Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮೇ ತಿಂಗಳಲ್ಲಿ ಕುಂಭ ರಾಶಿಯ ಭವಿಷ್ಯ ಹೇಗಿದೆ ನೋಡಿ
ಸ್ವತಂತ್ರರಾಗಿರಲು ಬಯಸುವ ಕುಂಭ ರಾಶೀಯವರು ಯಾವುದೇ ನಿರ್ಬಂಧ ಹಾಗೂ ಕಟ್ಟುಪಾಡುಗಳನ್ನು ಹೇರುವುದನ್ನು ದ್ವೇಷಿಸುತ್ತಾರೆ. ಅತ್ಯುತ್ತಮ ಕನಸುಗಾರರು ಎನಿಸಿಕೊಳ್ಳುವ ಸ್ವಭಾವವನ್ನು ಹೊಂದಿರುತ್ತಾರೆ ಎಂದು ಜ್ಯೋತಿಷ್ಯ ಶಾಸ್ತ್ರ ತಿಳಿಸುತ್ತದೆ.
ಅತ್ಯುತ್ತಮ ಆತ್ಮವಿಶ್ವಾಸ ಹಾಗೂ ಮೃದು ಸ್ವಭಾವದ ವ್ಯಕ್ತಿಗಳು ಎಂದರೆ ಕುಂಭ ರಾಶಿಯವರು. ನೈಸರ್ಗಿಕವಾಗಿಯೇ ಇವರು ಸೌಮ್ಯ ಸ್ವಭಾವ ಹಾಗೂ ಜಗಳದಿಂದ ದೂರ ಇರಲು ಬಯಸುವ ವ್ಯಕ್ತಿಗಳು ಎಂದು ಹೇಳಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಬರುವ 12 ರಾಶಿ ಚಕ್ರದ ಚಿಹ್ನೆಗಳಲ್ಲಿ ಕುಂಭರಾಶಿಯ ಚಿಹ್ನೆಯು 11ನೇ ಸ್ಥಾನವನ್ನು ಪಡೆದುಕೊಂಡಿದೆ.
ಈ ಚಿಹ್ನೆಯ ವ್ಯಕ್ತಿಗಳು ಸಾಮಾಜಿಕ ಸಮಸ್ಯೆಗಳಲ್ಲಿ ಹೆಚ್ಚು ಆಸಕ್ತರಾಗಿರುತ್ತಾರೆ. ಜೊತೆಗೆ ಸಾಮಾಜಿಕ ಸಮಸ್ಯೆಗಳ ಕಾರಣ, ನಿರ್ಮೂಲನೆ ಹಾಗೂ ಪರಿಹಾರಗಳನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಾರೆ. ಸ್ವತಂತ್ರರಾಗಿರಲು ಬಯಸುವ ಇವರು ಯಾವುದೇ ನಿರ್ಬಂಧ ಹಾಗೂ ಕಟ್ಟುಪಾಡುಗಳನ್ನು ಹೇರುವುದನ್ನು ದ್ವೇಷಿಸುತ್ತಾರೆ. ಅತ್ಯುತ್ತಮ ಕನಸುಗಾರರು ಎನಿಸಿಕೊಳ್ಳುವ ಸ್ವಭಾವವನ್ನು ಹೊಂದಿರುತ್ತಾರೆ ಎಂದು ಜ್ಯೋತಿಷ್ಯ ಶಾಸ್ತ್ರ ತಿಳಿಸುತ್ತದೆ.

ವಿಶೇಷ ಗುಣಲಕ್ಷಣಗಳನ್ನು ಹೊಂದಿರುವ ಈ ಚಿಹ್ನೆಯ ವ್ಯಕ್ತಿಗಳು ಮೇ 2018ರಲ್ಲಿ ಯಾವ ಬಗೆಯ ಬದಲಾದ ಭವಿಷ್ಯವನ್ನು ಅನುಭವಿಸುತ್ತಾರೆ ಎನ್ನುವುದನ್ನು ಬೋಲ್ಡ್ ಸ್ಕೈ ಸೂಕ್ತ ವಿವರಣೆಯೊಂದಿಗೆ ವಿವರಿಸಿದೆ.
ಸಲಹೆ:
ಈ ಮೇ ತಿಂಗಳಲ್ಲಿ ಕುಂಭರಾಶಿಯವರು ನಾಯಕರಾಗಿ ಕಾಣಿಸಿಕೊಳ್ಳುವರು. ಆದರೆ ಈ ಬದಲಾವಣೆಯು ಸಹೋದ್ಯೋಗಿಗಳೊಂದಿಗೆ ಅಹಂ ಘರ್ಷಣೆ ಕಾರಣವಾಗಬಹುದು. ಹಾಗಾಗಿ ಇಂತಹ ಸಮಸ್ಯೆಗಳಲ್ಲಿ ನೀವು ಭಾಗಿಯಾಗದಿರುವಂತೆ ಹೆಚ್ಚು ಕಾಳಜಿವಹಿಸಬೇಕು ಎನ್ನುವುದನ್ನು ನೆನಪಿಟ್ಟುಕೊಳ್ಳಬೇಕು.
