Latest Updates
-
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ!
ಸಂಸಾರದಲ್ಲಿ ಸುಖ-ಶಾಂತಿ, ನೆಮ್ಮದಿ ಇರಬೇಕೆಂದರೆ ಗಂಡ-ಹೆಂಡತಿ ಹೇಗಿರಬೇಕು? ಚಾಣಕ್ಯ ಹೇಳಿದ ಗುಟ್ಟುಗಳು
ಗಂಡ- ಹೆಂಡತಿ ಒಟ್ಟಾಗಿ ಸೇರಿ ಸಂಸಾರದ ಬಂಡಿಯನ್ನು ನಡೆಸಿದರೆ ಮಾತ್ರ ಸುಖ ಸಂಸಾರವಾಗಲು ಸಾಧ್ಯ. ಎಲ್ಲಾ ಸಂಸಾರದಲ್ಲೂ ಹೀಗೆ ಇರಬೇಕೆಂದಿಲ್ಲ. ಕೆಲವೊಂದು ಕಡೆ ಪುರುಷ ಪ್ರಾಬಲ್ಯ ಹೆಚ್ಚಾಗಿರುತ್ತದೆ. ಇನ್ನೂ ಕೆಲವು ಕಡೆ ಗಂಡನಿಗಿಂತ ಹೆಚ್ಚಾಗಿ ಸಂಭಳ ಪಡೆಯುವ ಮಹಿಳೆ ತನ್ನ ಪ್ರಾಬಲ್ಯವನ್ನೇ ಸಾಧಿಸುತ್ತಾಳೆ. ಪರಿಸ್ಥಿತಿ ಹೀಗಿದ್ದಾಗ ಸಂಸಾರದಲ್ಲಿ ಸುಖ ಕಂಡುಕೊಳ್ಳಲು ಹೇಗೆ ಸಾಧ್ಯ.

ಅಷ್ಟಕ್ಕು ಸುಂದರ ದಾಂಪತ್ಯ ನಡೆಸಬೇಕೆಂದರೆ ಏನು ಮಾಡಬೇಕು? ಗಂಡ ಹಾಗೂ ಹೆಂಡತಿಯ ಬಳಿ ಚಾಣಕ್ಯ ಹೇಳೀದ ಆ ಗುಣಗಳಿದ್ದರೆ ಮಾತ್ರ ಸುಂದರೆ ಸಂಸಾರ ನಡೆಸಬಹುದು. ಅಷ್ಟಕ್ಕು ಮಹಿಳೆ ಹಾಗೂ ಪುರುಷರಲ್ಲಿ ಇರಲೇಬೇಕಾದ ಆ ಗುಣಗಳು ಯಾವುದು ಅನ್ನೋದನ್ನ ಹೇಳ್ತೀವಿ.

ಮಹಿಳೆಯರಲ್ಲಿ ಇರಬೇಕಾದ ಗುಣಗಳು
ಹೆಂಡತಿಯು ಕೆಲವೊಂದು ಗುಣಗಳನ್ನು ಮೈಗೂಡಿಸಿಕೊಂಡಿದ್ದರೆ ಮಾತ್ರ ಸುಖ ಸಂಸಾರ ನಡೆಸಲು ಸಾಧ್ಯ ಅವುಗಳೆಂದರೆ..
1. ಧಾರ್ಮಿಕ ನಂಬಿಕೆಗಳು
ಚಾಣಕ್ಯನ ಪ್ರಕಾರ ಗೃಹಿಣಿಯಾದವಳು ಮನೆಯನ್ನ ಬೃಂದಾವನದಂತೆ ಇಟ್ಟುಕೊಳ್ಳಬೇಕು. ಬೆಳಗ್ಗೆ ಎದ್ದ ತಕ್ಷಣ ಮನೆ ಬಾಗಿಲಿಗೆ ನೀರು ಹಾಕಿ ರಂಗೋಲಿ ಬೆಳಗಬೇಕು. ಅಷ್ಟೇ ಅಲ್ಲ, ಬೆಳ್ಳ ಬೆಳಗ್ಗೆ ಮನೆಯಲ್ಲಿ ಪೂಜಾ ಕೈಕರ್ಯಗಳನ್ನು ಕೈಗೊಳ್ಳಬೇಕು. ಆಗ ಮನೆಯಲ್ಲಿ ಮನಶಾಂತಿ ನೆಲೆಸುತ್ತದೆ. ಇನ್ನೂ ಹಬ್ಬ ಹರಿದಿನಗಳಲ್ಲಿ ಕಟ್ಟು ನಿಟ್ಟಾಗಿ, ಮಡಿವಂತಿಕೆಯಿಂದ ಪೂಜಾ ಕಾರ್ಯ ನೆರವೇರಿಸಬೇಕು. ಮನೆಯೇ ಮೊದಲ ಪಾಠಶಾಲೆ ಅಂತಾರೆ ಕ್ರಮೇಣ ತಾಯಿಯ ಸಂಸ್ಕಾರವನ್ನು ಮಕ್ಕಳು ಕೂಡ ಕಲಿಯುತ್ತಾರೆ.

