Latest Updates
-
ಮದುವೆಗೂ ಮುನ್ನ ಈ 48 ಗಂಟೆಗಳ ಚೆಕ್ಲಿಸ್ಟ್ ಮರೆಯದಿರಿ -
ಬಿಸಿಲ ಬೇಗೆಯಿಂದ ಪಾರಾಗಲು ಮನೆಯನ್ನು ತಂಪಾಗಿರಿಸುವ ಅದ್ಭುತ ಟಿಪ್ಸ್ -
ಬಿಸಿಲ ಬೇಗೆಯಿಂದ ಪಾರಾಗಲು ಈ ಪಾನೀಯಗಳೇ ಮದ್ದು! -
ಬಿಸಿಲ ಬೇಗೆಯಿಂದ ಪಾರಾಗಲು ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ -
ಬಿಸಿಲ ಬೇಗೆಯಿಂದ ಪಾರಾಗಲು ನಿಮ್ಮ ವ್ಯಾಯಾಮದ ಸಮಯ ಬದಲಾಯಿಸಿ -
ಅಕ್ಷಯ ತೃತೀಯ: ಮದುವೆ ಮತ್ತು ಚಿನ್ನದ ಖರೀದಿಗೆ ಹೀಗೆ ಪ್ಲಾನ್ ಮಾಡಿ -
ಮನೆಯನ್ನು ತಂಪಾಗಿಡಲು ಹೀಟ್ವೇವ್ ಸಮಯದಲ್ಲಿ ಈ ಟ್ರಿಕ್ಸ್ ಫಾಲೋ ಮಾಡಿ -
ಮಾವಿನ ಹಣ್ಣು ಖರೀದಿಸುವ ಮುನ್ನ ಈ ತಪ್ಪು ಮಾಡಬೇಡಿ! -
ಅಕ್ಷಯ ತೃತೀಯ ಚಿನ್ನದ ಖರೀದಿ: ಈ ಆಫರ್ ಮಿಸ್ ಮಾಡ್ಬೇಡಿ! -
ಬಿಸಿಲ ಧಗೆಯಲ್ಲೂ ಫಿಟ್ ಆಗಿರಲು ಈ ತಪ್ಪುಗಳನ್ನು ಮಾಡಬೇಡಿ!
ಹವಳ ಧಾರಣೆ ಮಾಡುವಾಗ ಈ ವಿಚಾರಗಳನ್ನು ಗಮನದಲ್ಲಿಡಿ
ಗ್ರಹಗಳ ಚಲನೆಯನ್ನು ಸರಿಪಡಿಸಲು, ರಾಶಿಚಕ್ರದ ಪ್ರಕಾರ ರತ್ನಗಳನ್ನು ಧರಿಸುತ್ತಾರೆ, ಇದರಿಂದ, ವ್ಯಕ್ತಿಯ ಜೀವನದಲ್ಲಿ ಪ್ರಗತಿಯ ಹಾದಿಯನ್ನು ತೆರೆಯುವುದು. ಜ್ಯೋತಿಷ್ಯದಲ್ಲಿ, ಹವಳವನ್ನು ಮಂಗಳ ಗ್ರಹದ ರತ್ನ ಎಂದು ಹೇಳಲಾಗಿದ್ದು, ಜಾತಕದಲ್ಲಿ ಮಂಗಳನ ಸ್ಥಾನ ಚೆನ್ನಾಗಿದ್ದರೆ ಆತನಿಗೆ ಎಲ್ಲವೂ ಮಂಗಳಕರವಾಗಿ ನಡೆಯುತ್ತದೆ ಎಂದು ಹೇಳಲಾಗುತ್ತದೆ. ಮಂಗಳನ ಸ್ಥಾನವು ದುರ್ಬಲವಾಗಿದ್ದರೆ, ವ್ಯಕ್ತಿಯು ತುಂಬಾ ಕಷ್ಟಪಡಬೇಕಾಗುತ್ತದೆ. ಆಗ ಹವಳವನ್ನು ಧರಿಸುವುದರಿಂದ ಆ ವ್ಯಕ್ತಿಯ ಸ್ಥಿತಿ ಸುಧಾರಿಸುತ್ತದೆ. ಹಾಗಾದರೆ, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಹವಳವನ್ನು ಧರಿಸುವುದರಿಂದ ಏನು ಪ್ರಯೋಜನ ಮತ್ತು ಅದನ್ನು ಹೇಗೆ ಧರಿಸಬೇಕು ಎಂದು ತಿಳಿಯೋಣ.
ಹವಳ ಧರಿಸುವಾಗ ನೆನಪಿಡಬೇಕಾದ ವಿಚಾರಗಳನ್ನು ಈ ಕೆಳಗೆ ನೀಡಲಾಗಿದೆ:
ವ್ಯಕ್ತಿಯ ಜಾತಕದಲ್ಲಿ ಮಂಗಳ ಗ್ರಹಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆ ಇದ್ದರೆ, ಜ್ಯೋತಿಷ್ಯರ ಸಲಹೆ ಪಡೆದು ಹವಳವನ್ನು ಧರಿಸಬೇಕು. ಹವಳವನ್ನು ಧರಿಸುವುದು ವ್ಯಕ್ತಿಗೆ ಅನೇಕ ಯಶಸ್ಸನ್ನು ತರುತ್ತದೆ. ಇದರೊಂದಿಗೆ ಹವಳವು ವ್ಯಕ್ತಿಯನ್ನು ಮಾನಸಿಕ ಖಿನ್ನತೆಯಿಂದ ಮುಕ್ತಗೊಳಿಸುತ್ತದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಒಬ್ಬ ವ್ಯಕ್ತಿಯು ಸರಿಯಾದ ತೂಕದ ಹವಳವನ್ನು ಸರಿಯಾದ ರೀತಿಯಲ್ಲಿ ಧರಿಸಿದರೆ, ಈ ರತ್ನವು ಅವನನ್ನು ಶ್ರೀಮಂತನನ್ನಾಗಿ ಮಾಡುತ್ತದೆ. ಆದರೆ ಹವಳವನ್ನು ಧರಿಸುವ ಮೊದಲು ಕೆಲವು ವಿಷಯಗಳನ್ನು ಕಾಳಜಿ ವಹಿಸಬೇಕು. ಅವುಗಳೆಂದರೆ:

