Latest Updates
-
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ?
April Fools' Day 2021: ನಿಮ್ಮ ಫ್ರೆಂಡ್ಸನ್ನ ಫೂಲ್ ಮಾಡೋಕೆ ಇಲ್ಲಿದೆ ಬೆಸ್ಟ್ ಐಡಿಯಾಗಳು
ನಾಳೆ ಏಪ್ರಿಲ್ ಫಸ್ಟ್. ಅಂದರೆ ಸಾಮಾನ್ಯವಾಗಿ ಮೂರ್ಖರ ದಿನ ಅಂತಾನೇ ಫೇಮಸ್. ತಮ್ಮ ಪ್ರೀತಿ ಪಾತ್ರರಲ್ಲಿ ಯಾರನ್ನಾದಾರೂ ಫೂಲ್ ಮಾಡದೇ ಇದ್ರೆ ಈ ದಿನ ಕಂಪ್ಲೀಟ್ ಆಗೋದಿಲ್ಲ.
ಸ್ವಲ್ಪ ಪೆದ್ದು-ಪೆದ್ದಾಗಿ ಆಡೋ ನಿಮ್ಮ ಸ್ನೇಹಿತ-ಸ್ನೇಹಿತೆಯರಿಗೆ ಸ್ವಲ್ಪ ಕಾಡಿಸೋ ಈ ದಿನಕ್ಕಾಗಿ ಕೆಲವು ಸ್ಪೆಷಲ್ ಪ್ಲಾನ್ ಗಳನ್ನು ನಾವು ನೀಡಿದ್ದೇವೆ. ನೀವು ಪ್ರಾಂಕ್ ಮಾಡಿ, ನಿಮ್ಮ ಪ್ರೀತಿ-ಪಾತ್ರರಿಗೆ ಏಪ್ರಿಲ್ ಫೂಲ್ ವಿಶ್ ಮಾಡಿ.

೧. ಲೈಟ್ ಲ್ಯಾಂಪ್ ನೊಳಗೆ ಜಿರಳೆ:
ಹೆಚ್ಚಿನವರಿಗೆ ಜಿರಳೆ ಕಂಡ್ರೆ ಅದೇನೋ ಭಯ. ಸೋ ನೀವು ಇದನ್ನ ನೀವು ಯೂಸ್ ಮಾಡ್ಕೊಳಿ. ನಿಮ್ಮ ಫ್ರೆಂಡ್ ಬರೋ ಮೊದಲು, ಕಾಗದವನ್ನು ಜೀರಳೆ ಆಕಾರದಲ್ಲಿ ಕತ್ತರಿಸಿ, ಅದನ್ನ ಲ್ಯಾಂಪ್ ನೊಳಗೆ ಇಡಿ. ನಿಮ್ಮ ಫ್ರೆಂಡ್ ಬಂದಾಗ, ಅಲ್ಲಿ ಜಿರಳೆ ಎಂದು ಹೇಳಿ. ಅದನ್ನು ನೋಡಿದ ಕೂಡಲೇ ಸೋಫಾ ಬಿಟ್ಟು ಹಾರೋದಂತೂ ಖಂಡಿತ. ಆಗ ಎಪ್ರಿಲ್ ಫೂಲ್ ಹೇಳಿ.

೨. ಸೊಪ್ಪಿನಲ್ಲಿ ಪ್ಲಾಸ್ಠಿಕ್ ಹಾವು:
ಹೊರಗಡೆ ಹೋಗಿ ಒಂದು ಕಟ್ಟು ಸೊಪ್ಪು ತಂದು ಅದನ್ನು ಯಾರಿಗೆ ಪ್ರಾಂಕ್ ಮಾಡಬೇಕೆಂದಿರೋ ಅವರ ಕೈಗೆ ಕೊಡಿ, ಆದರೆ ಕೊಡುವ ಮುನ್ನ ಅದರಲ್ಲಿ ಚಿಕ್ಕ ಪ್ಲಾಸ್ಟಿಕ್ ಹಾವು ಇಟ್ಟು ಕೊಡಿ.. ನಂತರ ಮಾತನಾಡುತ್ತಾ ಅದೇನು ಸೊಪ್ಪಿನಲ್ಲಿ ಅಂತ ಕೇಳಿ ಅವರು ಅದನ್ನ ನೋಡಿ ಪಟಾರ್ ಅಂತ ಕಿರುಚುತ್ತಾರೆ. ಆಗ ನೀವು ಎಪ್ರಿಲ್ ಫೂಲ್ ಅನ್ನಿ.

