Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
2022ರಲ್ಲಿ ಈ ನಾಲ್ಕು ರಾಶಿಯವರ ಭವಿಷ್ಯ ಬಂಗಾರದಂತೆ ಹೊಳೆಯುವ ನಿರೀಕ್ಷೆಯಿದೆಯಂತೆ!
ಹೊಸ ವರ್ಷ, ಅನೇಕ ಜನರ ಜೀವನದಲ್ಲಿ ಹೊಸ ಮತ್ತು ಉತ್ತಮ ಬದಲಾವಣೆಗಳನ್ನು ತರಬಹುದು. ಅದೇ ರೀತಿ ಉದ್ಯೋಗ, ಸಂಬಂಧ, ಹಣಕಾಸು, ವ್ಯಾಪಾರ ಯಾವುದೇ ಕ್ಷೇತ್ರದಲ್ಲಾಗಿರಲಿ, ಪ್ರತಿಯೊಬ್ಬರೂ ಅದೃಷ್ಟವನ್ನು ಬಯಸುತ್ತಾರೆ. ಆದರೆ, ಜ್ಯೋತಿಷ್ಯದ ಪ್ರಕಾರ, ಈ ನಾಲ್ಕು ರಾಶಿಗಳಿಗೆ, ಉಳಿದವುಕ್ಕಿಂತ ಹೆಚ್ಚಿನ ಅದೃಷ್ಟವೇ 2022ರಲ್ಲಿ ಒಲಿಯಲಿದೆಯಂತೆ. ಹಾಗಾದರೆ, ಆ ಅದೃಷ್ಟವಂತ ರಾಶಿಚಕ್ರಗಳಾವುವು ಎಂಬುದನ್ನು ಇಲ್ಲಿ ನೋಡೋಣ.
2022ರಲ್ಲಿ ಭವಿಷ್ಯ ಬಂಗಾರದಂತೆ ಹೊಳೆಯುವ ನಿರೀಕ್ಷೆಯಿರುವ ರಾಶಿಚಕ್ರಗಳ ಬಗ್ಗೆ ಈ ಕೆಳಗೆ ನೀಡಲಾಗಿದೆ:

ಮೇಷ:
ಈ ರಾಶಿಚಕ್ರದವರಿಗೆ ಹಣದ ಮೊತ್ತ ಹೆಚ್ಚಾಗುವುದು. ಉತ್ತಮ ಶ್ರಮದಿಂದ ಲಾಭವನ್ನು ಪಡೆಯಬಹುದು. ಅದೃಷ್ಟವು ಸಂಪೂರ್ಣವಾಗಿ ನಿಮ್ಮೊಂದಿಗೆ ಇರುತ್ತದೆ. ಈ ರಾಶಿಯವರು ಹೊಸ ವಾಹನ ಅಥವಾ ಮನೆ ಖರೀದಿಸುವ ಸಾಧ್ಯತೆಯೂ ಇದೆ. ನಿಮ್ಮ ಕನಸುಗಳು ನನಸಾಗುವುದನ್ನು ನಿರೀಕ್ಷಿಸಬಹುದು. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ. ಶಿಕ್ಷಣ ಕ್ಷೇತ್ರದಲ್ಲೂ ಯಶಸ್ಸು ಸಿಗುವ ಸಾಧ್ಯತೆ ಇದೆ. ಉದ್ಯೋಗ ಅಥವಾ ವ್ಯಾಪಾರ ನೀವು ಪ್ರಯತ್ನಿಸುವ ಯಾವುದೇ ಕೆಲಸದಲ್ಲಿ ಯಶಸ್ವಿಯಾಗುತ್ತೀರಿ. ವೈವಾಹಿಕ ಜೀವನವು ನಿಮಗೆ ಸಂತೋಷವನ್ನು ನೀಡುತ್ತದೆ ಮತ್ತು ನೀವು ಕುಟುಂಬ ಸದಸ್ಯರೊಂದಿಗೆ ಹೆಚ್ಚು ಹೆಚ್ಚು ಸಮಯವನ್ನು ಕಳೆಯಲು ಸಾಧ್ಯವಾಗುತ್ತದೆ. ಸಂಪತ್ತಿನ ಹೆಚ್ಚಳವು ಆರ್ಥಿಕ ಭಾಗವನ್ನು ಬಲಪಡಿಸುತ್ತದೆ.