2. ಮಾತು ಮಧುರವಾಗಿರಬೇಕು
ಚಾಣಕ್ಯನ ಪ್ರಕಾರ ಹೆಂಡತಿಯಾದವಳು ಗೈಯಾಳಿಯಂತಿರಬಾರದು. ಗಂಡ ಹಾಗೂ ಮಕ್ಕಳ ಜೊತೆಗೆ ಮಧುರವಾಗಿ ಮಾತನಾಡಿ ಉತ್ತಮ ಒಡನಾಟ ಹೊಂದಿರಬೇಕು. ಕೆಲಸದಿಂದ ಸಂಜೆ ಮನೆಗೆ ಬಂದ ಗಂಡನ ಜೊತೆ ಒಂದೆರಡು ಪ್ರೀತಿಯ ಮಾತನಾಡಿದರೆ ಅಷ್ಟೇ ಸಾಕು ಆತ ಅದಕ್ಕಿಂತ ಹೆಚ್ಚು ಬೇರೇನನ್ನೂ ಆತ ಬಯಸೋದಿಲ್ಲ. ಒಟ್ಟಿನಲ್ಲಿ ಹೆಂಡತಿ ಎಲ್ಲವನ್ನೂ ಸರಿದೂಗಿಸಿಕೊಂಡು ಹೋಗುವ ಗುಣ ಹೊಂದಿರಬೇಕು.

3. ಉಳಿತಾಯ
ಪತ್ನಿಗೆ ಉಳಿತಾಯ ಮಾಡುವ ಗುಣ ಇರಬೇಕು ಎಂದು ಚಾಣಕ್ಯ ಹೇಳುತ್ತಾರೆ. ಗೃಹಿಣಿಯಾದವಳು ಸಿಕ್ಕಾಪಟ್ಟೆ ಖರ್ಚು ಮಾಡಬಾರದು. ಎಲ್ಲೆಲ್ಲಿ ಉಳಿತಾಯ ಮಾಡಲು ಸಾಧ್ಯವೋ ಅಲ್ಲೆಲ್ಲ ಹಣ ಕೂಡಿಡಬೇಕು. ಈ ದುಡ್ಡು ಖಂಡಿತ ಕಷ್ಟಕಾಲದಲ್ಲಿ ಉಪಯೋಗಕ್ಕೆ ಬರುತ್ತದೆ. ಗಂಡನ ಸಂಕಷ್ಟವನ್ನು ಅರ್ಥ ಮಾಡಿಕೊಂಡು ಆತನಿಗೆ ಹೊಂದಿಕೊಂಡು ಹೋಗುವ ಗುಣ ಇರಬೇಕು.

ಪುರುಷರಲ್ಲಿ ಇರಲೇಬೇಕಾದ ಗುಣಗಳು
ಸಂಸಾರದಲ್ಲಿ ಹೆಂಡತಿ ಮಾತ್ರ ಹೊಂದಿಕೊಂಡು ಹೋದರೆ ಸಾಲುವುದಿಲ್ಲ ಅದರಲ್ಲಿ ಗಂಡನ ಪಾಲು ಇರಬೇಕು. ಸುಖ ಸಂಸಾರಕ್ಕೆ ಪುರುಷರಲ್ಲಿ ಇರಬೇಕಾದ ಗುಣಗಳೆಂದರೆ..
1. ತೃಪ್ತಿ ಇರಬೇಕು
ಕೆಲವೊಂದು ಮನೆಗಳಲ್ಲಿ ಗಂಡಂದಿರಿಗೆ ಏನು ಮಾಡಿದರೂ ತೃಪ್ತಿ ಅನ್ನೋದು ಆಗೋದೇ ಇಲ್ಲ. ಹೆಂಡತಿ ಮಾಡಿದ ಪ್ರತಿಯೊಂದು ಕೆಲಸದಲ್ಲೂ ತಪ್ಪು ಹುಡುಕಿ ಕೊಂಕು ತೆಗೆಯುತ್ತಾರೆ. ತನ್ನ ಪ್ರಾಬಲ್ಯವನ್ನೇ ಹೇರಲು ಬಯಸುತ್ತಾರೆ. ಚಾಣಕ್ಯನ ಪ್ರಕಾರ ಇದು ಸರಿಯಲ್ಲ, ಗಂಡನಾದವನು ಹೆಂಡತಿಯ ಕಷ್ಟಗಳನ್ನು ಅರಿತುಕೊಂಡು ಆಕೆಯ ಜೊತೆಗೆ ಪ್ರೀತಿಯಿಂದ ಸಂಸಾರ ನಡೆಸಬೇಕು.

