Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಜನವರಿಯಲ್ಲಿ ಮದುವೆಯಾಗೋ ಪ್ಲಾನ್ ಇದ್ಯಾ? ಹಾಗಾದ್ರೆ ಇಲ್ಲಿವೆ ಅತ್ಯುತ್ತಮ ದಿನಾಂಕಗಳು
ಕೊರೊನಾವೈರಸ್ ನಿಮ್ಮ ಎಲ್ಲಾ ವಿವಾಹ ಯೋಜನೆಗಳನ್ನು ಸ್ಥಗಿತಗೊಳಿಸಿದೆ ಎಂದು ನಮಗೆ ಗೊತ್ತು. ಕೊರೊನಾ ಸಮಯದಲ್ಲಿ ಕೇವಲ ೫೦ ಜನರ ಉಪಸ್ಥಿತಿಯಲ್ಲಿ ಸರಳವಾದ ಕೆಲ ವಿವಾಹಗಳು ನಡೆದರೆ, ಇಂತಹ ಸರಳ ವಿವಾಹವನ್ನು ಇಚ್ಛಿಸದೇ ೨೦೨೦ರಲ್ಲಿ ರದ್ದುಗೊಳಿಸಿದ ಮತ್ತು ಮುಂದೂಡಿದ ಅನೇಕ ಜನರು ನಮ್ಮ ನಡುವೆ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಆದರೆ ನೀವು ಚಿಂತಿಸಬೇಕಾಗಿಲ್ಲ ಏಕೆಂದರೆ ಹೊಸ ವರ್ಷ ಬಂದಿದೆ. ಇದರ ಜೊತೆಗೆ ಹೊಸ ಹುರುಪು, ಹೊಸ ನಿರೀಕ್ಷೆ ಎಲ್ಲವೂ ಜೊತೆಗಿದೆ.

ನೀವು ರದ್ದು ಮಾಡಿದ್ದ, ಮುಂದೂಡಿದ್ದ ಶುಭಕಾರ್ಯಗಳನ್ನು ಮುಖ್ಯವಾಗಿ ವಿವಾಹವನ್ನು ನೆರೆವೇರಿಸಲು ಮತ್ತೆ ಕಾಲ ಕೂಡಿ ಬಂದಿದೆ. ನಿಮ್ಮ ಮಗ/ ಮಗಳ ವಿವಾಹವನ್ನು ಅದ್ದೂರಿಯಾಗಿ ನಡೆಸಲು ಸೂಕ್ತವಾದ ದಿನಾಂಕವನ್ನು ಹುಡುಕುತ್ತಿದ್ದೀರಾ? ಹಾಗಾದ್ರೆ ಬನ್ನಿ ನಿಮ್ಮ ಮನೆಯ ವಿವಾಹಕ್ಕಾಗಿ ೨೦೨೧ ರ ಜನವರಿಯಲ್ಲಿ ಯಾವೆಲ್ಲಾ ದಿನಗಳು ಅತ್ಯುತ್ತಮ ಎಂಬುದನ್ನು ಹೇಳುತ್ತೇವೆ.
೨೦೨೧ ಜನವರಿಯಲ್ಲಿ ಅಂದರೆ ಈ ತಿಂಗಳಲ್ಲಿ ಮದುವೆಗೆ ಇರುವ ಅತ್ಯುತ್ತಮ ದಿನಾಂಕಗಳು :
೨೦೨೧ ರಲ್ಲಿ ಮದುವೆಯಾಗಲು ಯಾವ ದಿನಾಂಕಗಳು ಸೂಕ್ತವೆಂದು ಚಿಂತೆ ಪಡುತ್ತೀರಾ? ನಿಮ್ಮ ಹುಡುಕಾಟಕ್ಕೆ ನಾವಿಂದು ಉತ್ತರ ನೀಡಲಿದ್ದೇವೆ. ನಾವು ೨೦೨೧ರ ವಿವಾಹಗಳಿಗೆ ಅತ್ಯುತ್ತಮ ದಿನಾಂಕಗಳನ್ನು ಸಂಗ್ರಹಿಸಿದ್ದೇವೆ. ಹಿಂದೂ ಕ್ಯಾಲೆಂಡರ್ ೨೦೨೧ ರ ಪ್ರಕಾರ ಈ ಅತ್ಯುತ್ತಮ ವಿವಾಹ ದಿನಾಂಕಗಳು ಈ ಕೆಳಗಿನಂತಿದೆ. ಈ ತಿಂಗಳು ವಿವಾಹಗಳಿಂದ ತುಂಬಿರಲಿದೆ, ಏಕೆಂದರೆ ತಮ್ಮ ಮದುವೆಯನ್ನು ರದ್ದುಗೊಳಿಸಿದ ಅಥವಾ ಮುಂದೂಡಿದ ಕಾರಣ ಹೊಸ ವರ್ಷದಲ್ಲಿ ಮದುವೆ ಆಗಲು ಉತ್ಸುಕರಾಗುತ್ತಾರೆ.