ಸಿಂಹ:
ಈ ರಾಶಿಚಕ್ರದ ಜನರಿಗೆ, ಈ ವರ್ಷವು ಧಾರ್ಮಿಕ ಮತ್ತು ಆಧ್ಯಾತ್ಮಿಕ ಪ್ರಗತಿಯ ವರ್ಷವಾಗುತ್ತದೆ. ಇದರೊಂದಿಗೆ, ನಿಮ್ಮ ಹಳೆಯ ವೈಮನಸ್ಸುಗಳನ್ನು ತೆಗೆದುಹಾಕುವಲ್ಲಿ ಮತ್ತು ನಿಮ್ಮ ಶತ್ರುಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗುತ್ತೀರಿ. ನಿಮ್ಮ ಶತ್ರುಗಳು ಇನ್ನು ಮುಂದೆ ನಿಮಗೆ ತೊಂದರೆ ಕೊಡಲಾರರು. ನೀವು ಶಿಕ್ಷಣ ಕ್ಷೇತ್ರದಲ್ಲಿದ್ದರೆ ಮುಂಬರುವ ವರ್ಷವು ನಿಮಗೆ ವರದಾನವಾಗಿದೆ. ಪ್ರಯಾಣದಿಂದ ಲಾಭ ಬರುವ ಸಾಧ್ಯತೆ ಇದೆ. ಆರ್ಥಿಕವಾಗಿ ಸದೃಢವಾಗಿದ್ದು ಪ್ರಗತಿಯನ್ನು ಪಡೆಯುವ ನಿರೀಕ್ಷೆ ಇದೆ. ನೀವು ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ತೊಡೆದುಹಾಕಲು ಸಾಧ್ಯವಾಗುತ್ತದೆ.

ವೃಷಭ:
ಈ ರಾಶಿಯ ಜನರ ಜೀವನದಲ್ಲಿ ಧನಾತ್ಮಕ ಬದಲಾವಣೆಗಳನ್ನು ಸೂಚಿಸಲಾಗುತ್ತದೆ. ಹಿಂದೆ ಇದ್ದ ಹಣಕಾಸಿನ ಸಮಸ್ಯೆಗಳು ಬಗೆಹರಿಯುತ್ತವೆ. ಹಣವು ಹೇರಳವಾಗಿರುತ್ತದೆ, ಅಂದರೆ, ಹಣವನ್ನು ಗಳಿಸಲು ನೀವು ಮಾಡಿದ ಪ್ರಯತ್ನಗಳ ಫಲವನ್ನು ಪಡೆಯುತ್ತೀರಿ. ಕೆಲಸದ ಸ್ಥಳದಲ್ಲಿ ನೀವು ಮಾಡಿದ ಕೆಲಸಕ್ಕಾಗಿ ಪ್ರಶಂಸೆಗೆ ಅರ್ಹರಾಗುತ್ತೀರಿ. ನೀವು ಖ್ಯಾತಿ ಮತ್ತು ಪ್ರತಿಷ್ಠೆಯನ್ನು ಪಡೆಯುವ ನಿರೀಕ್ಷೆಯಿದೆ. ಈ ಹಿಂದೆ ಸ್ಥಗಿತಗೊಂಡಿದ್ದ ಕಾಮಗಾರಿಗಳು ಪೂರ್ಣಗೊಳ್ಳುವ ಸಾಧ್ಯತೆ ಇದೆ.

ವೃಶ್ಚಿಕ:
ಈ ರಾಶಿಯವರಿಗೆ ಕೆಲಸವನ್ನು ವೇಗಗೊಳಿಸುತ್ತದೆ. ಯಾವುದೇ ರೀತಿಯ ಅಡೆತಡೆಗಳಿಂದಾಗಿ ಸ್ಥಗಿತಗೊಂಡ ಕೆಲಸಗಳು ಪೂರ್ಣಗೊಳ್ಳುವ ನಿರೀಕ್ಷೆಯಿದೆ. ನೀವು ಪ್ರಯಾಣದ ಪ್ರಯೋಜನಗಳನ್ನು ಸಹ ಪಡೆಯುತ್ತೀರಿ. ಸಂಬಳ ಹೆಚ್ಚಾಗುತ್ತದೆ ಮತ್ತು ಕಚೇರಿಯಲ್ಲಿ ಪ್ರತಿಷ್ಠೆ ಹೆಚ್ಚಾಗುತ್ತದೆ. ಬಾಸ್ ನಿಮ್ಮ ಕೆಲಸದಿಂದ ಸಂತೋಷವಾಗಿರುತ್ತಾರೆ. ನಿಮ್ಮ ಕೆಲಸದಲ್ಲಿ ಯಶಸ್ಸನ್ನು ಪಡೆಯುತ್ತೀರಿ ಮತ್ತು ಪ್ರಶಂಸೆಗೆ ಒಳಗಾಗುತ್ತೀರಿ. ನಿಮಗೆ ಹಣ ಸಂಪಾದನೆಯ ಬಾಗಿಲು ತೆರೆಯುತ್ತದೆ. ಸರ್ಕಾರಿ ಉದ್ಯೋಗಗಳಲ್ಲಿ ಬಡ್ತಿಯ ಅವಕಾಶವೂ ಇದೆ.



Click it and Unblock the Notifications