Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ದೈವಕ್ಕೆ ಶರಣಾಗಿ ಯಶಸ್ಸಿನ ಮೆಟ್ಟಿಲು ಹತ್ತಲು ಪ್ರೇರಣೆ ನೀಡುತ್ತದೆ ಈ ಕೋಟ್ಸ್
ನಮ್ಮ ಬದುಕಿನಲ್ಲಿ ನೋವು-ನಲಿವು, ಕಷ್ಟ-ಸುಖ, ಒತ್ತಡ-ಸಂತೋಷ ಎಲ್ಲವೂ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಆದರೆ ಮನುಷ್ಯನಿಗೆ ಕಷ್ಟ, ನೋವು, ಒತ್ತಡ, ಎಷ್ಟೇ ಶ್ರಮಪಟ್ಟರೂ ಫಲ ಸಿಗದಿದ್ದಾಗ, ಕಷ್ಟದ ಮೇಲೆ ಕಷ್ಟ ಬರುತ್ತಲೇ ಇದ್ದರೆ ಅಂತಿಮವಾಗಿ ಹೋಗುವುದು ದೈವದ ಮೊರೆ. ಆ ದೇವರನ್ನು ನಂಬಿ ಕೆಟ್ಟವರಿಲ್ಲ.

ಮನುಷ್ಯ ಎಲ್ಲವನ್ನು ಕಳೆದುಕೊಂಡು ಮಾನಸಿಕವಾಗಿ ಕುಗ್ಗಿದಾಗ, ಕಷ್ಟದಲ್ಲೇ ಮುಳುಗಿದಾಗ, ಮಂದೆ ದಾರಿ ಕಾಣದಾದಾಗ ದೇವರನ್ನು ನೆನೆಯುತ್ತೇವೆ. ನಾವಿಂದು ಆ ದೇವರನ್ನು ನೆನೆದು, ದೇವರ ಮೇಲೆ ಭಾರ ಹಾಕಿ ನಮ್ಮ ಗೆಲುವಿನ ದಾರಿ ಹುಡುಕುವ, ಯಶಸ್ಸಿನ ಮೆಟ್ಟಿಲು ಹತ್ತುವ, ಬದುಕಿನ ಬಗ್ಗೆ ಭರವಸೆ ಮೂಡಿಸುವಂಥ ಪ್ರೇರಣಾತ್ಮಕ ಹೇಳಿಕೆಗಳನ್ನು ಹೇಳಲಿದ್ದೇವೆ.
ದೇವರು ಹಾಗೂ ಬದುಕಿನ ಕುರಿತ ಸ್ಫೂರ್ತಿದಾಯಕ ಕೋಟ್ಸ್:

ದೇವರು
ಜೀವನದ ಅತ್ಯಂತ ಕೆಟ್ಟ ಸಂದರ್ಭದಲ್ಲಿ ಯಾವ ವ್ಯಕ್ತಿಯೂ ನಮ್ಮ ಜೊತೆ ಇರುವುದಿಲ್ಲ. ಆದ ದೈವ ಮಾತ್ರ ನಮ್ಮ ಕಷ್ಟ-ಸುಖ ಎರಡೂ ಸಂದರ್ಭದಲ್ಲೂ ನಮ್ಮ ಕೈಹಿಡಿದು ಕಾಪಾಡುವುದು.

ಅಗತ್ಯ
ದೇವರು ನನಗೆ ಏನು ಬೇಕೋ ಎಲ್ಲವನ್ನೂ ಕೊಡಲಿಲ್ಲ, ಆದರೆ ನನಗೆ ಏನು ಅಗತ್ಯವೋ ಅದು ಕೊಡುವುದನ್ನು ಮರೆಯಲಿಲ್ಲ.

ಸಮಸ್ಯೆ
ದೇವರು ಕೆಲವು ಬಾರಿ ನಮ್ಮನ್ನು ಸಮಸ್ಯೆಗಳ ನೀರಿನಲ್ಲಿ ಹಾಕಬಹುದು, ಆದರೆ ಅದು ನಮ್ಮನ್ನು ಮುಳುಗಿಸಲು ಅಲ್ಲ, ಬದಲಾಗಿ ನಮ್ಮನ್ನು ಇನ್ನಷ್ಟು ಸ್ವಚ್ಛಗೊಳಿಸಲು.

ತೀರ್ಮಾನ
ನೀನು ನನ್ನನ್ನು ಪ್ರೀತಿಸು ಅಥವಾ ದ್ವೇಷಿಸು, ಆದರೆ ಆ ದೇವರಿಗೆ ಮಾತ್ರ ನಾನು ಏನು ಎಂಬುದು ತಿಳಿದಿದೆ, ಅವನು ಮಾತ್ರ ನನ್ನನ್ನು ತೀರ್ಮಾನಿಸಲು ಸಾಧ್ಯ.

ಸಕಾರಾತ್ಮಕ
ದೇವರು ಎಂದಿಗೂ ಯಾವುದನ್ನೂ ನಕಾರಾತ್ಮಕ ಅಂತ್ಯ ಕಾಣಲು ಬಿಡುವುದಿಲ್ಲ, ಅವನ ಅಂತ್ಯ ಸದಾ ಸಕಾರಾತ್ಮಕವಾಗಿಯೇ ಇರುತ್ತದೆ.

ಧನ್ಯವಾದ
ನೀವಿಂದು ನಿಮ್ಮ ಜೀವನದ ಮತ್ತೊಂದು ದಿನವನ್ನು ಅನುಭವಿಸುವ ಅವಕಾಶ ಪಡೆದಿದ್ದೀರಾ, ಇದಕ್ಕಾಗಿ ಆ ದೇವರಿಗೆ ಧನ್ಯವಾದ ಹೇಳಿ.