ಜನವರಿ ೨೦೨೧ ರಲ್ಲಿ ಮದುವೆಯ ದಿನಾಂಕಗಳು:
೧೮ ಜನವರಿ ೨೦೨೧ (ಸೋಮವಾರ)
೨೦ ಜನವರಿ ೨೦೨೧ (ಬುಧವಾರ)
೨೪ ಜನವರಿ ೨೦೨೧ (ಭಾನುವಾರ)
೩೧ ಜನವರಿ ೨೦೨೧ (ಭಾನುವಾರ)
ನಿಮ್ಮ ಪ್ರೀತಿಪಾತ್ರರ ಜೊತೆ ಸರಳ ವಿವಾಹವಿರಲಿ ಅಥವಾ ಎಲ್ಲಾ ಸುರಕ್ಷತಾ ಮುನ್ನೆಚ್ಚರಿಕೆಗಳೊಂದಿಗೆ ಭವ್ಯವಾದ ವಿವಾಹವೇ ಆಗಲಿ ೨೦೨೧ ರ ಈ ಶುಭ ಹಿಂದೂ ವಿವಾಹ ದಿನಾಂಕಗಳನ್ನು ಬುಕ್ಮಾರ್ಕ್ ಮಾಡಿ ಮತ್ತು ನಿಮ್ಮ ಕನಸಿನ ಮದುವೆಯ ದಿನದ ಯೋಜನೆಯನ್ನು ಈಗಿನಿಂದಲೇ ಪ್ರಾರಂಭಿಸಿ. ನಿಮ್ಮ ಮದುವೆಯ ದಿನಾಂಕವನ್ನು ಆದಷ್ಟು ಬೇಗ ನಿಗದಿಪಡಿಸಲು ಮತ್ತು ಬೇಡಿಕೆ ಹೆಚ್ಚಾಗುವ ಮೊದಲು ನಿಮ್ಮ ಕನಸಿನ ವಿವಾಹದ ಇವೆಂಟ್ ಮ್ಯಾನೇಜರನ್ನು ಕಾಯ್ದಿರಿಸಲು ನಾವು ನಿಮಗೆ ಶಿಫಾರಸು ಮಾಡುತ್ತೇವೆ.
ಕೊರೊನಾವೈರಸ್ ಹಾವಳಿಯಿಂದ ಇಡೀ ವ್ಯವಸ್ಥೆಯೇ ಬುಡ ಮೇಲಾಗಿತ್ತು. ಇದರಿಂದ ವಿವಾಹಗಳು ಹೊರತಾಗಿಲ್ಲ. ಇದೀಗ ಎಲ್ಲವೂ ಸಾಮಾನ್ಯ ಸ್ಥಿತಿಗೆ ಮರಳುತ್ತಿದೆ. ನಾವು ಈಗಾಗಲೇ ಹೇಳಿದ ಹಾಗೇ ವಿವಾಹಕ್ಕೆ ಉತ್ತಮ ದಿನಾಂಕಗಳನ್ನು ನೀಡಿದ್ದೇವೆ. ಇನ್ನೇಕೆ ತಡ, ಈಗಲೇ ತಯಾರಿ ಆರಂಭಿಸಿ, ನಿಮ್ಮ ಜೀವನದ ಅತ್ಯಮೂಲ್ಯ ಕ್ಷಣವನ್ನು ಕಳೆಯಲು ಸಿದ್ದರಾಗಿ.



Click it and Unblock the Notifications


