Latest Updates
-
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು! -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆಯ ಮಳೆನೀರು ಕೊಯ್ಲು ವ್ಯವಸ್ಥೆ ಹಾಳಾಗದಂತೆ ತಡೆಯುವುದು ಹೇಗೆ? -
ಮಳೆಗಾಲದಲ್ಲಿ ಮಕ್ಕಳ ಲಂಚ್ಬಾಕ್ಸ್ ಸುರಕ್ಷತೆ: ಆರೋಗ್ಯಕರ ಮತ್ತು ಹೈ-ಪ್ರೋಟೀನ್ ಆಹಾರದ ಟಿಪ್ಸ್
ಮಂಗಳವಾರದಂದು ಈ ವಸ್ತುಗಳನ್ನು ಖರೀದಿಸುವುದು ನಿಷಿದ್ಧ!
ಹಿಂದೂ ಧರ್ಮದಲ್ಲಿ, ಪ್ರತಿಯೊಂದು ದಿನಕ್ಕೂ ಒಂದೊಂದು ಮಹತ್ವವಿದ್ದು, ಅದೇ ರೀತಿ ಮಂಗಳವಾರವನ್ನು ಹನುಮನಿಗೆ ಸಮರ್ಪಿಸಲಾಗಿದೆ. ಈ ದಿನದಂದು ಹನುಮಂತನ ಆರಾಧನೆ ವಿಶೇಷ ಪ್ರಾಮುಖ್ಯತೆ ಪಡೆದುಕೊಂಡಿದ್ದು, ಸರಿಯಾದ ರೀತಿಯಲ್ಲಿ ಪೂಜಿಸುವುದರಿಂದ, ಹನುಮ ತನ್ನ ಭಕ್ತರ ಎಲ್ಲಾ ತೊಂದರೆಗಳನ್ನು ನಿವಾರಿಸುತ್ತಾನೆ ಎಂಬ ನಂಬಿಕೆಯಿದೆ. ಅದೇ ರೀತಿ, ಈ ದಿನ ಕೆಲವು ವಿಷಯಗಳ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಮುಖ್ಯವಾಗಿದೆ. ಹಾಗಾದರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮಂಗಳವಾರದಂದು ಖರೀದಿಸಲು ಒಳಿತಲ್ಲದ ಕೆಲವು ವಸ್ತುಗಳ ಬಗ್ಗೆ ಇಲ್ಲಿ ತಿಳಿಯೋಣ.
ಮಂಗಳವಾರದಂದು ಖರೀದಿಸಬಾರದಂತಹ ವಸ್ತುಗಳನ್ನು ಈ ಕೆಳಗೆ ನೀಡಲಾಗಿದೆ:

1. ಹಾಲಿನ ಉತ್ಪನ್ನಗಳು
ಜ್ಯೋತಿಷ್ಯದ ಪ್ರಕಾರ, ಹಾಲು ಮತ್ತು ಅದರಿಂದ ಮಾಡಿದ ವಸ್ತುಗಳನ್ನು ಮಂಗಳವಾರ ಹನುಮನಿಗೆ ಖರೀದಿಸಬಾರದು ಅಥವಾ ಅರ್ಪಿಸಬಾರದು. ಅಲ್ಲದೆ, ಈ ವಸ್ತುಗಳನ್ನು ದಾನದಲ್ಲಿ ಬಳಸುವುದು ಸರಿಯಲ್ಲ. ಹೀಗೆ ಮಾಡಿದರೆ, ನಿಮ್ಮ ಕುಟುಂಬದಲ್ಲಿ ಅಶಾಂತಿ ಉಂಟಾಗಬಹುದು. ಇದರಿಂದಾಗಿ ಜಗಳ ನಡೆಯುವ ಸಾಧ್ಯತೆ ಇದೆ.
ಆದ್ದರಿಂದ ಮಂಗಳವಾರದಂದು ಹಾಲಿನ ಉತ್ಪನ್ನಗಳನ್ನು ಖರೀದಿಸಬೇಡಿ.