ಪ್ರಾರ್ಥನೆ
ನೀವು ಪ್ರತಿ ಬಾರಿ ತಿರಸ್ಕರಿಸಲ್ಪಟ್ಟಿದ್ದೀರಿ ಎಂದು ಭಾವಿಸಿದಾಗಲೆಲ್ಲಾ ದೇವರು ನಿಜವಾಗಿಯೂ ನಿಮ್ಮನ್ನು ಉತ್ತಮವಾದ ಕಡೆಗೆ ಮರುನಿರ್ದೇಶಿಸುತ್ತಿರುತ್ತಾನೆ. ನಿಮ್ಮನ್ನು ಇನ್ನಷ್ಟು ಮುಂದಕ್ಕೆ, ಸಕಾರಾತ್ಮಕದೆಡೆಗೆ ಹೋಗಲು ನಿಮಗೆ ಹೆಚ್ಚು ಶಕ್ತಿಯನ್ನು ನೀಡುವಂತೆ ಮಾತ್ರ ಅವನನ್ನು ಪ್ರಾರ್ಥಿಸಿ.ನೀವು ಪ್ರತಿ ಬಾರಿ ತಿರಸ್ಕರಿಸಲ್ಪಟ್ಟಿದ್ದೀರಿ ಎಂದು ಭಾವಿಸಿದಾಗಲೆಲ್ಲಾ ದೇವರು ನಿಜವಾಗಿಯೂ ನಿಮ್ಮನ್ನು ಉತ್ತಮವಾದ ಕಡೆಗೆ ಮರುನಿರ್ದೇಶಿಸುತ್ತಿರುತ್ತಾನೆ. ನಿಮ್ಮನ್ನು ಇನ್ನಷ್ಟು ಮುಂದಕ್ಕೆ, ಸಕಾರಾತ್ಮಕದೆಡೆಗೆ ಹೋಗಲು ನಿಮಗೆ ಹೆಚ್ಚು ಶಕ್ತಿಯನ್ನು ನೀಡುವಂತೆ ಮಾತ್ರ ಅವನನ್ನು ಪ್ರಾರ್ಥಿಸಿ.

ಸರಿ ಮಾರ್ಗ
ದೇವರು ಎಂದಿಗೂ ನಮಗೇ ಏನು ಬೇಕೋ ಅದನ್ನು ನೇರವಾಗಿ ನೀಡುವುದಿಲ್ಲ. ಬದಲಾಗಿ ಅದನ್ನು ಪಡೆಯಲು ನಮಗೆ ಸರಿಯಾದ ಮಾರ್ಗವನ್ನು ಸೃಷ್ಟಿಸುತ್ತಾನೆ.

ಉತ್ತಮ ಯೋಜನೆ
ನೀವು ಎಲ್ಲವನ್ನು ಕಳೆದುಕೊಂಡಿರಬಹುದು ಮತ್ತು ಏಕಾಂಗಿಯಾಗಿರಬಹುದು, ಆದರೆ ನೀವು ಎಲ್ಲಿದ್ದೀರಿ ಎಂದು ದೇವರಿಗೆ ಮಾತ್ರ ನಿಖರವಾಗಿ ತಿಳಿದಿದೆ ಮತ್ತು ನಿಮ್ಮ ಜೀವನಕ್ಕಾಗಿ ಆತನು ಉತ್ತಮ ಯೋಜನೆಯನ್ನೇ ರೂಪಿಸುತ್ತಿರುತ್ತಾನೆ.

ದೇವರೇ ಕಾರಣ
ಜೀವನದಲ್ಲಿ ನಡೆಯುವ ಪ್ರತಿಯೊಂದು ಘಟನೆಗೂ ಆ ದೇವರೇ ಪರೋಕ್ಷ ಕಾರಣ, ಇದಕ್ಕೆ ಏನೋ ಒಂದು ಕಾರಣ ಇದ್ದೇ ಇರುತ್ತದೆ.

ನಿಷ್ಕಲ್ಮಷ
ನೀನು ಆ ದೇವರನ್ನು ನಂಬಿದಾಗ ನಿನ್ನ ಪ್ರಾರ್ಥನೆಯನ್ನು ಅವನು ಆಲಿಸುತ್ತಾನೆ, ನೀವು ಆಲಿಸುವಾಗ ಆ ದೈವ ನಿನ್ನೊಂದಿಗೆ ಮಾತನಾಡುತ್ತದೆ. ಆದರೆ ನಿನ್ನ ಪ್ರಾರ್ಥನೆ ನಿಷ್ಕಲ್ಮಷವಾಗಿರಬೇಕಷ್ಟೆ.

ದೇವರ ಜತೆ
ನೀವು ದೇವರ ಜೊತೆಯಾಗಿ ನಡೆದರೆ ಖಂಡಿತವಾಗಿಯೂ ನಿಮ್ಮ ಗುರಿಯನ್ನು ತಲುಪುತ್ತೀರಿ.

ಉತ್ತರಕ್ಕೆ ಕಾಯಬೇಕು
ದೇವರು ನಮ್ಮ ಎಲ್ಲಾ ಸಮಸ್ಯೆಗಳನ್ನು ಆಲಿಸುತ್ತಾನೆ, ಆದರೆ ಅವನು ಉತ್ತರ ಕೊಡುವವರೆಗೂ ನಾವು ಕಾಯಬೇಕಷ್ಟೇ.



Click it and Unblock the Notifications