ಹವಳವನ್ನು ಧರಿಸುವ ಮೊದಲು, ಈ ವಿಷಯಗಳನ್ನು ನೆನಪಿನಲ್ಲಿಡಿ:
- ಜಾತಕವನ್ನು ತೋರಿಸದೆ ಹವಳವನ್ನು ಧರಿಸಬಾರದು. ವಾಸ್ತವವಾಗಿ, ಮಂಗಳವು ಮೇಷ ಮತ್ತು ವೃಶ್ಚಿಕ ರಾಶಿಚಕ್ರ ಚಿಹ್ನೆಗಳಿಗೆ ಅಧಿಪತಿ. ಇವರಿಗೆ ಉತ್ತಮ ಹವಳ.
-ಮೇಷ, ವೃಶ್ಚಿಕ ಅಥವಾ ಸಿಂಹ, ಧನು, ಮೀನ ರಾಶಿಯವರು ಹವಳವನ್ನು ಧರಿಸಬಹುದು.
-ವ್ಯಕ್ತಿಯ ಜಾತಕದಲ್ಲಿ ಮಾಂಗಲಿಕ ದೋಷವಿದ್ದರೆ, ಹವಳವನ್ನು ಧರಿಸುವುದರಿಂದ ಅಂತಹ ವ್ಯಕ್ತಿಗೆ ಲಾಭವಾಗುತ್ತದೆ. ಹವಳವು ಮಾಂಗಲಿಕ ದೋಷದ ಪರಿಣಾಮವನ್ನು ಕಡಿಮೆ ಮಾಡುತ್ತದೆ.
-ವ್ಯಕ್ತಿಗೆ ಆತ್ಮವಿಶ್ವಾಸದ ಕೊರತೆಯಿದ್ದರೆ ಅಥವಾ ಕನಸಿನಲ್ಲಿ ಹೆದರಿಕೆಯಾಗುತ್ತಿದ್ದರೆ, ಅವನು ತನ್ನ ಜಾತಕವನ್ನು ತೋರಿಸಿ ಹವಳವನ್ನು ಧರಿಸಬಹುದು.