2. ಪ್ರಮಾಣಿಕನಾಗಿರಬೇಕು
ಪುರುಷನಾದವನು ಒಂದೇ ಸಂಸಾರಕ್ಕೆ ತೃಪ್ತಿ ಪಟ್ಟುಕೊಳ್ಳಬೇಕು. ಅದನ್ನು ಬಿಟ್ಟು ಬೇರೆ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಳ್ಳಬಾರದು. ಆಗ ಸಂಸಾರ ಧೂಳಿಪಟವಾಗುತ್ತದೆ. ಚಾಣಕ್ಯನ ಪ್ರಕಾರ ಅನೈತಿಕ ಸಂಬಂಧ ಇಟ್ಟುಕೊಳ್ಳುವುದು ತಪ್ಪು. ಹೆಂಡತಿ ಹಾಗೂ ಮಕ್ಕಳೊಂದಿಗೆ ಸುಖ ಸಂಸಾರ ನಡೆಸಬೇಕು.

3. ಈ ವಿಚಾರಗಳ ಬಗ್ಗೆ ಗಮನವಿರಬೇಕು
ಪುರುಷನಾದವನು ಪತಿಯ ಕರ್ತವ್ಯಗಳನ್ನು ನಿಭಾಯಿಸಬೇಕು. ತನ್ನ ಹೆಂಡತಿ ಹಾಗೂ ಮಕ್ಕಳನ್ನು ಶತ್ರುಗಳಿಂದ ರಕ್ಷಿಸಬೇಕು. ಎಲ್ಲೆ ಹೋದರು ಮನೆಯ ಮೇಲೆ ಒಂದು ಕಣ್ಣು ಇರಲೇಬೇಕು. ಹೊರಗಿನವರಿಂದ ತನ್ನ ಕುಟುಂಬಕ್ಕೆ ಯಾವುದೇ ತೊಂದರೆ ಆಗದಂತೆ ಜಾಗರೂಕತೆ ವಹಿಸಬೇಕು.

4. ಲೈಂಗಿಕ ಸಂತೃಪ್ತಿ ನೀಡಬೇಕು
ಪುರುಷನಾದವನು ಕೇವಲ ಗಂಡನ ಕರ್ತವ್ಯ ನಿಭಾಯಿಸಿದರೆ ಸಾಲದು. ತನ್ನ ಪತ್ನಿಗೆ ಲೈಂಗಿಕ ಸಂತೃಪ್ತಿಯನ್ನು ನೀಡಬೇಕು. ಒಂದು ವೇಳೆ ಆಕೆಗೆ ಮನೆಯಲ್ಲಿ ಲೈಂಗಿಕ ಸಂತೃಪ್ತಿ ಸಿಗದೇ ಹೋದರೆ ಆಕೆ ಬೇರೆ ಕಡೆ ಆಕರ್ಷಿತಳಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಆಗ ಮಾತ್ರ ದಾಂಪತ್ಯ ಜೀವನ ಸುಖಕರವಾಗಿರುವುದಿಲ್ಲ. ಅನೈತಿಕ ಸಂಬಂಧಕ್ಕೆ ಕಟ್ಟು ಬಿದ್ದ ಪತ್ನಿಯ ಜೊತೆ ಬಾಳ್ವೆ ಕಷ್ಟ ಎನಿಸಬಹದು. ಹೀಗಾಗಿ ಮುಂಜಾಗೃತೆಯಿಂದಿರಿ.
ಕೆಲವೊಂದು ಸಾರಿ ಸಂಸಾರದಲ್ಲಿ ಅಡ್ಜಸ್ಟ್‌ಮೆಂಟ್ ಮಾಡಬೇಕಾಗಿರುತ್ತದೆ ಆ ಸಮಯದಲ್ಲಿ ಪತಿ-ಪತ್ನಿ ಇಬ್ಬರೂ ಕೂಡ ಹೊಂದಿಕೊಳ್ಳಲೇಬೇಕಾಗುತ್ತದೆ. ಚಾಣಕ್ಯನ ಈ ಸೂತ್ರಗಳನ್ನು ಪತಿ-ಪತ್ನಿ ಇಬ್ಬರು ಪಾಲಿಸಿದ್ರೆ ಸಾಕು ಸುಖ ಸಂಸಾರಕ್ಕೆ ಬೇರೇನೂ ಬೇಕಿಲ್ಲ.



Click it and Unblock the Notifications
