Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಸೆಪ್ಟಂಬರ್ 2021: ಇಲ್ಲಿವೆ ಶುಭಕಾರ್ಯಗಳಿಗೆ ಉತ್ತಮ ದಿನ ಹಾಗೂ ಶುಭಘಳಿಗೆಗಳು
ಪ್ರತಿಯೊಂದು ಒಳ್ಳೆ ಕೆಲಸವನ್ನು ಮಾಡಲು ಶುಭ ದಿನಾಂಕದ ಜೊತೆಗೆ ಶುಭದಿನಗಳನ್ನ್ ನೋಡುವುದು ರೂಢಿ. ಇದರಿಂದ ಆ ಕೆಲಸ ಕೈಗೂಡಿ ಉತ್ತಮ ಫಲಿತಾಂಶ ಲಭಿಸುವುದು ಎಂಬ ನಂಬಿಕೆ ಧಾರ್ಮಿಕ ವರ್ಗದ್ದು. ಅದೇ ರೀತಿ ಈ ವರ್ಷದ ಸೆಪ್ಟೆಂಬರ್ ತಿಂಗಳಲ್ಲಿ ಯಾವುದಾದರೂ ಶುಭ ಸಮಾರಂಭ ಮಾಡಬೇಕೇಂದುಕೊಂಡಿದ್ದರೆ ಅಥವಾ ಮನೆಗೆ ಹೊಸ ವಾಹನ ಖರೀದಿಸಬೇಕೆಂದಿದ್ದರೆ ಈ ಸ್ಟೋರಿ ನಿಮಗಾಗಿ. ಏಕೆಂದರೆ, ನಾವಿಂದು ಬರುವ ಸೆಪ್ಟೆಂಬರ್ ತಿಂಗಳಲ್ಲಿ ಯಾವ ದಿನ ಉತ್ತಮವಾಗಿದೆ ಎಂಬುದನ್ನು ಹೇಳುತ್ತೇವೆ.

ಸೆಪ್ಟೆಂಬರ್ ತಿಂಗಳಲ್ಲಿ ಶುಭ ಸಮಾರಂಭಗಳನ್ನು ಮಾಡಲು ಇರುವ ಉತ್ತಮ ದಿನ ಹಾಗೂ ಶುಭಮುಹೂರ್ತಗಳನ್ನು ಈ ಕೆಳಗೆ ನೀಡಲಾಗಿದೆ:
ಮನೆ ಗೃಹಪ್ರವೇಶ ಆಗಲೀ ಅಥವಾ ಹೊಸ ಮನೆ ಕಟ್ಟಲು ತಳಪಾಯ ಹಾಕುವುದಾಗಲೀ ಪ್ರತಿಯೊಂದನ್ನು ಒಳ್ಳೆಯ ಮುಹೂರ್ತದಲ್ಲಿ ಮಾಡಿದರೆ ಒಳಿತು. ಇಲ್ಲವಾದಲ್ಲಿ ಏನೋ ಒಂದು ರೀತಿಯ ಕಸಿವಿಸಿ ಮನದಲ್ಲಿ ಶಾಶ್ವತವಾಗಿ ಉಳಿದುಬಿಡುತ್ತದೆ. ಅದೇ ರೀತಿ ಮದುವೆ, ಹೊಸ ವಾಹನ ಖರೀದಿ, ಹೋಮ-ಹವನಗಳು, ಪೂಜೆ ಪುನಸ್ಕಾರಗಳೆಲ್ಲವೂ ಶುಭ ಮುಹೂರ್ತದಲ್ಲಿ ನಡೆದರೇ ಅದಕ್ಕೊಂದು ಶೋಭೆ. ನೀವೇನಾದರೂ ಸೆಪ್ಟೆಂಬರ್ ತಿಂಗಳಲ್ಲಿ ಇಂತಹ ಯಾವುದೇ ಶುಭಕಾರ್ಯಗಳನ್ನು ಮಾಡಬೇಕೆಂದುಕೊಂಡಿದ್ದೀರಾ? ಹಾಗಾದರೆ ಇಲ್ಲಿ ನೋಡಿ.
ನಿಮಗಾಗಿ ನಾವು ಸೆಪ್ಟೆಂಬರ್ ತಿಂಗಳಲ್ಲಿ ಶುಭಕಾರ್ಯಗಳನ್ನ ನಡೆಸಲು ಇರುವ ಉತ್ತಮದಿನ ಹಾಗೂ ಶುಭಮುಹೂರ್ತಗಳ ಬಗ್ಗೆ ವಿವರಣೆ ನೀಡಿದ್ದೇವೆ. ಈ ದಿನಗಳಲ್ಲಿ ನಿಮಗೆ ಬೇಕಾದ ದಿನವನ್ನ ಈಗಲೇ ಆಯ್ಕೆ ಮಾಡಿಕೊಂಡು, ಶುಭಕಾರ್ಯಕ್ಕೆ ಸಿದ್ಧತೆಯನ್ನ ಮಾಡಿಕೊಳ್ಳಲು ಮುಂದಾಗಿ.
ಸೆಪ್ಟೆಂಬರ್ ತಿಂಗಳಲ್ಲಿ ಇರುವ ಶುಭದಿನ ಹಾಗೂ ಮುಹೂರ್ತಗಳು ಹೀಗಿವೆ:
01-09-2021 ಬುಧವಾರ ಬೆಳಿಗ್ಗೆ 07:42ರಿಂದ ಮಧ್ಯಾಹ್ನ 12:18
02-09-2021 ಗುರುವಾರ ಬೆಳಿಗ್ಗೆ 07:38 ಮಧ್ಯಾಹ್ನ 12:14
03--9-2021 ಶುಕ್ರವಾರ ಸಂಜೆ 04:33ರಿಂದ ರಾತ್ರಿ 09:08
04-09-2021 ಶನಿವಾರ ಬೆಳಿಗ್ಗೆ 07:30ರಿಂದ ಮಧ್ಯಾಹ್ನ 02:25
05-09-2021 ಭಾನುವಾರ ಬೆಳಿಗ್ಗೆ 07:27ರಿಂದ ಬೆಳಿಗ್ಗೆ 09:43
08-09-2021 ಬುಧವಾರ ಬೆಳಿಗ್ಗೆ 11:51ರಿಂದ ಸಂಜೆ 05:55
09-09-2021 ಗುರುವಾರ ಬೆಳಗ್ಗೆ 07:11ರಿಂದ 09:27
11-09-2021 ಶನಿವಾರ ಮಧ್ಯಾಹ್ನ 01:57ರಿಂದ ರಾತ್ರಿ 07:11
12--9-2021 ಭಾನುವಾರ ಬೆಳಿಗ್ಗೆ 06:59ರಿಂದ ಮಧ್ಯಾಹ್ನ 01:53
13-09-2021 ಸೋಮವಾರ ಬೆಳಿಗ್ಗೆ 06:55ರಿಂದ ಮಧ್ಯಾಹ್ನ 01:50
16-09-2021 ಗುರುವಾರ ಬೆಳಗ್ಗೆ 09:00ರಿಂದ ಸಂಜೆ 05:24
17-09-2021 ಶುಕ್ರವಾರ ಬೆಳಿಗ್ಗೆ 11:15ರಿಂದ ಸಂಜೆ 05:20
18-09-2021 ಶನಿವಾರ ಬೆಳಿಗ್ಗೆ 11:11ರಿಂದ ಸಂಜೆ 06:44



Click it and Unblock the Notifications