2. ಗಾಜಿನ ವಸ್ತುಗಳು:
ಮಂಗಳವಾರದಂದು ಗಾಜಿನಿಂದ ಮಾಡಿದ ಯಾವುದೇ ವಸ್ತುಗಳನ್ನು ಖರೀದಿಸುವುದನ್ನು ನಿಷೇಧಿಸಲಾಗಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಹೀಗೆ ಮಾಡಿದರೆ ಧನಹಾನಿಯಾಗುತ್ತದೆ. ಅಲ್ಲದೇ, ಮಂಗಳವಾರ ಯಾರಿಗೂ ಗಾಜಿನ ಉಡುಗೊರೆಯನ್ನು ನೀಡಬೇಡಿ. ಇಲ್ಲದಿದ್ದರೆ, ಇದು ಅನಗತ್ಯ ವೆಚ್ಚಗಳಿಗೆ ಕಾರಣವಾಗುತ್ತದೆ. ಆದ್ದರಿಂದ, ಈ ದಿನ ಕನ್ನಡಿ, ಗಾಜಿನ ಜಾರ್ ಇತರ ಯಾವುದೇ ಗಾಜಿನ ವಸ್ತುಗಳನ್ನು ಖರೀದಿಸಬೇಡಿ.

3. ಮೇಕಪ್ ವಸ್ತುಗಳು:
ಮಂಗಳವಾರದಂದು ಮೇಕಪ್ ವಸ್ತುಗಳನ್ನು ಖರೀದಿಸುವುದು ಅಶುಭ ಎಂದು ನಂಬಲಾಗಿದೆ. ಏಕೆಂದರೆ ಅನಗತ್ಯ ಖರ್ಚುಗಳಿಗೆ ದಾರಿ ಮಾಡಿಕೊಡುವುದು. ಆದ್ದರಿಂದ ಹಣವನ್ನು ಖರ್ಚು ಮಾಡುವುದನ್ನು ತಪ್ಪಿಸಲು, ಮಂಗಳವಾರದಂದು ಯಾವುದೇ ಮೇಕಪ್ ವಸ್ತುಗಳು ಮತ್ತು ಸಿಂಧೂರವನ್ನು ಖರೀದಿಸಬೇಡಿ. ಅಲ್ಲದೆ, ಇದರಿಂದ ನೀವು ವೈವಾಹಿಕ ಜೀವನದಲ್ಲಿಯೂ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.

4. ಕಬ್ಬಿಣದ ವಸ್ತುಗಳು:
ಮಂಗಳವಾರದಂದು ಯಾವುದೇ ಕಬ್ಬಿಣದ ವಸ್ತುವನ್ನು ಖರೀದಿಸುವುದು ಒಳ್ಳೆಯದಲ್ಲ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ. ಅದೇ ಸಮಯದಲ್ಲಿ, ಸ್ಟೀಲ್ ಪಾತ್ರೆಗಳ ಖರೀದಿಯನ್ನು ತಪ್ಪಿಸಿ. ಇದರಿಂದ, ಕುಟುಂಬದಲ್ಲಿ ನಾನಾ ಸಮಸ್ಯೆಗಳು ಹುಟ್ಟಿಕೊಳ್ಳುತ್ತವೆ. ಆದ್ದರಿಂದ ಇನ್ನು ಮುಂದೆ ಯಾವುದಾದರೂ ಕಬ್ಬಿಣದ ವಸ್ತುಗಳನ್ನು ಖರೀದಿಸುವಾಗ, ಅದು ಮಂಗಳವಾರವೇ ಎಂಬುದನ್ನು ಒಮ್ಮೆ ಪರೀಕ್ಷಿಸಿ.

5. ಕಪ್ಪು ಬಟ್ಟೆ:
ಮಂಗಳವಾರದಂದು ಕಪ್ಪು ಬಣ್ಣದ ಬಟ್ಟೆಗಳನ್ನು ಧರಿಸುವುದು ಮತ್ತು ಖರೀದಿಸುವುದನ್ನು ನಿಷೇಧಿಸಲಾಗಿದೆ. ಇದು ಅಮಂಗಳಕರದ ಸೂಚಕವಾಗಿದೆ. ಅದೇ ಸಮಯದಲ್ಲಿ, ಈ ದಿನದಂದು ಕೆಂಪು ಅಥವಾ ಕಿತ್ತಳೆ ಬಟ್ಟೆಗಳನ್ನು ಧರಿಸುವುದರಿಂದ ಮಂಗಳ ದೋಷ ಕಡಿಮೆಯಾಗುತ್ತದೆ. ಹಾಗಾಗಿ, ಮಂಗಳವಾರದಂದು, ಕಪ್ಪು ಬಟ್ಟೆಯನ್ನು ಧರಿಸಲು ಹೋಗಬೇಡಿ.



Click it and Unblock the Notifications