ಹವಳವನ್ನು ಧರಿಸುವುದರಿಂದ ಏನು ಪ್ರಯೋಜನ?:
ಹವಳವನ್ನು ಧರಿಸುವುದರಿಂದ ವ್ಯಕ್ತಿಯಲ್ಲಿ ಧೈರ್ಯ ಬರುವುದರ ಜೊತೆಗೆ ಆತ್ಮವಿಶ್ವಾಸವೂ ಹೆಚ್ಚುತ್ತದೆ. ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದ ವಿದ್ಯಾರ್ಥಿಗಳು ಹವಳವನ್ನು ಧರಿಸುವುದರಿಂದ ಹೆಚ್ಚು ಪ್ರಯೋಜನ ಪಡೆಯುತ್ತಾರೆ.

ನೈಜ ಹವಳದ ರತ್ನವನ್ನು ಹೇಗೆ ಗುರುತಿಸುವುದು?:
ಇದು ಇತರ ರತ್ನಗಳಿಗಿಂತ ಹೆಚ್ಚು ಮೃದುವಾಗಿರುತ್ತದೆ. ಅದಕ್ಕೇ ಕೈಗೆ ಹಾಕಿಕೊಂಡಾ ಜಾರುತ್ತಲೇ ಇರುತ್ತದೆ. ಇದಲ್ಲದೆ, ನೀರಿನ ಹನಿಗಳು ನೈಜ ಹವಳದ ಮೇಲೆ ಉಳಿಯುತ್ತವೆ, ಆದರೆ ನಕಲಿ ಹವಳದ ಮೇಲೆ ಉಳಿಯುವುದಿಲ್ಲ. ಹವಳವನ್ನು ಧರಿಸಿದ 21 ದಿನಗಳ ನಂತರ ಅದರ ಪರಿಣಾಮವನ್ನು ತೋರಿಸಲು ಪ್ರಾರಂಭಿಸುತ್ತದೆ.

ಈ ರೀತಿ ಹವಳ ಧರಿಸಿ:
ಹವಳವನ್ನು ಚಿನ್ನ, ಬೆಳ್ಳಿ ಅಥವಾ ತಾಮ್ರದ ಉಂಗುರದಲ್ಲಿ ತಯಾರಿಸಿ ಧರಿಸಬಹುದು. ಹವಳದ ಉಂಗುರವನ್ನು ಧರಿಸುವ ಮೊದಲು, ಅದನ್ನು ಹಸಿ ಹಾಲು ಮತ್ತು ಗಂಗಾಜಲದಿಂದ ಚೆನ್ನಾಗಿ ತೊಳೆಯಿರಿ. ಇದರ ನಂತರ, ಮಂಗಳವಾರ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಯಾವುದೇ ಸಮಯದಲ್ಲಿ ಬಲಗೈಯ ಉಂಗುರದ ಬೆರಳಿಗೆ ಧರಿಸಿ. ಅದೇ ಸಮಯದಲ್ಲಿ, ಮಹಿಳೆಯರು ಎಡಗೈಯ ಉಂಗುರದ ಬೆರಳಿನಲ್ಲಿ ಹವಳವನ್ನು ಧರಿಸಿದರೆ, ಅವರು ಉತ್ತಮ ಫಲಿತಾಂಶಗಳನ್ನು ಪಡೆಯುತ್ತಾರೆ.



Click it and Unblock the Notifications