೩.ಸೋಪ್ ಮೇಲೆ ನೈಲ್ ಪಾಲೀಶ್:
ಸ್ನಾನ ಮಾಡುವ ಸೋಪ್ಗೆ ಕ್ಲಿಯರ್ ನೇಲ್ ಪಾಲಿಷ್ ಹಚ್ಚಿ. ಅದನ್ನು ಒಣಗಿಸಿ ಬಾತ್‌ರೂಂನಲ್ಲಿ ಇಡಿ, ಅವರು ಸ್ನಾನಕ್ಕೆ ಹೋದಾಗ ಹೇ ಏಕೆ ಸೋಪ್ ನಲ್ಲಿ ನೊರೆ ಬರುತ್ತಿಲ್ಲ ಎಂದಾಗ ನೀವು ಮಜಾ ತಗೋಬಹುದು..

೪. ಚೇರ್ ಕೆಳಗೆ ಹಾರ್ನ್ :
ಕೂರುವ ಚೇರ್ನಲ್ಲಿ ಅಥವಾ ಸೋಫಾದಲ್ಲಿ ಹಾರ್ನ್ ಫಿಕ್ಸ್ ಮಾಡಿ. ಅದರ ಮೇಲೆ ಅವರು ಕೂತಾಗ ಸೌಂಡ್ ಬರಬೇಕು ಹಾಗೇ ಫಿಕ್ಸ ಮಾಡಬೇಕು. ಪ್ರಾಂಕ್ ಮಾಡಬೇಕೆನ್ನುವ ವ್ಯಕ್ತಿ ಬಂದಾಗ, ಅವರನ್ನು ಆ ಚೇರ್ ಮೇಲೆ ಕುಳಿತುಕೊಳ್ಳಲು ಹೇಳಿ. ಆಗ ಒಮ್ಮೆಲೆ ಹಾರ್ನ್ ಶಬ್ದ ಬರುತ್ತದೆ.

೫. ರಟ್ಟಿನ ಫ್ರೈ:
ನಿಮ್ಮ ಪ್ರೆಂಡ್ಸನ್ನು ಡಿನ್ನರ್‌ಗೆ ಕರೆಯಿರಿ. ಅವರಿಗಾಗಿ ಸ್ಪೆಷಲ್ ಫ್ರೈ ರೆಡಿ ಮಾಡಿ. ಅದು ಮೀನಿನಿಂದಲ್ಲ. ರಟ್ಟನ್ನು ಅಂಜಲ್ ಮೀನಿನಾ ಆಕಾರದಲ್ಲಿ ಕತ್ತರಿಸಿ, ಅದಕ್ಕೆ ಮಾಸಾಲೆ ಮೆತ್ತಿ, ಚೆನ್ನಾಗಿ ಹುರಿದು ತೆಗೆದೆಡಿ. ನಿಮ್ಮ ಗೆಳೆಯರು ಬಂದಾಗ ಈ ಫ್ರೈ ನೀಡಿ. ಅವರು ತಿನ್ನಲು ಮುಂದಾದಾಗ ಮಜಾವೋ ಮಜಾ. ಆಗ ಹೇಳಿ ಎಪ್ರಿಲ್ ಫೂಲ್ ಎಂದು.

೬. ಬಾತ್ ರೂಮ್ ನಲ್ಲಿ ಬೆದರು ಬೊಂಬೆಯನ್ನು ಮಲಗಿಸಿ:
ನಿಮ್ಮ ಗೆಳತಿ ಸ್ನಾನಕ್ಕೆ ಹೋಗುವ ಸಮಯ ನಿಮಗೆ ತಿಳಿದಿರುತ್ತದೆ. ಅದೇ ವೇಳೆಗೆ ನೀವು ಬೆದರುಬೊಂಬೆಗೆ ಚೆನ್ನಾಗಿ ಸೂಟ್ ಬೂಟು ಹಾಕಿ ಬಾತ್ ರೂಮ್ ನಲ್ಲಿ ಮಂಗಾತ ಮಲಗಿಸಿ. ಸ್ನಾನಕ್ಕೆಂದು ಬಾಗಿಲು ತೆಗೆದಾಗ ಆಕೆ ಅದನ್ನು ನೋಡಿ ಯಾರೋ ಸತ್ತು ಬಿದ್ದಿದ್ದಾರೆಂದು ತಿಳಿದು ಕಿರುಚಿಕೊಂಡು ಓಡಿ ಬರುತ್ತಾಳೆ. ಆಗ ಹೇಳಿ ಅವಳಿಗೆ ಎಪ್ರಿಲ್ ಫೂಲ್ ಎಂದು.



Click it and Unblock the Notifications