ಆರೋಗ್ಯ ಸ್ಥಿತಿ:
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕುಂಭರಾಶಿಯವರಿಗೆ ಮೇ 21ರ ನಂತರ ಅತ್ಯುತ್ತಮ ಆರೋಗ್ಯ ಹೊಂದುತ್ತಾರೆ ಎಂದು ಹೇಳಲಾಗುವುದು. ಹಾಗಾಗಿ ಅಲ್ಲಿಯ ತನಕ ಆದಷ್ಟು ವಿಶ್ರಾಂತಿ ಹಾಗೂ ಎಚ್ಚರಿಕೆಯನ್ನು ವಹಿಸಬೇಕಾಗುವುದು.
ವೃತ್ತಿ ಜೀವನ:
ವೃತ್ತಿಜೀವನದಲ್ಲಿ ಯಾವುದೇ ಅದ್ಭುತ ಉಂಟಾಗುವಂತಹ ಬದಲಾವಣೆ ಅಥವಾ ಅದೃಷ್ಟ ದೊರೆಯದು. ಬದಲಿಗೆ ನಿಮ್ಮ ಆಪ್ತರಿಂದ ಕೆಲವು ಸಹಾಯ ಮತ್ತು ಸಹಕಾರ ದೊರೆಯುವುದು. ಇನ್ನೊಂದೆಡೆ ನಿಮ್ಮ ಸಹೋದ್ಯೋಗಿಗಳು ನಿಮ್ಮ ವಿರುದ್ಧ ರಾಜಕೀಯ ರೂಪದಲ್ಲಿ ಪಿತೂರಿ ಮಾಡಬಹುದು. ಅಲ್ಲದೆ ಹಿರಿಯರು ಹಾಗೂ ನಿಮ್ಮ ಮೇಲಾಧಿಕಾರಿಗಳ ನಡುವೆ ಕೆಲವು ಭಿನ್ನಾಭಿಪ್ರಾಯಗಳು ಸಮಭವಿಸುವ ಸಾಧ್ಯತೆಗಳಿವೆ.
ಆರ್ಥಿಕ ಸ್ಥಿತಿ:
ಹಣಕಾಸಿನ ವಿಚಾರದಲ್ಲಿ ಈ ರಾಶಿಯವರಿಗೆ ಮೇ ತಿಂಗಳು ಅತ್ಯಂತ ಪ್ರಕಾಶಮಾನವಾದ ಬದಲಾವಣೆಯನ್ನು ತಂದುಕೊಡುವುದು. ಈ ರಾಶಿಯವರಿಗೆ ಅತ್ಯುತ್ತಮ ಸಮಯ ಎಂದು ಹೇಳಲಾಗುತ್ತದೆ. ಬರಹಗಾರರು, ಚಿತ್ರಕಾರರು, ಸಂಗೀತಗಾರರು ಮತ್ತು ಶಿಲ್ಪಿಗಳು ಈ ತಿಂಗಳಲ್ಲಿ ಗಣನೀಯವಾದ ಲಾಭವನ್ನು ಪಡೆದುಕೊಳ್ಳುವರು. ಇದಲ್ಲದೆ ಈ ಚಿಹ್ನೆಯವರು ಹೊಸ ಸಾಹಸ ಹಾಗೂ ಹೂಡಿಕೆಯ ವಿಚಾರದಲ್ಲಿ ಹೆಚ್ಚು ಗಮನ ಹರಿಸಬಹುದು.
ಪ್ರೀತಿಯ ಜೀವನ:
ಪ್ರೀತಿ ಹಾಗೂ ಸಂಬಂಭದಗಳ ವಿಚಾರದಲ್ಲಿ ಈ ರಾಶಿಯವರಿಗೆ ಈ ತಿಂಗಳು ಅತ್ಯುತ್ತಮವಾದ ಸಮಯ ಎಂದು ಹೇಳಲಾಗುವುದು. ಕೆಲವು ಕಹಿ ಅನುಭವಗಳಿಂದಾಗಿ ಚಟುವಟಿಕೆಗಳಲ್ಲಿ ಪುನರಾವರ್ತಿಸಲು ಭಯಪಡುವಿರಿ. ಸಂಗಾತಿಯೊಂದಿಗೆ ಸಂಬಂಧವು ಉತ್ತಮವಾಗಿರುತ್ತದೆ. ಅವರಿಗಾಗಿ ಕೆಲವು ಸಮಯಗಳನ್ನು ಮೀಸಲಿಡುವುದರ ಮೂಲಕ ಪ್ರೀತಿಯ ಜೀವನ ವೃದ್ಧಿಯಾಗುವುದು.
ಅದೃಷ್ಟ ದಿನಾಂಕ ಮತ್ತು ಬಣ್ಣ:
ಈ ತಿಂಗಳಲ್ಲಿ ಕುಂಭರಾಶಿಯವರಿಗೆ ಅತ್ಯುತ್ತಮವಾದ ಸಂಖ್ಯೆಗಳು ಎಂದರೆ 17, 40, 46, 61 ಮತ್ತು 76
ಅದೃಷ್ಟ ದಿನಾಂಕಗಳು -6, 7, 8, 17, 18, 25, 26.
ಅದೃಷ್ಟ ಬಣ್ಣ- ಕೆಂಪು, ಹಸಿರು, ಆಕಾಶ ನೀಲಿ.



Click it and Unblock the Notifications

