೆ ಗ್ರಹಣ ಪ್ರಾರಂಭವಾಗಿ ಮರುದಿನ ಬೆಳಿಗ್ಗೆ 7:19 ಕ್ಕೆ ಗ್ರಹಣ ಮುಗಿಯುವುದು. ಪೂರ್ಣ ಗ್ರಹಣವು ಸಂಜೆ 4:41 ಕ್ಕೆ ಸಂಭವಿಸಿ, 4: 55ರವರೆಗೂ ಇರುವುದು.

ಭಾರತದಲ್ಲಿ ಸಂಪೂರ್ಣ ಚಂದ್ರ ಗ್ರಹಣ (ಬ್ಲಡ್ ಮೂನ್ 2021) ಗೋಚರಿಸುತ್ತದೆಯೇ?:
ಈ ಚಂದ್ರಗ್ರಹಣ ಪೂರ್ವ ಏಷ್ಯಾ, ಆಸ್ಟ್ರೇಲಿಯಾ, ಉತ್ತರ ಅಮೆರಿಕದ ಬಹುಪಾಲು, ದಕ್ಷಿಣ ಅಮೆರಿಕಾ, ಪೆಸಿಫಿಕ್, ಅಟ್ಲಾಂಟಿಕ್, ಹಿಂದೂ ಮಹಾಸಾಗರ ಮತ್ತು ಅಂಟಾರ್ಕ್ಟಿಕಾ, ನಾರ್ವೇಜಿಯನ್ ಗಳಲ್ಲಿ ಹೆಚ್ಚು ಗೋಚರಿಸುತ್ತದೆ . ಬ್ಲಡ್ ಮೂನ್ ಗೋಚರಿಸುವ ನಿರೀಕ್ಷೆಯಿರುವ ಕೆಲವು ನಗರಗಳಲ್ಲಿ ಹೊನೊಲುಲು, ಹೂಸ್ಟನ್, ಲಾಸ್ ಏಂಜಲೀಸ್, ಮನಿಲಾ, ಮೆಲ್ಬೋರ್ನ್, ಸ್ಯಾನ್ ಫ್ರಾನ್ಸಿಸ್ಕೊ, ಸಿಯೋಲ್, ಶಾಂಘೈ ಮತ್ತು ಟೋಕಿಯೊ ಸೇರಿವೆ. ಬ್ಯಾಂಕಾಕ್, ಚಿಕಾಗೊ, ಮಾಂಟ್ರಿಯಲ್, ನ್ಯೂಯಾರ್ಕ್, ಟೊರೊಂಟೊ, ಮತ್ತು ಯಾಂಗೊನ್ ಮುಂತಾದ ನಗರಗಳಲ್ಲಿಯೂ ಭಾಗಶಃ ಗೋಚರಿಸುತ್ತದೆ. ಆದರೆ ಭಾರತದಲ್ಲಿ ಪೆನಂಬ್ರಲ್ ಚಂದ್ರಗ್ರಹಣವಾಗಿ ಮಾತ್ರ ಗೋಚರಿಸುತ್ತದೆ ಎಂದು ಹೇಳಲಾಗುತ್ತಿದೆ.

ಪೆನಂಬ್ರಲ್ ಚಂದ್ರ ಗ್ರಹಣ ಎಂದರೇನು:
ಪೆನ್ಯುಂಬ್ರಲ್ ಚಂದ್ರಗ್ರಹಣದಲ್ಲಿ ಪೆನಂಬ್ರಾ ಎಂದು ಕರೆಯಲ್ಪಡುವ ಭೂಮಿಯ ಹೊರಗೆ ಹರಡಿರುವ ನೆರಳು ಮಾತ್ರ ಚಂದ್ರನ ಮೇಲ್ಮೈಗೆ ಬೀಳುತ್ತದೆ. ಸಂಪೂರ್ಣ ಚಂದ್ರಗ್ರಹಣ ಅಥವಾ ಭಾಗಶಃ ಗ್ರಹಣಕ್ಕಿಂತ ಪೆನಂಬ್ರಲ್ ಗ್ರಹಣವನ್ನು ಗುರುತಿಸುವುದು ಕಷ್ಟ. ಭಾಗಶಃ ಗ್ರಹಣದಲ್ಲಿ ಚಂದ್ರ ಮೇಲ್ಮೈ ಗಾಢ ನೆರಳಿನಿಂದ ಆವರಿಸುತ್ತದೆ. ಆದರೆ ಇಲ್ಲಿ ಚಂದ್ರನ ಒಂದು ಭಾಗವು ಮಾತ್ರ ನೆರಳಿನಿಂದ ಆವರಿಸುತ್ತದೆ. ಅರೆನೆರಳಿನ ಚಂದ್ರಗ್ರಹಣವನ್ನು ಸೂಕ್ಷ್ಮವಾಗಿ ಗಮನಿಸುವುದರ ಮೂಲಕ ನೋಡಬಹುದು.



Click it and Unblock the Notifications
